ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Titanic Tragedy: ಟೈಟಾನಿಕ್ ದುರಂತ: ಹೊಸ ವಿಚಾರ ಬಹಿರಂಗ ಪಡಿಸಿದ ಸಾಕ್ಷ್ಯಚಿತ್ರ

ವಿಶ್ವದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿರುವ ಟೈಟಾನಿಕ್ ದುರಂತ ನಡೆದು ನೂರಾರು ವರ್ಷಗಳು ಕಳೆದರೂ ಇಂದಿಗೂ ಅದರ ಕುರಿತಾದ ಹೊಸ ಹೊಸ ಕಥೆಗಳು ಕೇಳಿ ಬರುತ್ತಲೇ ಇವೆ. ಇದಕ್ಕೆ ಕಾರಣ ಈ ಬಗ್ಗೆ ಇನ್ನೂ ಅಧ್ಯಯನ ಪರಿಪೂರ್ಣಗೊಂಡಿಲ್ಲ. ಹೀಗಾಗಿ ಸಂಶೋಧಕರು ಟೈಟಾನಿಕ್ ಅಪಘಾತದ ಕುರಿತಾದ ನಿಗೂಢವಾದ ಸಂಗತಿಗಳನ್ನು ಬೆಳಕಿಗೆ ತರುತ್ತಲೇ ಇದ್ದಾರೆ. ಈ ಬಾರಿ 113ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಟೈಟಾನಿಕ್ ದುರಂತದ ವಿಶೇಷ ಸಾಕ್ಷ್ಯಚಿತ್ರವನ್ನು ನ್ಯಾಷನಲ್ ಜಿಯಾಗ್ರಫಿಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಟೈಟಾನಿಕ್ ದುರಂತದ ಹೊಸ ಕಥೆ; ಅಪಘಾತದ ಬಳಿಕ ಏನಾಯಿತು?

ವಿಶ್ವದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿರುವ ಟೈಟಾನಿಕ್ ದುರಂತ (Titanic disaster) ನಡೆದು ನೂರಾರು ವರ್ಷಗಳು ಕಳೆದರೂ ಇಂದಿಗೂ ಅದರ ಕುರಿತಾದ ಹೊಸ ಹೊಸ ಕಥೆಗಳು ಕೇಳಿ ಬರುತ್ತಲೇ ಇದೆ. ಇದಕ್ಕೆ ಕಾರಣ ಈ ಬಗ್ಗೆ ಇನ್ನೂ ಅಧ್ಯಯನ ಪೂರ್ಣಗೊಂಡಿಲ್ಲ. ಹೀಗಾಗಿ ಸಂಶೋಧಕರು ಟೈಟಾನಿಕ್ ಅಪಘಾತದ ಕುರಿತಾದ ನಿಗೂಢವಾದ ಸಂಗತಿಗಳನ್ನು ಬೆಳಕಿಗೆ ತರುತ್ತಲೇ ಇದ್ದಾರೆ. ಈ ಬಾರಿ 113ನೇ ವಾರ್ಷಿಕೋತ್ಸವ (113th anniversary) ಆಚರಿಸುತ್ತಿರುವ ಟೈಟಾನಿಕ್ ದುರಂತದ ವಿಶೇಷ ಸಾಕ್ಷ್ಯಚಿತ್ರವನ್ನು (Documentary ) ನ್ಯಾಷನಲ್ ಜಿಯಾಗ್ರಫಿಕ್ (National Geographic) ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಟೈಟಾನಿಕ ಅಪಘಾತದ ಕಥೆಯನ್ನು ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಲಿದೆ.

ಐತಿಹಾಸಿಕ ಸಮುದ್ರ ದುರಂತದ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಲಿರುವ ನ್ಯಾಷನಲ್ ಜಿಯಾಗ್ರಫಿಕ್, ಇದಕ್ಕಾಗಿ ಅತ್ಯಾಧುನಿಕವಾದ ನೀರೊಳಗಿನ ಸ್ಕ್ಯಾನಿಂಗ್ ಯಂತ್ರವನ್ನು ಬಳಸಿದೆ. ಟೈಟಾನಿಕ್ ದುರಂತದ ಕುರಿತು ಹೊಸ ಒಳನೋಟಗಳನ್ನು ನೀಡಲು ಅತ್ಯಾಧುನಿಕ 3ಡಿ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದರಲ್ಲಿ ಧ್ವಂಸವಾದ ಹಡಗಿನ ರಚನೆಯನ್ನು ಸೆರೆಹಿಡಿಯಲಾಗಿದೆ. ಇದು ಹೆಚ್ಚು ನಿಖರವಾದ ವಿವರವನ್ನು ಡಿಜಿಟಲ್ ಸಹಾಯದಿಂದ ಪುನರ್ ನಿರ್ಮಿಸಿ ಪ್ರಸ್ತುತಪಡಿಸಲಿದೆ.

