ನವದೆಹಲಿ, ಜ. 22: ಪ್ರತಿಯೊಬ್ಬರು ಒಂದೊಂದು ಕೆಲಸಕ್ಕಾಗಿ ಇತರರನ್ನು ಅವಲಂಬಿಸುತ್ತಾರೆ. ದೇಶಗಳ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಜಗತ್ತಿನ ಹೆಚ್ಚಿನ ದೇಶಗಳು ಆಹಾರ, ಆಹಾರ ಸಾಮಗ್ರಿಗಾಗಿ ಇತರ ದೇಶಗಳನ್ನು ಅವಲಂಬಿಸಿದೆ. ಉದಾಹರಣೆಗೆ ಭಾರತವು ಧಾನ್ಯಗಳ ಕೃಷಿಯಲ್ಲಿ ಅಭಿವೃದ್ಧಿ ಹೊಂದಿದ್ದರೂ ಕೆಲವು ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಮುಖ್ಯವಾಗಿ ಅಮೆರಿಕ, ಮಲೇಷಿಯಾ ಇತರ ದೇಶಗಳಿಂದ ಪಾಮ್, ಸೋಯಾ ಇತ್ಯಾದಿ ಆಮದು ಮಾಡಿಕೊಳ್ಳುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಆಹಾರ ಅಭದ್ರತೆಯೊಂದಿಗೆ ಹೋರಾಡುತ್ತಿದ್ದರೂ ಈ ಒಂದು ಸಣ್ಣ ದೇಶವು ಸಂಪೂರ್ಣ ಆಹಾರ ಸ್ವಾವಲಂಬನೆಯನ್ನು ತಾನೇ ಮಾಡಿಕೊಂಡಿದೆ ಎಂದರೆ ನಂಬುತ್ತೀರಾ? ಹೌದು ದಕ್ಷಿಣ ಅಮೆರಿಕಾದ ಪುಟ್ಟ ದೇಶ ಗಯಾನಾ (Guyana) ಜನತೆಗೆ ಬೇಕಾದ ಎಲ್ಲ ಏಳು ವಿಧದ ಅತ್ಯಗತ್ಯ ಆಹಾರವನ್ನು ತಾನೇ ಬೆಳೆಯುವ ಮೂಲಕ ಮಾದರಿಯಾಗಿದೆ.
ತನ್ನ ಸಂಪೂರ್ಣ ಜನಸಂಖ್ಯೆಯನ್ನು ಪೋಷಿಸಲು ಅಗತ್ಯವಿರುವ ಎಲ್ಲ ಆಹಾರವನ್ನು ಉತ್ಪಾದಿಸುವ ಒಂದೇ ಒಂದು ದೇಶ ಈ ಜಗತ್ತಿನಲ್ಲಿ ಇದ್ದರೆ ಅದು ಗಯಾನಾ. ಇದು ಯಾವುದೇ ಅಗತ್ಯ ಆಹಾರಕ್ಕೆ ಆಮದನ್ನು ಅವಲಂಬಿಸಿಲ್ಲ. ಇದು ಒಂದು ಸಣ್ಣ ರಾಷ್ಟ್ರವಾಗಿದ್ದು, ಇಲ್ಲಿ ಸುಮಾರು ಶೇ. 40ರಷ್ಟು ಮಂದಿ ಭಾರತೀಯ ಮೂಲದವರು. 19ನೇ ಶತಮಾನದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ, ಉತ್ತರ ಪ್ರದೇಶ, ಬಿಹಾರ ಮತ್ತು ಹತ್ತಿರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಕೃಷಿ ಕೆಲಸ ಮಾಡಲು ಇಲ್ಲಿಗೆ ಕರೆತರಲಾಗಿತ್ತು. ಇಂದು ಅವರೇ ಈ ದೇಶದ ಕೃಷಿ ಸಮೃದ್ಧಿಯ ಶಕ್ತಿಗಳಾಗಿದ್ದಾರೆ.
ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್ ಇನ್‌ಫ್ಲುಯೆನ್ಸರ್?
ಗಯಾನ ಸುಮಾರು ಶೇ. 85ರಷ್ಟು ದಟ್ಟವಾದ ಮತ್ತು ಮಳೆಕಾಡುಗಳಿಂದ ಆವೃತವಾಗಿದೆ. ಅತ್ಯಂತ ಫಲವತ್ತಾದ ಜೇಡಿಮಣ್ಣಿನಿಂದ ಕೂಡಿದ ಮಣ್ಣು ಇಲ್ಲಿಯದ್ದು. ಸಾವಿರಾರು ವರ್ಷಗಳಿಂದ, ಈ ಮಣ್ಣು ಅಮೆಜಾನ್ ನದಿ ವ್ಯವಸ್ಥೆಯ ಕೆಸರುಗಳಿಂದ ಸಮೃದ್ಧವಾಗಿದೆ. ಇದು ಕೃಷಿಗೆ ಪೂರಕ. ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಮಾಂಸಹಾರ ಹೀಗೆಏಳು ವಿಭಾಗಗಳಲ್ಲಿ ಗಯಾನಾ ಸ್ವಾವಲಂಬಿ ಎನಿಸಿಕೊಂಡಿದೆ.
ಗಯಾನಾ ಸರ್ಕಾರವು ತನ್ನ ಕೃಷಿ ಬಜೆಟ್ ಅನ್ನು ಇತ್ತೀಚೆಗೆ ಶೇ. 468ರಷ್ಟು ಹೆಚ್ಚಿಸಿದೆ. ಅಮೆರಿಕ ಕೇವಲ 4 ಆಹಾರ ವರ್ಗಗಳಲ್ಲಿ ಸ್ವಾವಲಂಬಿಯಾಗಿದ್ದು, ಭಾರತವು ಅಕ್ಕಿ, ಗೋಧಿ ಉತ್ಪಾದನೆಯಲ್ಲಿ ಮುಂದೆ ಇದ್ದರು ಖಾದ್ಯ ತೈಲ ಮತ್ತು ಬೇಳೆಕಾಳುಗಳುಗಳನ್ನು ಅಮದು ಮಾಡಿಕೊಳ್ಳುತ್ತಿದೆ.