ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಬಿಕ್ಕಟ್ಟು; ಯೂನಸ್‌ ಮತ್ತೊಬ್ಬ ಆಪ್ತನಿಂದ ರಾಜೀನಾಮೆ

Bangladesh Unrest: ಬಾಂಗ್ಲಾದೇಶದಲ್ಲಿ ಅಶಾಂತಿ ಇನ್ನೂ ಮುಂದುವರಿದಿದ್ದು ಯೂನಸ್ ಅವರ ವಿಶೇಷ ಸಹಾಯಕ (ಗೃಹ ಸಚಿವಾಲಯ) ಖೋಡಾ ಬಕ್ಷ್ ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 10, 2024 ರಂದು ಯೂನಸ್ ಅವರ ವಿಶೇಷ ಸಹಾಯಕರಾಗಿ ನೇಮಕಗೊಂಡಿದ್ದ ಚೌಧರಿ ಅವರ ರಾಜೀನಾಮೆ ನೀಡಿದ್ದಾರೆ.

ಬಾಂಗ್ಲಾದೇಶ ಉದ್ವಿಗ್ನ

ಢಾಕಾ: ಬಾಂಗ್ಲಾದೇಶದಲ್ಲಿ ಅಶಾಂತಿ ಇನ್ನೂ ಮುಂದುವರಿದಿದ್ದು ಯೂನಸ್ ಅವರ ವಿಶೇಷ ಸಹಾಯಕ (ಗೃಹ ಸಚಿವಾಲಯ) ಖೋಡಾ ಬಕ್ಷ್ ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 10, 2024 ರಂದು ಯೂನಸ್ ಅವರ ವಿಶೇಷ ಸಹಾಯಕರಾಗಿ ನೇಮಕಗೊಂಡಿದ್ದ ಚೌಧರಿ ಅವರ ರಾಜೀನಾಮೆಯನ್ನು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಅಂಗೀಕರಿಸಿದ್ದಾರೆ. ಚೌಧರಿ ಅವರು ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಆಗಿದ್ದಾರೆ.

ಇಲ್ಲಿಯವರೆಗೆ, ಖೋಡಾ ಬಕ್ಷ್ ಚೌಧರಿ ಅವರ ಇತ್ತೀಚಿನ ರಾಜೀನಾಮೆಯನ್ನು ಹೊರತುಪಡಿಸಿ, ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದಿಂದ ಕನಿಷ್ಠ ಮೂವರು ಸಲಹೆಗಾರರು ರಾಜೀನಾಮೆ ನೀಡಿದ್ದಾರೆ. ಇವರಲ್ಲಿ 2025 ರ ಆರಂಭದಲ್ಲಿ ಸಲಹಾ ಮಂಡಳಿಯಿಂದ ಕೆಳಗಿಳಿದ ವಿದ್ಯಾರ್ಥಿ ನಾಯಕ ಸಲಹೆಗಾರ ನಹಿದ್ ಇಸ್ಲಾಂ ಸೇರಿದ್ದಾರೆ. ಡಿಸೆಂಬರ್ 10, 2025 ರಂದು, ಆಸಿಫ್ ಮಹ್ಮದ್ ಶೋಜಿಬ್ ಭುಯೈನ್ ಸ್ಥಳೀಯ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರಿ ಸಚಿವಾಲಯದ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದರು. ಅದೇ ದಿನ, ಮಹ್ಫುಜ್ ಆಲಂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮೊಗ್ಬಜಾರ್ ಪ್ರದೇಶದ ಫ್ಲೈಓವರ್‌ನಿಂದ ದಾಳಿಕೋರರು ಕಚ್ಚಾ ಸ್ಫೋಟಕವನ್ನು ಎಸೆದ ನಂತರ ಬುಧವಾರ ಸಂಜೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಘಬಜಾರ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ಮುಂಭಾಗದ ಫ್ಲೈಓವರ್ ಕೆಳಗೆ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ ಸಾಧನವನ್ನು ಫ್ಲೈಓವರ್ ಮೇಲಿನಿಂದ ಎಸೆಯಲಾಯಿತು. ನೆಲಕ್ಕೆ ಬಿದ್ದಂತೆ ಸ್ಫೋಟಕ ಬ್ಲಾಸ್ಟ್‌ ಆಗಿದೆ. ಸ್ಫೋಟದಲ್ಲಿ ಸಿಯಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಮೃತನ ಗುರುತು ಪತ್ತೆಹಚ್ಚಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕೊಲೆ ಪ್ರಕರಣ: ದೀಪು ಚಂದ್ರದಾಸ್‍ಗೆ ಬೆಂಕಿ ಹಚ್ಚಿದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸಿಯಾಮ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಸ್ಫೋಟದ ಸಮಯದಲ್ಲಿ ಆ ಪ್ರದೇಶದಲ್ಲಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆಯ ನಂತರ ಸ್ಥಳೀಯವಾಗಿ ಭೀತಿ ಹರಡುತ್ತಿದ್ದಂತೆ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದರು. ದಾಳಿಕೋರರು ಸಾಧನವನ್ನು ಎಸೆದ ತಕ್ಷಣ ಪರಾರಿಯಾಗಿದ್ದರು.