ಲಂಡನ್: ಲೈಂಗಿಕ ಚಿತ್ರಗಳ ಬಳಕೆಗಾಗಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon musk) ಒಡೆತನದ ಎಕ್ಸ್ (x) ಅನ್ನು ನಿಷೇಧಿಸಲು ಯುಕೆ( UK) ಚಿಂತನೆ ನಡೆಸಿದೆ. ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಬಳಸುತ್ತಿರುವ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನ ಕೃತಕ ಬುದ್ದಿಮತ್ತೆ ಚಾಟ್‌ಬಾಟ್ ನಲ್ಲಿ ಗ್ರೋಕ್ ಬಳಸಿ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ರಚಿಸಲಾಗಿದೆ. ಇದು ಕಂಡು ಬಂದ ಬಳಿಕ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ (UK PM Keir Starmer) ಅವರು ಯುಕೆಯಲ್ಲಿ ಎಕ್ಸ್ ನಿಷೇಧಕ್ಕೆ ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೃತಕ ಬುದ್ಧಿಮತ್ತೆಯ 'ಗ್ರೋಕ್' ಛಾಯಾಚಿತ್ರಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಬಟ್ಟೆಗಳನ್ನು ಬಿಚ್ಚುವ ಚಿತ್ರಗಳಿರುವುದರಿಂದ ಎಕ್ಸ್ ಅನ್ನು ಬ್ರಿಟನ್‌ನಲ್ಲಿ ನಿಷೇಧಿಸುವ ಸಾಧ್ಯತೆ ಇದೆ. ಇದಕ್ಕಾಗಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಎಲ್ಲಾ ಆಯ್ಕೆಗಳು ಮೇಜಿನ ಮೇಲೆ ಇರಲಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಗಾಜಾ ಗಡಿಯಲ್ಲಿ ಪಾಕಿಸ್ತಾನ ಸೇನೆ? ಇಸ್ರೇಲ್ ಸರ್ಕಾರ ಹೇಳಿದ್ದೇನು?
ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಆನ್‌ಲೈನ್ ಸುರಕ್ಷತಾ ಕಾಯ್ದೆಯ ಸಂಪೂರ್ಣ ಅಧಿಕಾರಗಳನ್ನು ಸೂಚಿಸಿದ್ದಾರೆ. ಇದರಲ್ಲಿ ಶತಕೋಟಿ ಪೌಂಡ್‌ಗಳ ದಂಡ ಅಥವಾ ಬ್ರಿಟನ್‌ನಲ್ಲಿ ಎಕ್ಸ್ ಗೆ ಪ್ರವೇಶವನ್ನು ನಿರ್ಬಂಧ ಸೇರಿದೆ. ವಿಶ್ವಾದ್ಯಂತ ಸುಮಾರು 650 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಎಕ್ಸ್ ಯುಕೆಯಲ್ಲಿ 20 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ಈ ಕುರಿತು ಎಕ್ಸ್ ಗೆ ವರದಿ ಮಾಡಿರುವ ಯುಕೆ ಪ್ರಧಾನಿ, ಇದನ್ನು ನಿಯಂತ್ರಿಸಲು ತಿಳಿಸಿದೆ. ಇಲ್ಲವಾದರೆ ನಾವು ಇದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಯಾಕೆಂದರೆ ಇದು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯುಕೆಯ ಅಂತರ್ಜಾಲ ಸುರಕ್ಷತಾ ಸಂಸ್ಥೆಯು ಎಕ್ಸ್ ನ ಕೃತಕ ಬುದ್ದಿಮತ್ತೆಯು ಗ್ರೋಕ್ ಬಳಸಿ ಲೈಂಗಿಕ ಭಂಗಿಗಳು, ಬಿಕಿನಿಗಳಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳ ಚಿತ್ರಗಳನ್ನು ತೋರಿಸಲಾಗಿದೆ. ಗ್ರೋಕ್‌ನೊಂದಿಗೆ ರಚಿಸಲಾದ ಚಿತ್ರಗಳನ್ನು ಬಹಿರಂಗಪಡಿಸಲಾಗುವುದು. ಇವುಗಳನ್ನು ಕಾನೂನುಬಾಹಿರವಾಗಿ ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತುವಾಗಿರುವ ಡಾರ್ಕ್ ವೆಬ್ ಫೋರಂನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಕಸದ ರಾಶಿ ಕುಸಿದು ಓರ್ವ ಸಾವು; 27 ಮಂದಿ ನಾಪತ್ತೆ!
ಎಐ ಚಿತ್ರಗಳ ಕುರಿತು ಯುಕೆ ಪ್ರಧಾನಿ ಕಚೇರಿಯು ನೇರವಾಗಿ ಎಕ್ಸ್ ಜೊತೆ ಪ್ರಸ್ತಾಪಿಸಿದೆ ಎಂದು ತಿಳಿಸಿರುವ ಪ್ರಧಾನಿ ಕೀರ್ ಸ್ಟಾರ್ಮರ್, ಎಕ್ಸ್ ಇದನ್ನು ನಿಯಂತ್ರಿಸಬೇಕು. ಇದು ತಪ್ಪು ಮತ್ತು ಕಾನೂನುಬಾಹಿರ. ಇದನ್ನು ನಾವು ಸಹಿಸುವುದಿಲ್ಲ. ಎಲ್ಲಾ ಆಯ್ಕೆಗಳನ್ನು ಮೇಜಿನ ಮೇಲೆ ಇಡಲು ನಾನು ಕೇಳಿದ್ದೇನೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆಫ್‌ಕಾಮ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.
ಯುಕೆಯ ತಂತ್ರಜ್ಞಾನ ಕಾವಲುಗಾರರಾಗಿರುವ ಆಫ್‌ಕಾಮ್, ಈ ಸಂಬಂಧ ನ್ಯಾಯಾಲಯದ ಆದೇಶಕ್ಕಾಗಿ ಅರ್ಜಿ ಸಲ್ಲಿಸಬಹುದು. ಈವರೆಗೆ ಇಂಟರ್ನೆಟ್ ಕಂಪೆನಿಗಳು ಯುಕೆಯಿಂದ ಈ ರೀತಿಯ ನಿರ್ಬಂಧದ ಬೆದರಿಕೆಗೆ ಒಳಗಾಗಿಲ್ಲ. ಎಕ್ಸ್ ನಿಷೇಧಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಯಂತ್ರಕವು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಇದರಲ್ಲಿ ತನಿಖೆ ಮತ್ತು ತಾತ್ಕಾಲಿಕ ನಿರ್ಬಂಧಗಳು ಸೇರಿರುತ್ತವೆ ಎನ್ನಲಾಗಿದೆ.