ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3ನೇ ತಲೆಮಾರಿನ ಹೊಂಡಾ ಅಮೇಝ್ ವಯಸ್ಕ ಪ್ರಯಾಣಿಕರ ರಕ್ಷಣೆಗೆ ಅಪಘಾತ ಪರೀಕ್ಷೆಯಲ್ಲಿ ಭಾರತ್ ಎನ್.ಸಿ.ಎ.ಪಿ.ಯಲ್ಲಿ 5-ಸ್ಟಾರ್ ರೇಟಿಂಗ್ ಸಾಧನೆ

ಹೊಸ 3ನೇ ತಲೆಮಾರಿನ ಹೊಂಡಾ ಅಮೇಝ್ ಭಾರತ್ ಎನ್.ಸಿ.ಎ.ಪಿ.ಯಿಂದ ವಯಸ್ಕ ಪ್ರಯಾ ಣಿಕರ ರಕ್ಷಣೆಗೆ 5-ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಗೆ 4-ಸ್ಟಾರ್ ರೇಟಿಂಗ್ ಪಡೆದಿರುವುದು ನಮಗೆ ಸಂತೋಷ ತಂದಿದೆ. ಇದು ಅಮೇಝ್ ಅನ್ನು ಸ್ಟೈಲಿಷ್ ಮತ್ತು ದಕ್ಷತೆಗೆ ಆದ್ಯತೆ ಅಲ್ಲದೆ ಭಾರ ತೀಯ ರಸ್ತೆಗಳಿಗೆ ಅತ್ಯಂತ ಸುರಕ್ಷಿತ ಸೆಡಾನ್ ಗಳಲ್ಲಿ ಒಂದನ್ನು ನಿರ್ಮಿಸುವಲ್ಲಿ ನಮ್ಮ ಎಣೆಯಿರದ ಬದ್ಧತೆಯನ್ನು ತೋರಿದೆ.

ನವದೆಹಲಿ: ಭಾರತದಲ್ಲಿ ಪ್ರೀಮಿಯಂ ಕಾರುಗಳ ಮುಂಚೂಣಿಯ ಉತ್ಪಾದಕ ಸಂಸ್ಥೆ ಹೊಂಡಾ ಕಾರ್ಸ್ ಇಂಡಿಯಾ ಲಿ.(ಎಚ್.ಸಿ.ಐ.ಎಲ್.) ಇಂದು ತನ್ನ ಹೊಚ್ಚಹೊಸ 3ನೇ ತಲೆಮಾರಿನ ಹೊಂಡಾ ಅಮೇಝ್ ಗೆ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (ಭಾರತ್ ಎನ್.ಸಿ.ಎ.ಪಿ.) ಯು ವಯಸ್ಕ ಪ್ರಯಾಣಿಕರ ರಕ್ಷಣೆಗೆ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಮತ್ತು 4- ಮಕ್ಕಳ ಪ್ರಯಾಣಿಕರ ರಕ್ಷಣೆಗೆ 4-ಸ್ಟಾರ್ ರೇಟಿಂಗ್ ಅನ್ನು ನೀಡಿರುವುದನ್ನು ಪ್ರಕಟಿಸಿದೆ.

ಈ ಗಮನಾರ್ಹ ಮೈಲಿಗಲ್ಲು ಸುರಕ್ಷತೆಗೆ ಕಂಪನಿಯ ಸರಿಸಾಟಿ ಇರದ ಬದ್ಧತೆಯನ್ನು ತೋರುತ್ತಿದ್ದು ತನ್ನ ವರ್ಗದಲ್ಲಿ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿ ಅದರ ಸ್ಥಾನವನ್ನು ಮರು ದೃಢೀ ಕರಿಸಿದೆ ಮತ್ತು ಸುರಕ್ಷತೆಯಲ್ಲಿ ಹೊಂಡಾದ ಸದೃಢ ಬ್ರಾಂಡ್ ಈಕ್ವಿಟಿಯನ್ನು ಗಟ್ಟಿಗೊಳಿಸಿದೆ.

