ಅಡ್ವೆಂಚರ್ ರೈಡಿಂಗ್ ನ ಹೊಸ ಯುಗ ಆರಂಭ: ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿ ತನ್ನ ಹೊಸ ಸೂಪರ್ ಪ್ರೀಮಿಯಂ ಉತ್ಪನ್ನವಾದ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ ಮಾಡುವ ಮೂಲಕ ಅಡ್ವೆಂಚರ್ ರ‍್ಯಾಲಿ ಟೂರರ್ ವಿಭಾಗಕ್ಕೆ ಕಾಲಿಡುತ್ತಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ಹುಡುಕಾಟ, ಆಫ್- ರೋಡಿಂಗ್ ಮತ್ತು ಸ್ವ ಅನ್ವೇಷಣೆಯ ಅನಂತ ಸಾಧ್ಯತೆಗಳನ್ನು ಕಂಡುಕೊಳ್ಳಲು ರಚಿಸಲಾಗಿದೆ.
-
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಉತ್ಪನ್ನವು ಹೊಚ್ಚ ಹೊಸ ನೆಕ್ಸ್ಟ್- ಜೆನ್ ಟಿವಿಎಸ್ ಆರ್‌ಟಿ-ಎಕ್ಸ್‌ಡಿ4 ಇಂಜಿನ್ ಪ್ಲಾಟ್ ಫಾರ್ಮ್ ಮೇಲೆ ನಿರ್ಮಿಸಲ್ಪಟ್ಟ ಮೊದಲ ಉತ್ಪನ್ನ ವಾಗಿದ್ದು, ಇದನ್ನು ಟಿವಿಎಸ್ ನಲ್ಲಿಯೇ ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ ಮತ್ತು ಎಂಜಿನಿಯರಿಂಗ್ ಮಾಡಲಾಗಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ರೂ. 1,99,000ರ ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ದ್ವಿಚಕ್ರ ಮತ್ತು ಮೂರು ಚಕ್ರದ ವಾಹನ ತಯಾರಿಕೆಯಲ್ಲಿ ಜಾಗತಿಕ ನಾಯಕನಾಗಿರುವ ಟಿವಿಎಸ್ ಮೋಟಾರ್ ಕಂಪನಿ ಇದೀಗ ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ ಮಾಡುವ ಮೂಲಕ ಟಿವಿಎಸ್ ಕಂಪನಿಯು ಅಡ್ವೆಂಚರ್ ಮೋಟಾರ್ ಸೈಕ್ಲಿಂಗ್ ನ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ರೂಪುಗೊಂಡಿದೆ. ಈ ಬೈಕ್ ವೇಗದ ರೋಮಾಂಚನದ ಜೊತೆ ಹುಡುಕಾಟದ ಆನಂದವನ್ನು ಒದಗಿಸಲೆಂದೇ ವಿನ್ಯಾಸಗೊಂಡಿದೆ.
ದಶಕಗಳ ಅವಧಿಯ ರೇಸಿಂಗ್ ಶ್ರೇಷ್ಠತೆ ಮತ್ತು ವಿಶ್ವಾದ್ಯಂತ 60 ಲಕ್ಷಕ್ಕೂ ಹೆಚ್ಚು ರೈಡರ್ ಗಳಿಂದ ವಿಶ್ವಾಸಾರ್ಹತೆ ಗಳಿಸಿರುವ ಟಿವಿಎಸ್ ಅಪಾಚೆ ಬ್ರಾಂಡ್ ನ ಪರಂಪರೆಯನ್ನು ಆಧರಿಸಿ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ರಚಿಸಲಾಗಿದ್ದು, ಇದು ಟಿವಿಎಸ್ ಬ್ರಾಂಡ್ ನ ಕಾರ್ಯಕ್ಷಮತೆ, ನಿಖರತೆ ಮತ್ತು ರೇಸಿಂಗ್ ಡಿಎನ್ಎಯ ಪರಂಪರೆಯ ಮುಂದುವರಿಕೆಯಾಗಿದೆ.
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ಹೊಚ್ಚ ಹೊಸ ನೆಕ್ಸ್ಟ್- ಜೆನ್ ಟಿವಿಎಸ್ ಆರ್‌ಟಿ-ಎಕ್ಸ್‌ಡಿ4 ಇಂಜಿನ್ ಪ್ಲಾಟ್ ಫಾರ್ಮ್ ನ ಮೇಲೆ ನಿರ್ಮಿಸಲಾಗಿದ್ದು, ದಶಕಗಳ ರೇಸಿಂಗ್ ಮತ್ತು ರ‍್ಯಾಲಿ ಅನುಭವದೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಉತ್ಪನ್ನವು ಟಿವಿಎಸ್ ಬ್ರಾಂಡ್ ನ ರೇಸಿಂಗ್ ಪರಂಪರೆಯನ್ನು ಅಡ್ವೆಂಚರ್ ರ‍್ಯಾಲಿ ಟೂರಿಂಗ್ ನ ಜಗತ್ತಿಗೆ ಪರಿಚಯಿಸಲಿದೆ. ಈ ಉತ್ಪನ್ನದಲ್ಲಿ ರೇಸ್- ಹೋನ್ಡ್ ಕಾರ್ಯಕ್ಷಮತೆಯನ್ನು ಸುದೀರ್ಘ ಟೂರಿಂಗ್ ನ ಆರಾಮದಾಯಕತೆ ಜೊತೆ ಸಂಯೋಜಿಸಲಾಗಿದ್ದು, ಆಧುನಿಕ ಅಡ್ವೆಂಚರ್ ಮೋಟಾರ್ ಸೈಕ್ಲಿಂಗ್ ಗೆ ಹೊಸ ವ್ಯಾಖ್ಯಾನ ನೀಡುತ್ತದೆ.
