ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಬ್ಬದ ಸಂಭ್ರಮ ಹಾಗೂ ಆರೋಗ್ಯಕರ ಜೀವನಶೈಲಿ ಪಾಲನೆಗೆ ಫಾಸ್ಟ್ರ್ಯಾಕ್ ಹಾಗೂ ಟೈಟಾನ್ ಸ್ಮಾರ್ಟ್‌ ನಿಂದ ವಿನೂತನ ಹಬ್ಬದ ಆವೃತ್ತಿಯ ಸ್ಮಾರ್ಟ್‌ ವಾಚ್‌ ಗಳ ಬಿಡುಗಡೆ

ಇಂದಿನ ಸಾಮಾಜಿಕವಾಗಿ ಸಕ್ರಿಯವಾಗಿರುವ ಹಾಗೂ ಹೊಸ ಟ್ರೆಂಡ್‌ಗಳ ಬಗ್ಗೆ ಸದಾ ಕಾಳಜಿ ವಹಿಸುವ ಯುವ ಸಮುದಾಯವನ್ನು ಅವರ ಉತ್ಸಾಹ, ಹುಮ್ಮಸ್ಸು ಮತ್ತು ಸಾಮಾಜಿಕ ಅನುಭವ ಆಧಾರದ ಮೂಲಕ ಫಾಸ್ಟ್ರ್ಯಾಕ್ ಸ್ಮಾರ್ಟ್ ತಲುಪಿದರೆ, ತಮ್ಮ ವೃತ್ತಿಪರ ಗುರಿಗಳೊಂದಿಗೆ ವೈಯಕ್ತಿಕ ಆಸಕ್ತಿಗಳನ್ನು ಸರಿದೂಗಿಸುತ್ತಾ, ಆರೋಗ್ಯಕರ ದೈನಂದಿನ ದಿನಚರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ 20ರ ಉತ್ತರಾರ್ಧ ಮತ್ತು 30ರ ಆರಂಭಿಕ ಹರೆಯದ ಯುವಕರನ್ನು ಟೈಟಾನ್ ಸ್ಮಾರ್ಟ್ ತಲುಪುತ್ತದೆ.

ಹಬ್ಬದ ಸಂದರ್ಭವು ಪ್ರತಿಯೊಬ್ಬರು ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಮುಂಚೂಣಿಯ ಟೈಟಾನ್ ಸ್ಮಾರ್ಟ್ ಸಂಸ್ಥೆಯು ತನ್ನ ಜನಪ್ರಿಯ ಉಪ-ಬ್ರ್ಯಾಂಡ್‌ ಗಳಾದ ಫಾಸ್ಟ್ರ್ಯಾಕ್ ಸ್ಮಾರ್ಟ್ ಮತ್ತು ಟೈಟಾನ್ ಸ್ಮಾರ್ಟ್‌ ಗಳ ವತಿಯಿಂದ ರೂಪಿಸಿರುವ ವಿಶಿಷ್ಟ ಹಬ್ಬದ ಅಭಿಯಾನಗಳ ಮೂಲಕ ಈ ಸಂಭ್ರಮ ಹೆಚ್ಚಿಸಲು ಮುಂದಾಗಿದ್ದು, ನವೀನ ಸ್ಮಾರ್ಟ್‌ ವಾಚ್ ತಂತ್ರಜ್ಞಾನವನ್ನು ಭಾರತೀಯ ಗ್ರಾಹಕರ ದೈನಂದಿನ ಬಳಕೆ, ವೈಯಕ್ತಿಕ ಆಸಕ್ತಿಗಳು ಹಾಗೂ ನಿತ್ಯದ ಜೀವನಶೈಲಿಯೊಂದಿಗೆ ಯಶಸ್ವಿಯಾಗಿ ಜೋಡಿಸುತ್ತಿದೆ.