ಚಿತ್ರ ನಿರ್ಮಾಪಕ ಆಂಥೋನಿ ಜೆಫೆನ್ ನೇತೃತ್ವದಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಇದಕ್ಕಾಗಿ ಆಳ ಸಮುದ್ರ ನಕ್ಷೆ ಕಂಪನಿ ಮೆಗೆಲ್ಲನ್ ಸಹಯೋಗದೊಂದಿಗೆ 2022ರಲ್ಲಿ ಸಂಶೋಧನೆ ಪ್ರಾರಂಭವಾಯಿತು. ಚಿತ್ರ ನಿರ್ಮಾಣಕ್ಕೆ ಸುಮಾರು 3 ವರ್ಷಗಳನ್ನು ತೆಗೆದುಕೊಂಡಿತು. ಟೈಟಾನಿಕ್ ಹಡಗು ಮಂಜುಗಡ್ಡೆಗೆ ಘರ್ಷಣೆಯಾದ ಬಳಿಕ ನಡೆದ ಘಟನೆಗಳ ಕುರಿತಾಗಿ ನೀಡಿರುವ ಮಾಹಿತಿಗಳನ್ನು ಚರ್ಚಿಸಲಾಗಿದೆ ಎನ್ನುತ್ತದೆ ನ್ಯಾಷನಲ್ ಜಿಯಾಗ್ರಫಿಕ್.

ಇದನ್ನೂ ಓದಿ: Viral Video: ಬಹುಮಹಡಿ ಕಟ್ಟಡದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ- ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನುತ್ತೆ!

ಮುಳುಗಲು ಸಾಧ್ಯವಿಲ್ಲದ ಹಡಗು ಮುಳುಗಿದ್ದು ಹೇಗೆ?

ಆ ಕಾಲದಲ್ಲಿ ಪ್ರಾಯೋಗಿಕವಾಗಿ ಮುಳುಗಲು ಸಾಧ್ಯವಿಲ್ಲ ಎಂದೇ ಟೈಟಾನಿಕ್ ಹಡಗನ್ನು ಪರಿಗಣಿಸಲಾಗಿತ್ತು. ಆದರೆ ಟೈಟಾನಿಕ್ 1912ರ ಏಪ್ರಿಲ್ 14ರಂದು ರಾತ್ರಿ ಸುಮಾರು 11.40ಕ್ಕೆ ಕೆನಡಾದ ದಕ್ಷಿಣಕ್ಕೆ ಪ್ರಯಾಣಿಸುತ್ತಿದ್ದಾಗ ಸುಮಾರು 400 ಮೈಲುಗಳಷ್ಟು ದೂರದಲ್ಲಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದಿದೆ. ಇದಾಗಿ ಹಡಗು ಮೂರು ಗಂಟೆಗಳಲ್ಲಿ ಮುಳುಗಿತು. ಅದರಲ್ಲಿ ಪ್ರಯಾಣಿಸುತ್ತಿದ್ದ 2,240 ಮಂದಿ ಪ್ರಯಾಣಿಕರು ಮತ್ತು 1,500ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು.

ಟೈಟಾನಿಕ್ ಸಾಕ್ಷ್ಯಚಿತ್ರದ ಚಿತ್ರೀಕರಣದ ವೇಳೆ ಎಲ್ಲರನ್ನು ಸೆಳೆದಿರುವ ಅತ್ಯಂತ ಗಮನಾರ್ಹ ಆವಿಷ್ಕಾರವೆಂದರೆ ಭಗ್ನಾವಶೇಷದಲ್ಲಿ ಕಂಡು ಬಂದಿರುವ ತೆರೆದ ಉಗಿ ಕವಾಟ. ಹಡಗಿನ ವಿದ್ಯುತ್ ಅನ್ನು ಸಾಧ್ಯವಾದಷ್ಟು ಕಾಲ ಚಾಲನೆಯಲ್ಲಿ ಇಡಬಹುದಾದ ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಿಬ್ಬಂದಿಯೂ ಇದ್ದರು. ಇದರಿಂದ ಹಡಗು ಅಪಘಾತಕ್ಕೆ ಈಡಾದ ಬಳಿಕವೂ ತೊಂದರೆಯಲ್ಲಿರುವ ಸಂಕೇತವನ್ನು ಕಳುಹಿಸಬಹುದಿತ್ತು. ಕೆಲವು ಹಡಗುಗಳು ಇದಕ್ಕೆ ಪ್ರತಿಕ್ರಿಯೆ ನೀಡಬಹುದಾದ ವ್ಯಾಪ್ತಿ ಪ್ರದೇಶದಲ್ಲೇ ಇದ್ದವು.

