ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Reno16 ಮತ್ತು Reno16c ಮಾದರಿಗಳ Reno16 ಸರಣಿ ಬಿಡುಗಡೆ

ಸ್ಮಾರ್ಟ್‌ಫೋನ್ ಅನ್ನು ಕೇವಲ ಸಂವಹನ ಸಾಧನವಾಗಿ ನೋಡದೆ, ಅದಕ್ಕಿಂತಲೂ ಹೆಚ್ಚಾಗಿ ಪರಿಗಣಿಸುವ ಯುವಜನರಿಗಾಗಿ ವಿನ್ಯಾಸಗೊಳಿಸಲಾದ ಈ Reno16 ಸರಣಿಯು, ಅದ್ಭುತ ಕ್ಯಾಮೆರಾ, ಸೃಜನಶೀಲತೆಗೆ ಉತ್ತೇಜನ ನೀಡುವ ಸ್ಟುಡಿಯೋ, ದೈನಂದಿನ ಕೆಲಸದ ಸಹವರ್ತಿ ಮತ್ತು ವೈಯಕ್ತಿಕ ಸಹಾಯಕವಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ.

OPPO India ಸಂಸ್ಥೆಯು ಇಂದು Reno16 ಮತ್ತು Reno16c ಮಾದರಿಗಳನ್ನು ಒಳಗೊಂಡಿರುವ Reno16 ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇವು ಭಾರತದ ಮೊದಲ ಹೋಲೋವರ್ಸ್ 3D ಡಿಸೈನ್, 50MP 3.5× ಟೆಲಿಫೋಟೋ ಲೆನ್ಸ್ ಹೊಂದಿರುವ AI ಪೋರ್ಟ್ರೇಟ್ ಕ್ಯಾಮೆರಾ, ನ್ಯಾಚುರಲ್ ಟೋನ್ ಇಮೇಜಿಂಗ್ ಮತ್ತು ಎಲ್ಲಾ ಫೋಕಲ್-ಲೆಂತ್ 4K 60fps HDR ವಿಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯಗಳನ್ನು ಹೊಂದಿವೆ.

ಸ್ಮಾರ್ಟ್‌ಫೋನ್ ಅನ್ನು ಕೇವಲ ಸಂವಹನ ಸಾಧನವಾಗಿ ನೋಡದೆ, ಅದಕ್ಕಿಂತಲೂ ಹೆಚ್ಚಾಗಿ ಪರಿಗಣಿಸುವ ಯುವಜನರಿಗಾಗಿ ವಿನ್ಯಾಸಗೊಳಿಸಲಾದ ಈ Reno16 ಸರಣಿಯು, ಅದ್ಭುತ ಕ್ಯಾಮೆರಾ, ಸೃಜನಶೀಲತೆಗೆ ಉತ್ತೇಜನ ನೀಡುವ ಸ್ಟುಡಿಯೋ, ದೈನಂದಿನ ಕೆಲಸದ ಸಹವರ್ತಿ ಮತ್ತು ವೈಯಕ್ತಿಕ ಸಹಾಯಕವಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ. AI Remix Collage, Pop Cam ಮತ್ತು Popout 2.0 ನಂತಹ AI-ಪವರ್ಡ್ ಫೀಚರ್‌ಗಳೊಂದಿಗೆ ಅತ್ಯುತ್ತಮ ಕಂಟೆಂಟ್ ರಚಿಸುವುದರಿಂದ ಹಿಡಿದು, ColorOS 16 ನೀಡುವ ಸ್ಮಾರ್ಟ್ ಫೀಚರ್‌ಗಳನ್ನು ಅನುಭವಿಸುವವರೆಗೆ, ಈ Reno16 ಸರಣಿಯು ಬಳಕೆದಾರರ ಸೃಜನಶೀಲತೆ ಮತ್ತು ವ್ಯಕ್ತಿತ್ವಕ್ಕೆ ಹೊಸ ಆಯಾಮವನ್ನು ನೀಡುತ್ತದೆ.

ಈ ಬಿಡುಗಡೆಯ ಬಗ್ಗೆ ಮಾತನಾಡಿದ OPPO India ಸಂಸ್ಥೆಯ PR ಮತ್ತು ಕಮ್ಯುನಿಕೇಷನ್ಸ್ ಮುಖ್ಯಸ್ಥ ಗೋಲ್ಡಿ ಪಟ್ನಾಯಕ್, "ಇಂದಿನ ಯುವ ಪೀಳಿಗೆಗೆ ಸ್ಮಾರ್ಟ್‌ಫೋನ್ ಕೇವಲ ಒಂದು ಗ್ಯಾಜೆಟ್ ಅಲ್ಲ; ಅದು ಅವರ ಸೃಜನಶೀಲತೆಯ ತವರು, ಸುಂದರ ಕ್ಷಣಗಳನ್ನು ಹಿಡಿದಿಡುವ ಕನ್ನಡಿ, ತಮ್ಮ ವ್ಯಕ್ತಿತ್ವವನ್ನು ಅಭಿವ್ಯಕ್ತಿಸುವ ವೇದಿಕೆ. ಟ್ರೆಂಡ್‌ಸೆಟ್ಟಿಂಗ್ ಡಿಸೈನ್ ಮತ್ತು ಅರ್ಥ ಪೂರ್ಣ ನಾವೀನ್ಯತೆಗಳ ಸಂಗಮವೇ Reno ಸರಣಿ. ಯುವ ಬಳಕೆದಾರರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಇದು ವಿಕಸನಗೊಳ್ಳುತ್ತಿದೆ.