ಯುವಜನತೆಯನ್ನು ಗುರಿಯಾಗಿಸಿಕೊಂಡಿರುವ ಫಾಸ್ಟ್ರ್ಯಾಕ್ ಸ್ಮಾರ್ಟ್ ಸಂಸ್ಥೆಯು ಹ್ಯಾವ್ ಎ ಸ್ಮಾರ್ಟ್ ಬ್ಲಾಸ್ಟ್ ಅಭಿಯಾನ ಪರಿಚಯಿಸಿದ್ದರೆ, ವೃತ್ತಿ ಬದುಕಿನ ಜತೆಗೆ ಆರೋಗ್ಯ ಕ್ಷೇಮಕ್ಕೆ ಆದ್ಯತೆ ನೀಡುವ 20ರ ಉತ್ತರಾರ್ಧ ಹಾಗೂ 30ರ ಹರೆಯದವರಿಗಾಗಿ ಟೈಟಾನ್ ಸ್ಮಾರ್ಟ್ ಸಂಸ್ಥೆಯು ಸ್ಮಾರ್ಟ್ ಬಿಗಿನಿಂಗ್ಸ್ ಅಭಿಯಾನವನ್ನು ಪರಿಚಯಿಸುತ್ತಿದೆ.

ಹಬ್ಬದ ಸಂದರ್ಭದಲ್ಲಿ ತಕ್ಷಣದ ಯೋಜನೆಗಳು ಹಾಗೂ ನಿರಂತರ ಆಚರಣೆಗಳಿಂದ ಹಿಡಿದು, ಹೊಸ ಶುಭಾರಂಭಗಳು ಮತ್ತು ನವೀಕೃತ ವೈಯಕ್ತಿಕ ಗುರಿಗಳನ್ನು ಸಾಕಾರಗೊಳಿಸಿಕೊಳ್ಳುವ ಪುಣ್ಯಕಾಲದವರೆಗೂ ವಿವಿಧ ಕಾರ್ಯಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಪ್ರತ್ಯೇಕ ಕಥನಗಳ ಮುಖಾಂತರ ಸಮರ್ಥವಾಗಿ ಎರಡು ವಿಭಾಗದ ಗ್ರಾಹಕರನ್ನು ತಲುಪುತ್ತಿವೆ.

ಇದನ್ನೂ ಓದಿ: HMT Kannadiga watch: ʼಎಚ್‌ಎಂಟಿ ಕನ್ನಡಿಗ' ನೂತನ ಕೈ ಗಡಿಯಾರಗಳನ್ನು ಬಿಡುಗಡೆ ಮಾಡಿದ ಎಚ್.ಡಿ.ಕುಮಾರಸ್ವಾಮಿ

ಇಂದಿನ ಸಾಮಾಜಿಕವಾಗಿ ಸಕ್ರಿಯವಾಗಿರುವ ಹಾಗೂ ಹೊಸ ಟ್ರೆಂಡ್‌ಗಳ ಬಗ್ಗೆ ಸದಾ ಕಾಳಜಿ ವಹಿಸುವ ಯುವ ಸಮುದಾಯವನ್ನು ಅವರ ಉತ್ಸಾಹ, ಹುಮ್ಮಸ್ಸು ಮತ್ತು ಸಾಮಾಜಿಕ ಅನುಭವ ಆಧಾರದ ಮೂಲಕ ಫಾಸ್ಟ್ರ್ಯಾಕ್ ಸ್ಮಾರ್ಟ್ ತಲುಪಿದರೆ, ತಮ್ಮ ವೃತ್ತಿಪರ ಗುರಿಗಳೊಂದಿಗೆ ವೈಯಕ್ತಿಕ ಆಸಕ್ತಿಗಳನ್ನು ಸರಿದೂಗಿಸುತ್ತಾ, ಆರೋಗ್ಯಕರ ದೈನಂದಿನ ದಿನಚರಿಗೆ ಹೆಚ್ಚಿನ ಆದ್ಯತೆ ನೀಡುತ್ತಿ ರುವ 20ರ ಉತ್ತರಾರ್ಧ ಮತ್ತು 30ರ ಆರಂಭಿಕ ಹರೆಯದ ಯುವಕರನ್ನು ಟೈಟಾನ್ ಸ್ಮಾರ್ಟ್ ತಲುಪುತ್ತದೆ.

