ಬೆಂಗಳೂರು: ಭಾರತದ ಅತಿದೊಡ್ಡ ಕ್ರಿಪ್ಟೋ ಹೂಡಿಕೆ ಮತ್ತು ವ್ಯಾಪಾರ ವೇದಿಕೆಯಾದ ಕಾಯಿನ್ ಸ್ವಿಚ್, ಇಂದು ಡಿಜಿಟವಾಲ್ಟ್ ಎಂಬ ಕ್ರಿಪ್ಟೋ ಕಸ್ಟಡಿ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ವಿಶೇಷವಾಗಿ ಎಚ್‌ಎನ್‌ಐಗಳು, ಫ್ಯಾಮಿಲಿ ಆಫೀಸ್‌ಗಳು, ದೊಡ್ಡ ಸಂಸ್ಥೆಗಳು ಮತ್ತು ಮುಂದಿನ ಪೀಳಿಗೆಯ ಅಪ್ಲಿಕೇಶನ್‌ಗಳನ್ನು ನಿರ್ಮಿಸುವ ವೆಬ್3 ಉದ್ಯಮಗಳಿಗೆಂದು ವಿನ್ಯಾಸಗೊಳಿಸಲಾಗಿದೆ.
ಭಾರತದಲ್ಲಿ ಕ್ರಿಪ್ಟೋ ಬಳಕೆ ಹೆಚ್ಚುತ್ತಿರುವಂತೆ, ಕೇವಲ ಚಿಲ್ಲರೆ ಹೂಡಿಕೆದಾರರಷ್ಟೇ ಅಲ್ಲದೆ, 'ರಿಯಲ್ ವರ್ಲ್ಡ್ ಅಸೆಟ್ ಟೋಕನೈಸೇಶನ್' ನಂತಹ ಹೊಸ ಕ್ಷೇತ್ರಗಳಲ್ಲೂ ಹೂಡಿಕೆ ವಿಸ್ತರಿಸು ತ್ತಿದೆ. ಆದರೆ, ಭಾರತೀಯ ನಿಯಮಗಳಿಗೆ ಪೂರಕವಾದ ಬಲವಾದ ಕಸ್ಟಡಿ ಮೂಲಸೌಕರ್ಯದ ಕೊರತೆಯು ಒಂದು ದೊಡ್ಡ ಸವಾಲಾಗಿತ್ತು. ಡಿಜಿವಾಲ್ಟ್ ಈ ಕೊರತೆಯನ್ನು ನೀಗಿಸಲಿದ್ದು, ಜಾಗತಿಕ ಮಟ್ಟದ ಭದ್ರತೆ, ಸ್ಥಳೀಯ ನಿಯಮಗಳಿಗೆ ಅನುಗುಣವಾದ ಆಡಳಿತ ಮತ್ತು ಟೋಕ ನೈಸೇಶನ್‌ಗೆ ಸಿದ್ಧವಾಗಿರುವ ಮೂಲಸೌಕರ್ಯವನ್ನು ಒದಗಿಸಲಿದೆ.