Reno16 ಸರಣಿಯಲ್ಲಿ, ಆಕರ್ಷಕ ವಿನ್ಯಾಸ, ಅದ್ಭುತ ಕ್ಯಾಮೆರಾ ಅನುಭವ ಹಾಗೂ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ದೈನಂದಿನ ಕೆಲಸಗಳನ್ನು ಸುಲಭವಾಗಿಸುವ AI ಅನ್ನು ನಾವು ಅಳವಡಿಸಿದ್ದೇವೆ. ಬಳಕೆದಾರರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಸೆರೆಹಿಡಿಯಲು, ಆತ್ಮವಿಶ್ವಾಸದಿಂದ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಮತ್ತು ಪ್ರತಿದಿನವೂ ಒಂದು ಪ್ರೀಮಿಯಂ ಅನುಭವ ಪಡೆಯಲು, ಪ್ರತಿಯೊಂದು ಅಂಶವನ್ನೂ ನಾವು ಬಹಳ ಕಾಳಜಿಯಿಂದ ರೂಪಿಸಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಪ್ರವಾಸಿ ಫೋಟೋಗ್ರಫಿಗೆ OPPO India ಹೊಸ Reno15 Series ಟಚ್‌

ಭಾರತದ ಮೊದಲ ಹೋಲೋವರ್ಸ್ 3D ಡಿಸೈನ್

ಪ್ರತಿಯೊಂದು Reno ಪೀಳಿಗೆಯು ಒಂದು ಹೊಸ ವಿನ್ಯಾಸದ ಗುರುತನ್ನು ಪರಿಚಯಿಸುತ್ತದೆ. ಆ ಪರಂಪರೆಯನ್ನು ಮುಂದುವರಿಸುತ್ತಾ, Reno16 ಸರಣಿಯು ಇದುವರೆಗಿನ ಅತ್ಯಂತ ವಿಶಿಷ್ಟವಾದ ವಿನ್ಯಾಸದೊಂದಿಗೆ ಬಂದಿದೆ. ಬ್ರಹ್ಮಾಂಡದ ಸೌಂದರ್ಯ ಮತ್ತು ರಹಸ್ಯಗಳಿಂದ ಪ್ರೇರಿತವಾದ Reno16 ಸರಣಿಯು, ಭಾರತದ ಮೊದಲ ಹೋಲೋವರ್ಸ್ 3D ಡಿಸೈನ್ ಅನ್ನು ಪರಿಚಯಿಸುತ್ತದೆ. OPPO ನ ಕೈಗಾರಿಕಾ-ವಿಶೇಷವಾದ ಹೋಲೋವರ್ಸ್ 3D ತಂತ್ರಜ್ಞಾನವನ್ನು, ಸಂಪೂರ್ಣ ಹೊಸ 3D ಪಾಪ್ ಪ್ಲಾನೆಟ್ ಡಿಸೈನ್‌ನೊಂದಿಗೆ ಸಂಯೋಜಿಸಿ, ಪ್ರತಿಯೊಂದು ಕೋನದಿಂದಲೂ ಎದ್ದು ಕಾಣುವಂತಹ ಸ್ಮಾರ್ಟ್‌ಫೋನ್ ಅನ್ನು ರಚಿಸಲಾಗಿದೆ.

ಸ್ಟಾರಿ ವೈಟ್ ರೂಪಾಂತರದಲ್ಲಿ ಮಾತ್ರ ವಿಶೇಷವಾಗಿ ಲಭ್ಯವಿರುವ 3D ಪಾಪ್ ಪ್ಲಾನೆಟ್ ಡಿಸೈನ್, ಬೆರಗುಗೊಳಿಸುವ 3D ಪರಿಣಾಮವನ್ನು ಸೃಷ್ಟಿಸುತ್ತದೆ, ಇದು ಫೋನ್‌ನ ಹಿಂಭಾಗದಲ್ಲಿ ಒಂದು ಗ್ರಹವು ತೇಲುತ್ತಿರುವಂತೆ ಭಾಸವಾಗುತ್ತದೆ. ಇದರಲ್ಲಿರುವ ನಿಖರವಾದ ಡ್ಯುಯಲ್-ಲೇಯರ್ ಆಪ್ಟಿಕಲ್ ಸ್ಟ್ರಕ್ಚರ್ ಮತ್ತು ಲಕ್ಷಾಂತರ ಮೈಕ್ರೋಲೆನ್ಸ್‌ಗಳಿಂದಾಗಿ, ಬೆಳಕು ಮತ್ತು ಕೋನಗಳು ಬದಲಾದಂತೆ ಈ ವಿನ್ಯಾಸವು ಜೀವಂತವಾಗಿರುವಂತೆ ಕಾಣುತ್ತದೆ. ಈ ವಿನ್ಯಾಸಕ್ಕೆ ಪೂರಕವಾಗಿ OPPO ನ ಫ್ಲೋಟಿಂಗ್ 3D ಗ್ಲಿಟರ್ ಫಿನಿಶ್ ಮತ್ತು ಡೈನಾಮಿಕ್ ಸ್ಟೆಲ್ಲಾರ್ ರಿಂಗ್ ಕ್ಯಾಮೆರಾ ಮಾಡ್ಯೂಲ್‌ನ ಸುತ್ತಲೂ ಮಿನುಗು ಮತ್ತು ಮೆರುಗು ನೀಡುತ್ತವೆ. ತಡೆರಹಿತ ಒನ್-ಪೀಸ್ ಕೋಲ್ಡ್-ಸ್ಕಲ್ಪ್ಟೆಡ್ ವಿನ್ಯಾಸದಿಂದ ರಚಿಸಲಾದ Reno16 ಮತ್ತು Reno16c, ಸ್ಟಾರಿ ವೈಟ್, ಟ್ವಿಲೈಟ್ ವಯೋಲೆಟ್ ಮತ್ತು ಸ್ಟೆಲ್ಲಾರ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಪ್ರತಿಯೊಬ್ಬರ ವ್ಯಕ್ತಿತ್ವ ವನ್ನು ಎತ್ತಿ ತೋರಿಸುವಂತೆ ತುಂಬಾ ಪ್ರೀಮಿಯಂ ಆಗಿ ಕಾಣುತ್ತದೆ.

