ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K Ratnaprabha: ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆತಾಗ ದೇಶದ ಪ್ರಗತಿ ಸಾಧ್ಯ: ಕೆ. ರತ್ನಪ್ರಭಾ

ಮಹಿಳಾ ಉದ್ಯಮಿಗಳಿಗೂ ವೇದಿಕೆ ಸಿಗಬೇಕು ಅದಕ್ಕಾಗಿ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಬೆಂಬಲ ದೊರಕಿದರೆ ದೇಶದ ಅಭಿವೃದ್ಧಿಗಾಗಿ ಅವರು ಕೂಡ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಉಬುಂಟು ಒಕ್ಕೂಟದ ಸಂಸ್ಥಾಪಕರು ಹಾಗೂ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಿಳಿಸಿದ್ದಾರೆ.

ಮಲೇಷ್ಯಾದಲ್ಲಿ ನಡೆದ ಯುನೈಟೆಡ್ ಎಕನಾಮಿಕ್ ಶೃಂಗಸಭೆಯಲ್ಲಿ ಉಬುಂಟು ಸಂಸ್ಥಾಪಕಿ ಕೆ. ರತ್ನಪ್ರಭಾ.

ಕ್ವಾಲಾಲಂಪುರ, ನ.24: ಮಹಿಳಾ ಉದ್ಯಮಿಗಳಿಗೂ ವೇದಿಕೆ ಸಿಗಬೇಕು ಅದಕ್ಕಾಗಿ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಬೆಂಬಲ ದೊರಕಿದರೆ ದೇಶದ ಅಭಿವೃದ್ಧಿಗಾಗಿ ಅವರು ಕೂಡ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಉಬುಂಟು ಒಕ್ಕೂಟದ ಸಂಸ್ಥಾಪಕರು ಹಾಗೂ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ (K Ratnaprabha) ಹೇಳಿದರು. ಮಲೇಷ್ಯಾದಲ್ಲಿ ನಡೆದ 2025ರ ಯುನೈಟೆಡ್ ಎಕನಾಮಿಕ್ ಶೃಂಗಸಭೆಯಲ್ಲಿ (United Economic Summit 2025)‌ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಅವರು, ಭಾರತ ನಿಯೋಗದ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.

ಮಹಿಳಾ ಉದ್ಯಮಶೀಲತೆ ಮತ್ತು ಆರ್ಥಿಕ ರಾಜತಾಂತ್ರಿಕತೆಯಲ್ಲಿನ ತಮ್ಮ ಸೇವೆಗಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಕೆ. ರತ್ನಪ್ರಭಾ ಅವರು ಸಮಾವೇಶದಲ್ಲಿ ತಮ್ಮ ಸರ್ಕಾರಿ ಸೇವೆಯ ದಿನಗಳನ್ನು ಸ್ಮರಿಸಿದರು. ಹಲವಾರು ಮಹಿಳಾ ಉದ್ಯಮಿಗಳ ಸಂಘಗಳೊಂದಿಗಿನ ಒಡನಾಟ ʼಉಬುಂಟು ಒಕ್ಕೂಟ' ಸ್ಥಾಪನೆಗೆ ಹೇಗೆ ಪ್ರೇರಣೆ ನೀಡಿತು ಎಂಬುದನ್ನು ಮೆಲುಕು ಹಾಕಿದರು. ಕೆಲವು ಮಹಿಳೆಯರ ಗುಂಪು ಪ್ರತ್ಯೇಕವಾಗಿ ಕೆಲಸ ಮಾಡುತ್ತಿತ್ತು, ಅದನ್ನು ಕಂಡು ನಾವೆಲ್ಲರೂ ಒಂದಾಗಬೇಕು, ಒಟ್ಟಾಗಿ ಬೆಳೆಯಬೇಕು ಎಂಬ ಆಲೋಚನೆಯಲ್ಲಿ ನಿವೃತ್ತಿಯ ಬಳಿಕ ʼಉಬುಂಟು ಒಕ್ಕೂಟʼ ವನ್ನು ಸ್ಥಾಪಿಸಲಾಯಿತು. ಇಂದು ಉಬುಂಟು 12 ರಾಜ್ಯಗಳ 60ಕ್ಕೂ ಹೆಚ್ಚು ಸಂಘಗಳನ್ನು ಒಳಗೊಂಡಿದ್ದು, ಸುಮಾರು 30,000 ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುತ್ತಿದೆ. ಈ ಒಕ್ಕೂಟದ ಹತ್ತು ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾರತದ ನಿಯೋಗವನ್ನು ಪ್ರತಿನಿಧಿಸುತ್ತಿದ್ದು, ಇದು ನಮ್ಮ ಮೊದಲ ಅಂತಾರಾಷ್ಟ್ರೀಯ ವೇದಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

