ಲಂಡನ್: ಇಂಗ್ಲೆಂಡ್‌ನ (United Kingdom) ಮಾಜಿ ಸಂಸದೆ ಕೇಟ್ ನಿವೆಟನ್ (Kate Kniveton) ತಮ್ಮ ವಿವಾಹದ ದಿನಗಳಲ್ಲಿ ಎದುರಿಸಿದ ಕಿರುಕುಳದ ಆಘಾತಕಾರಿ ಅನುಭವವನ್ನು ಹೊರಹಾಕಿದ್ದಾರೆ. ತಮ್ಮ ಮಾಜಿ ಪತಿ ಮತ್ತು ಮಾಜಿ ಸಂಸದ ಆಂಡ್ರ್ಯೂ ಗ್ರಿಫಿತ್ಸ್ (Andrew Griffiths), ನಾನು ನಿದ್ರೆಯಲ್ಲಿರುವಾಗ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಆಂಡ್ರ್ಯೂ ತಮ್ಮ ನವಜಾತ ಶಿಶುವಿನ ಮೇಲೆ ಕೂಗಾಡುತ್ತಿದ್ದ ಮತ್ತು ಹಸಿವಿನಿಂದ ಮಗು ಅಳುತ್ತಿದ್ದಾಗ ಬೈಯುತ್ತಿದ್ದ, ನಿಂದಿಸುತ್ತಿದ್ದ ಎಂದು ಹೇಳಿದ್ದು, ಕೇಟ್ ದೂರು ನೀಡುವ ಎಚ್ಚರಿಕೆ ನೀಡಿದಾಗ, “ನಿನ್ನನ್ನು ಯಾರೂ ನಂಬುವುದಿಲ್ಲ” ಎಂದು ಆತ ತಿರಸ್ಕರಿಸಿದ್ದ ಎಂದು ಆಕೆ ಆರೋಪಿಸಿದ್ದಾರೆ. “ಕೌಟುಂಬಿಕ ಹಿಂಸೆ ಯಾವುದೇ ಗಡಿಗಳಿಲ್ಲದೆ ಯಾರನ್ನಾದರೂ ಬಾಧಿಸಬಹುದು. ನಾನು ಚುನಾಯಿತಳಾದಾಗ, ಕೌಟುಂಬಿಕ ಹಿಂಸಾಚಾರಕ್ಕೆ ತುತ್ತಾದವರ ವಕೀಲೆಯಾಗುವ ಭರವಸೆ ನೀಡಿದ್ದೆ. 10 ವರ್ಷಗಳ ಕಿರುಕುಳ ಮತ್ತು ನಂತರದ ಐದು ವರ್ಷಗಳ ಕಾನೂನು ದುರುಪಯೋಗದಿಂದ ನಾನು ಆಘಾತಕ್ಕೊಳಗಾಗಿದ್ದೇನೆ” ಎಂದು ಕೇಟ್ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಬಾಲಕನ ಮೇಲೆ ಪಿಟ್‌ಬುಲ್ ಅಟ್ಯಾಕ್ ಮಾಡ್ತಿದ್ರೂ ನಗ್ತಾ ಕುಳಿತ ನಾಯಿ ಮಾಲೀಕ- ಈ ವಿಡಿಯೊ ನೋಡಿ
2013ರಲ್ಲಿ ಆಂಡ್ರ್ಯೂ ಜೊತೆ ವಿವಾಹವಾದಾಗ, ಆತ ಸೌಮ್ಯ ಸ್ವಭಾವ ವ್ಯಕ್ತಿಯಾಗಿದ್ದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ಎಂದು ಕೇಟ್ ತಿಳಿಸಿದ್ದಾರೆ. ಆದರೆ, ದಿನ ಕಳೆದಂತೆ ಅವನ ಬದಲಾಗಿದ್ದು, “ನಾನು ನಿದ್ದೆಯಲ್ಲಿರುವಾಗ ಆತ ಲೈಂಗಿಕ ಕಿರುಕುಳ ಆರಂಭಿಸುತ್ತಿದ್ದ. ಕೆಲವೊಮ್ಮೆ ಗೊಣಗುತ್ತಿದ್ದೆ, ಆಗ ಆತ ಕೆಲವೊಮ್ಮೆ ನಿಲ್ಲಿಸುತ್ತಿದ್ದ, ಆದರೆ ಕೆಟ್ಟ ಮನಸ್ಥಿತಿಯಲ್ಲಿ ನನ್ನನ್ನು ಒದ್ದು ಹೊರಗೆ ತಳ್ಳುತ್ತಿದ್ದ” ಎಂದು ಆಕೆ ತಮ್ಮಗಾದ ಕಹಿ ಅನುಭವವನ್ನು ವಿವರಿಸಿದ್ದಾರೆ.
ಮಗುವಿನ ಭವಿಷ್ಟ ದೃಷ್ಟಿಯಿಂದ 2018ರಲ್ಲಿ ಆಂಡ್ರ್ಯೂನಿಂದ ಬೇರ್ಪಟ್ಟ ಕೇಟ್, ತಮ್ಮ ಕರುಳಿನ ಕುಡಿಗೂ, ಗಂಡನಿಂದ ಅಪಾಯವಿದೆ ಎಂದು ಅರಿತು ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದ್ದರು. 2021ರಲ್ಲಿ ಕೌಟುಂಬಿಕ ನ್ಯಾಯಾಲಯವು ಆಂಡ್ರ್ಯೂ ತನ್ನ ಪತ್ನಿಯ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಎಸಗಿದ್ದಾನೆ ಎಂದು ತೀರ್ಪು ನೀಡಿತ್ತು. ಇದಕ್ಕೂ ಮುನ್ನ, ಆಂಡ್ರ್ಯೂ 2,000ಕ್ಕೂ ಹೆಚ್ಚು ಲೈಂಗಿಕ ಸಂದೇಶಗಳನ್ನು ಇಬ್ಬರು ಮಹಿಳೆಯರಿಗೆ ಕಳುಹಿಸಿದ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕೇಟ್ ಮಾಡಿರುವ ಈ ಗಂಭೀರ ಆರೋಪ ಬಹು ಚರ್ಚೆಗೆ ಗ್ರಾಸವಾಗುತ್ತಿದೆ.