Reno16 ಸರಣಿಯು ನೋಡಲು ತುಂಬಾ ಸ್ಟೈಲಿಶ್ ಆಗಿರುವುದಲ್ಲದೆ, ದೈನಂದಿನ ಬಳಕೆಗೆ ಅತ್ಯಂತ ಹಿತಕರವಾದ AMOLED ಡಿಸ್‌ಪ್ಲೇಗಳನ್ನು ಒಳಗೊಂಡಿದೆ. Reno16 ಅತ್ಯಂತ ತೆಳುವಾದ ಬೆಜೆಲ್‌ ಗಳೊಂದಿಗೆ 6.32-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದರೆ, Reno16c 6.57-ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ.

ಇವೆರಡೂ FHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು ಸುಧಾರಿತ ಐ-ಕೇರ್ ತಂತ್ರಜ್ಞಾನ ವನ್ನು ಬೆಂಬಲಿಸುತ್ತವೆ. Reno16 ಕೇವಲ 8.22mm ದಪ್ಪ ಮತ್ತು 182g ತೂಕವನ್ನು ಹೊಂದಿದ್ದರೆ, Reno16c 8.44mm ದಪ್ಪ ಮತ್ತು ಸುಮಾರು 195g ತೂಕವನ್ನು ಹೊಂದಿದೆ, ಇದು ಕೈಯಲ್ಲಿ ಹಿಡಿಯಲು ತುಂಬಾ ಅನುಕೂಲಕರವಾಗಿದೆ. ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಅತ್ಯುನ್ನತ IP66, IP68, IP69, IP69K ದೂಳು ಮತ್ತು ನೀರಿನ ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿರುವ ಇವು, ಯಾವುದೇ ಪರಿಸ್ಥಿತಿಯಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

Reno16 ಸರಣಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ AI Snap Key, ನಿಮ್ಮ ಸೃಜನಶೀಲತೆ ಮತ್ತು ಕೆಲಸವನ್ನು ವೇಗಗೊಳಿಸುತ್ತದೆ. ಒಂದು ಬಟನ್ ಒತ್ತುವ ಮೂಲಕ, ನೀವು ಮುಖ್ಯವಾದ ಕಂಟೆಂಟ್ ಅನ್ನು Mind Space-ನಲ್ಲಿ ಉಳಿಸಬಹುದು, ವಾಯ್ಸ್ ನೋಟ್ಸ್ ತೆಗೆದುಕೊಳ್ಳಬಹುದು, ಅಥವಾ ಕ್ಯಾಮೆರಾ, ಟ್ರಾನ್ಸ್‌ಲೇಟರ್, ರೆಕಾರ್ಡರ್‌ನಂತಹ ನಿಮಗೆ ಅಗತ್ಯವಿರುವ ಆ್ಯಪ್‌ಗಳನ್ನು ತಕ್ಷಣವೇ ಬಳಸಬಹುದು.

ಹೊಸ ಪೀಳಿಗೆಗಾಗಿ ಟ್ರೆಂಡ್-ಸೆಟ್ಟಿಂಗ್ AI ಕ್ಯಾಮೆರಾ

Reno16 ನಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್‌ಗಳಿವೆ. ಇದರಲ್ಲಿ 50MP ಮುಖ್ಯ ಕ್ಯಾಮೆರಾ, 100 ಡಿಗ್ರಿ ಫೀಲ್ಡ್ ಆಫ್ ವ್ಯೂ ಇರುವ 50MP ಅಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಇವೆ. ಕಡಿಮೆ ಬೆಳಕಿನಲ್ಲೂ ಸ್ಪಷ್ಟವಾದ ಫೋಟೋಗಳಿಗಾಗಿ ಡ್ಯುಯಲ್ ಫ್ಲ್ಯಾಶ್ ಸಿಸ್ಟಮ್ ಇದೆ. Reno16c ಮಾದರಿಯಲ್ಲೂ ಇದೇ ರೀತಿಯ ಕ್ಯಾಮೆರಾ ಫೀಚರ್‌ಗಳಿವೆ; ಇದು ಕೂಡ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ದೊಂದಿಗೆ, ಡ್ಯುಯಲ್ ಫ್ಲ್ಯಾಶ್ ಸೌಲಭ್ಯವನ್ನು ಹೊಂದಿದೆ.

