ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಹುಮಹಡಿ ಕಟ್ಟಡದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ- ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನುತ್ತೆ!

ಗುಜರಾತ್‍ನ ಅಹಮದಾಬಾದ್‍ನ ಖೋಖ್ರಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾದ ಕಟ್ಟಡದಿಂದ ಇಬ್ಬರು ಮಕ್ಕಳನ್ನು ಮಹಿಳೆಯೊಬ್ಬಳು ಬಾಲ್ಕನಿ ಮೂಲಕ ಇಬ್ಬರು ಪುರುಷರ ಸಹಾಯದಿಂದ ಕೆಳಗಿಳಿಸಿದ್ದಾಳೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅನಾಹುತ; ಮುಂದೇನಾಯ್ತು ವಿಡಿಯೊ ನೋಡಿ!

Profile pavithra Apr 12, 2025 12:35 PM

ಗಾಂಧಿನಗರ: ಗುಜರಾತ್‍ನ ಅಹಮದಾಬಾದ್‍ನ ಖೋಖ್ರಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ದಳಗಳು ಆಗಮಿಸಿ ಕಟ್ಟಡದ ಒಳಗೆ ಸಿಲುಕಿಕೊಂಡವರ ರಕ್ಷಣೆ ಕಾರ್ಯನಡೆಸಿದ್ದಾರೆ. ಪರಿಹಾರ ಕಾರ್ಯಾಚರಣೆಗಾಗಿ ಕನಿಷ್ಠ ಏಳು ಅಗ್ನಿಶಾಮಕ ಯಂತ್ರಗಳು ಹಾಜರಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾದ ಕಟ್ಟಡದಿಂದ ಇಬ್ಬರು ಮಕ್ಕಳನ್ನು ಮಹಿಳೆಯೊಬ್ಬಳು ಬಾಲ್ಕನಿ ಮೂಲಕ ಇಬ್ಬರು ಪುರುಷರ ಸಹಾಯದಿಂದ ಕೆಳಗಿಳಿಸಿದ್ದಾಳೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ನಂತರ ಮಹಿಳೆಯನ್ನು ಕೂಡ ರಕ್ಷಿಸಲಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ದಟ್ಟ ಹೊಗೆಯಾಡುತ್ತಿದ್ದ ಕಟ್ಟಡದಲ್ಲಿ ಬಾಲ್ಕನಿಯಲ್ಲಿ ನಿಂತುಕೊಂಡಿದ್ದಾರೆ. ಆ ವೇಳೆ ಒಂದು ಮಗು ಬಾಲ್ಕನಿಯಲ್ಲಿ ಮಹಿಳೆಯ ಕೈ ಹಿಡಿದುಕೊಂಡು ನೇತಾಡುವಾಗ ಇಬ್ಬರು ಪುರುಷರು ಮೆಟ್ಟಿಲೇರಿ ಬಂದು ಮಗುವನ್ನು ರಕ್ಷಿಸಿದ್ದಾರೆ. ನಂತರ ಮತ್ತೊಂದು ಹುಡುಗಿಯನ್ನು ಹಾಗೂ ಮಹಿಳೆಯನ್ನು ಅದೇರೀತಿಯಲ್ಲಿ ರಕ್ಷಿಸಲಾಯಿತು.

ವಿಡಿಯೊ ಇಲ್ಲಿದೆ ನೋಡಿ...



ಅಹಮದಾಬಾದ್‍ನ ಖೋಖಾರಾದಲ್ಲಿರುವ ಪರಿಷ್ಕರ್ -1 ಫ್ಲ್ಯಾಟ್‍ನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಬೆಂಕಿಯಲ್ಲಿ ಸಿಲುಕಿದ್ದ ಸುಮಾರು 18 ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ನೆಲಮಹಡಿಯಿಂದ ಕಟ್ಟಡದ ಮೇಲ್ಭಾಗಕ್ಕೆ ಹೋಗಿರುವ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬಾಲಕಿಯರ ಹಾಸ್ಟೆಲ್‍ನಲ್ಲಿ ಬೆಂಕಿ ಅವಘಡ!

ಈ ಹಿಂದೆ ಗ್ರೇಟರ್ ನೋಯ್ಡಾದ ಜ್ಞಾನ ಪಾರ್ಕ್‌ನಲ್ಲಿರುವ ಅನ್ನಪೂರ್ಣ ಬಾಲಕಿಯರ ಹಾಸ್ಟೆಲ್‍ನಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡಿದ್ದು, ಇದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರ ಇಬ್ಬರು ವಿದ್ಯಾರ್ಥಿನಿಯರು ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯ ವಿಡಿಯೊದಲ್ಲಿ ವಿದ್ಯಾರ್ಥಿನಿಯರಿಬ್ಬರು ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಾಲ್ಕನಿಯಿಂದ ಜಿಗಿದಿದ್ದಾರೆ. ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿರುವುದು ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯ ರೋಮ್ಯಾನ್ಸ್ ; ವಿಡಿಯೋ ವೈರಲ್‌

ಅದೇರೀತಿ ಗುಜರಾತ್‍ನ ಸೂರತ್‍ನಲ್ಲಿ ವಾಣಿಜ್ಯ ಸಂಕೀರ್ಣದಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು. ಎರಡು ಅಂತಸ್ತಿನ ಖಾಸಗಿ ಬಾಲಕಿಯರ ಹಾಸ್ಟೆಲ್‍ನ ವಿದ್ಯುತ್ ಮೀಟರ್ ಫಲಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಹಾಸ್ಟೆಲ್‍ನ ಒಳಗೆ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದು, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.