ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ; ಜೋರ್ಡಾನ್‌ ಮೇಲೆ ಇರಾನ್ ಪ್ರತಿದಾಳಿ: ಪಶ್ಚಿಮ ಏಷ್ಯಾ ಮತ್ತೆ ಸಂಘರ್ಷ ಪೀಡಿತ

ಇರಾನ್‌ನ 5 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆ ಮೇಲೆ ದಾಳಿ ನಡೆಸಿದೆ. ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಅಮೆರಿಕದ ಯುದ್ಧನೌಕೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎನ್ನುವ ಆರೋಪದಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿತ್ತು.

ಸಂಗ್ರಹ ಚಿತ್ರ

ವಾಷಿಂಗ್ಟನ್: ಒಮಾನ್ ಕರಾವಳಿ (Gulf of Oman), ಖಾರ್ಗ್ ದ್ವೀಪದ (Kharg Island) ಬಳಿ ಐದು ಇರಾನಿನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ (US attack) ಮಾಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಜೋರ್ಡಾನ್‌ನ (Jordan) ಅಲ್ ಅಜ್ರಾಕ್ ನೆಲೆಯಲ್ಲಿನ ಅಮೆರಿಕದ ಪಡೆಗಳ (US attack) ಮೇಲೆ ಕ್ಷಿಪಣಿಗಳನ್ನು (missile strikes) ಹಾರಿಸಿದೆ. ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಿರುವುದಕ್ಕೆ ಇರಾನ್ ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿದೆ. ಅಮೆರಿಕ ಸೇನಾ ಪಡೆಯು ತನ್ನ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿರುವುದನ್ನು ಇರಾನ್ ದೃಢಪಡಿಸಿದೆ.

ಟೆಹ್ರಾನ್ ಎರಡು ಬಾರಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಅಮೆರಿಕದ ನೌಕಾಪಡೆಯ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಆರೋಪಿಸಿ ಮಂಗಳವಾರ ಒಮಾನ್ ಕೊಲ್ಲಿ ಮತ್ತು ಖಾರ್ಗ್ ದ್ವೀಪದ ಬಳಿ ಐದು ಇರಾನಿನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಸಂಘರ್ಷ ತೀವ್ರಗೊಳ್ಳಲು ಕಾರಣವಾಗಿದೆ.

ಭಾರತೀಯ ಹಿಂದೂ ಧಾರ್ಮಿಕ ನಿಯೋಗದ ಭೇಟಿ ವೇಳೆ ಐಫೆಲ್‌ ಟವರ್‌ನಲ್ಲಿ ಮಹಿಳಾ ಸಿಬ್ಬಂದಿಗೆ ನಿರ್ಬಂಧ; ಭುಗಿಲೆದ್ದ ಭಾರೀ ಆಕ್ರೋಶ

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್, ಇರಾನ್ ನಡೆಸಿರುವ ಎರಡು ದಾಳಿಗಳಿಂದ ಅಮೆರಿಕದ ಯುದ್ಧನೌಕೆ ಯಶಸ್ವಿಯಾಗಿ ತಪ್ಪಿಸಿಕೊಂಡಿತ್ತು. ಯಾವುದೇ ಸಿಬ್ಬಂದಿಗೆ ಗಾಯವಾಗಿಲ್ಲ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತೈಲ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಐದು ಹಡಗುಗಳನ್ನು ಯುಎಸ್ ಪಡೆಗಳು ಹೊಡೆದುರುಳಿಸಿವೆ. ಓಮನ್ ಕೊಲ್ಲಿಯಲ್ಲಿ ದಾಳಿ ಮಾಡಿರುವ ಹಡಗುಗಳನ್ನು ಎಂ/ಟಿ ಕವಿಜ್, ಎಂ/ಟಿ ಚಾರ್ಮಿನಾರ್, ಎಂ/ಟಿ ಹಾರಿಜಾನ್ 1 ಮತ್ತು ಎಂ/ಟಿ ರೈಸ್ಕೊ ಮತ್ತು ಖಾರ್ಗ್ ದ್ವೀಪದ ಬಳಿ ಎಂ/ಟಿ ಡೆರಿಯಾ ಎಂದು ಗುರುತಿಸಲಾಗಿದೆ ಎಂದು ತಿಳಿಸಿದೆ.