ಈ ಕುರಿತು ಮಾತನಾಡಿದ ಕಾಯಿನ್‌ಸ್ವಿಚ್‌ನ ಸಹ-ಸಂಸ್ಥಾಪಕ ಆಶಿಶ್ ಸಿಂಘಾಲ್ "ಕಳೆದ 12-18 ತಿಂಗಳುಗಳಲ್ಲಿ ಭಾರತದ ಕ್ರಿಪ್ಟೋ ಪರಿಸರ ವ್ಯವಸ್ಥೆಯು ಹೆಚ್ಚು ಪ್ರಬುದ್ಧ ಹಂತಕ್ಕೆ ತಲುಪಿದೆ. ಎಚ್‌ಎನ್‌ಐಗಳು ಮತ್ತು ಕೌಟುಂಬಿಕ ವ್ಯವಹಾರಗಳ ಭಾಗವಹಿಸುವಿಕೆ ಹೆಚ್ಚುತ್ತಿದೆ. ನಿಯಂತ್ರಕವು ಸ್ಪಷ್ಟತೆ ಸುಧಾರಿಸುತ್ತಿದೆ ಮತ್ತು ಸುರಕ್ಷಿತ ಕಸ್ಟಡಿ ಎಂಬುದು ಅತಿ ಮುಖ್ಯವಾದ ಅಗತ್ಯತೆಯಾಗಿದೆ. ಅದೇ ಸಮಯದಲ್ಲಿ, ಟೋಕನೈಸೇಶನ್ ಒಂದು ಪ್ರಬಲವಾದ ಹೊಸ ಆಯಾಮವಾಗಿ ಹೊರ ಹೊಮ್ಮುತ್ತಿದೆ. ಡಿಜಿವಾಲ್ಟ್ ಮೂಲಕ, ನಾವು ಭಾರತದಲ್ಲಿ ಜವಾಬ್ದಾರಿಯುತ ಕ್ರಿಪ್ಟೋ ಅಳವಡಿಕೆಗೆ ಅಗತ್ಯವಾದ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ. ಕಾಯಿನ್‌ಸ್ವಿಚ್‌ಗೆ ಚಿಲ್ಲರೆ ಹೂಡಿಕೆ ದಾರರೇ ಜೀವಾಳವಾಗಿದ್ದರೂ, ಡಿಜಿವಾಲ್ಟ್ ಮೂಲಕ ನಾವು ದೊಡ್ಡ ಸಂಸ್ಥೆಗಳು ಮತ್ತು ವೆಬ್3 ಉದ್ದಿಮೆಗಳಿಗೆ ನಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದೇವೆ."
ಅವರು ಮುಂದುವರಿಸುತ್ತಾ ಹೀಗೆ ಹೇಳಿದರು, “ಭಾರತದ ಅತಿದೊಡ್ಡ ಕ್ರಿಪ್ಟೋ ವೇದಿಕೆಯಾಗಿ, ನಮ್ಮ ಆಂತರಿಕ ಅಗತ್ಯಗಳನ್ನು ಪೂರೈಸಲು ನಾವು ಮೊದಲು ಈ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದೆವು. ಆದರೆ, ನಮ್ಮ ಎಚ್‌ಎನ್‌ಐಗಳ, ಫ್ಯಾಮಿಲಿ ಆಫೀಸ್‌ಗಳು ಮತ್ತು ಸಾಂಸ್ಥಿಕ ಗ್ರಾಹಕರಿಂದ ಸುರಕ್ಷಿತ ಹಾಗೂ ಭಾರತೀಯ ನಿಯಮಗಳಿಗೆ ಅನುಗುಣವಾದ ಕಸ್ಟಡಿ ಪರಿಹಾರ ಕ್ಕಾಗಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ, ನಾವು ಈ ವೇದಿಕೆಯನ್ನು ಎಲ್ಲರಿಗೂ ಮುಕ್ತಗೊಳಿಸಲು ನಿರ್ಧರಿಸಿದೆವು.”
ಸಂಪೂರ್ಣವಾಗಿ 'ಇಂಡಿಯಾ-ಫಸ್ಟ್' ಪರಿಕಲ್ಪನೆಯಲ್ಲಿ ನಿರ್ಮಾಣವಾಗಿರುವ ಡಿಜಿವಾಲ್ಟ್, ಜಾಗತಿಕ ಭದ್ರತಾ ಮಾನದಂಡಗಳನ್ನು ಕಾಯ್ದುಕೊಳ್ಳುವ ಜೊತೆಗೆ, ಭಾರತೀಯ ನಿಯಂತ್ರಕ ನಿರೀಕ್ಷೆಗಳು ಮತ್ತು ಸಾಂಸ್ಥಿಕ ಆಡಳಿತದ ಮಾನದಂಡಗಳಿಗೆ ಅನುಗುಣವಾಗಿ ಕಸ್ಟಡಿ ಮೂಲಸೌಕರ್ಯವನ್ನು ಒದಗಿಸುತ್ತದೆ.