Reno16 ಸ್ಮಾರ್ಟ್‌ಫೋನ್‌ನಲ್ಲಿ ನೀವು ಅಲ್ಟ್ರಾ-ವೈಡ್, ಮೇನ್ ಅಥವಾ ಟೆಲಿಫೋಟೋ - ಹೀಗೆ ಯಾವುದೇ ಕೋನದಲ್ಲೂ 4K 60fps HDR ವಿಡಿಯೋಗಳನ್ನು ಶೂಟ್ ಮಾಡಬಹುದು. ವಿಡಿಯೋ ಶೂಟ್ ಮಾಡುವಾಗ ಕಲರ್ ಅಥವಾ ಸ್ಪಷ್ಟತೆ ಕಡಿಮೆಯಾಗುವುದಿಲ್ಲ. 4K Auto Straighten ಫೀಚರ್, ವಿಡಿಯೋ ಶೂಟ್ ಮಾಡುವಾಗ ಕೈ ನಡುಗಿದರೂ ಅದನ್ನು ತಕ್ಷಣವೇ ಸರಿಪಡಿಸುತ್ತದೆ. ಹಾಗೆಯೇ, Zoom Free Video ಫೀಚರ್, ಜೂಮ್ ಮಾಡುವಾಗ ವಿಡಿಯೋದ ಸ್ಪಷ್ಟತೆ ಕಡಿಮೆ ಯಾಗದಂತೆ ನೋಡಿಕೊಳ್ಳುತ್ತದೆ. ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ಅತ್ಯಂತ ಉಪಯುಕ್ತವಾದ ವಿಡಿಯೋ ಟೂಲ್‌ಕಿಟ್ ಆಗಿದೆ.

ಈ ಎರಡೂ ಡಿವೈಸ್‌ಗಳು 50MP 3.5× ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿವೆ. ಇದು ವೃತ್ತಿಪರ ಫೋಟೋಗ್ರಾಫರ್‌ಗಳು ಇಷ್ಟಪಡುವ ಕ್ಲಾಸಿಕ್ 85mm ಪೋರ್ಟ್ರೇಟ್ ಲೆನ್ಸ್‌ನಂತಹ ಅನುಭವ ನೀಡುತ್ತದೆ.

OPPO ನ Natural Tone Imaging ಫೀಚರ್, ಸ್ಕಿನ್ ಟೋನ್, ಬಣ್ಣಗಳು ಮತ್ತು ಲೈಟಿಂಗ್ ಅನ್ನು ಬಹಳ ನೈಜವಾಗಿ ಮೇಳೈಸುತ್ತದೆ. ಎಲ್ಲರಿಗೂ ಒಂದೇ ರೀತಿಯ ಫಿಲ್ಟರ್‌ಗಳನ್ನು ಹಾಕುವ ಬದಲು, ಇದು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಸ್ವಾಭಾವಿಕವಾಗಿ ಎತ್ತಿ ತೋರಿಸುತ್ತದೆ. ಪ್ರಖರವಾದ ಮಧ್ಯಾಹ್ನ ದ ಬಿಸಿಲಿನಲ್ಲಿರಲಿ, ಸಂಜೆಯ ಮೃದುವಾದ ಬೆಳಕಿನಲ್ಲಿರಲಿ ಅಥವಾ ಮಂದವಾದ ಬೆಳಕಿರುವ ಕೆಫೆಗಳಲ್ಲಿರಲಿ, ಇದು ಮುಖದ ಅಂದವನ್ನು, ನೈಜ ಚರ್ಮದ ರಚನೆಯನ್ನು ಮತ್ತು ಬಣ್ಣಗಳನ್ನು ಹಾಗೆಯೇ ಸೆರೆಹಿಡಿಯುತ್ತದೆ. ನೀವು ಆ ಕ್ಷಣದಲ್ಲಿ ಏನನ್ನು ಅನುಭವಿಸಿದ್ದೀರೋ, ಅದನ್ನು ಫೋಟೋಗಳಲ್ಲಿ ಹಾಗೆಯೇ ಕಾಣಬಹುದು.

ಹೊಸ ಪೀಳಿಗೆಯ ಕ್ರಿಯೇಟರ್‌ಗಳಿಗಾಗಿ ರೂಪಿಸಲಾಗಿದೆ

ಇಂದಿನ ಕ್ರಿಯೇಟರ್‌ಗಳು ಕೇವಲ ಫೋಟೋಗಳನ್ನು ಕ್ಲಿಕ್ಕಿಸುವುದಿಲ್ಲ; ಅವರು ಕಥೆಗಳನ್ನು ಹೇಳುತ್ತಾರೆ. ವೀಕೆಂಡ್ ಟ್ರಿಪ್, ಕೆಫೆ ವ್ಲಾಗ್ಸ್ (vlogs), ಫೋಟೋ ಡಂಪ್ ಅಥವಾ ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳು - ಸೃಜನಶೀಲತೆ ಈಗ ದೈನಂದಿನ ಜೀವನದ ಭಾಗವಾಗಿದೆ. ಈ ಹೊಸ ಪೀಳಿಗೆಗಾಗಿ ವಿನ್ಯಾಸಗೊಳಿಸಲಾದ Reno16 ಸರಣಿಯು, AI ಪವರ್ಡ್ ಫೋಟೋಗ್ರಫಿ ಮತ್ತು ಸುಲಭವಾದ ಎಡಿಟಿಂಗ್ ಟೂಲ್‌ಗಳನ್ನು ನೀಡುತ್ತದೆ. ವಿಶೇಷವಾಗಿ, AI Remix Collage ಫೀಚರ್ ನಿಮ್ಮ ಫೋಟೋಗಳು, ಲೈವ್ ಫೋಟೋಗಳು ಮತ್ತು ವಿಡಿಯೋಗಳನ್ನು ಸುಂದರವಾದ ಸ್ಟೋರಿಗಳಾಗಿ ಪರಿವರ್ತಿಸುತ್ತದೆ. ನಿಮಗೆ ಇಷ್ಟವಾದ ಲೇಔಟ್‌ಗಳು, ಟೆಕ್ಸ್ಟ್, ಸ್ಟಿಕ್ಕರ್‌ಗಳು ಮತ್ತು ಆರ್ಟಿಸ್ಟಿಕ್ ಎಫೆಕ್ಟ್‌ಗಳನ್ನು ಬಳಸಿ, ಕೆಲವೇ ಟ್ಯಾಪ್‌ಗಳಲ್ಲಿ ಅದ್ಭುತವಾದ ಕಂಟೆಂಟ್ ಅನ್ನು ನೀವು ಕ್ರಿಯೇಟ್ ಮಾಡಬಹುದು.