ಈ ಕುರಿತು ವಿವರ ನೀಡಿದ ಸೀನಿವಾಸನ್ ಕೃಷ್ಣಮೂರ್ತಿ, “ನಮ್ಮ ಭಾರತೀಯ ಹಬ್ಬಗಳು ಮಾನವ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿಸುವ ಜನರು, ಧಾರ್ಮಿಕ ಆಚರಣೆಗಳು ಮತ್ತು ಸುಂದರ ಕ್ಷಣಗಳನ್ನು ಒಂದೆಡೆ ಸೇರಿಸುತ್ತವೆ. ನಮ್ಮ ಈ ವಿಶೇಷ ಹಬ್ಬದ ಅಭಿಯಾನಗಳ ಮುಖಾಂತರ, ಜನಸಾಮಾನ್ಯರ ವಾಸ್ತವ ಬದುಕಿನ ಶೈಲಿಗೆ ನಮ್ಮ ಸ್ಮಾರ್ಟ್ ತಂತ್ರಜ್ಞಾನವು ಅತ್ಯಂತ ಪ್ರಸ್ತುತವೆನಿಸಬೇಕೆಂದು ನಾವು ಹೃತ್ಪೂರ್ವಕವಾಗಿ ಬಯಸಿದ್ದೇವೆ. ಫಾಸ್ಟ್ರ್ಯಾಕ್ ಸ್ಮಾರ್ಟ್ ಈ ಸಂಭ್ರಮದ ಉತ್ಸಾಹ ಮತ್ತು ಸಾಮಾಜಿಕ ಕಳಕಳಿಯನ್ನು ಸಂಭ್ರಮಿಸಿದರೆ, ಟೈಟಾನ್ ಸ್ಮಾರ್ಟ್ ಗ್ರಾಹಕರು ತಮ್ಮ ನಿತ್ಯದ ಬದುಕಿನಲ್ಲಿ ಆರೋಗ್ಯಕರ ದಿನಚರಿ ಹಾಗೂ ಕ್ಷೇಮಪಾಲನೆಗೆ ಜಾಗ ಮಾಡಿಕೊಡಲು ಪ್ರೇರೇಪಿಸುತ್ತದೆ. ಕೇವಲ ಮೊಬೈಲ್ ಸಂಪರ್ಕ ಕಲ್ಪಿಸುವುದನ್ನು ಮೀರಿ, ಸ್ಮಾರ್ಟ್‌ ವಾಚ್‌ ಗಳನ್ನು ಭಾರತೀಯರ ದಿನನಿತ್ಯದ ಬದುಕಿನ ಅತ್ಯಂತ ಉಪಯುಕ್ತ ಒಡನಾಡಿಯನ್ನಾಗಿ ರೂಪಿಸುವುದೇ ನಮ್ಮ ಪ್ರಮುಖ ಮಹತ್ವಾಕಾಂಕ್ಷೆಯಾಗಿದೆ” ಎಂದು ತಿಳಿಸಿದರು.

ಫಾಸ್ಟ್ರ್ಯಾಕ್ ಸ್ಮಾರ್ಟ್ ಹಬ್ಬದ ಋತುವಿನ ಜೀವಂತಿಕೆಯನ್ನು ಸಾಕಾರಗೊಳಿಸುತ್ತಿದ್ದು, ಬೆಳಕಿನ ಹಬ್ಬ ದೀಪಾವಳಿಯಿಂದಲೇ ಶುರುವಾಗುವ ಹ್ಯಾವ್ ಎ ಸ್ಮಾರ್ಟ್ ಬ್ಲಾಸ್ಟ್ ಅಭಿಯಾನವು ಹಬ್ಬದ ದಿನಗಳ ಶಾಪಿಂಗ್ ಭೇಟಿಗಳು, ಹೊಸ ಉಡುಪುಗಳ ಆಯ್ಕೆ, ಸ್ನೇಹಿತರ ಭೇಟಿ ಹಾಗೂ ಕುಟುಂಬ ದವರನ್ನು ಕಾಣುವ ಸಡಗರವನ್ನು ಪ್ರತಿಬಿಂಬಿಸುತ್ತಾ ಆ ಉತ್ಸಾಹವನ್ನು ನಿರಂತರವಾಗಿ ಹೆಚ್ಚಿಸುತ್ತದೆ.