ಡಿಜಿಟಲ್ ಆಸ್ತಿಗಳ ಸುರಕ್ಷಿತ ಕಸ್ಟಡಿಗಾಗಿ ಜಾಗತಿಕ ಸಾಂಸ್ಥಿಕ ವೇದಿಕೆಯಾದ ಫೈರ್‌ಬ್ಲಾಕ್ಸ್ ಜೊತೆಗೆ ಡಿಜಿವಾಲ್ಟ್ ಕೈಜೋಡಿಸಿದೆ. ಇದುವರೆಗೆ 150ಕ್ಕೂ ಹೆಚ್ಚು ಬ್ಲಾಕ್‌ಚೈನ್‌ಗಳಲ್ಲಿ $10 ಟ್ರಿಲಿಯನ್ ಗಿಂತಲೂ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಸುರಕ್ಷಿತವಾಗಿ ನಿರ್ವಹಿಸಿರುವ ಫೈರ್‌ಬ್ಲಾಕ್ಸ್, ಸುಧಾರಿತ ಮಲ್ಟಿ-ಪಾರ್ಟಿ ಕಂಪ್ಯೂಟೇಶನ್ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಯಾವುದೇ ಒಂದು ಹಂತದಲ್ಲಿ ವೈಫಲ್ಯ ಉಂಟಾಗದಂತೆ ತಡೆದು, ಸೈಬರ್ ಬೆದರಿಕೆಗಳ ವಿರುದ್ಧ ಅತ್ಯುನ್ನತ ರಕ್ಷಣೆ ನೀಡುತ್ತದೆ.
ವ್ಯಕ್ತಿಗಳು ಮತ್ತು ಎಚ್‌ಎನ್‌ಐಗಳಿಗೆ ದೀರ್ಘಕಾಲದ ಸುರಕ್ಷಿತ ಸಂಗ್ರಹಣೆ ಮತ್ತು ನಿಯಂತ್ರಿತ ವಿತ್‌ಡ್ರಾವಲ್ (ಹಣ ಹಿಂಪಡೆಯುವಿಕೆ) ವ್ಯವಸ್ಥೆಯನ್ನು ಇದು ಒದಗಿಸುತ್ತದೆ. ಸಂಸ್ಥೆಗಳು ಮತ್ತು ಫಂಡ್ ಹೌಸ್‌ಗಳಿಗೆ, ಕಾರ್ಪೊರೇಟ್‌ಗಳು ಮತ್ತು ಫ್ಯಾಮಿಲಿ ಆಫೀಸ್‌ಗಳಿಗಾಗಿ ಸುಧಾರಿತ ಟ್ರೆಜರಿ ಮ್ಯಾನೇಜ್‌ಮೆಂಟ್, ಪಾಲಿಸಿ ಆಧಾರಿತ ನಿಯಂತ್ರಣಗಳು, ವಿವಿಧ ಹಂತದ ಅನುಮೋದನೆಗಳು ಮತ್ತು ಆಡಿಟ್-ಸಿದ್ಧ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಈ ವೇದಿಕೆ ನೀಡುತ್ತದೆ. Web3 ಬಿಲ್ಡರ್ ಗಳು ಮತ್ತು ಡೆವಲಪರ್‌ಗಳಿಗೆ. ವೇಗವಾದ ಮತ್ತು ಸುರಕ್ಷಿತವಾದ ಉತ್ಪನ್ನ ಅಭಿವೃದ್ಧಿಗಾಗಿ ಕಸ್ಟಡಿಯಲ್ ವಾಲೆಟ್ ಮೂಲಸೌಕರ್ಯ ಮತ್ತು APIಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಸ್ಥಳೀಯವಾಗಿ ದಿನದ 24 ಗಂಟೆಯೂ ಗ್ರಾಹಕ ಸೇವೆ ಲಭ್ಯವಿರುತ್ತದೆ.