Pop Cam ಫೀಚರ್, ಸಿನಿಮಾ, ರೆಟ್ರೋ ಮತ್ತು ಲೈಫ್‌ಸ್ಟೈಲ್ ಶೈಲಿಗಳಿಂದ ಪ್ರೇರಿತವಾದ ಒಂಬತ್ತು AI-ಕ್ಯುರೇಟೆಡ್ ಸ್ಟೈಲ್‌ಗಳನ್ನು ಪರಿಚಯಿಸುತ್ತದೆ. ಇದು ಬಳಕೆದಾರರು ತಮ್ಮ ಫೋಟೋಗಳನ್ನು ತಕ್ಷಣವೇ ಪರ್ಸನಲೈಸ್ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ, Popout 2.0 ಫೀಚರ್, ಫೋಟೋದಲ್ಲಿರುವ ವ್ಯಕ್ತಿಗಳು, ಸಾಕುಪ್ರಾಣಿಗಳು, ಪ್ರಮುಖ ಸ್ಥಳಗಳು ಮತ್ತು ದಿನನಿತ್ಯದ ವಸ್ತು ಗಳನ್ನು ಚಾಣಾಕ್ಷತನದಿಂದ ಗುರುತಿಸಿ, ಅವುಗಳನ್ನು ಪ್ರಮುಖವಾಗಿ ತೋರಿಸುವ ಮೂಲಕ ಅತ್ಯಂತ ಆಕರ್ಷಕವಾದ ದೃಶ್ಯಗಳನ್ನು ಸೃಷ್ಟಿಸುತ್ತದೆ.

Dual-View Video 2.0 ಫೀಚರ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಒಂದೇ ಸಮಯ ದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ, ನಡೆಯುತ್ತಿರುವ ದೃಶ್ಯ ವನ್ನೂ ಮತ್ತು ಆ ಕ್ಷಣದಲ್ಲಿ ಕ್ರಿಯೇಟರ್‌ನ ಭಾವನೆಗಳನ್ನೂ ಒಂದೇ ಟೇಕ್‌ನಲ್ಲಿ ಸ್ಪಷ್ಟವಾಗಿ ಸೆರೆಹಿಡಿಯಬಹುದು. ಇದರಲ್ಲಿರುವ ಅನುಕೂಲಕರವಾದ ಲೇಔಟ್‌ಗಳು ಮತ್ತು ಕ್ಯಾಮೆರಾ ಕೋನ ವನ್ನು ಬದಲಾಯಿಸುವ ಸೌಲಭ್ಯ, ಪ್ರವಾಸ ಹಾಗೂ ದೈನಂದಿನ ಜೀವನದ ಕಥೆಗಳನ್ನು ಹೇಳಲು ಕ್ರಿಯೇಟರ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ.

ಇದರ ಜೊತೆಗೆ, ನಿಮ್ಮ ಫೋಟೋಗಳನ್ನು ಹೆಚ್ಚು ಆಕರ್ಷಕವಾಗಿಸಲು AI ತಾಂತ್ರಿಕ ಟೂಲ್‌ಗಳು ಹಲವಾರಿವೆ. ಅವುಗಳೆಂದರೆ: AI Recompose, AI Perfect Shot, AI Best Face, AI Unblur, AI Eraser, AI Flash Photography 3.0 ಮತ್ತು AI Studio. ಇವು ಫೋಟೋದ ಅಂದವನ್ನು ಹೆಚ್ಚಿಸಿ, ಸ್ಪಷ್ಟವಾದ ಮತ್ತು ಅತ್ಯುತ್ತಮವಾದ ಚಿತ್ರಗಳನ್ನು ನೀಡಲು ನಿಮಗೆ ಸಹಾಯ ಮಾಡುತ್ತವೆ. ಇವುಗಳ ನೆರವಿನಿಂದ ನೀವು ಪ್ರತಿಯೊಂದು ಕ್ಷಣವನ್ನೂ ಪ್ರೊಫೆಷನಲ್ ಕ್ವಾಲಿಟಿಯಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಹುದು.