ಇದನ್ನೂ ಓದಿ: Tata Motors: ಕೋಲ್ಕತ್ತಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಅನ್ನು ಅಡ್ವೆಂಚರ್ ಆಸಕ್ತರಿಗಾಗಿ ಮತ್ತು ರ‍್ಯಾಲಿ ಟೂರಿಂಗ್ ಉತ್ಸಾಹಿಗಳಿಗಾಗಿ ರೂಪಿಸಲಾಗಿದ್ದು, ಇದು ಅತ್ಯುತ್ತಮ ಕಾರ್ಯಕ್ಷಮತೆ, ಅದ್ಭುತ ಕಾರ್ಯ ನಿರ್ವಹಣೆ ಮತ್ತು ನಿಖರ ಎಂಜಿನಿಯರಿಂಗ್ ನ ಪರಿಪೂರ್ಣ ಸಂಯೋಜನೆಯಾಗಿದೆ. ಟ್ರ್ಯಾಕ್ ಕಾರ್ಯಕ್ಷಮತೆಯ ಡಿಎನ್ಎ ಮತ್ತು ಅನ್ವೇಷಣೆ- ಕೇಂದ್ರಿತ ಎಂಜಿನಿಯರಿಂಗ್ ನ ಸಂಯೋಜನೆಯುಳ್ಳ ಈ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಉತ್ಪನ್ನವು ಅಡ್ವೆಂಚರ್ ಟೂರರ್ ಗಳಿಗೆ ಹೊಸ ಮಾನದಂಡವನ್ನು ಹಾಕಿಕೊಡಲಿದ್ದು, ರೇಸಿಂಗ್ ನ ನಿಖರತೆ ಮತ್ತು ದೈನಂದಿನ ಆರಾಮದಾಯಕತೆಯನ್ನು ಒಂದೇ ಕಡೆ ಒದಗಿಸುತ್ತದೆ.
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 299.1 ಸಿಸಿ ಸಿಂಗಲ್ -ಸಿಲಿಂಡರ್, ಲಿಕ್ವಿಡ್- ಕೂಲ್ಡ್, 4- ಸ್ಟ್ರೋಕ್ ಡಿ ಓ ಎಚ್ ಸಿ ಇಂಜಿನ್‌ನಿಂದ ಚಾಲಿತವಾಗಿದ್ದು, 9,000 ಆರ್ ಪಿಎಂನಲ್ಲಿ 36 ಪಿಎಸ್ ಪವರ್ ಅನ್ನು ಮತ್ತು 7,000 ಆರ್ ಪಿ ಎಂನಲ್ಲಿ 28.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 6- ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್, ಫ್ಯೂಯಲ್ ಇಂಜೆಕ್ಷನ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ನೊಂದಿಗೆ ಸ್ಟೀಲ್ ಟ್ರೆಲಿಸ್ ಫ್ರೇಮ್ ಮತ್ತು ಶುದ್ಧ ಆಧುನಿಕ ಆಕರ್ಷಕ ಮೋನೊ- ವಾಲ್ಯೂಮ್ ಬಾಡಿ ಡಿಸೈನ್ ಹೊಂದಿದೆ.
ಇಂಜಿನ್, ರೈಡ್ ಮೋಡ್ ಗಳು, ಎಲೆಕ್ಟ್ರಾನಿಕ್ಸ್, ಫ್ರೇಮ್ ಮತ್ತು ಸಸ್ಪೆನ್ಷನ್, ಆಕ್ಸೆಸರೀಸ್ ಸೇರಿದಂತೆ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ನ ಪ್ರತಿಯೊಂದು ಅಂಶವನ್ನೂ ರೈಡರ್ ಗಳಿಗೆ ನೇರ ಮತ್ತು ಉತ್ತಮ ಪ್ರಯೋಜನಗಳನ್ನು ಒದಗಿಸಲು ರಚಿಸಲಾಗಿದೆ. ಹೆಚ್ಚಿನ ಸುರಕ್ಷತೆ, ಉತ್ತಮ ಕಾರ್ಯಕ್ಷಮತೆ, ಹೆಚ್ಚಿನ ಆರಾಮದಾಯಕತೆ ಒದಗಿಸುತ್ತದೆ ಮತ್ತು ರಸ್ತೆಯ ಮೇಲೆ ಮತ್ತು ಆಫ್- ರೋಡ್ ನಲ್ಲಿ ಅತ್ಯುತ್ಕೃಷ್ಟ ಅನುಭವ ಒದಗಿಸುವ ಸ್ಮಾರ್ಟ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. ಇದು ಉದ್ದೋ ಉದ್ದದ ಹೆದ್ದಾರಿಗಳಿಂದ ಹಿಡಿದು ಆಕರ್ಷಕ ತಿರುವು ಮುರುವು ಬೆಟ್ಟ ಪರ್ವತ ದಾರಿಗಳವರೆಗೆ ಎಲ್ಲಾ ರೀತಿಯ ರಸ್ತೆಗಳಲ್ಲೂ ಆನಂದಕರ ರೈಡ್ ಮಾಡಲು ಅನುವು ಮಾಡಿ ಕೊಡುತ್ತದೆ. ರೂ.1,99,000ರ ಪರಿಚಯಾತ್ಮಕ ಬೆಲೆಯಲ್ಲಿ ಈ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಲಭ್ಯವಿದ್ದು, ಅಡ್ವೆಂಚರ್ ರ‍್ಯಾಲಿ ಟೂರಿಂಗ್ ನಲ್ಲಿ ಅತ್ಯುತ್ತಮ ಶಕ್ತಿ, ಅದ್ಭುತ ನಿಯಂತ್ರಣ ಮತ್ತು ಉದ್ದೇಶದೊಂದಿಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ.
