ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಂಪ್‌ ಶ್ವೇತ ಭವನದಲ್ಲಿದ್ದಾಗಲೇ ಹೊರಗಡೆ ಗುಂಡಿನ ದಾಳಿ; ಆರೋಪಿ ನಾಪತ್ತೆ

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎಂದು ವರದಿಯಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ.

ಸಂಗ್ರಹ ಚಿತ್ರ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎಂದು ವರದಿಯಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ಬಳಿಕ ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದ್ದಾರೆ.

ಯಾವುದೇ ಶಂಕಿತ ವ್ಯಕ್ತಿ ಪತ್ತೆಯಾಗಿಲ್ಲ ಮತ್ತು ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಮತ್ತು ಪ್ರಸ್ತುತ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶ್ವೇತಭವನದಲ್ಲಿ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿದಿದೆ. ಕಳೆದ ಕೆಲವು ವಾರಗಳಿಂದ ನವೀಕರಣಕ್ಕಾಗಿ ಲಫಯೆಟ್ಟೆ ಪಾರ್ಕ್ ಮುಚ್ಚಲ್ಪಟ್ಟಿದೆ ಮತ್ತು ಪ್ರಸ್ತುತ ಬ್ಯಾರಿಕೇಡ್‌ಗಳಿಂದ ಆವೃತವಾಗಿದೆ.

ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮತ್ತು ಯುಎಸ್ ಪಾರ್ಕ್ ಪೊಲೀಸರೊಂದಿಗೆ ಕೆಲಸ ಮಾಡುತ್ತಿರುವ ತನ್ನ ತಂಡವು ಶಂಕಿತ ವ್ಯಕ್ತಿ ಮತ್ತು ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಸೀಕ್ರೆಟ್ ಸರ್ವಿಸ್ ವರದಿ ಮಾಡಿದೆ.

ಇರಾನ್‌- ಅಮೆರಿಕ ಯುದ್ಧ

ಇರಾನ್‌- ಇಸ್ರೇಲ್‌- ಅಮೆರಿಕ ನಡುವೆ ಯುದ್ಧ ಮುಂದುವರಿದಿದ್ದು, ಇರಾನ್ ನಮ್ಮ ಜೊತೆ ಒಪ್ಪಂದಕ್ಕೆ ಬರದಿದ್ದರೆ, ಆ ಇಡೀ ದೇಶವನ್ನೇ ನಾವು ಸರ್ವನಾಶ ಮಾಡುತ್ತೇವೆ. ಇರಾನ್‌ನ ವಿದ್ಯುತ್‌ ಸ್ಥಾವರ ಹಾಗೂ ಸೇತುವೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಮೇಲಿನ ಸಂಭಾವ್ಯ ದಾಳಿಯ ಸಮಯವನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ಸಂಜೆ (ಅಮೆರಿಕ ಕಾಲಮಾನ ರಾತ್ರಿ 8:00 ಗಂಟೆ, ಅಂದರೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ) ಯೊಳಗೆ ಜಲಮಾರ್ಗವನ್ನು ಸಾಗರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್ ಅನ್ನು ನರಕವನ್ನಾಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ರಾಜಿ ಮಾಡಿಕೊಳ್ಳಲು ತೆಹ್ರಾನ್‌ಗೆ ಸಾಕಷ್ಟು ಸಮಯವಿದೆ. ಹಾಗೆ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

Vishakha Bhat Heggar

View all posts by this author