OPPO Bubble: ಕ್ರಿಯೇಟರ್‌ಗಳಿಗಾಗಿ ಒಂದು ಹೊಸ ಆರಂಭ

Reno16 ಸರಣಿಯೊಂದಿಗೆ ಬರುತ್ತಿರುವ OPPO Bubble, ಸೃಜನಶೀಲತೆ ಮತ್ತು ಕಾರ್ಯಕ್ಷಮತೆಗೆ ಆದ್ಯತೆ ನೀಡುವ ಕ್ರಿಯೇಟರ್‌ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊದಲ ಸ್ಮಾರ್ಟ್ ಕ್ಯಾಮೆರಾ ಕಂಪ್ಯಾನಿಯನ್. ಕೇವಲ 27.5 ಗ್ರಾಂ ತೂಕವಿರುವ ಈ ಪುಟ್ಟ ಸಾಧನವನ್ನು ಮ್ಯಾಗ್ನೆಟ್ ಮೂಲಕ ನಿಮ್ಮ ಫೋನ್‌ಗೆ ಸುಲಭವಾಗಿ ಅಟ್ಯಾಚ್ ಮಾಡಬಹುದು. ಇದರಲ್ಲಿರುವ 1.73-ಇಂಚಿನ AMOLED ಡಿಸ್‌ಪ್ಲೇ, ಮೇನ್ ಕ್ಯಾಮೆರಾದಲ್ಲಿ ಕಾಣುವುದನ್ನು ನೇರವಾಗಿ ತೆರೆಯ ಮೇಲೆ ತೋರಿಸು ತ್ತದೆ. ಇದರಿಂದ ಫೋನ್‌ನ ಹಿಂಭಾಗದಲ್ಲಿರುವ ಅತ್ಯುತ್ತಮ ಕ್ಯಾಮೆರಾಗಳನ್ನು ಬಳಸಿ, ಪರ್ಫೆಕ್ಟ್ ಸೆಲ್ಫಿಗಳು, ಗ್ರೂಪ್ ಫೋಟೋಗಳು ಮತ್ತು ಆಕರ್ಷಕ ಚಿತ್ರಗಳನ್ನು ನೀವು ಸೆರೆಹಿಡಿಯಬಹುದು. 550mAh ಬ್ಯಾಟರಿ ಮತ್ತು IP54 ಧೂಳು ಹಾಗೂ ನೀರಿನ ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿರುವ ಈ Bubble, ವೈರ್‌ಲೆಸ್ ರಿಮೋಟ್ ಆಗಿ, ಸ್ಟೈಲಿಶ್ ಡಿಜಿಟಲ್ ಆಕ್ಸೆಸರಿಯಾಗಿ ಮತ್ತು ನಿಮ್ಮ ದೈನಂದಿನ ಸಂಗಾತಿಯಾಗಿ ಕಾರ್ಯನಿರ್ವಹಿಸಿ, Reno16 ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

ColorOS 16-ನ ಹೊಸ ವಿಶೇಷತೆಗಳು

ColorOS 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ Reno16 ಸರಣಿಯು, OPPO ನೀಡುವ ಅತ್ಯಂತ ಬುದ್ಧಿವಂತ ಮತ್ತು ವೈಯಕ್ತಿಕಗೊಳಿಸಿದ AI ಅನುಭವವನ್ನು ಒದಗಿಸುತ್ತದೆ. ಇದು ಕ್ರಿಯೇಟರ್‌ಗಳು, ವೃತ್ತಿಪರರು ಮತ್ತು ಪ್ರವಾಸಿಗರಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು, ಉತ್ತಮವಾಗಿ ಸಂಘಟಿಸಲು ಮತ್ತು ಸ್ಮಾರ್ಟ್ ಆಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ. ಇನ್ನು ಮುಂದೆ ವಿವಿಧ ಆ್ಯಪ್‌ಗಳ ನಡುವೆ ಬದಲಾಯಿಸುವ ಅಥವಾ ಕೈಯಾರೆ ಕೆಲಸ ಮಾಡುವ ಅವಶ್ಯಕತೆಯಿಲ್ಲ; ನಿಮ್ಮ ಸೃಜನಶೀಲತೆ ಮತ್ತು ದೈನಂದಿನ ಕಾರ್ಯಗಳನ್ನು ಒಂದೇ ಕಡೆ ಸುಲಭ ವಾಗಿ ನಿರ್ವಹಿಸಬಹುದು..

ಈ ಅನುಭವದ ಕೇಂದ್ರಬಿಂದುವೇ AI Mind Pilot; ಇದು ಅನೇಕ ಆಧುನಿಕ ಭಾಷಾ ಮಾದರಿ ಗಳನ್ನು-LLMs ಒಂದೇ ಕಡೆ ಸೇರಿಸಿ, ನಿಮ್ಮ ವೈಯಕ್ತಿಕ ಆಯ್ಕೆಗಳಿಗೆ ತಕ್ಕಂತೆ ಕೆಲಸ ಮಾಡುವ ಉದ್ಯಮದ ಮೊದಲ ತಂತ್ರಜ್ಞಾನವಾಗಿದೆ. ಇದು Gemini, Perplexity ಮತ್ತು ChatGPTಗಳನ್ನು ಒಂದೇ ಪರದೆಯ ಮೇಲೆ ತರುತ್ತದೆ. ಸಲಹೆಗಳು, ಸಂಶೋಧನೆ ಅಥವಾ ಯೋಜನಾ ಕಾರ್ಯಗಳಿ ಗಾಗಿ ಪದೇ ಪದೇ ಬೇರೆ ಆ್ಯಪ್‌ಗಳಿಗೆ ಹೋಗುವ ಬದಲು, ಅತ್ಯಂತ ಸೂಕ್ತವಾದ ಮಾದರಿಯಿಂದ ನೀವು ತಕ್ಷಣ ಉತ್ತರಗಳನ್ನು ಪಡೆಯಬಹುದು ಅಥವಾ ಉತ್ತರಗಳನ್ನು ಅಕ್ಕಪಕ್ಕದಲ್ಲಿಟ್ಟು ಹೋಲಿಸಿ ಪರಿಶೀಲಿಸಬಹುದು.

