ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

US-Israel-Iran War: ಶ್ರೀಲಂಕಾದಲ್ಲಿ ಇರಾನ್ ಯುದ್ಧನೌಕೆ ಮೇಲೆ ದಾಳಿ; 101 ಮಂದಿ ನಾಪತ್ತೆ

ಶ್ರೀಲಂಕಾದ ಗ್ಯಾಲೆ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾ ಮೇಲೆ ನಡೆದ ಜಲಾಂತರ್ಗಾಮಿ ದಾಳಿಯಲ್ಲಿ ಕನಿಷ್ಠ 101 ಜನರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಕೊಲಂಬೊ, ಮಾ. 4: ಇರಾನ್‌ ವಿರುದ್ಧ ಇಸ್ರೇಲ್‌-ಅಮೆರಿಕ ಯುದ್ಧ ತೀವ್ರ ಹಂತ ತಲುಪಿಸುವ ಮಧ್ಯೆ ಶ್ರೀಲಂಕಾದ ಗ್ಯಾಲೆ ಕರಾವಳಿಯಲ್ಲಿ ಆತಂಕದ ಬೆಳವಣಿಗೆಯೊಂದು ನಡೆದಿದೆ (US-Israel-Iran War). ಇರಾನ್ ಯುದ್ಧನೌಕೆ ಐಆರ್​ಐಎಸ್ ದೇನಾ (IRIS Dena) ಮೇಲೆ ನಡೆದ ಜಲಾಂತರ್ಗಾಮಿ ದಾಳಿಯಲ್ಲಿ ಕನಿಷ್ಠ 101 ಜನರು ನಾಪತ್ತೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದಾಳಿಯಿಂದ ಹಡಗಿಗೆ ತೀವ್ರ ಹಾನಿಯಾಗಿ ಮುಳುಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು, ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಮುಳುಗುತ್ತಿರುವ ಇರಾನ್ ಹಡಗಿನಲ್ಲಿದ್ದ 30 ಮಂದಿಯನ್ನು ಸೇನೆ ರಕ್ಷಿಸಿದೆ ಎಂದು ತಿಳಿಸಿತ್ತು. ಸದ್ಯ ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ಐಆರ್​ಐಎಸ್ ದೇನಾ ಹಡಗಿನಲ್ಲಿ ಒಟ್ಟು 180 ಮಂದಿ ಇದ್ದರು ಎನ್ನಲಾಗಿದೆ.

ಶ್ರೀಲಂಕಾದಲ್ಲಿ ಮುಳುಗಿದ ಇರಾನ್ ಯುದ್ಧನೌಕೆ:



ಹಡಗಿನ ಮೇಲೆ ದಾಳಿ ನಡೆಸಿದ್ದು ಯಾರು ಎನ್ನುವುದು ತಿಳಿದುಬಂದಿಲ್ಲ. ಭಾರತ ಆಯೋಜಿಸಿದ್ದ ನೌಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಂತರ ಈ ಹಡಗು ಇರಾನ್‌ಗೆ ಹಿಂದಿರುಗುತ್ತಿದ್ದಾಗ ದಾಳಿ ನಡೆದಿದೆ. ಘಟನೆ ಬಗ್ಗೆ ಶ್ರೀಲಂಕಾ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧದ ತೀವ್ರತೆ ಶ್ರೀಲಂಕಾಕ್ಕೂ ವ್ಯಾಪಿಸಿತೆ ಎನ್ನುವ ಆತಂಕ ಮೂಡಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಗಾಯಾಳುಗಳನ್ನು ಕೊಲಂಬೋದಿಂದ ಸುಮಾರು 115 ಕಿಲೋ ಮೀಟರ್ ದಕ್ಷಿಣದಲ್ಲಿರುವ ಗ್ಯಾಲೆಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶ್ರೀಲಂಕಾ ನೌಕಾಪಡೆಯ ವಕ್ತಾರ ಬುದ್ಧಿಕ ಸಂಪತ್ ಈ ಬಗ್ಗೆ ಮಾತನಾಡಿ, "ನಮ್ಮ ಅಂತಾರಾಷ್ಟ್ರೀಯ ಬಾಧ್ಯತೆಗಳ ಅಡಿಯಲ್ಲಿ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಿದ್ದೇವೆ. ಘಟನೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾದ ವ್ಯಾಪ್ತಿಗೆ ಬರುತ್ತದೆʼʼ ಎಂದಿದ್ದಾರೆ.

ಇರಾನ್‌ ಸುಪ್ರೀಂ ಲೀಡರ್‌ ಯಾರೇ ಆದ್ರೂ ಟಾರ್ಗೆಟ್:‌ ಇಸ್ರೇಲ್‌ ಎಚ್ಚರಿಕೆ

5ನೇ ದಿನಕ್ಕೆ ಕಾಲಿಟ್ಟ ಯುದ್ಧ

ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುವ ಮೂಲಕ ಫೆಬ್ರವರಿ 28ರಂದು ಯುದ್ಧ ಆರಂಭವಾಯ್ತು. ಸತತ 5 ದಿನವೂ ಈ ಸಂಘರ್ಷ ಮುಂದುವರಿದಿದ್ದು, ಕೊಲ್ಲಿ ರಾಷ್ಟ್ರಗಳಿಗೂ ವಿಸ್ತರಿಸಿದೆ. ಇರಾನ್‌ ಅಮೆರಿಕದ ವಿವಿಧ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸುತ್ತಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಇನ್ನು ಸಂಘರ್ಷದಲ್ಲಿ ಇರಾನ್‌ನಲ್ಲಿ 800ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವು ದಶಕಗಳಲ್ಲೇ ಮಧ್ಯಪೂರ್ವ ಭಾಗದಲ್ಲಿ ಸಂಭವಿಸಿದ ಗಂಭೀರ ಯುದ್ಧ ಇದು. ಸೌದಿ ಅರೇಬಿಯಾದ ರಿಯಾಧ್‌ನಲ್ಲಿರುವ ಅಮೆರಿಕ ಸೇನಾನೆಲೆಗಳ ಮೇಲೆ ಇರಾನ್‌ ಈಗಾಗಲೇ 2 ಡ್ರೋನ್‌ ದಾಳಿ ನಡೆಸಿದೆ. ಇನ್ನು ಮಾರ್ಚ್‌ 2ರಂದು ಕುವೈತ್‌ನಲ್ಲಿರುವ ಅಮೆರಿಕ ಸೇನಾನೆಲೆಗಳ ಮೇಲೂ ಇರಾನ್‌ ಆಕ್ರಮಣ ನಡೆಸಿತ್ತು.

ಹೊರ್ಮುಜ್‌ ಜಲಸಂಧಿ ಬಂದ್‌

ಇರಾನ್‌ ಹೊರ್ಮುಜ್‌ ಜಲಸಂಧಿ ಬಂದ್‌ ಮಾಡುವ ಮೂಲಕ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಲೂ ಮುಂದಾಗಿದೆ. ಹೊರ್ಮುಜ್‌ ಜಲಸಂಧಿ ಬಂದ್‌ ಆಗಿರುವುದರಿಂದ 27 ದೇಶಗಳ ಹಡಗುಗಳು ಸ್ಥಗಿತಗೊಂಡಿವೆ. ಇದಿಂದ ತೈಲ ಬೆಲೆ ತೀವ್ರ ಏರಿಕೆಯಾಗಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author