ಹಡಗುಗಳ ಮೇಲೆ ದಾಳಿ ನಡೆಸುವ ಮೊದಲು ಯುಎಸ್ ಪಡೆಗಳು ಹಡಗಿನಲ್ಲಿದ್ದ ಸಿಬ್ಬಂದಿಗೆ ಹಡಗು ಬಿಟ್ಟು ಹೋಗುವಂತೆ ಆದೇಶಿಸಿತ್ತು. ಇದರಿಂದ ತೈಲ ಟ್ಯಾಂಕರ್‌ಗಳು ನಿಷ್ಕ್ರಿಯಗೊಂಡಿದ್ದು, ಯುಎಸ್ ಪಡೆ ಅದನ್ನು ತನ್ನ ಕ್ಷಿಪಣಿಯಿಂದ ಉಡಾಯಿಸಿದೆ. ನೀರಿನಲ್ಲಿ ಗಸ್ತು ತಿರುಗುವುದನ್ನು ಯುಎಸ್ ಪಡೆಗಳು ಮುಂದುವರಿಸಿವೆ ಎಂದು ಹೇಳಿದೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಅದರ ಪ್ರಾದೇಶಿಕ ಪ್ರಾಕ್ಸಿ ಗುಂಪುಗಳಿಗೆ ಹಣಕಾಸು ಒದಗಿಸಲು ನೌಕಾಪಡೆಯ ಭಾಗವಾಗಿ ಇರಾನ್ ಹಡಗುಗಳನ್ನು ಬಳಸುತ್ತಿದೆ. ಆದರೆ ಈ ಹಡಗುಗಳನ್ನು ರಕ್ಷಿಸಲು ಇರಾನ್‌ಗೆ ಯಾವುದೇ ದಾರಿಯಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಆರೋಪಿಸಿದೆ.

ಆಪರೇಷನ್ ಸಿಂದೂರ್ ಬಳಿಕವೂ ಪಾಠ ಕಲಿಯದ ಪಾಕಿಸ್ತಾನ: ಹಾನಿಗೊಳಗಾದ ಸೇನಾ ನೆಲೆ, ಉಗ್ರ ಶಿಬಿರಗಳ ಮರುನಿರ್ಮಾಣ

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಜೋರ್ಡಾನ್‌ನಲ್ಲಿರುವ ಅಲ್ ಅಜ್ರಾಕ್ ವಾಯುನೆಲೆಯಲ್ಲಿನ ಯುಎಸ್ ಪಡೆಗಳ ಮೇಲೆ ದಾಳಿ ನಡೆಸಿದೆ. ಜೋರ್ಡಾನ್ ವಾಯು ರಕ್ಷಣಾ ಪಡೆಗಳು 20 ಇರಾನಿನ ಕ್ಷಿಪಣಿಗಳಲ್ಲಿ 18 ಅನ್ನು ನಾಶ ಮಾಡಿದ್ದು ಉಳಿದ ಎರಡು ತೆರೆದ ಪ್ರದೇಶಗಳಲ್ಲಿ ಬಿದ್ದಿತು ಎಂದು ಜೋರ್ಡಾನ್ ಅಧಿಕಾರಿಗಳು ತಿಳಿಸಿದ್ದಾರೆ. ಕುವೈತ್ ಮತ್ತು ಬಹರೈನ್ ಬಂದರುಗಳ ಮೇಲೆಯೂ ಇರಾನ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರಿಂದ ತಕ್ಷಣವೇ ಸಿಬ್ಬಂದಿಯನ್ನು ಸ್ಥಳಾಂತರಿಸಲು ಆದೇಶಿಸಲಾಯಿತು. ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಮಂಗಳವಾರ ತೈಲ ಬೆಲೆಗಳು 8,700 ರೂ. ಹೆಚ್ಚಳವಾಗಿದೆ.

ವಿದ್ಯಾ ಇರ್ವತ್ತೂರು

View all posts by this author