ಫ್ರಾನ್ಸ್: ಹೆಚ್ಚಿದ ಜನ ಜೀವನ ವೆಚ್ಚ, ಸಾರ್ವಜನಿಕ ಸೇವೆಗಳಲ್ಲಿ ನಿರ್ಲಕ್ಷ್ಯ ಕುರಿತು ಫ್ರಾನ್ಸ್ (france) ನಾದ್ಯಂತ ಉಂಟಾಗಿರುವ ಗಲಭೆ ಶನಿವಾರ ಹಿಂಸಾತ್ಮಕ (france voilence) ರೂಪ ತಳೆದಿದೆ. ಹಲವಾರು ಕಟ್ಟಡಗಳಿಗೆ ಬೆಂಕಿ (Fire) ಹಚ್ಚಲಾಗಿದ್ದು, ಐಷಾರಾಮಿ ಅಂಗಡಿಗಳನ್ನು ಲೂಟಿ ಮಾಡಲಾಗಿದೆ. 1,200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಸರ್ಕಾರದ ವಿರುದ್ಧ 5 ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಇಳಿದಿದ್ದು, 1,200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಂತರಿಕ ಸಚಿವ ಲಾರೆಂಟ್ ನುನೆಜ್, ಪ್ಯಾರಿಸ್ನಾದ್ಯಂತ ಅಶ್ರುವಾಯುವಿನ ಸದ್ದು ಕೇಳುತ್ತಿದೆ. ಹಲವಾರು ಫ್ರೆಂಚ್ ನಗರಗಳಲ್ಲಿ ಕಟ್ಟಡಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ. ಪ್ಯಾರಿಸ್ನಲ್ಲಿ 1,10,000 ಸೇರಿದಂತೆ ಫ್ರಾನ್ಸ್ನಾದ್ಯಂತ ಒಟ್ಟು ಸುಮಾರು 5,50,000ಕ್ಕೂ ಹೆಚ್ಚು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಫ್ರಾನ್ಸ್ನಲ್ಲಿ ಭುಗಿಲೆದ್ದ ಹಿಂಸಾಚಾರ:
ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ನೀಡಿರುವ ಮಾಹಿತಿ ಪ್ರಕಾರ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುದರಿಂದ 1,200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 150 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿ, ರೊಮೇನಿಯಾದಲ್ಲಿ ಟ್ಯಾಂಕರ್ಗಳ ಮೇಲೆ ದಾಳಿ: 24 ಭಾರತೀಯ ನಾವಿಕರು ಸುರಕ್ಷಿತ
ಶಾಲಾ ಅವ್ಯವಸ್ಥೆಗಳ ಕುರಿತು ಆರಂಭದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಇದರ ಬಳಿಕ ಸಾರ್ವಜನಿಕ ಸೇವೆಗಳಲ್ಲಿನ ಅವ್ಯವಸ್ಥೆ ಕುರಿತು ಕಾರ್ಮಿಕ ಸಂಘಗಳು ಬೀದಿಗಿಳಿದವು. ಇದು ವಿಶಾಲ ಚಳುವಳಿಯಾಗಿ ರೂಪುಗೊಂಡಿತು.
ಶನಿವಾರ ಮಧ್ಯಾಹ್ನ ಪ್ಯಾರಿಸ್ನಲ್ಲಿ ನಡೆದ ಪ್ರಮುಖ ಮೆರವಣಿಗೆ ಶಾಂತಿಯುತವಾಗಿ ನಡೆದಿತ್ತು. ಆದರೆ ಸಂಜೆ ವೇಳೆ ಪ್ರತಿಭಟನಾಕಾರರ ಗುಂಪುಗಳು ಬೀದಿಗಳಲ್ಲಿ ಬೆಂಕಿ ಹಚ್ಚಿದವು. ಪ್ಲೇಸ್ ಡೆ ಲಾ ರಿಪಬ್ಲಿಕ್ ಸೇರಿದಂತೆ ಪ್ರಮುಖ ಸ್ಥಳಗಳ ಬಳಿ ವಾಹನಗಳನ್ನು ಸುಟ್ಟುಹಾಕಿದವು. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ನೀರಿನ ಫಿರಂಗಿಯನ್ನು ಬಳಸಿದರು. ಆದರೆ ಜನರು ಪೋಲೀಸರ ಮೇಲೆ ಎರಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಪ್ರತಿಭಟನಾಕಾರರು ಹಲವಾರು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಬಟ್ಟೆ ಮತ್ತು ಆಹಾರ ಮಳಿಗೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಸರ್ಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಲಾಯಿತು.
ಲಿಯಾನ್ನಲ್ಲಿ, ನಗರದ ಪ್ರವಾಸಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಮೇಯರ್ ಗ್ರೆಗೊರಿ ಡೌಸೆಟ್ , ಇದೊಂದು ದುರಂತ. ಇದು ಅತ್ಯಂತ ಪ್ರಸಿದ್ಧ ಐತಿಹಾಸಿಕ ಕಟ್ಟಡ. ಇದು ನಮ್ಮ ಹೃದಯವನ್ನು ಒಡೆದಿದೆ. ಬೆಂಕಿ ನಂದಿಸಲು ಮುಂದಾದ ಅಗ್ನಿಶಾಮಕ ದಳದವರನ್ನು ತಡೆಯಲಾಗಿದೆ ಎಂದರು.
ಲಿಮೋಗೆಸ್ನಲ್ಲಿ ಟೌನ್ ಹಾಲ್ನಲ್ಲಿ ಬೆಂಕಿಯಿಂದಾಗಿ ಕಟ್ಟಡದ ಛಾವಣಿಯ ಒಂದು ಭಾಗ ಕುಸಿದಿದೆ . ಗ್ರೆನೋಬಲ್, ಅವಿಗ್ನಾನ್, ಪೌ, ಮಾಂಟ್ಪೆಲಿಯರ್ ಮತ್ತು ವ್ಯಾಲೆನ್ಸ್ನಲ್ಲಿಯೂ ಕಟ್ಟಡಗಳಿಗೆ ಹಾನಿಯಾಗಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶನಿವಾರ ತಡರಾತ್ರಿ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.