ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೇಮಿಂಗ್‌ ಪ್ರಿಯರಿಗೆ ಗುಡ್ ನ್ಯೂಸ್‌ : ಕಡಿಮೆ ಸಾಮರ್ಥ್ಯದ ಫೋನ್‌ಗಳಿಗಾಗಿ ಬರ್ತಿದೆ BGMI LITE, ಶೀಘ್ರದಲ್ಲೇ ಪ್ರೀ-ರಿಜಿಸ್ಟ್ರೇಷನ್ ಆರಂಭ!

ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗೇಮರ್‌ಗಳನ್ನೂ ತಲುಪುವ ಉದ್ದೇಶ ದಿಂದ ಈ 'ಲೈಟ್' ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೂಲಕ ಬಿಜಿಎಂಐ ಗೇಮ್‌ ನಷ್ಟೇ ರೋಚಕವಾಗಿರಲಿದ್ದು, ಅದೇ ಥ್ರಿಲ್ ಅನ್ನು ಈ ಲೈಟ್ ವರ್ಷನ್‌ನಲ್ಲೂ ನೀವು ಎಂಜಾಯ್ ಮಾಡಬಹುದು ಎಂದು ಕಂಪನಿ ಭರವಸೆ ನೀಡಿದೆ.

ಬೆಂಗಳೂರು: ಮೊಬೈಲ್ ಗೇಮ್ ಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಬಿಜಿಎಂಐ ಅಭಿಮಾನಿ ಗಳಿಗೆ ಬಂಪರ್‌ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಿದ್ಧ ಗೇಮಿಂಗ್ ಡೆವಲಪರ್ ಸಂಸ್ಥೆ ಕ್ರಾಫ್ಟನ್ ಇಂಡಿಯಾ ಬಹುನಿರೀಕ್ಷಿತ 'ಬಿಜಿಎಂಐ ಲೈಟ್' ಆವೃತ್ತಿಯನ್ನು ಇದೇ ವರ್ಷದ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗೇಮರ್‌ಗಳನ್ನೂ ತಲುಪುವ ಉದ್ದೇಶ ದಿಂದ ಈ 'ಲೈಟ್' ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೂಲಕ ಬಿಜಿಎಂಐ ಗೇಮ್‌ ನಷ್ಟೇ ರೋಚಕವಾಗಿರಲಿದ್ದು, ಅದೇ ಥ್ರಿಲ್ ಅನ್ನು ಈ ಲೈಟ್ ವರ್ಷನ್‌ನಲ್ಲೂ ನೀವು ಎಂಜಾಯ್ ಮಾಡಬಹುದು ಎಂದು ಕಂಪನಿ ಭರವಸೆ ನೀಡಿದೆ.

ಪ್ರೀ-ರಿಜಿಸ್ಟ್ರೇಷನ್ ಮತ್ತು ಡೌನ್‌ಲೋಡ್

ಆಂಡ್ರಾಯ್ಡ್ ಫೋನ್ ಬಳಕೆದಾರರಿಗಾಗಿ ಆಗಸ್ಟ್ 25ರಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಜಿಎಂಐ ಲೈಟ್‌ನ ಪ್ರೀ-ರಿಜಿಸ್ಟ್ರೇಷನ್ ಆರಂಭವಾಗಲಿದೆ. ಇದರ ಆರಂಭಿಕ ಡೌನ್‌ಲೋಡ್ ಸೈಜ್ ಕೇವಲ 1ಜಿಬಿ ಇರಲಿದ್ದು, ಫೋನ್‌ಗಳಲ್ಲಿ ಸುಲಭವಾಗಿ ಮತ್ತು ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ:Commonwealth Games 2026: 13 ಚಿನ್ನ, 17 ಬೆಳ್ಳಿ, 9 ಕಂಚಿನ ಪದಕಗಳೊಂದಿಗೆ ಭಾರತಕ್ಕೆ 4ನೇ ಸ್ಥಾನ!

ಹಳೆಯ ಅಕೌಂಟ್ ಕಥೆ ಏನು?

ಈಗಾಗಲೇ ಬಿಜಿಎಂಐ ಆಡುತ್ತಿರುವವರು ತಮ್ಮ ಹಳೆಯ ಅಕೌಂಟ್ ಅನ್ನು ಲೈಟ್ ಆವೃತ್ತಿಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಕ್ರಾಫ್ಟನ್ ಸ್ಪಷ್ಟಪಡಿಸಿದೆ. ಆಟಗಾರರು ತಮ್ಮ ಹಳೆಯ ಅಕೌಂಟ್‌ಗೆ ಧಕ್ಕೆಯಾಗದಂತೆ, ಬಿಜಿಎಂಐ ಲೈಟ್ ಅನ್ನು ಸಂಪೂರ್ಣವಾಗಿ ಪ್ರತ್ಯೇಕ ಗೇಮ್ ಆಗಿ ಆನಂದಿಸಬಹುದು. ಇನ್ನು ಆಪಲ್ ಬಳಕೆದಾರರಿಗೆ ಇದು ಯಾವಾಗ ಲಭ್ಯವಾಗಲಿದೆ ಎಂಬುದನ್ನು ಕಂಪನಿ ಮುಂದಿನ ದಿನಗಳಲ್ಲಿ ತಿಳಿಸಲಿದೆ.

ಬಿಜಿಎಂಐ ಲೈಟ್‌ಗೆ ಸಂಬಂಧಿಸಿದ ಮತ್ತಷ್ಟು ಅಪ್ಡೇಟ್‌ಗಳನ್ನು ಅದರ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗುವುದು ಎಂದು ಕ್ರಾಫ್ಟನ್ ತಿಳಿಸಿದೆ.

ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಜಾಗತಿಕ ಮಟ್ಟದ ಗೇಮಿಂಗ್ ಡೆವಲಪರ್ ಕಂಪನಿ ಯಾಗಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಇದರ ಜನಪ್ರಿಯ ಗೇಮ್ ಬಿಜಿಎಂಐ ಈಗಾಗಲೇ 26 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಇದಲ್ಲದೆ ಬುಲೆಟ್ ಎಕೋ ಇಂಡಿಯಾ, ರೋಡ್ ಟು ವ್ಯಾಲರ್, ಕುಕೀರನ್ ಇಂಡಿಯಾ ಮತ್ತು ರಿಯಲ್ ಕ್ರಿಕೆಟ್ ನಂತಹ ಗೇಮ್‌ಗಳನ್ನೂ ಇದು ಹೊಂದಿದೆ.

ಗೇಮಿಂಗ್ ಜೊತೆಗೆ ಭಾರತದ ಸ್ಟಾರ್ಟ್‌ಅಪ್‌ ವಲಯಕ್ಕೂ ಬೆನ್ನೆಲುಬಾಗಿರುವ ಕ್ರಾಫ್ಟನ್, 2021 ರಿಂದ ಇದುವರೆಗೆ 250 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣ ಹೂಡಿಕೆ ಮಾಡಿದೆ. ಅಲ್ಲದೆ ಇತ್ತೀಚೆಗೆ ನೇವರ್ ಮತ್ತು ಮಿರೆ ಅಸೆಟ್ ಜೊತೆಗೂಡಿ 6,000 ಕೋಟಿ ರೂ. ಮೌಲ್ಯದ ಕ್ರಾಫ್ಟನ್ ಇಂಡಿಯಾ ಯುನಿಕಾರ್ನ್ ಗ್ರೋಥ್ ಫಂಡ್ ಅನ್ನು ಆರಂಭಿಸಿದ್ದು, ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಿಗೆ ನೆರವಾಗುತ್ತಿದೆ.