ಈ ಕುರಿತು ಮಾತನಾಡಿರುವ 2ವೀಲರ್ ಇಂಡಿಯಾ ಬಿಜಿನೆಸ್ ನ ಅಧ್ಯಕ್ಷರಾದ ಗೌರವ್ ಗುಪ್ತಾ ಅವರು, “ಟಿವಿಎಸ್ ಮೋಟಾರ್ ಕಂಪನಿಯಲ್ಲಿ ನಾವು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ನಿರಂತರವಾಗಿ ಅರ್ಥಮಾಡಿ ಕೊಳ್ಳುತ್ತೇವೆ. ಆ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲ ಆ ವಿಭಾಗದಲ್ಲಿ ಹೊಸ ಮಾನದಂಡ ಹಾಕಲು ಪ್ರಯತ್ನಿಸುತ್ತೇವೆ. ನಾವು ಅನೇಕ ಉದ್ಯಮ ಮೊದಲ ಆವಿಷ್ಕಾರಗಳನ್ನು ರೂಪಿಸಿದ್ದು, ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದೇವೆ. ಹೊಸ ರೈಡರ್ ಗಳಿಗೆ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಬಲ ತುಂಬುವುದು ಮತ್ತು ಅವರಿಗೆ ಪ್ರೇರಣೆ ನೀಡುವುದು ನಮ್ಮ ಉದ್ದೇಶವಾಗಿದೆ. ಟಿವಿಎಸ್ ಅಪಾಚೆ ಕಳೆದ ಎರಡು ದಶಕಗಳಿಂದ ಮೋಟಾರ್ ಸೈಕ್ಲಿಂಗ್ ಕಾರ್ಯಕ್ಷಮತೆಯನ್ನು ಮರುವ್ಯಾಖ್ಯಾನಿಸುವ ಮೂಲಕ ದಾಖಲೆ ಮಾಡಿದೆ. ವಿಶ್ವಾದ್ಯಂತ ಈಗ 60 ಲಕ್ಷಕ್ಕೂ ಹೆಚ್ಚು ಅಪಾಚೆ ರೈಡರ್ ಗಳ ಸಮೂಹವಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಈ ಗೆಲುವಿನ ಸರಣಿಯನ್ನು ಮುಂದುವರೆಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಮತ್ತು ಈ ಬೈಕ್ ಅಡ್ವೆಂಚರ್ ರ‍್ಯಾಲಿ ಟೂರರ್ ವಿಭಾಗಕ್ಕೆ ಹೊಸ ಹುಮ್ಮಸ್ಸು ಮತ್ತು ಹೊಸ ಶಕ್ತಿಯನ್ನು ಒದಗಿಸಲಿದೆ” ಎಂದು ಹೇಳಿದರು.
ಟಿವಿಎಸ್ ಮೋಟಾರ್ ನಿಂದ ಹೊಸ ವಿಭಾಗವನ್ನು ಪರಿಚಯಿಸುತ್ತಾ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಹೆಡ್ ಬಿಜಿನೆಸ್ - ಪ್ರೀಮಿಯಂ ವಿಮಲ್ ಸುಂಬ್ಲಿ ಅವರು, “ಟಿವಿಎಸ್ ಅಪಾಚೆ ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯಲ್ಲಿ ನಿರಂತರವಾಗಿ ತನ್ನ ಗಡಿಗಳನ್ನು ಮೀರುತ್ತಾ ಬಂದಿದೆ. ಕಳೆದ ಎರಡು ದಶಕಗಳಿಂದ ವಿಶ್ವಾದ್ಯಂತ 60 ಲಕ್ಷಕ್ಕೂ ಹೆಚ್ಚು ರೈಡರ್ ಗಳ ವಿಶ್ವಾಸವನ್ನು ಗಳಿಸಿ ಮುನ್ನುಗ್ಗುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಈ ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಮೂಲಕ ಈ ಪರಂಪರೆಯನ್ನು ಅಡ್ವೆಂಚರ್ ಟೂರಿಂಗ್ ಜಗತ್ತಿಗೆ ಪರಿಚಯಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ನಮ್ಮ ಸಿಗ್ನೇಚರ್ ರೇಸಿಂಗ್ ಡಿಎನ್ಎ ಜೊತೆಗೆ ರಚಿಸಲಾಗಿರುವ ಮತ್ತು ಹುಡುಕಾಟಕ್ಕಾಗಿಯೇ ಎಂಜಿನಿಯರಿಂಗ್ ಮಾಡಲಾದ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್, ಅಪಾಚೆ ಬ್ರಾಂಡ್ ನ ಆಕರ್ಷಣೆಯನ್ನು ಹೊಸ ವಿಭಾಗಕ್ಕೆ ದಾಟಿಸುತ್ತದೆ. ಈ ಉತ್ಪನ್ನವು ಕೇವಲ ಪರಂಪರೆಯನ್ನು ಮುಂದುವರೆಸುತ್ತಿರುವುದಷ್ಟೇ ಅಲ್ಲ, ವೇಗದ, ರೋಮಾಂಚಕ ಅಡ್ವೆಂಚರ್ ಮೋಟಾರ್ ಸೈಕ್ಲಿಂಗ್ ನ ಹೊಸ ವಿಭಾಗದಲ್ಲಿ ಆಧಿಪತ್ಯ ಸಾಧಿಸಲಿದೆ ಎಂದು ನಾವು ನಂಬಿದ್ದೇವೆ. ಈ ಕ್ಷಣವು ನಮ್ಮ ಜಾಗತಿಕ ಅಪಾಚೆ ಸಮೂಹದ ಸಂಭ್ರಮದ ಕ್ಷಣವಾಗಿದೆ ಮತ್ತು ಅವರ ನಿರಂತರವಾದ ಹುಮ್ಮಸ್ಸು ನಮಗೆ ಬಹುದೊಡ್ಡ ಪ್ರೇರಣೆಯಾಗಿದೆ” ಎಂದು ಹೇಳಿದರು.