ಈ ಸಾಧನೆ ಕುರಿತು ಹೊಂಡಾ ಕಾರ್ಸ್ ಇಂಡಿಯಾ ಲಿ.ಯ ಮಾರ್ಕೆಟಿಂಗ್ ಅಂಡ್ ಸೇಲ್ಸ್ ಉಪಾಧ್ಯಕ್ಷ ಶ್ರೀ ಕುನಾಲ್ ಬೆಹ್ಲ್, “ಹೊಂಡಾ ಕಾರ್ಸ್ ಇಂಡಿಯಾದಲ್ಲಿ ಸುರಕ್ಷತೆಯೇ ಎಲ್ಲ ಮಾಡೆಲ್ ಗಳಲ್ಲೂ ನಮ್ಮ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಗ್ರಾಹಕ-ಕೇಂದ್ರಿತ ಆವಿಷ್ಕಾರಕ್ಕೆ ಮಾರ್ಗದರ್ಶನ ನೀಡುವ ಪ್ರಮುಖ ತತ್ವವಾಗಿದೆ.

ಇದನ್ನೂ ಓದಿ: Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ಹೊಸ 3ನೇ ತಲೆಮಾರಿನ ಹೊಂಡಾ ಅಮೇಝ್ ಭಾರತ್ ಎನ್.ಸಿ.ಎ.ಪಿ.ಯಿಂದ ವಯಸ್ಕ ಪ್ರಯಾ ಣಿಕರ ರಕ್ಷಣೆಗೆ 5-ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಗೆ 4-ಸ್ಟಾರ್ ರೇಟಿಂಗ್ ಪಡೆದಿರುವುದು ನಮಗೆ ಸಂತೋಷ ತಂದಿದೆ. ಇದು ಅಮೇಝ್ ಅನ್ನು ಸ್ಟೈಲಿಷ್ ಮತ್ತು ದಕ್ಷತೆಗೆ ಆದ್ಯತೆ ಅಲ್ಲದೆ ಭಾರತೀಯ ರಸ್ತೆಗಳಿಗೆ ಅತ್ಯಂತ ಸುರಕ್ಷಿತ ಸೆಡಾನ್ ಗಳಲ್ಲಿ ಒಂದನ್ನು ನಿರ್ಮಿಸುವಲ್ಲಿ ನಮ್ಮ ಎಣೆಯಿರದ ಬದ್ಧತೆಯನ್ನು ತೋರಿದೆ.

ಹೊಂಡಾ ಅಮೇಝ್ ನಲ್ಲಿ ಹೊಂಡಾದ ಈ ವರ್ಗದ ಪ್ರಥಮ ಮತ್ತು ಅತ್ಯಂತ ಕೈಗೆಟುಕುವ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಅಪಘಾತ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷತೆಯನ್ನು ಹೆಚ್ಚಿಸುವ ಹೊಂಡಾದ ಜಾಗತಿಕ ಧ್ಯೇಯವನ್ನು ತಡೆರಹಿತವಾಗಿ ಹೊಂದಿದೆ” ಎಂದರು. ಹೊಂಡಾ ಅಮೇಝ್ ತನ್ನ ಸದೃಢ ಕಾರ್ಯಕ್ಷಮತೆ, ಇಂಧನ ಕ್ಷಮತೆ ಮತ್ತು ವಿಶ್ವಾಸಾರ್ಹ ಹೊಂಡಾ ಎಂಜಿನಿಯರಿಂಗ್ ಗೆ ಖ್ಯಾತಿ ಪಡೆದ ಆಧುನಿಕ ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

ಇದು “ಪ್ರೊಗ್ರೆಸಿವ್” ಮತ್ತು “ಕ್ಲಾಸಿ” ಪ್ರಮುಖ ಅಂಶಗಳನ್ನು ಹೊಂದಿದ್ದು ಅದು ತನ್ನ ಸ್ಪೋರ್ಟಿ ಹೊರಾಂಗಣ ವಿನ್ಯಾಸ, ಅತ್ಯಾಧುನಿಕ ಮತ್ತು ವಿಶಾಲ ಒಳಾಗಣದಲ್ಲಿ ಔಟ್ ಕ್ಲಾಸ್ ಪ್ರೀಮಿಯಂ ಅನುಭವ, ಸುಧಾರಿತ ಸುರಕ್ಷತೆಯ ತಂತ್ರಜ್ಞಾನ ಮತ್ತು ವಿಶೇಷತೆಗಳಿಂದ ಮನಃಶ್ಯಾಂತಿ ಮತ್ತು ಅನುಕೂಲಕರ ವಿಶ್ವಾಸಾರ್ಹ ರೈಡ್ ನೀಡುತ್ತದೆ. ತನ್ನ ಮೊದಲ ಸಲದ ಖರೀದಿದಾರರು, ಯುವ ಕುಟುಂಬಗಳು ಮತ್ತು ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಅಮೇಝ್ ಸುಧಾರಿತ ವಿಶೇಷತೆಗಳು ಮತ್ತು ವಿಶ್ವಾಸಾರ್ಹ ನಂಬಿಕೆಯಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ.