United Economic Summit 2025

ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ವಿಶ್ವಸಂಸ್ಥೆಯ ಶೃಂಗಸಭೆಯು ನಮ್ಮ ಉದ್ಯಮಿಗಳಿಗೆ ಜಾಗತಿಕ ಪ್ರತಿನಿಧಿಗಳೊಂದಿಗೆ ಚರ್ಚಿಸಲು, ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ಒದಗಿಸುತ್ತಿದೆ ಎಂದರು. ಇದೇ ವೇಳೆ 'ಉಬುಂಟು' ಹೆಸರಿನ ಹಿಂದಿನ ಕಥೆಯನ್ನು ರತ್ನಪ್ರಭಾ ಅವರು ಹಂಚಿಕೊಂಡರು. ಆಫ್ರಿಕಾದ ಒಂದು ಸಣ್ಣ ಕಥೆಯನ್ನು ನೆನಪಿಸಿಕೊಂಡ ಅವರು, ಮಕ್ಕಳು ಸಿಹಿತಿಂಡಿಗಳಿಗಾಗಿ ಒಬ್ಬರನ್ನೊಬ್ಬರು ಸೋಲಿಸಲು ಸ್ಪರ್ಧಿಸುವ ಬದಲು, ಎಲ್ಲರೂ ಒಟ್ಟಾಗಿ ಬಂದು ಹಂಚಿಕೊಂಡ ಘಟನೆಯನ್ನು ವಿವರಿಸಿದರು. ನಮ್ಮಂತೆಯೇ ಇತರರು ಸಂತೋಷವಾಗಿರಬೇಕು ಎಂಬುದು ಒಕ್ಕೂಟದ ಆಶಯವಾಗಿದೆ ಎಂದು ವಿವರಿಸಿದರು.

ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸಲು, ಗಡಿಯಾಚೆಗಿನ ವ್ಯಾಪಾರ ಸಹಯೋಗಗಳನ್ನು ಅಭಿವೃದ್ಧಿಪಡಿಸಲು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರು 10 ಪ್ರಗತಿಪರ ಭಾರತೀಯ ಮಹಿಳಾ ಉದ್ಯಮಿಗಳ ತಂಡದ ನೇತೃತ್ವ ವಹಿಸಿದ್ದರು.

ಶೂನ್ಯ ಸುಂಕ, ವೈದ್ಯಕೀಯ ವೀಸಾ ಹೆಚ್ಚಳ; ಅಫ್ಘಾನಿಸ್ತಾನ ಭಾರತಕ್ಕೆ ಇನ್ನಷ್ಟು ಹತ್ತಿರ

ನಿಯೋಗದಲ್ಲಿ ಉಟುಂಬು ಒಕ್ಕೂಟದ ಗೌರವ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಜಿಸಿಸಿಐ (GCCI) ಮಹಿಳಾ ವಿಭಾಗದ ಅಧ್ಯಕ್ಷೆ ಮತ್ತು ಎಬಿಡಬ್ಲ್ಯೂಸಿಐ (ABWCI) ಗೋವಾದ ರಾಜ್ಯ ಮುಖ್ಯಸ್ಥೆ ಆಶಾ ಅರೋಂಡೇಕರ್, ಧಾರವಾಡದ ವೆಲಾಸ್ಕಾ ಎಂಟರ್‌ಪ್ರೈಸಸ್‌ನ ವಿದ್ಯಾವತಿ ಭಾವಿ, ರೀಥಿಂಕ್ ಸ್ನ್ಯಾಕ್ಸ್‌ನ ಸ್ಥಾಪಕಿ ದೀಪಿಕಾ ಕಿರಣ್, ಮೀಡಿಯಾ ಕನೆಕ್ಟ್‌ನ ಸಂಸ್ಥಾಪಕರಾದ ದಿವ್ಯಾ ರಂಗೇನಹಳ್ಳಿ, ಹೈದರಾಬಾದ್‌ನ ಮೆಸರ್ಸ್ ಈಕ್ವಲ್‌ನ ಪ್ರಿಯಾಂಕಾ ಜುಲಕಂಟಿ, ತುಮಕೂರಿನ ಮೆಸರ್ಸ್ ಇಕೋ-ಕಾನ್ ಗ್ರೀನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಜಯಲಕ್ಷ್ಮಿ,ಸುಪ್ರೀಂ ಕೋರ್ಟ್ ವಕೀಲೆ ನಾಜಿಶ್ ಖಾನ್, ಜಿ.ಪಿ. ನಿಸರ್ಗ ಮತ್ತು ವಿಭಾ ದೇವರಾಜ್ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ. ನಿಯೋಗದ ಎಲ್ಲಾ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳು ಸಿಗುವ ನಿಟ್ಟಿನಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಇದು ಫಲಪ್ರದವಾಗಿದೆ.