US-Israel-Iran War: ಇರಾನ್ ಸುಪ್ರೀಂ ಲೀಡರ್ ಯಾರೇ ಆದ್ರೂ ಟಾರ್ಗೆಟ್: ಇಸ್ರೇಲ್ ಎಚ್ಚರಿಕೆ
ಇರಾನ್‌ನ ಮುಂದಿನ ಸರ್ವಾಧಿಕಾರಿಯಾಗಿ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಇಸ್ರೇಲ್ ಯಾರೇ ಸರ್ವಾಧಿಕಾರಿಯಾದರೂ ಅವರನ್ನು ನಿರ್ಮೂಲನೆಗೊಳಿಸುವುದೇ ತನ್ನ ಗುರಿ ಎಂದು ಎಚ್ಚರಿಸಿದೆ. ಫೆಬ್ರವರಿ 28ರಂದು ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು.
ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 4: ಇರಾನ್‌ನ ಮುಂದಿನ ಸರ್ವಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ, ಅವರನ್ನು ನಿರ್ಮೂಲನೆಗೊಳಿಸುವುದೇ ತನ್ನ ಗುರಿಯಾಗಲಿದೆ ಎಂದು ಇಸ್ರೇಲ್ ಎಚ್ಚರಿಸಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ 5ನೇ ದಿನ ತೀವ್ರ ಸ್ವರೂಪ ಪಡೆದಿದೆ. ಇದುವರೆಗೆ 787 ಮಂದಿ ಹತರಾಗಿದ್ದಾರೆ. ಲೆಬೆನಾನ್‌ನಲ್ಲಿ 60 ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್ ಇರಾನ್ ಮೇಲೆ ದಾಳಿ ಮುಂದುವರಿಸಿದೆ (US-Israel Iran War). ಇಸ್ರೇಲ್ ನಲ್ಲಿ ಹನ್ನೆರಡು ಮಂದಿ ಹತರಾಗಿದ್ದಾರೆ. ಅಮೆರಿಕದ ಆರು ಸೈನಿಕರು ಸಾವಿಗೀಡಾಗಿದ್ದಾರೆ.
ಆಯೊತೊಲ್ಲಾ ಖಮೇನಿಯ ಹತ್ಯೆಯ ಬಳಿಕ ಇರಾನ್ ಹೊಸ ಸರ್ವಾಧಿಕಾರಿಯಾಗಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ ಇಸ್ರೇಲ್ ಈ ಕಠಿಣ ಎಚ್ಚರಿಕೆ ಕೊಟ್ಟಿದೆ. ಆಯೊತೊಲ್ಲಾ ಖಮೇನಿಯ ಮಗ ಮೊಜ್ತಾಬಾ ಖಮೇನಿಯನ್ನೇ ನೂತನ ಸುಪ್ರೀಂ ಲೀಡರ್ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬ ವರದಿಗಳು ಇವೆ.
ಆದರೆ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಅವರು, ಇರಾನಿನ ಸರ್ವಧಿಕಾರಿಯಾಗಿ ಯಾರೇ ಆಯ್ಕೆಯಾದರೂ, ಇಸ್ರೇಲಿನ ನಾಶಕ್ಕೆ ಪಣ ತೊಡುವ ಅಪಾಯ ಇದೆ. ಅಮೆರಿಕ ಮತ್ತು ಜಗತ್ತಿಗೆ ಕಂಟಕಪ್ರಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಅಂಥ ಸರ್ವಾಧಿಕಾರಿಯೇ ಇಸ್ರೇಲಿನ ಮುಂದಿನ ಟಾರ್ಗೆಟ್ ಆಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಇರಾನ್ ಸುಪ್ರೀಂ ಲೀಡರ್ ಯಾರೇ ಆದ್ರೂ ಟಾರ್ಗೆಟ್ ಎಂದ ಇಸ್ರೇಲ್:
As Iran scrambles to choose a new Supreme Leader, Israel’s defence minister warns any successor will be marked for assassination. An Israeli strike has already destroyed the Assembly of Experts building in Qom, the clerical body responsible for picking Iran’s next leader. pic.twitter.com/BRxBUgKEz9
— Al Jazeera English (@AJEnglish) March 4, 2026
ಇರಾನಿ ಸರ್ವಾಧಿಕಾರಿಯಾಗಿ ಯಾರೇ ಆಯ್ಕೆಯಾಗಲಿ, ಅವರೆಲ್ಲಿಯೇ ಅಡಗಿರಲಿ, ಇಸ್ರೇಲ್ ಸೇನೆ ಅವರನ್ನು ನಿರ್ಮೂಲನೆ ಮಾಡಲಿದೆ. ಈ ಬಗ್ಗೆ ಸೇನೆಗೆ ಸಜ್ಜಾಗಿರುವಂತೆ ಸೂಚಿಸಲಾಗಿದೆ ಎಂದು ರಕ್ಷಣಾ ಸಚಿವ ಕಾಟ್ಜ್ ತಿಳಿಸಿದ್ದಾರೆ.
ಇರಾನ್‌ಗೆ ಮತ್ತೊಂದು ತೀವ್ರ ಹೊಡೆತ, ವಿಮಾನ ದಾಳಿಯಲ್ಲಿ ನೂತನ ರಕ್ಷಣಾ ಸಚಿವ ಹತ್ಯೆ
ಹರ್ಮುಜ್ ಜಲಸಂಧಿ ಬಿಕ್ಕಟ್ಟು
ಈ ನಡುವೆ ಹರ್ಮುಜ್ ಜಲಸಂಧಿಯ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಂಡಿರುವುದಾಗಿ ಇರಾನಿನ ರೆವೆಲ್ಯೂಷನರಿ ಗಾರ್ಡ್ಸ್ ಸೇನಾಪಡೆ ಹೇಳಿಕೊಂಡಿದೆ. ಜಾಗತಿಕ ತೈಲ ಪೂರೈಕೆಯ ಶೇಕಡಾ 20 ಪಾಲು ಈ ಜಲಸಂಧಿಯ ಮೂಲಕ ಸಾಗಣೆಯಾಗುತ್ತದೆ. ಆದ್ದರಿಂದ ಹರ್ಮುಜ್ ಜಲಸಂಧಿ ನಿರ್ಣಾಯವಾಗಿದೆ. ಈ ಜಲಸಂಧಿಯ ಮೂಲಕ ಹಡಗು ಸಂಚಾರಕ್ಕೆ ಬಿಡುವುದಿಲ್ಲ ಎಂದು ಇರಾನ್ ಹೇಳಿದೆ. ಕ್ಷಿಪಣಿ ಅಥವಾ ಡ್ರೋನ್ ಮೂಲಕ ಹಡಗುಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮುಜ್ ಜಲಸಂಧಿಯ ಮೂಲಕ ಹೋಗುವ ಹಡಗುಗಳಿಗೆ ಅಮೆರಿಕದ ಸೇನಾಪಡೆ ಭದ್ರತೆ ಒದಗಿಸಲಿದೆ ಎಂದು ಹೇಳಿದ್ದಾರೆ.