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ನ ಪ್ರಮುಖ ಫೀಚರ್ ಗಳು
4 ರೈಡ್ ಮೋಡ್ ಗಳು (ಅರ್ಬನ್, ರೇನ್, ಟೂರ್ ಮತ್ತು ರ‍್ಯಾಲಿ)
• ಬೈ ಡೈರೆಕ್ಷನಲ್ ಕ್ವಿಕ್ ಶಿಫ್ಟರ್
- ಬ್ಲೂಟೂತ್ ಸಂಪರ್ಕ ಹೊಂದಿರುವ 5 ಇಂಚಿನ ಟಿ ಎಫ್ ಟಿ ಕ್ಲಸ್ಟರ್
- ಡಿ ಆರ್ ಎಲ್ ಗಳೊಂದಿಗೆ ಕ್ಲಾಸ್- ಡಿ ಹೆಡ್ ಲ್ಯಾಂಪ್
- ಕ್ರೂಸ್ ಕಂಟ್ರೋಲ್
- ಲೀನಿಯರ್ ಟ್ರಾಕ್ಷನ್ ಕಂಟ್ರೋಲ್
- ಸರಿಹೊಂದಿಸಬಹುದಾದ ಲಿವರ್ ಗಳು • ಸುಲಭವಾದ ಪ್ಯಾನಿಯರ್ ಮತ್ತು ಟಾಪ್- ಕೇಸ್ ಮೌಂಟ್ ಗಳು
- 5- ವೇ ಬ್ಲೂಟೂತ್ ನೊಂದಿಗೆ ಮ್ಯಾಪ್ ಮಿರರಿಂಗ್
- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಬಿಟಿಓ)
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ - ವಿವರಗಳು:
ಚಾಸಿಸ್ ಮತ್ತು ಸಸ್ಪೆನ್ಷನ್: ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸಾಗಲು ಎಂಜಿನಿಯರಿಂಗ್ ಮಾಡಲಾಗಿದೆ
- ವಿಶೇಷವಾಗಿ ನಿರ್ಮಿಸಲಾದ ಸ್ಟೀಲ್ ಟ್ರೆಲಿಸ್ ಫ್ರೇಮ್
- ಉತ್ತಮ ರಚನಾತ್ಮಕ ದಕ್ಷತೆಯೊಂದಿಗೆ ಅತ್ಯುತ್ತಮ ಡೈನಾಮಿಕ್ ಪ್ರತಿಕ್ರಿಯೆ
- ಅತ್ಯುತ್ತಮ ನಿಯಂತ್ರಣ ಒದಗಿಸಲು ನೆರವಾಗುವ ಕಡಿಮೆ ಸೀಟ್ ಎತ್ತರ
- ಬಲವಾದ, ಆದರೆ ತೂಕದಲ್ಲಿ ಕಡಿಮೆಯಾಗಿದೆ, ಪವರ್ ಟು ವೇಯ್ಟ್ ರೇಶಿಯೋ ಸುಧಾರಿಸಿದೆ
- ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸಬಹುದು
- ಡಬ್ಲ್ಯೂಪಿಯಿಂದ ಲಾಂಗ್- ಟ್ರಾವೆಲ್ ಸಸ್ಪೆನ್ಷನ್ (ಮುಂಭಾಗದಲ್ಲಿ: ಇನ್ವರ್ಟೆಡ್ ಕಾರ್ಟ್ರಿಡ್ಜ್ ಫೋರ್ಕ್)
- ನಿಖರವಾದ ಫೋರ್ಕ್ ಅಲೈನ್ ಮೆಂಟ್ ನೊಂದಿಗೆ ಉನ್ನತ ಮಟ್ಟದ ಗಟ್ಟಿತನ
- ಉತ್ತಮ ಎನರ್ಜಿ ಬಳಸಿಕೊಳ್ಳಲು ಲಾರ್ಜ್ ಸ್ಟ್ರೋಕ್
- ಆರಾಮದಾಯಕತೆ ಮತ್ತು ಅತ್ಯುತ್ತಮ ನಿಯಂತ್ರಣಕ್ಕಾಗಿ ಆಪ್ಟಿಮಲ್, ತ್ವರಿತ ಪ್ರತಿಕ್ರಿಯೆ
- ಅಸಮರ್ಪಕ ರಸ್ತೆಗಳಲ್ಲಿಯೂ ವೇಗವಾಗಿ, ಸುರಕ್ಷಿತವಾಗಿ ರೈಡ್ ಮಾಡುವಂತೆ ನೋಡಿಕೊಳ್ಳುತ್ತದೆ
- ಲಾಂಗ್- ಟ್ರಾವೆಲ್ ಸಸ್ಪೆನ್ಷನ್ (ಹಿಂಭಾಗದಲ್ಲಿ: ಫ್ಲೋಟಿಂಗ್ ಪಿಸ್ಟನ್ ನೊಂದಿಗೆ ಮೋನೊ- ಟ್ಯೂಬ್ -ಎಂ ಎಫ್ ಪಿ)
- ದೊಡ್ಡ ಪಿಸ್ಟನ್ ನೊಂದಿಗೆ ಅತ್ಯಾಕರ್ಷಕ ವಿನ್ಯಾಸ
- ಉತ್ತಮ ಸ್ಥಿರತೆ, ಕಡಿಮೆ ಕಾರ್ಯಾಚರಣಾ ತಾಪಮಾನ ಮತ್ತು ದೀರ್ಘ ಬಾಳಿಕೆ
- ಕ್ಯಾವಿಟೇಶನ್ ಇಲ್ಲ ಹಾಗೂ ಸ್ಥಿರ, ಉತ್ತಮ ಡ್ಯಾಂಪಿಂಗ್ ಒದಗಿಸುತ್ತದೆ