ಇದಲ್ಲದೆ, ಟೋಕನೈಸೇಶನ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಸ್ತಿಗಳನ್ನು ಸುರಕ್ಷಿತವಾಗಿ ಸೇರ್ಪಡೆಗೊಳಿಸಲು, ಟೋಕನೈಸ್ ಮಾಡಲು, ವಿತರಿಸಲು ಮತ್ತು ಅವುಗಳ ಸಂಪೂರ್ಣ ಜೀವನಚಕ್ರವನ್ನು ಒಂದೇ ವೇದಿಕೆಯಲ್ಲಿ ನಿರ್ವಹಿಸಲು ಡಿಜಿವಾಲ್ಟ್ ತನ್ನ ಪಾಲುದಾರರಿಗೆ ಅವಕಾಶ ನೀಡುತ್ತದೆ. ಇದು ಭದ್ರತೆ, ನಿಯಮ ಪಾಲನೆ ಮತ್ತು ಸ್ಕೇಲೆಬಿಲಿಟಿಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಕಾರ್ಯಾಚರಣೆಯನ್ನು ಸರಳಗೊಳಿಸುತ್ತದೆ.
ಡಿಜಿವಾಲ್ಟ್ ಸಂಪೂರ್ಣವಾಗಿ ನಿಯಮ ಪಾಲನೆಗೆ ಆದ್ಯತೆ ನೀಡುವ ವಿಧಾನವನ್ನು ಅನುಸರಿಸು ತ್ತದೆ. ಇದು ಭಾರತದ FIU-IND ಮಾರ್ಗಸೂಚಿಗಳು ಮತ್ತು PMLA ಅಗತ್ಯತೆಗಳಿಗೆ ಬದ್ಧವಾಗಿದೆ. ಸಂಸ್ಥೆಗಳು ಮತ್ತು ಎಚ್‌ಎನ್‌ಐಗಳಿಗೆ ಸುರಕ್ಷಿತ ಮತ್ತು ಪಾರದರ್ಶಕ ಕ್ರಿಪ್ಟೋ ವಹಿವಾಟುಗಳನ್ನು ಖಚಿತಪಡಿಸಲು ಪ್ರಬಲವಾದ ಕೆವೈಸಿ, ಎಎಂಎಲ್, ವಹಿವಾಟು ಮೇಲ್ವಿಚಾರಣೆ ಮತ್ತು ಆಡಿಟ್-ಸಿದ್ಧ ವರದಿ ಮಾಡುವ ವ್ಯವಸ್ಥೆಯನ್ನು ಇದು ಹೊಂದಿದೆ.
ಡಿಜಿವಾಲ್ಟ್ ಬಿಡುಗಡೆಯು ಕಾಯಿನ್‌ಸ್ವಿಚ್ ಸಂಸ್ಥೆಯ ಪಾಲಿಗೆ ಒಂದು ಆಯಕಟ್ಟಿನ ಹೆಜ್ಜೆಯಾಗಿದೆ. ಹೂಡಿಕೆ, ವ್ಯಾಪಾರ ಮತ್ತು ಸಾಂಸ್ಥಿಕ ಮಟ್ಟದ ಕಸ್ಟಡಿ ಸೇವೆಯನ್ನು ಒಳಗೊಂಡ 'ಫುಲ್-ಸ್ಟ್ಯಾಕ್' ಕ್ರಿಪ್ಟೋ ವೇದಿಕೆಯಾಗಿ ಬೆಳೆಯಲು ಇದು ಸಹಕಾರಿಯಾಗಿದೆ. ಇದರ ಮೂಲಕ, ಭಾರತದ ಡಿಜಿಟಲ್ ಆಸ್ತಿ ಆರ್ಥಿಕತೆಗೆ ಒಂದು ವಿಶ್ವಾಸಾರ್ಹ ಕಸ್ಟಡಿ ಬೆನ್ನೆಲುಬನ್ನು ನಿರ್ಮಿಸುವ ಗುರಿಯನ್ನು ವೇದಿಕೆ ಹೊಂದಿದೆ.