2050ರ ವೇಳೆಗೆ ಹೊಂಡಾ ವಾಹನಗಳಲ್ಲಿ ಟ್ರಾಫಿಕ್ ಅಪಘಾತದ ಮರಣಗಳನ್ನು ಶೂನ್ಯಕ್ಕೆ ತರುವ ತನ್ನ ಜಾಗತಿಕ ಧ್ಯೇಯಕ್ಕೆ ಪೂರಕವಾಗಿ ಹೊಚ್ಚಹೊಸ ಹೊಂಡಾ ಅಮೇಝ್ ಹೊಂಡಾದ ಜಾಗತಿಕ ಸುರಕ್ಷತೆಯ ಮಾನದಂಡಗಳನ್ನು ಒಳಗೊಂಡಿದೆ, 28+ ಸುಧಾರಿತ ಸಕ್ರಿಯ ಮತ್ತು ತಟಸ್ಥ ಸುರಕ್ಷತೆಯ ವಿಶೇಷತೆಗಳಾದ ಸೆಗ್ಮೆಂಟ್ ಫರ್ಸ್ಟ್ ಎಡಿಎಎಸ್ ತಂತ್ರಜ್ಞಾನವನ್ನು ಹೊಂಡಾ ಸೆನ್ಸಿಂಗ್, ಲೇನ್ ವಾಚ್ ಕ್ಯಾಮರಾ ಟಿ.ಎಂ. ನೀಡುತ್ತದೆ.

ಹೊಂಡಾ ಸೆನ್ಸಿಂಗ್- ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ಎಡಿಎಎಸ್)ನೊಂದಿಗೆ ಸನ್ನದ್ಧವಾದ ಹೊಂಡಾ ಅಮೇಝ್ ಭಾರತದ ಅತ್ಯಂತ ಕೈಗೆಟುಕುವ ಎಡಿಎಎಸ್ ಸನ್ನದ್ಧ ಕಾರು ಆಗಿದ್ದು ಅದು ಕೊಲಿಷನ್ ಮಿಟಿಗೇಷನ್ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಷನ್, ಲೀಡ್ ಕಾರ್ ಡಿಪಾರ್ಚರ್ ಅಲರ್ಟ್ ಮತ್ತು ಆಟೊ ಹೈ ಬೀಮ್ ಹೊಂದಿದೆ.

ಹೊಂಡಾ ಏಸ್ ನ ಬಾಡಿ ರಚನೆಯೊಂದಿಗೆ ನಿರ್ಮಿಸಲಾಗಿದ್ದು ಇದು 6 ಏರ್ ಬ್ಯಾಗ್ಸ್, ಐಸೊಫಿಕ್ಸ್, ಎಬಿಎಸ್ ವಿಥ್ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಹಲವು ಸಕ್ರಿಯ ಮತ್ತು ತಟಸ್ಥ ಸುರಕ್ಷತೆಯ ವಿಶೇಷತೆಗಳಿಂದ ಸದೃಢ ಸುರಕ್ಷತೆಯ ಮೈಲಿಗಲ್ಲು ರೂಪಿಸಿವೆ. ಹೊಂಡಾ ಅಮೇಝ್ ತನ್ನ ಹೊಂಡಾದ ವಿಶ್ವಾಸಾರ್ಹ 1.2 ಲೀ ಐ-ವಿಟೆಕ್ ಪೆಟ್ರೋಲ್ ಎಂಜಿನ್ ನಿಂದ ಸನ್ನದ್ಧವಾಗಿದ್ದು ಅದು ಸಿವಿಟಿ ಮತ್ತು 5-ಸ್ಪೀಡ್ ಮ್ಯಾನ್ಯುಯಲ್ ಆಯ್ಕೆಗಳಲ್ಲಿ ಲಭ್ಯ.