- ಉನ್ನತ ಆರಾಮದಾಯಕತೆ ಜೊತೆಗೆ ನಿಖರವಾದ ಹೈ- ಸ್ಪೀಡ್ ಕಂಟ್ರೋಲ್
- ರ‍್ಯಾಲಿ- ಪ್ರೇರಿತ ಎರ್ಗಾನಾಮಿಕ್ಸ್
- ಟಾರ್ಮಾಕ್ ಮತ್ತು ಟ್ರೇಲ್ ಗಾಗಿ ಸಮತೋಲಿತ ಎರ್ಗೋ- ಟ್ರಯಾಂಗಲ್
- ಸೊಗಸಾದ ರೈಡ್ ಗಳಿಗೆ ಅನುಕೂಲಕರವಾಗುವ ಹಾಗೆ ಗರಿಷ್ಠ ಆರಾಮದಾಯಕತೆ
- ಪಿಲಿಯನ್ ಮತ್ತು ಲಗೇಜ್ ನಲ್ಲಿ ಉತ್ತಮ ತೂಕ ವಿತರಣೆ
- ಆಫ್- ರೋಡ್ ನಲ್ಲಿ ಕುಳಿತುಕೊಳ್ಳುವಿಕೆ ಮತ್ತು ನಿಲ್ಲುವಿಕೆ ಇತ್ಯಾದಿಯನ್ನು ಸುಲಭವಾಗಿ ಮಾಡಬಹುದು
- ಸುಲಭ ಗ್ರೌಂಡ್ ರೀಚ್ ಸೌಲಭ್ಯ ಮತ್ತು ಅತ್ಯುತ್ತಮ ಸ್ಟೀರಿಂಗ್ ಸ್ಥಿರತೆ
ಸೊಗಸಾದ ಕಂಟ್ರೋಲ್ ಹೊಂದಲು ವಿನ್ಯಾಸಗೊಳಿಸಲಾಗಿದೆ, ಅಡ್ವೆಂಚರ್ ಗಾಗಿ ರೂಪಿಸಲಾಗಿದೆ:
- ಆಧುನಿಕ ವಿನ್ಯಾಸ ದೃಷ್ಟಿಕೋನ:
ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ತನ್ನ ಆಕರ್ಷಕ ನಿಲುವು, ಅನುಪಾತಗಳು ಮತ್ತು ವಾಲ್ಯೂಮ್ ನೊಂದಿಗೆ ತನ್ನ ವಿನ್ಯಾಸ ತತ್ವವಾದ ಗಟ್ಟಿತನ, ಉದ್ದೇಶ ಮತ್ತು ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತದೆ.
ಈ ಅಡ್ವೆಂಚರ್ ಬೈಕ್ ಮುಂದಕ್ಕೆ ಬಾಗುವಂತಹ, ಮೋನೊ- ವಾಲ್ಯೂಮ್ ಸಿಲೂಯೆಟ್ ಅನ್ನು ಹೊಂದಿದ್ದು, ಇದರಲ್ಲಿ ಟ್ಯಾಂಕ್ ಮತ್ತು ಹೆಡ್‌ಲ್ಯಾಂಪ್ ಒಂದೇ ರೂಪದಲ್ಲಿ ಮೂಡಿಬಂದಿದೆ. ಈ ವಿನ್ಯಾಸವನ್ನು ಕುಳಿತಾಗ, ಇಳಿಯುವಾಗ ಅಥವಾ ಚಲನೆಯಲ್ಲಿರುವಾಗ ಆಕರ್ಷಕ ಸಂಯಮ ಮತ್ತು ನಿಯಂತ್ರಣ ಹೊಂದಲು ರೂಪಿಸಲಾಗಿದೆ. ದೃಢವಾದ, ರ‍್ಯಾಲಿ- ಪ್ರೇರಿತ ರೇಖೆಗಳು ಮತ್ತು ಮೇಲ್ಮೈಗಳು ಏರೋಡೈನಾಮಿಕ್ ದಕ್ಷತೆ ಮತ್ತು ದೃಶ್ಯ ಸಾಮರಸ್ಯಕ್ಕಾಗಿ ರಚಿಸಲ್ಪಟ್ಟಿವೆ. ಅತ್ಯುತ್ತಮ ಉದ್ದೇಶ ಸಾಧನೆ ಮತ್ತು ಕಾರ್ಯಕ್ಷಮತೆಯನ್ನು ಒಗ್ಗೂಡಿಸುತ್ತವೆ.
- ಸಿಗ್ನೇಚರ್ ಲೈಟಿಂಗ್:
ಇದರಲ್ಲಿನ ಡಿ ಆರ್ ಎಲ್ ಬ್ಲೇಡ್ ಗಳು, ಲೆವಿಟೇಟಿಂಗ್ ಮೇನ್ ಬೀಮ್ ರಿಫ್ಲೆಕ್ಟರ್ ಗಳು ಮತ್ತು ಟೇಲ್ ಲ್ಯಾಂಪ್ ಬ್ಲೇಡ್ ಗಳು ದೃಢವಾದ, ಕ್ರಿಸ್ಟಲೀನ್ ಮತ್ತು ವಿಶಿಷ್ಟ ಬೆಳಕಿನ ಗುರುತನ್ನು ಸೃಷ್ಟಿಸುತ್ತವೆ. ಇದರ ಚೂಪಾದ ಟ್ವಿನ್- ಚೇಂಬರ್ ಗೇಜ್ ಕೇವಲ ಬೆಳಕಿನ ಮೂಲ ಮಾತ್ರವೇ ಆಗಿಲ್ಲ, ಬದಲಿಗೆ ಇದು ಸ್ಟೈಲ್ ಆಗಿ ಮೂಡಿ ಬಂದಿದೆ. ಹೆಡ್ ಲ್ಯಾಂಪ್, ವೆಲ್ ಕಮ್ ಆನಿಮೇಶನ್ ಮತ್ತು ವಾಹನದ ವೇಗಕ್ಕೆ ಸರಿಹೊಂದಿಕೊಳ್ಳುವ ತೀವ್ರತೆ ನಿಯಂತ್ರಣವನ್ನು ಹೊಂದಿದೆ.