ಈ ಹಬ್ಬದ ಆವೃತ್ತಿಯ ಶ್ರೇಣಿಯು ರಿವಾಲ್ಟ್ ಎಕ್ಸ್‌ಆರ್1 ಪ್ರೊ (ರೂ. 2,799), ಎಕ್ಸ್‌ಟ್ರೀಮ್ ಎಸ್ (ರೂ. 2,999) ಮತ್ತು ಜುಪಿಟರ್ ಆರ್3 ಪ್ರೊ (ರೂ. 2,899) ಎಂಬ ಮೂರು ಆಕರ್ಷಕ ಮಾದರಿ ಗಳನ್ನು ಒಳಗೊಂಡಿದೆ. ಅತ್ಯಾಧುನಿಕ ಅಮೋಲೆಡ್ ಡಿಸ್ಪ್ಲೇಗಳು, ಗ್ರಾಹಕರೇ ಬದಲಾಯಿಸಬಹು ದಾದ ಹಬ್ಬದ ಥೀಮ್ ಆಧಾರಿತ ಕ್ಲೌಡ್ ವಾಚ್ ಫೇಸ್‌ ಗಳು, ಬ್ಲೂಟೂತ್ ಕಾಲಿಂಗ್ ಹಾಗೂ ಹೃದಯ ಬಡಿತ, ನಿದ್ರೆ ಮತ್ತು ಮಾನಸಿಕ ಒತ್ತಡದ ಮೇಲ್ವಿಚಾರಣೆಯಂತಹ ಫಿಟ್‌ನೆಸ್ ಹಾಗೂ ಕ್ಷೇಮ ಸೌಲಭ್ಯಗಳೊಂದಿಗೆ, ಈ ಸ್ಮಾರ್ಟ್‌ವಾಚ್‌ಗಳು ಅಪೂರ್ವ ವಿನ್ಯಾಸ ಮತ್ತು ದೈನಂದಿನ ಉಪಯುಕ್ತತೆಯನ್ನು ಒಗ್ಗೂಡಿಸುತ್ತವೆ; ಇದು ಯುವ ಗ್ರಾಹಕರು ಹಬ್ಬದ ಗಡಿಬಿಡಿಯ ಓಡಾಟ ದಲ್ಲೂ ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮ ದೈಹಿಕ ಚಟುವಟಿಕೆಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಅಪಾರವಾಗಿ ನೆರವಾಗುತ್ತದೆ.

ಟೈಟಾನ್ ಸ್ಮಾರ್ಟ್ ಸಂಸ್ಥೆಯು ಸ್ಮಾರ್ಟ್ ಬಿಗಿನಿಂಗ್ಸ್ - ಎ ಸ್ಮಾರ್ಟರ್ ಸ್ಟಾರ್ಟ್ ಟು ಲಿವಿಂಗ್ ಬೆಟರ್ ಅಭಿಯಾನದ ಮೂಲಕ ಹೊಸ ಆರಂಭಗಳ ಸದಾಶಯವನ್ನು ಆಧರಿಸಿದ್ದು, ಗ್ರಾಹಕರು ತಮ್ಮ ವೃತ್ತಿ ಬದುಕು, ವೈಯಕ್ತಿಕ ಗುರಿಗಳು ಮತ್ತು ಹವ್ಯಾಸಗಳ ಜೊತೆಜೊತೆಗೇ ಹೆಚ್ಚು ಆರೋಗ್ಯಕರ ವಾದ, ಜಾಗರೂಕತೆಯ ದಿನಚರಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಟೈಟಾನ್ ಸ್ಮಾರ್ಟ್ ಹಬ್ಬದ ಸಂಗ್ರಹದ ಮುಂಚೂಣಿಯಲ್ಲಿ ಐರಾ (ರೂ. 6,999 ರಿಂದ ರೂ. 8,499 ವರೆಗೆ), ಇವೋಕ್ 2.0 (ರೂ. 8,499) ಮತ್ತು ಇವೋಕ್ ಎಸ್ (ರೂ. 8,999) ಮಾದರಿಗಳಿದ್ದು, ಸ್ಮಾರ್ಟ್ ಕಾರ್ಯಕ್ಷಮತೆ ಹಾಗೂ ದೈನಂದಿನ ಅನುಕೂಲತೆಯನ್ನು ಒಂದೇ ಕಡೆ ಒದಗಿಸುತ್ತವೆ. ಗ್ರಾಹಕರ ದೈನಂದಿನ ದಿನಚರಿಗೆ ಸಂಪೂರ್ಣ ಪೂರಕವಾಗಿರುವಂತೆ ಅತ್ಯಂತ ಜಾಗರೂಕತೆಯಿಂದ ವಿನ್ಯಾಸಗೊಳಿಸಲಾದ ಈ ಸರಣಿಗಳು ಕನೆಕ್ಟಿವಿಟಿ, ಚಟುವಟಿಕೆ ಟ್ರ್ಯಾಕಿಂಗ್ ಮತ್ತು ವೈಯಕ್ತಿಕ ಕ್ಷೇಮವನ್ನು ಸಮರ್ಥವಾಗಿ ಬೆಂಬಲಿಸುವ ವೈಶಿಷ್ಟ್ಯಗಳನ್ನು ಹೊಂದಿದ್ದು, ತಂತ್ರಜ್ಞಾನವನ್ನು ಸಾಮಾನ್ಯ ಬದುಕಿನ ಹೆಚ್ಚು ಉದ್ದೇಶಪೂರ್ವಕ ಅಂಗವಾಗಿಸುತ್ತವೆ.

