ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭೀಕರ ದುರಂತ; ಆಕಾಶದಲ್ಲೇ ಡಿಕ್ಕಿ ಹೊಡೆದ ಫಿಲಿಪೈನ್ಸ್ ವಾಯುಪಡೆಯ ಎರಡು ತರಬೇತಿ ವಿಮಾನಗಳು, 4 ಪೈಲಟ್‌ಗಳ ಸಾವು

ಫಿಲಿಪೈನ್ಸ್ ವಾಯುಪಡೆಗೆ (PAF) ಸೇರಿದ ಎರಡು ಅತ್ಯಾಧುನಿಕ ತರಬೇತಿ ವಿಮಾನಗಳು ಆಕಾಶದಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಪತನಗೊಂಡಿದ್ದು, ಘಟನೆಯಲ್ಲಿ ಇಬ್ಬರು ತರಬೇತುದಾರರು ಸೇರಿದಂತೆ ನಾಲ್ಕು ಜನ ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದಾರೆ. ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ.

ಸಂಗ್ರಹ ಚಿತ್ರ

ಮನಿಲಾ: ಫಿಲಿಪೈನ್ಸ್ ವಾಯುಪಡೆಗೆ (Philippines Air Force) ಸೇರಿದ ಎರಡು ಅತ್ಯಾಧುನಿಕ ತರಬೇತಿ ವಿಮಾನಗಳು ಆಕಾಶದಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ (Planes Crash) ಪತನಗೊಂಡಿದ್ದು, ಘಟನೆಯಲ್ಲಿ ಇಬ್ಬರು ತರಬೇತುದಾರರು ಸೇರಿದಂತೆ ನಾಲ್ಕು ಜನ ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದುರಂತ ಮನಿಲಾದ ದಕ್ಷಿಣ ಭಾಗದಲ್ಲಿರುವ ಬಟಾಂಗಾಸ್ ಪ್ರಾಂತ್ಯದಲ್ಲಿ ಸಂಭವಿಸಿದೆ. ವಾಯುಪಡೆಯ ದಿನನಿತ್ಯದ ತರಬೇತಿ ಪ್ರಕ್ರಿಯೆಯ ಭಾಗವಾಗಿ ಫೆರ್ನಾಂಡೋ ಏರ್ ಬೇಸ್‌ನಿಂದ ಎರಡು SF-260 ಫ್ಲೈಯಿಂಗ್ ಟ್ರೈನರ್ ವಿಮಾನಗಳು ಹಾರಾಟ ನಡೆಸಿದ್ದವು.

ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ತೀವ್ರತೆಗೆ ವಿಮಾನಗಳು ಆಕಾಶದಲ್ಲೇ ಛಿದ್ರಗೊಂಡು ಏರ್ ಬೇಸ್ ಆವರಣದೊಳಗೆ ಪತನಗೊಂಡಿವೆ. ಅಪಘಾತದ ಸಮಯದಲ್ಲಿ ಪ್ರತಿ ವಿಮಾನದಲ್ಲೂ ತಲಾ ಇಬ್ಬರು ಪೈಲಟ್‌ಗಳಿದ್ದರು (ಒಬ್ಬರು ಇನ್‌ಸ್ಟ್ರಕ್ಟರ್ ಹಾಗೂ ಒಬ್ಬರು ವಿದ್ಯಾರ್ಥಿ ಪೈಲಟ್). ವಿಮಾನದಲ್ಲಿದ್ದ ನಾಲ್ಕೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆಯ ವಕ್ತಾರರು ಖಚಿತಪಡಿಸಿದ್ದಾರೆ. ವಿಮಾನಗಳು ಮಿಲಿಟರಿ ಬೇಸ್‌ನ ಸುರಕ್ಷಿತ ವಲಯದಲ್ಲೇ ಪತನಗೊಂಡಿದ್ದರಿಂದ ಭೂಮಿಯ ಮೇಲಿದ್ದ ಇತರ ಸಿಬ್ಬಂದಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ.

ವಿಡಿಯೋ ನೋಡಿ



ಘಟನೆ ಸಂಭವಿಸುತ್ತಿದ್ದಂತೆ ವಾಯುಪಡೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫಿಲಿಪೈನ್ಸ್ ವಾಯುಪಡೆಯು ತನ್ನಲ್ಲಿರುವ ಎಲ್ಲಾ SF-260 ತರಬೇತಿ ವಿಮಾನಗಳ ಹಾರಾಟವನ್ನು ತನಿಖೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ತುರ್ತು ಪರಿಸ್ಥಿತಿ; ಏಕಾಏಕಿ 28,000 Ft ಕುಸಿದ ವಿಮಾನ

ಮೇ ತಿಂಗಳಲ್ಲಿ, ಉತ್ತರ ಫಿಲಿಪೈನ್ಸ್‌ನ ಬೆಂಗುಟ್ ಪ್ರಾಂತ್ಯದಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ಮತ್ತೊಂದು SF-260 ವಿಮಾನ ಪತನಗೊಂಡು ಇಬ್ಬರು ಮಿಲಿಟರಿ ಪೈಲಟ್‌ಗಳು ಸಾವನ್ನಪ್ಪಿದ್ದರು. ಫಿಲಿಪೈನ್ಸ್ ವಾಯುಪಡೆ (PAF) ಬಳಸುವ SF-260 ವಿಮಾನವು ಮೂಲತಃ ಇಟಲಿ ಮೂಲದ ಹಗುರವಾದ, ಏರೋಬ್ಯಾಟಿಕ್ಸ್ ಸಾಮರ್ಥ್ಯ ಹೊಂದಿರುವ ಮತ್ತು ಮಿಲಿಟರಿ ತರಬೇತಿಗೆ ಪ್ರಸಿದ್ಧವಾಗಿರುವ ವಿಮಾನವಾಗಿದೆ. ಇಟಲಿಯ ಹೆಸರಾಂತ ಇಂಜಿನಿಯರ್ ಸ್ಟೆಲಿಯೊ ಫ್ರತಿ ಅವರು ವಿನ್ಯಾಸಗೊಳಿಸಿದ ಈ ವಿಮಾನವನ್ನು ಪ್ರಸ್ತುತ ಲಿಯೊನಾರ್ಡೊ ಸಂಸ್ಥೆ ನಿರ್ವಹಿಸುತ್ತಿದೆ.

Vishakha Bhat Heggar

View all posts by this author