AI Mind Space ಮೆಮೊರಿಗೆ ಸಂಪರ್ಕಗೊಂಡಿರುವುದರಿಂದ, ಇದು ಪ್ರತಿ ಪ್ರಶ್ನೆಯನ್ನು ಹೊಸದಾಗಿ ನೋಡದೆ, ನಿಮ್ಮ ಹಿಂದಿನ ಸಂಭಾಷಣೆ ಮತ್ತು ಅಗತ್ಯಗಳನ್ನು ನೆನಪಿಟ್ಟುಕೊಂಡು, ಸಮಯ ದೊಂದಿಗೆ ನಿಮಗೆ ಹೆಚ್ಚು ಆಪ್ತವಾದ ಸಹಾಯಕರಾಗಿ ಕೆಲಸ ಮಾಡುತ್ತದೆ. AI Snap Key ಮೂಲಕ, ನಿಮ್ಮ ಡಿವೈಸ್‌ನಲ್ಲಿ ಎಲ್ಲಿಂದಲಾದರೂ ಪ್ರಮುಖ ಕ್ಷಣಗಳು, ಆಲೋಚನೆಗಳು ಮತ್ತು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸೆರೆಹಿಡಿಯಬಹುದು.

ಇವೆಲ್ಲವೂ AI Mind Space ಎಂಬ ನಿಮ್ಮ 'ಡಿಜಿಟಲ್ ಮೆದುಳಿನಲ್ಲಿ' ವ್ಯವಸ್ಥಿತವಾಗಿರುತ್ತವೆ; ಇದು ಚದುರಿದ ಮಾಹಿತಿಯನ್ನು ಒಂದೆಡೆ ಸೇರಿಸಿ, ಸರಿಯಾದ ಸಂದರ್ಭಕ್ಕೆ ಅನುಗುಣವಾಗಿ ಜೋಡಿಸುವ ಒಂದು ಬುದ್ಧಿವಂತ ಕೇಂದ್ರವಾಗಿದೆ. ಜೊತೆಗೆ, AI Bill Manager ನಿಮ್ಮ ದೈನಂದಿನ ರಸೀದಿಗಳು, ಸ್ಕ್ರೀನ್‌ಶಾಟ್‌ಗಳು, ಸಂದೇಶಗಳು ಮತ್ತು ಧ್ವನಿ ಇನ್‌ಪುಟ್‌ಗಳನ್ನು ಸುಸಂಘಟಿತ ಹಣಕಾಸಿನ ದಾಖಲೆಗಳಾಗಿ ಪರಿವರ್ತಿಸುತ್ತದೆ.

ಇದು ನಿಮ್ಮ ಖರ್ಚುಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಿ, ಆದಾಯ-ವ್ಯಯಗಳನ್ನು ನಿಖರ ವಾಗಿ ಟ್ರ್ಯಾಕ್ ಮಾಡುವುದಲ್ಲದೆ, ರಿಯಲ್-ಟೈಮ್ ವಿನಿಮಯ ದರಗಳನ್ನು ಬಳಸಿ ಬಹು ಕರೆನ್ಸಿ ಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ನಿಮ್ಮ ಮಾಸಿಕ ಖರ್ಚಿನ ಟ್ರೆಂಡ್‌ಗಳನ್ನು ಅಚ್ಚುಕಟ್ಟಾಗಿ ಸಂಘಟಿಸಲು ಸಹಾಯ ಮಾಡುತ್ತದೆ.

AI Menu Translation ಫೀಚರ್, ರೆಸ್ಟೋರೆಂಟ್‌ಗಳಲ್ಲಿನ ಫಿಸಿಕಲ್ ಮೆನುಗಳನ್ನು ತಕ್ಷಣವೇ ಅನುವಾದಿಸುತ್ತದೆ. ಇದು ಆಹಾರ ಪದಾರ್ಥಗಳು ಮತ್ತು ಅವುಗಳ ಸಾಮಗ್ರಿಗಳನ್ನು ಗುರುತಿಸಿ, ಅಲರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದಲ್ಲದೆ, ಬೆಲೆಗಳನ್ನು ನಿಮಗೆ ಬೇಕಾದ ಕರೆನ್ಸಿಗೆ ಪರಿವರ್ತಿಸುತ್ತದೆ. AI Voice Translation, ಸುತ್ತಮುತ್ತಲಿನ ಶಬ್ದಗಳನ್ನು ಫಿಲ್ಟರ್ ಮಾಡಿ, ಸ್ಪಷ್ಟವಾದ ಧ್ವನಿಯನ್ನು ಸೆರೆ ಹಿಡಿಯುವ ಮೂಲಕ ವಿವಿಧ ಭಾಷೆಗಳ ನಡುವೆ ಸಹಜವಾದ ಸಂಭಾಷಣೆಗೆ ಸಹಾಯ ಮಾಡುತ್ತದೆ. ಹಾಗೆಯೇ, AI Live Translation, ಅಂತರಾಷ್ಟ್ರೀಯ ಸಭೆಗಳು, ಉಪನ್ಯಾಸಗಳು ಅಥವಾ ಸೆಮಿನಾರ್‌ಗಳಲ್ಲಿ ನಡೆಯುವ ಸಂಭಾಷಣೆಗಳನ್ನು ಸಂದರ್ಭಕ್ಕೆ ತಕ್ಕಂತೆ ತಕ್ಷಣವೇ ಅನುವಾದಿಸುವುದರಿಂದ, ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭವಾಗುತ್ತದೆ.