- ಬಣ್ಣಗಳು, ವಸ್ತುಗಳು ಮತ್ತು ಇಂಟ್ಯೂಟಿವ್ ರೈಡರ್ ಇಂಟರ್ ಫೇಸ್:
ವೈಪರ್ ಗ್ರೀನ್, ಮೆಟಾಲಿಕ್ ಬ್ಲೂ, ಪರ್ಲ್ ವೈಟ್, ಲೈಟ್ ನಿಂಗ್ ಬ್ಲಾಕ್, ಟಾರ್ನ್ ಬ್ರಾಂಜ್ ನಂತಹ ಪ್ರಕೃತಿ-ಪ್ರೇರಿತ ಕಲರ್ ಟೋನ್ ನ ಬಣ್ಣಗಳುಳ್ಳ ಬೈಕ್ ಗಳು ಲಭ್ಯವಿದೆ. ಇದರ ಜೊತೆಗೆ ಸಿಗ್ನೇಚರ್ ಅಪಾಚೆ ರೆಡ್ ಬಣ್ಣವೂ ದೊರೆಯುತ್ತದೆ. ಅದಕ್ಕೆ ಪೂರಕವಾಗಿರುವ ಮ್ಯಾಟ್ ಟೆಕ್ಸ್ಚರ್ ಗಳು, ಗ್ಲಾಸ್ ಕಾಂಟ್ರಾಸ್ಟ್ ಗಳು ಮತ್ತು ನಿಖರ ವಿವರಗಳನ್ನು ಹೊಂದಿವೆ.
ಹೈ- ಕಾಂಟ್ರಾಸ್ಟ್ ಟಿ ಎಫ್ ಟಿ ಡಿಸ್ಪ್ಲೇ ನ್ಯಾವಿಗೇಶನ್, ರೈಡ್ ಮೋಡ್ ಗಳು ಮತ್ತು ಕನೆಕ್ಟಿವಿಟಿ ಸೌಲಭ್ಯವನ್ನು ನೀಡುತ್ತದೆ. ಇವೆಲ್ಲವೂ ಪ್ರತಿ ರೈಡ್ ಗೂ ಸ್ಪಷ್ಟತೆ, ನಿಯಂತ್ರಣ ಮತ್ತು ಫೋಕಸ್ ಅನ್ನು ಒದಗಿಸುತ್ತದೆ.
- ವಿಶೇಷ ಆಕ್ಸೆಸರೀಸ್:
ಅನ್ವೇಷಣೆಗಾಗಿ ಎಂಜಿನಿಯರಿಂಗ್ ಮಾಡಲಾದ ಅಪಾಚೆ ಆರ್ ಟಿ ಎಕ್ಸ್ ಉತ್ಪನ್ನವು ಗಾರ್ಡ್ ಗಳು, ಲಗೇಜ್ ಮತ್ತು ಇಂಪ್ಯಾಕ್ಟ್ ಪ್ರೊಟೆಕ್ಷನ್ ಗಾಗಿ ಮಾಡ್ಯುಲರ್ ಮೌಂಟ್ ಗಳ ಮೂಲಕ ಕಸ್ಟಮೈಸೇಷನ್ ಅನ್ನೂ ಒಳಗೊಂಡಿದ್ದು, ಎಲ್ಲಾ ರೀತಿಯ ಅಡ್ವೆಂಚರ್ ಗಾಗಿ ಸಿದ್ಧವಾಗಿದೆ.
ತಂತ್ರಜ್ಞಾನ: ಬುದ್ಧಿವಂತ ನಿಯಂತ್ರಣದ ಜೊತೆ ಕನೆಕ್ಟೆಡ್ ರೈಡಿಂಗ್ ಸೌಕರ್ಯ
- ಮಲ್ಟಿಪಲ್ ರೈಡ್ ಮೋಡ್‌ಗಳು (ಅರ್ಬನ್, ರೇನ್, ಟೂರ್, ರ‍್ಯಾಲಿ): ಪ್ರತೀ ಮೋಡ್ ಇಂಜಿನ್ ರೆಸ್ಪಾನ್ಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಅನ್ನು ಆಯಾ ಭೂಪ್ರದೇಶಕ್ಕೆ ತಕ್ಕಂತೆ ಸರಿಹೊಂದಿಸುತ್ತದೆ. ನಗರ ರಸ್ತೆಗಳು, ಹೆದ್ದಾರಿಗಳು ಮತ್ತು ಆಫ್- ರೋಡ್ ರಸ್ತೆಗಳಲ್ಲಿ ಹೆಚ್ಚಿನ ಸ್ಥಿರತೆ, ಸುಗಮ ವೇಗವರ್ಧನೆ ಮತ್ತು ಸುಲಭತೆಯನ್ನು ಒದಗಿಸುತ್ತದೆ.
- ಮ್ಯಾಪ್ ಮಿರರಿಂಗ್‌ನೊಂದಿಗೆ 5 ಇಂಚಿನ TFT ಡಿಸ್ಪ್ಲೇ: ಹೈ ಡೇಲೈಟ್-ಬ್ರೈಟ್ ನೆಸ್, ನ್ಯಾವಿಗೇಶನ್ ರೆಡಿ ಡಿಸ್ಪ್ಲೇ, ಟರ್ನ್-ಬೈ-ಟರ್ನ್ ಮಾಹಿತಿ ಮತ್ತು ಅಗತ್ಯ ಮಾಹಿತಿಯನ್ನು ಈ ಡಿಸ್ ಪ್ಲೇ ಸ್ಪಷ್ಟವಾಗಿ ತೋರಿಸುತ್ತದೆ, ರೈಡರ್‌ಗಳನ್ನು ಸದಾ ಕನೆಕ್ಟೆಡ್ ಆಗಿರುವಂತೆ ಮಾಡುತ್ತದೆ.
- ಕ್ರೂಸ್ ಕಂಟ್ರೋಲ್: ಥ್ರಾಟಲ್ ಅನ್ನು ಎಲೆಕ್ಟ್ರಾನಿಕ್ ಆಗಿ ಹಿಡಿದಿಟ್ಟುಕೊಂಡು, ಸ್ಥಿರವಾದ ವಾಹನ ವೇಗವನ್ನು ಕಾಪಾಡಿಕೊಳ್ಳುವ ಸೌಲಭ್ಯ ಇದರಲ್ಲಿ ಲಭ್ಯವಿದ್ದು, ಸುದೀರ್ಘ ರೈಡ್ ಗಳಲ್ಲಿ ರೈಡರ್ ಆಯಾಸವನ್ನು ಕಡಿಮೆ ಮಾಡುತ್ತದೆ.
- ಕ್ವಿಕ್ ಶಿಫ್ಟರ್: ಕ್ಲಚ್ ಬಳಸದೆ ಸುಗಮವಾಗಿ ಅಪ್ ಶಿಫ್ಟ್ ಮತ್ತು ಡೌನ್ ಶಿಫ್ಟ್ ಗಳನ್ನು ಸಾಧ್ಯಗೊಳಿಸುತ್ತದೆ, ಸುಗಮ ವೇಗವರ್ಧನೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುತ್ತದೆ.
- ಸುರಕ್ಷತಾ ವ್ಯವಸ್ಥೆಗಳು: ಟ್ರಾಕ್ಷನ್ ಕಂಟ್ರೋಲ್, ವೀಲೀ ಮಿಟಿಗೇಶನ್ ಮತ್ತು ಟೆರೇನ್- ಅಡಾಪ್ಟಿವ್ ಎಬಿಎಸ್ ಎಲ್ಲಾ ರೀತಿಯ ಪ್ರದೇಶಗಳಲ್ಲಿಯೂ ವೀಲ್ ಸ್ಪಿನ್, ಸ್ಕಿಡ್ಡಿಂಗ್ ಮತ್ತು ನಿಯಂತ್ರಣ ಕಳೆದುಕೊಳ್ಳುವುದನ್ನು ತಡೆಯುತ್ತದೆ.
ಸಮಗ್ರ ಆಕ್ಸೆಸರೀಸ್, ಪ್ರತಿ ರೈಡ್ ಗೆ ಸಿದ್ಧವಾಗಿರಿಸುತ್ತವೆ
- ರೇಸ್ಡ್ ಫೆಂಡರ್ (ಬೀಕ್), ರಿಯರ್ ಹಗ್ಗರ್ ಫೆಂಡರ್, ಬಾಶ್ ಪ್ಲೇಟ್, ಟ್ಯಾಂಕ್ ಗಾರ್ಡ್, ನಕಲ್ ಗಾರ್ಡ್ ಗಳು, ಯು ಎಸ್ ಬಿ ಚಾರ್ಜರ್ ರೈಡರ್ ಗಳಿಗೆ ಆರಾಮದಾಯಕತೆ, ಸುರಕ್ಷತೆ ಮತ್ತು ಸೌಕರ್ಯವನ್ನು ಒದಗಿಸುತ್ತವೆ.
- ಟೂರಿಂಗ್ -ರೆಡಿ ಲಗೇಜ್: ಜಿವಿ ಟಾಪ್ ಬಾಕ್ಸ್ ಮತ್ತು ಸೈಡ್ ಪ್ಯಾನಿಯರ್ ಗಳು ಮೋನೊಲಾಕ್ ಮತ್ತು ಕ್ವಿಕ್-ರಿಲೀಸ್ ಸಿಸ್ಟಮ್ ಗಳೊಂದಿಗೆ ವಿಶ್ವಾಸಾರ್ಹತೆಯನ್ನು ಒದಗಿಸುತ್ತವೆ, ಸುಲಭವಾದ ಇನ್ ಸ್ಟಾಲೇಷನ್ ಮತ್ತು ರಿಮೂವಲ್ ಅವಕಾಶ ಒದಗಿಸುತ್ತವೆ.
- ಅಡ್ವೆಂಚರ್, ದೀರ್ಘ- ದೂರದ ಟೂರಿಂಗ್ ಮತ್ತು ದೈನಂದಿನ ಪ್ರಯಾಣಕ್ಕಾಗಿ ವಿಶೇಷವಾಗಿ ರಚಿತವಾಗಿದೆ.
- ಗಟ್ಟಿಮುಟ್ಟಾದ, ದೀರ್ಘ ಬಾಳಿಕೆ ಬರುವ ಮತ್ತು ವಾಸ್ತವ ಪ್ರಪಂಚದ ಪರಿಸ್ಥಿತಿಗಳಿಗಾಗಿ ಪರೀಕ್ಷಿತಗೊಂಡಿದೆ. ಪ್ರತಿ ರೈಡ್ ನಲ್ಲಿ ಸುರಕ್ಷತೆ, ಸೌಕರ್ಯ ಮತ್ತು ರೈಡರ್ ವಿಶ್ವಾಸವನ್ನು ವರ್ಧಿಸುತ್ತದೆ.
ಪರಿವರ್ತನಾತ್ಮಕ ಟಿವಿಎಸ್ ಆರ್‌ಟಿ-ಎಕ್ಸ್‌ಡಿ4 ಇಂಜಿನ್ ಪ್ಲಾಟ್‌ಫಾರ್ಮ್ 4 ಡ್ಯುಯಲ್ ತಂತ್ರಜ್ಞಾನಗಳ ಮೂಲಕ ರೇಸಿಂಗ್ ರೋಮಾಂಚಕತೆಯನ್ನು ಒದಗಿಸುತ್ತದೆ:
- ಡೌನ್ ಡ್ರಾಫ್ಟ್ ಪೋರ್ಟ್ ನೊಂದಿಗೆ ಡ್ಯುಯಲ್ ಓವರ್ ಹೆಡ್ ಕ್ಯಾಮ್ ಗಳು, ಉನ್ನತ ರೀವ್ ಗಳು ಮತ್ತು ಉನ್ನತ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ.
- ಸ್ಪ್ಲಿಟ್ ಚೇಂಬರ್ ಕ್ರಾಂಕ್ ಕೇಸ್ ನೊಂದಿಗೆ ಡ್ಯುಯಲ್ ಆಯಿಲ್ ಪಂಪ್, ಆಪ್ಟಿಮಮ್ ಲೂಬ್ರಿಕೇಶನ್ ಮತ್ತು ಎಲ್ಲ ಶ್ರೇಣಿಯ ಟಾರ್ಕ್ ಒದಗಿಸುತ್ತದೆ.
- ವಾಟರ್ ಜಾಕೆಟ್ ಜೊತೆಗೆ ಡ್ಯುಯಲ್ ಕೂಲಿಂಗ್ ಜಾಕೆಟ್ ಸಿಲಿಂಡರ್ ಹೆಡ್, ಕೂಲಿಂಗ್ ಅನ್ನು ಮತ್ತಷ್ಟು ಹೆಚ್ಚಿಸಿ ಕಾರ್ಯಕ್ಷಮತೆಯ ಔಟ್‌ಪುಟ್ ಅನ್ನು ಹೆಚ್ಚಿಸುತ್ತದೆ.
- ಡ್ಯುಯಲ್ ಬ್ರೀದರ್ ಸಿಸ್ಟಮ್, ವಿಶಾಲ ಶ್ರೇಣಿಯ ರೈಡಿಂಗ್ ಪರಿಸ್ಥಿತಿಗಳಲ್ಲಿ ಏರಿಯೇಶನ್ ಅನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ, ಆಯಿಲ್ ಬಳಕೆಯನ್ನು ಕಡಿಮೆ ಮಾಡುತ್ತದೆ, ದೀರ್ಘಕಾಲೀನ ಸ್ಥಿರ ಕಾರ್ಯಕ್ಷಮತೆಗಾಗಿ ಕಾಳಜಿ ವಹಿಸುತ್ತದೆ.
ಈ ಹೊಸ- ಜನರೇಶನ್ ಪ್ಲಾಟ್ ಫಾರ್ಮ್ ಉನ್ನತ ದಕ್ಷತೆಯನ್ನು ಒದಗಿಸುತ್ತದೆ, ಜೊತೆಗೆ ಎಥೆನಾಲ್-ಮಿಶ್ರಿತ ಇಂಧನಗಳಿಗೆ ಸಪೋರ್ಟ್ ಮಾಡುತ್ತದೆ, ಕಡಿಮೆ ಹೊರಸೂಸುವಿಕೆಯನ್ನು ಮತ್ತು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.
ಟಿವಿಎಸ್ ಆರ್‌ಟಿ-ಎಕ್ಸ್‌ಡಿ4 300 ಇಂಜಿನ್ ನ ಪ್ರಮುಖ ಫೀಚರ್ ಗಳು: ಹೊಸ ಪ್ಲಾಟ್ ಫಾರ್ಮ್ ನ ಮೊದಲ ಇಂಜಿನ್
- ಡಿಸ್ ಪ್ಲೇಸ್ ಮೆಂಟ್: 299.1 ಸಿಸಿ, ಸಿಂಗಲ್-ಸಿಲಿಂಡರ್, ಫಾರ್ವರ್ಡ್- ಇನ್ ಕ್ಲೈಂಡ್ ಇಂಜಿನ್
- ಪವರ್ ಔಟ್ ಪುಟ್: 9,500 ಆರ್ ಪಿ ಎಂನಲ್ಲಿ 36 ಪಿಎಸ್, 7,000 ಆರ್ ಪಿ ಎಂನಲ್ಲಿ 28.5 ಎನ್ಎಂ ಟಾರ್ಕ್
- ಕೂಲಿಂಗ್ ಸಿಸ್ಟಮ್: ಡ್ಯುಯಲ್ ಕೂಲಿಂಗ್ ನೊಂದಿಗೆ ಲಿಕ್ವಿಡ್- ಕೂಲ್ಡ್ (ನೀರು ಮತ್ತು ಆಯಿಲ್ ಜಾಕೆಟ್ ಗಳು)
- 6 ಸ್ಪೀಡ್ ಗೇರ್ ಬಾಕ್ಸ್, ಕ್ವಿಕ್ ಶಿಫ್ಟರ್ ನೊಂದಿಗೆ
- ರೈಡ್-ಬೈ-ವೈರ್ ಥ್ರಾಟಲ್ ಸಿಸ್ಟಮ್
- ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್
ಗಟ್ಟಿಮುಟ್ಟಾದ ಆದರೆ ಬಹುಮುಖವಾದ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ ಬೈಕ್ ಪ್ರತಿಯೊಂದು ಭೂಪ್ರದೇಶವನ್ನು ಸುಲಭವಾಗಿ ಸಾಗುವಂತೆ, ಗೆಲ್ಲುವಂತೆ ವಿನ್ಯಾಸಗೊಂಡಿದೆ. ಇದು ಅನ್ವೇಷಣೆ ಆಸಕ್ತಿ ಉಳ್ಳವರಿಗೆ ಮತ್ತು ಮೊದಲ ಬಾರಿಗೆ ಆಫ್- ರೋಡರ್ ಗಳಿಗೆ ಸೂಕ್ತ ಸಂಗಾತಿಯಾಗಿದೆ. ಈ ಮೋಟಾರ್ ಸೈಕಲ್ 5 ಬಣ್ಣದ ಆಯ್ಕೆಗಳು ಮತ್ತು ಮೂರು ವೇರಿಯಂಟ್ ಗಳನ್ನು ಹೊಂದಿದೆ.