ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan: ಪಾಕಿಸ್ತಾನದಲ್ಲಿ ಬರೋಬ್ಬರಿ 8 ಬಾಂಬ್‌ ಬ್ಲಾಸ್ಟ್‌; 30ಕ್ಕೂ ಹೆಚ್ಚು ಜನ ಬಲಿ

ಪಹಲ್ಗಾಮ್ ದಾಳಿಯಲ್ಲಿ ನೂರಾರು ಜನರನ್ನು ಕೊಂದು ರಕ್ತದೊಕಳಿ ಹರಿಸಿದ್ದ ಪಾಪಿ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ್ದು, ಇದೀಗ ಈ ಪಾಪಿ ಪಾಕಿಸ್ತಾನ ತನ್ನದೇ ದೇಶದ ಮೂವತ್ತು ಪ್ರಜೆಗಳನ್ನು ಹತ್ಯೆ ಮಾಡಿದೆ. ಖೈಬರ್ ಪಖ್ತುಂಖ್ವಾದ ತಿರಾಹ್ ಕಣಿವೆಯ ಸೋಮವಾರ ಮುಂಜಾನೆ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಲಿ ಪಡೆದುಕೊಂಡಿದೆ.

ಘಟನೆಯ ದೃಶ್ಯ

ಇಸ್ಲಮಾಬಾದ್‌: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾದ (Khyber Pakhtunkhwa) ತಿರಾಹ್ ಕಣಿವೆಯ ಸೋಮವಾರ ಮುಂಜಾನೆ ಪಾಕಿಸ್ತಾನ ವಾಯುಪಡೆ (Pakistan Air Force ) ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 30 ನಾಗರಿಕರು ಮೃತಪಟ್ಟಿದ್ದಾರೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಉಗ್ರರನ್ನು ಗುರಿಯಾಗಿಸಿರುವುದಾಗಿ ಹೇಳಲಾಗಿದೆ. ಆದರೆ, ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಈ ದಾಳಿಯನ್ನು “ನಾಗರಿಕರ ಹತ್ಯಾಕಾಂಡ” ಎಂದು ಕರೆದಿದ್ದಾರೆ.

ದಾಳಿಯ ವಿವರ

ಗುಪ್ತಚರ ಮೂಲಗಳ ಪ್ರಕಾರ, ಮುಂಜಾನೆ 2 ಗಂಟೆ ಸುಮಾರಿಗೆ JF-17 ಥಂಡರ್ ಯುದ್ಧ ವಿಮಾನಗಳು ಎಂಟು ಬಾಂಬ್‌ಗಳನ್ನು ಎಸೆದಿದ್ದು. ಈ ದಾಳಿಯಿಂದ ನಾಗರಿಕ ವಸತಿ ಪ್ರದೇಶಗಳು ಧ್ವಂಸಗೊಂಡವು. ಮನೆಗಳು ಕುಸಿದು, ಹಲವು ಜನರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. “ಬೆಳಗಿನ ಜಾವದ ವೇಳೆಗೆ ಗ್ರಾಮವೆಲ್ಲ ಶವಗಳಿಂದ ತುಂಬಿತ್ತು, ಜಾನುವಾರುಗಳು ನಾಶವಾದವು” ಎಂದು ಸ್ಥಳೀಯರು ವಿವರಿಸಿದ್ದಾರೆ.

ಗುಪ್ತಚರ ವಿಶ್ಲೇಷಕರು, “LS-6 ಬಾಂಬ್‌ಗಳ ಬಳಕೆಯು ಉದ್ದೇಶಿತ ದಾಳಿಯನ್ನು ಸೂಚಿಸುತ್ತದೆ, ಇದು ಆಕಸ್ಮಿಕ ಹಾನಿಯಲ್ಲ” ಎಂದಿದ್ದಾರೆ. ಈ ಕೃತ್ಯವು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. “ಇಸ್ಲಾಮಾಬಾದ್ ಆಂತರಿಕ ದಮನಕ್ಕೆ ಉಗ್ರ ನಿಗ್ರಹದ ಹೆಸರಿನಲ್ಲಿ ಕಾರ್ಯಾಚರಣೆಯನ್ನು ದುರುಪಯೋಗ ಮಾಡುತ್ತಿದೆ” ಎಂದು ಮೂಲಗಳು ತಿಳಿಸಿವೆ. ಈ ದಾಳಿಯು ಪಶ್ತೂನ್ ಜನರ ವಿರುದ್ಧದ ವ್ಯವಸ್ಥಿತ ಕಾರ್ಯಾಚರಣೆಯ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.

ಈ ಸುದ್ದಿಯನ್ನು ಓದಿ: Sabarimala: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣ; ಚೆನ್ನೈಗೆ ದುರಸ್ತಿಗೆಂದು ತೆಗೆದುಕೊಂಡು ಹೋಗಿದ್ದ ಕವಚಗಳು ದೇವಸ್ಥಾನಕ್ಕೆ ವಾಪಸ್

ತಿರಾಹ್‌ನ ಅಕಾಖೇಲ್ ಬುಡಕಟ್ಟಿನವರು ಜಿರ್ಗಾ (ಬುಡಕಟ್ಟು ಸಭೆ) ಸೇರಿ, ಮಹಿಳೆಯರ ಶವಗಳನ್ನು ಸಮಾಧಿ ಮಾಡಲು, ಆದರೆ ಪುರುಷರು ಮತ್ತು ಮಕ್ಕಳ ಶವಗಳನ್ನು ಕಾರ್ಪ್ಸ್ ಕಮಾಂಡರ್‌ನ ಮನೆ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಖೈಬರ್ ಚೌಕ್‌ನಲ್ಲಿ ಈಗಾಗಲೇ ಧರಣಿ ಆರಂಭವಾಗಿದ್ದು, “ನಾಗರಿಕರನ್ನು ಕೊಂದು ಉಗ್ರ ನಿಗ್ರಹದ ಹೆಸರಿನಲ್ಲಿ ಅಪರಾಧ ಮಾಡಲಾಗುತ್ತಿದೆ” ಎಂದು ಆರೋಪಿಸಲಾಗಿದೆ.

ಪಾಕ್ ಸೇನೆಯು ದಾಳಿಯ ಜವಾಬ್ದಾರಿಯನ್ನು ನಿರಾಕರಿಸಿದ್ದು, “ಖವಾರಿಜ್ ಉಗ್ರರ ದೊಡ್ಡ ಸ್ಫೋಟಕ ಸಂಗ್ರಹವು ಆಕಸ್ಮಿಕವಾಗಿ ಸ್ಫೋಟಗೊಂಡಿತು” ಎಂದು ಹೇಳಿದೆ. ಆದರೆ, ಗುಪ್ತಚರ ಮೂಲಗಳು ಇದನ್ನು ತಳ್ಳಿಹಾಕಿದ್ದು, ಚೀನಾದಿಂದ ಪೂರೈಕೆಯಾದ ಗ್ಲೈಡ್ ಬಾಂಬ್‌ಗಳ ಬಳಕೆಯನ್ನು ಒತ್ತಿಹೇಳಿವೆ.