ಇನ್ನು ಈ ಸಾಕ್ಷ್ಯಚಿತ್ರವು ಹಡಗು ಹೇಗೆ ವಿಭಜನೆಯಾಯಿತು ಎಂಬುದರ ಕುರಿತು ಹೊಸ ವಿಷಯಗಳನ್ನು ಬೆಳಕಿಗೆ ತಂದಿದೆ. ಇದು ಜೇಮ್ಸ್ ಕ್ಯಾಮರೂನ್ ಅವರ 1997ರ ಬ್ಲಾಕ್‌ ಬ್ಲಸ್ಟರ್‌ ಚಿತ್ರ 'ಟೈಟಾನಿಕ್' ಕಥೆಗಿಂತ ಭಿನ್ನವಾಗಿದೆ.

ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಟೈಟಾನಿಕ್ ಸಂಪೂರ್ಣವಾಗಿ ಎರಡು ಭಾಗಗಳಾಗಿ ವಿಭಜನೆಯಾಗಲಿಲ್ಲ. ಅದು ನಿಧಾನಕ್ಕೆ ತುಂಡಾಗಿ ಹೋಯಿತು. ಇದಲ್ಲದೆ ಈ ಚಿತ್ರವು ವಿಲಿಯಂ ಮುರ್ಡೋಕ್ ಅವರ ಪಾತ್ರದ ಬಗ್ಗೆಯು ಬೆಳಕು ಚೆಲ್ಲಿದೆ. ಲಭ್ಯವಿರುವ ಸೀಮಿತ ಸಂಖ್ಯೆಯ ರಕ್ಷಣಾ ದೋಣಿಗಳನ್ನು ತಲುಪುವ ಮೊದಲೇ ಮುರ್ಡೋಕ್ ಮತ್ತು ಅವರ ತಂಡವು ಸಮುದ್ರದಲ್ಲಿ ಕೊಚ್ಚಿ ಹೋಗಿರುವುದಕ್ಕೆ ಪುರಾವೆಯನ್ನು ಒದಗಿಸಿದೆ. ಅಲ್ಲದೇ ಟೈಟಾನಿಕ್ ಕೇವಲ 20 ರಕ್ಷಣಾ ದೋಣಿಗಳೊಂದಿಗೆ ಪ್ರಯಾಣಿಸುತ್ತಿತ್ತು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹಡಗಿನಲ್ಲಿದ್ದರೂ ಕಡಿಮೆ ರಕ್ಷಣಾ ವ್ಯವಸ್ಥೆಯ ಬಗ್ಗೆಯೂ ಇದು ಪ್ರಶ್ನಿಸುವಂತೆ ಮಾಡಿದೆ.

ಸಮುದ್ರದ ಮೇಲ್ಮೈಯಿಂದ ಸರಿಸುಮಾರು 12,500 ಅಡಿ ಕೆಳಗೆ ಟೈಟಾನಿಕ್‌ನ ಅವಶೇಷಗಳಿವೆ. ಇದು ನೀರಿನೊಳಗೆ ಹಾಳಾಗುತ್ತಲೇ ಇದೆ. ಬಿಲಿಯನೇರ್ ಲ್ಯಾರಿ ಕಾನರ್ 2026ರಲ್ಲಿ ಆಳವಾದ ಸಮುದ್ರ ಸಬ್‌ಮರ್ಸಿಬಲ್ ಬಳಸಿ ಸ್ಥಳಕ್ಕೆ ಭೇಟಿ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಆದರೆ ಇದು ಸರ್ಕಾರಿ ಅಧಿಕಾರಿಗಳು ಮತ್ತು ದುರಂತದಲ್ಲಿ ಮಡಿದವರ ಕುಟುಂಬಗಳ ಟೀಕೆಗೆ ಗುರಿಯಾಗಿದೆ. ಒಟ್ಟಿನಲ್ಲಿ ಈ ಸಾಕ್ಷ್ಯಚಿತ್ರವು ಇತಿಹಾಸದ ಬಹುದೊಡ್ಡ ಹಡಗು ದುರಂತವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿದೆ.