ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೆ ಶುರುವಾಯ್ತಾ ವಾರ್‌? ಇರಾನ್‌ ಡ್ರೋನ್‌ಗಳು, ರೇಡಾರ್ ಕೇಂದ್ರಗಳ ಮೇಲೆ ಅಮೆರಿಕ ದಾಳಿ

ಕದನ ವಿರಾಮದ ಹೊರತಾಗಿಯೂ ಅಮೆರಿಕ, ಇರಾನ್‌ ಮೇಲೆ ದಾಳಿ ನಡೆಸುತ್ತಲೇ ಇದೆ. ಕಳೆದ 1 ವಾರದಲ್ಲಿ 3-4 ಭಾರೀ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇರಾನಿನ ಡ್ರೋನ್‌ಗಳು ಹಾಗೂ ಅನೇಕ ರೇಡಾರ್ ಕೇಂದ್ರಗಳನ್ನ ಧ್ವಂಸಗೊಳಿಸಿದೆ. ಹಾರ್ಮೊಜ್‌ ಜಲಸಂಧಿಯನ್ನು ಗುರಿಯಾಗಿಸಿಕೊಂಡು ಹಾರಿಸಿದ್ದ ಇರಾನ್‌ನ ಡೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ.

ಸಂಗ್ರಹ ಚಿತ್ರ

ಕದನ ವಿರಾಮದ ಹೊರತಾಗಿಯೂ ಅಮೆರಿಕ, ಇರಾನ್‌ ಮೇಲೆ ದಾಳಿ ನಡೆಸುತ್ತಲೇ ಇದೆ. ಕಳೆದ 1 ವಾರದಲ್ಲಿ 3-4 ಭಾರೀ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇರಾನಿನ ಡ್ರೋನ್‌ಗಳು (America Iran) ಹಾಗೂ ಅನೇಕ ರೇಡಾರ್ ಕೇಂದ್ರಗಳನ್ನ ಧ್ವಂಸಗೊಳಿಸಿದೆ. ಹಾರ್ಮೊಜ್‌ ಜಲಸಂಧಿಯನ್ನು (Strait Of Hormuz) ಗುರಿಯಾಗಿಸಿಕೊಂಡು ಹಾರಿಸಿದ್ದ ಇರಾನ್‌ನ ಡೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ. ಜೊತೆಗೆ ಕೆಶ್ಮ್ ದ್ವೀಪದಲ್ಲಿರುವ ಇರಾನಿನ ಕರಾವಳಿ ಕಣ್ಗಾವಲು ರೇಡಾರ್ ತಾಣಗಳ ಮೇಲೂ ದಾಳಿ ನಡೆಸಿದ್ದು, ಇರಾನಿನ ಮಿಲಿಟರಿ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೊಂಡಿದೆ.

"ಕೆಲವು ಕ್ಷಣಗಳ ಹಿಂದೆ, ಹಾರ್ಮುಜ್ ಜಲಸಂಧಿಯ ಕಡೆಗೆ ಹಾರಿಸಲಾದ ನಾಲ್ಕು ಇರಾನಿನ ಏಕಮುಖ ದಾಳಿ ಡ್ರೋನ್‌ಗಳನ್ನು CENTCOM ಪಡೆಗಳು ಹೊಡೆದುರುಳಿಸಿದವು. ದಾಳಿ ಡ್ರೋನ್‌ಗಳು ಪ್ರಾದೇಶಿಕ ಕಡಲ ಸಂಚಾರಕ್ಕೆ ತಕ್ಷಣದ ಬೆದರಿಕೆಯನ್ನು ಒಡ್ಡಿದವು" ಎಂದು CENTCOM ಹೇಳಿಕೆಯಲ್ಲಿ ತಿಳಿಸಿದೆ. "ಅಮೆರಿಕ ಪಡೆಗಳು ತರುವಾಯ ಗೋರುಕ್ ಮತ್ತು ಕೆಶ್ಮ್ ದ್ವೀಪದಲ್ಲಿರುವ ಇರಾನಿನ ಕರಾವಳಿ ಕಣ್ಗಾವಲು ರಾಡಾರ್ ತಾಣಗಳ ಮೇಲೆ ದಾಳಿ ಮಾಡಿ ಮತ್ತಷ್ಟು ದಾಳಿಗಳಿಂದ ರಕ್ಷಿಸಿಕೊಂಡವು. ಅಮೆರಿಕನ್ ಪಡೆಗಳು ಜಾಗರೂಕವಾಗಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆಯು ಇರಾನ್‌ನ ಬಂದರುಗಳ ಮೇಲೆ ದಿಗ್ವಂಧನ ವಿಧಿಸುತ್ತಿದೆ. ಈ ಬೆಳವಣಿಗೆಗಳ ಮಧ್ಯೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ದಾಳಿಗಳು ಇರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ತೀವ್ರವಾಗಿ ಕುಗ್ಗಿಸಿವೆ ಎಂದು ಹೇಳಿದ್ದಾರೆ. "ಹೆಚ್ಚಿನ ಡ್ರೋನ್ ಕಾರ್ಖಾನೆಗಳು ನಾಶವಾಗಿವೆ, ಹೆಚ್ಚಿನ ಉಡಾವಣಾ ಪ್ಯಾಡ್‌ಗಳು ನಾಶವಾಗಿವೆ ಮತ್ತು ಹೆಚ್ಚಿನ ಕ್ಷಿಪಣಿ ಉತ್ಪಾದನಾ ಪ್ರದೇಶಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ.

ಇರಾನ್‌ಗೆ ಈಗ ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ. ಅವರ ನಾಯಕತ್ವವನ್ನು ನಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಆದರೂ ಕೆಲವು ಮಾಧ್ಯಮಗಳು ಅವರು ಯುದ್ಧದಲ್ಲಿ ಚೆನ್ನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಇದು ನಂಬಲಸಾಧ್ಯ ಎಂದು ತಿಳಿಸಿದರು. ಇರಾನ್‌ನ 159 ಹಡಗುಗಳು ಸಮುದ್ರದಲ್ಲಿ ಮುಳುಗಿವೆ, ಅದಕ್ಕೆ ಸಂಬಂಧಿಸಿದ ಚಿತ್ರಗಳೂ ನಮ್ಮ ಬಳಿ ಇವೆ ಎಂದು ಟ್ರಂಪ್‌ ಹೇಳಿದ್ದಾರೆ.

Vishakha Bhat Heggar

View all posts by this author