ಪ್ರಸಕ್ತ ಹಬ್ಬದ ಋತುವಿನಲ್ಲಿ, ಟೈಟಾನ್ ಸ್ಮಾರ್ಟ್ ವಾಚ್‌ಗಳ ಮೇಲೆ ಶೇಕಡಾ 30 ರವರೆಗೆ ಹಾಗೂ ಫಾಸ್ಟ್ರ್ಯಾಕ್ ಸ್ಮಾರ್ಟ್ ವಾಚ್‌ ಗಳ ಮೇಲೆ ಶೇಕಡಾ 50 ರವರೆಗೆ ಭರ್ಜರಿ ರಿಯಾಯಿತಿಯೊಂದಿಗೆ ಗ್ರಾಹಕರು ಪ್ರತಿಯೊಂದು ಕ್ಷಣವನ್ನೂ ಸಂಭ್ರಮಿಸಬಹುದಾಗಿದೆ. ಈ ಆಕರ್ಷಕ ಹಬ್ಬದ ಸಂಗ್ರಹವು ಟೈಟಾನ್ ಮತ್ತು ಫಾಸ್ಟ್ರ್ಯಾಕ್ ಅಧಿಕೃತ ಬ್ರ್ಯಾಂಡ್ ವೆಬ್‌ಸೈಟ್‌ಗಳು, ದೇಶಾದ್ಯಂತ ಇರುವ ಟೈಟಾನ್ ವರ್ಲ್ಡ್ ಮತ್ತು ಫಾಸ್ಟ್ರ್ಯಾಕ್ ಮಳಿಗೆಗಳು, ಪ್ರಮುಖ ಇ-ಕಾಮರ್ಸ್ ಜಾಲತಾಣಗಳು ಹಾಗೂ ಅಧಿಕೃತ ವಾಚ್ ಮತ್ತು ಮೊಬೈಲ್ ರೀಟೇಲ್ ಮಳಿಗೆಗಳಲ್ಲಿ ಸಾರ್ವಜನಿಕ ಖರೀದಿಗೆ ಮುಕ್ತವಾಗಿ ಲಭ್ಯವಿರ ಲಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಶೈಲಿ ಹಾಗೂ ಜೀವನಶೈಲಿಗೆ ಅತ್ಯುತ್ತಮವಾಗಿ ಹೊಂದುವ ನೆಚ್ಚಿನ ಸ್ಮಾರ್ಟ್‌ವಾಚ್ ಅನ್ನು ಆಯ್ದುಕೊಳ್ಳಲು ಹಲವು ಸುಲಭ ಮಾರ್ಗಗಳನ್ನು ಮುಕ್ತವಾಗಿ ಒದಗಿಸುತ್ತದೆ.