ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಯಾನ್ ಡಿಯಾಗೋ ಬಳಿ ವಿಮಾನ ಪತನ; ಹಲವರು ಸಾವು, ಕಾರುಗಳು, ಮನೆಗಳಿಗೆ ಹಾನಿ: ಭಯಾನಕ ವಿಡಿಯೊ ಇಲ್ಲಿದೆ

Plane Crashe: ಗುರುವಾರ ಬೆಳಗಿನ ಜಾವ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದ ವಸತಿ ಪ್ರದೇಶದಲ್ಲಿ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಡ್ಯಾನ್ ಎಡ್ಡಿ, ವಿಮಾನ ವಿದ್ಯುತ್ ತಂತಿಗೆ ಡಿಕ್ಕಿಹೊಡೆದಿರಬಹುದೇ ಎಂಬುದರ ಕುರಿತು ತನಿಖೆ ನಡೆಯಲಿದೆ ಎಂದರು.

ಅಪಘಾತಕ್ಕೀಡಾದ ವಿಮಾನ

ವಾಷಿಂಗ್ಟನ್‌: ಗುರುವಾರ ಬೆಳಗಿನ ಜಾವ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ (Southern California) ಸ್ಯಾನ್ ಡಿಯಾಗೋದ (San Diego) ವಸತಿ ಪ್ರದೇಶದಲ್ಲಿ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು (Plane Crash), ಹಲವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಡ್ಯಾನ್ ಎಡ್ಡಿ, ವಿಮಾನ ವಿದ್ಯುತ್ ತಂತಿಗೆ ಡಿಕ್ಕಿಹೊಡೆದಿರಬಹುದೇ ಎಂಬುದರ ಕುರಿತು ತನಿಖೆ ನಡೆಯಲಿದೆ ಎಂದರು.

ಸ್ಯಾನ್ ಡಿಯಾಗೋ ಅಧಿಕಾರಿಗಳ ಪ್ರಕಾರ, ವಿಮಾನದಲ್ಲಿ ಸುಮಾರು 8-10 ಜನರು ಇದ್ದಿರಬಹುದು, ಆದರೆ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. “ವಿಮಾನವು ರಸ್ತೆಯೊಂದರ ಮೇಲೆ ಪತನವಾದಾಗ ಜೆಟ್ ಇಂಧನ ಹರಡಿ, ಬೀದಿಯ ಎರಡೂ ಬದಿಗಳಲ್ಲಿದ್ದ ಎಲ್ಲ ಕಾರುಗಳನ್ನು ಸುಟ್ಟು ಕರಕಲಾಗಿವೆ” ಎಂದು ಎಡ್ಡಿ ಹೇಳಿದರು. ಸ್ಯಾನ್ ಡಿಯಾಗೋ ಅಧಿಕಾರಿಗಳು ಅಪಘಾತಕ್ಕೀಡಾದ ವಿಮಾನದ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಇದು ಮಿಡ್‌ವೆಸ್ಟ್‌ನಿಂದ ಬಂದ ವಿಮಾನವಾಗಿತ್ತು ಎಂದು ಮೂಲಗಳು ತಿಳಿಸಿವೆ.



ಈ ಸುದ್ದಿಯನ್ನು ಓದಿ: Viral Video:ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡ ಹುಡುಗಿಯರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!
ಫೆಡರಲ್ ಏವಿಯೇಷನ್ ಅಥಾರಿಟಿ (FAA) ಪ್ರಕಾರ, ಸೆಸ್ನಾ 550 ವಿಮಾನ ಸ್ಥಳೀಯ ಕಾಲಮಾನ ಬೆಳಗ್ಗೆ 3:45ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಈ ಪ್ರದೇಶವು ಮಾಂಟ್‌ಗೊಮೆರಿ-ಗಿಬ್ಸ್ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ.