ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ; ಹಲವೆಡೆ ಭಾರೀ ಸ್ಫೋಟ

ಇನ್ನೇನು ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದ ರಷ್ಯಾ- ಉಕ್ರೇನ್‌ ಯುದ್ಧ ಮತ್ತೆ ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ಸೇನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಡ್ರೋನ್ ದಾಳಿ ನಡೆಸಿದ್ದು, ಮಾಸ್ಕೋದ ಅತೀ ದೊಡ್ಡ ತೈಲ ಸಂಸ್ಕರಣಾ ಮೇಲೆ ದಾಳಿ ನಡೆಸಿದೆ. ಮಾಹಿತಿಯ ಪ್ರಕಾರ, ಉಕ್ರೇನ್‌ನ ಡ್ರೋನ್‌ಗಳು ಮಾಸ್ಕೋದಲ್ಲಿರುವ ಪೆಟ್ರೋಲಿಯಂ ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.

ಸಂಗ್ರಹ ಚಿತ್ರ

ಮಾಸ್ಕೋ: ಇನ್ನೇನು ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದ ರಷ್ಯಾ- ಉಕ್ರೇನ್‌ ಯುದ್ಧ (Russia-Ukraine War) ಮತ್ತೆ ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ಸೇನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಡ್ರೋನ್ ದಾಳಿ ನಡೆಸಿದ್ದು, ಮಾಸ್ಕೋದ (Drone Attack) ಅತೀ ದೊಡ್ಡ ತೈಲ ಸಂಸ್ಕರಣಾ ಮೇಲೆ ದಾಳಿ ನಡೆಸಿದೆ. ಮಾಹಿತಿಯ ಪ್ರಕಾರ, ಉಕ್ರೇನ್‌ನ ಡ್ರೋನ್‌ಗಳು ಮಾಸ್ಕೋದಲ್ಲಿರುವ ಪೆಟ್ರೋಲಿಯಂ ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ದಾಳಿಯ ಬಳಿಕ ಘಟಕಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಿಂದ ದಟ್ಟ ಹೊಗೆ ವ್ಯಾಪಕವಾಗಿ ಹರಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ

ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶಾದ್ಯಂತ 555 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಸದ್ಯ ಡ್ರೋನ್‌ ದಾಳಿ ಬಳಿಕ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಎರಡು ದಿನಗಳ ಹಿಂದೆ ಇದೇ ಸಂಸ್ಕರಣಾಗಾರದ ಮೇಲೆಯೂ ದಾಳಿ ನಡೆಸಲಾಗಿತ್ತು. ಈ ದಾಳಿಯು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಚೇರಿ ಇರುವ ಕ್ರೆಮ್ಲಿನ್ ಪ್ರದೇಶದ ಸಮೀಪದಲ್ಲೇ ಡ್ರೋನ್‌ಗಳು ದಾಳಿ ಮಾಡಿವೆ. ಮೂಲಗಳ ಪ್ರಕಾರ, ದಾಳಿ ನಡೆದ ಸ್ಥಳವು ಪುಟಿನ್ ಕಚೇರಿಯಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ.



ದಾಳಿಯ ಬಳಿಕ ರಷ್ಯಾದ ಭದ್ರತಾ ಪಡೆಗಳು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ತೈಲ ಸಂಸ್ಕರಣಾ ಘಟಕಗಳಲ್ಲಿ ಉಂಟಾದ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಉಕ್ರೇನ್ ಕಳೆದ ಕೆಲವು ತಿಂಗಳುಗಳಿಂದ ರಷ್ಯಾದ ಒಳಭಾಗದಲ್ಲಿರುವ ಪ್ರಮುಖ ಸೇನಾ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ.

ಅಮೆರಿಕ ಉಕ್ರೇನ್‌ಗೆ ಸಹಾಯ ಮಾಡುವುದನ್ನು ನಿಲ್ಲಿಸಿದರೆ ಇರಾನ್‌ ಜೊತೆಗಿನ ಸಂಬಂಧ ಕಡಿತ? ರಷ್ಯಾ ಹೇಳಿದ್ದೇನು?

ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ ಕೆಲವೇ ಗಂಟೆಗಳ ನಂತರ ಡ್ರೋನ್ ದಾಳಿ ನಡೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಅತ್ಯಂತ ಪ್ರಬಲ ಮತ್ತು ವ್ಯವಸ್ಥಿತ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Vishakha Bhat Heggar

View all posts by this author