AI Recording Sticker ಫೀಚರ್ ಮೂಲಕ ಸಭೆಗಳು ಮತ್ತು ಉಪನ್ಯಾಸಗಳನ್ನು ರೆಕಾರ್ಡ್ ಮಾಡು ವುದು ಹೆಚ್ಚು ಬುದ್ಧಿವಂತಿಕೆಯ ಅನುಭವವಾಗುತ್ತದೆ. ರೆಕಾರ್ಡಿಂಗ್ ಸಮಯದಲ್ಲಿ ನೋಟ್ಸ್ ಬರೆಯುವುದು, ಫೋಟೋಗಳನ್ನು ಲಗತ್ತಿಸುವುದು ಮತ್ತು ಟೆಕ್ಸ್ಟ್‌ಗಳನ್ನು ಸೇವ್ ಮಾಡುವುದು ಮುಂತಾದವುಗಳನ್ನು ಮಾಡಬಹುದು. ರೆಕಾರ್ಡಿಂಗ್ ಮುಗಿದ ನಂತರ, ಇದು ಪ್ರಮುಖ ಪಾಯಿಂಟ್‌ ಗಳನ್ನು ಹೈಲೈಟ್ ಮಾಡುತ್ತಾ ಸಂಕ್ಷಿಪ್ತ ವರದಿಯನ್ನು ಆಟೋಮ್ಯಾಟಿಕ್‌ ಆಗಿ ಸಿದ್ಧಪಡಿಸುತ್ತದೆ. AI Scan ಮತ್ತು AI Extract ಫೀಚರ್‌ಗಳು, ದಾಖಲೆಗಳು, ಚಿತ್ರಗಳು, ಟೇಬಲ್‌ಗಳು ಮತ್ತು ಸಂಕೀರ್ಣವಾದ ಲೇಔಟ್‌ಗಳನ್ನು ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡಿ, ಎಡಿಟ್ ಮಾಡಲು ಸಾಧ್ಯವಿರುವ ಡಿಜಿಟಲ್ ಕಂಟೆಂಟ್ ಆಗಿ ಪರಿವರ್ತಿಸುತ್ತವೆ.

ಪವರ್‌ಫುಲ್ ಪರ್ಫಾರ್ಮೆನ್ಸ್, ಆಲ್-ಡೇ ಬ್ಯಾಟರಿ

Reno16 ಸ್ಮಾರ್ಟ್‌ಫೋನ್‌ನ ಹೃದಯಭಾಗವಾಗಿ, ಅತ್ಯಾಧುನಿಕ Snapdragon 7 Gen 4 ಮೊಬೈಲ್ ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಿಸುತ್ತದೆ. 4nm ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲಾದ ಈ ಶಕ್ತಿಯುತ ಚಿಪ್‌ಸೆಟ್, ಫೋನ್‌ನ ಕಾರ್ಯಕ್ಷಮತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಹಿಂದಿನ ಆವೃತ್ತಿಗಳಿಗಿಂತ ಇದರಲ್ಲಿ CPU ಪರ್ಫಾರ್ಮೆನ್ಸ್ 27 % ಹೆಚ್ಚಾಗಿದೆ ಮತ್ತು 2.8GHz ವರೆಗಿನ ಕ್ಲಾಕ್ ಸ್ಪೀಡ್ ಅನ್ನು ನೀಡುತ್ತದೆ. ಅಲ್ಲದೆ, GPU ಗ್ರಾಫಿಕ್ಸ್ ಸಾಮರ್ಥ್ಯವು 30 % ಸುಧಾರಣೆಯಾಗಿರುವುದರಿಂದ, ಫೋನ್‌ನ ಒಟ್ಟಾರೆ ಅನುಭವವು ತುಂಬಾ ಸ್ಮೂತ್ ಮತ್ತು ವೇಗವಾಗಿರುತ್ತದೆ.

Reno16c ಮಾಡೆಲ್‌ನಲ್ಲಿ MediaTek Dimensity 7300 4nm ಚಿಪ್‌ಸೆಟ್ ಇದೆ. ಇದರಲ್ಲಿ ನಾಲ್ಕು 2.5GHz Cortex-A78 ಕೋರ್‌ಗಳು ಮತ್ತು ನಾಲ್ಕು Cortex-A55 ಕೋರ್‌ಗಳಿವೆ. ಇದು Mali-G615 MC2 GPU, 24GB ವರೆಗಿನ ರ್ಯಾಮ್ (12GB ಫಿಸಿಕಲ್ + 12GB ವರ್ಚುವಲ್) ಮತ್ತು UFS 3.1 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಸರಣಿಯ ಎಲ್ಲಾ ಫೋನ್‌ಗಳಲ್ಲಿ, AI LinkBoost 4.0 ತಂತ್ರಜ್ಞಾನ ಕನೆಕ್ಟಿವಿಟಿಯನ್ನು ಸುಧಾರಿಸಿ, ಡೇಟಾ ಶೇರಿಂಗ್ ವೇಗವನ್ನು 73% ವರೆಗೆ ಹೆಚ್ಚಿಸುತ್ತದೆ. ಅದೇ ರೀತಿ, AI HyperBoost 2.0 ತಂತ್ರಜ್ಞಾನವು ಗೇಮಿಂಗ್ ಸಮಯದಲ್ಲಿ 120 fps ವೇಗದಲ್ಲಿ ನಯವಾದ ಮತ್ತು ಸ್ಥಿರವಾದ ಗೇಮಿಂಗ್ ಅನುಭವವನ್ನು ನೀಡುತ್ತದೆ.

Reno16 ಸ್ಮಾರ್ಟ್‌ಫೋನ್ 6700mAh ಬ್ಯಾಟರಿ ಮತ್ತು 80W SUPERVOOC™ ಫಾಸ್ಟ್ ಚಾರ್ಜಿಂಗ್‌ ನೊಂದಿಗೆ ಬರುತ್ತದೆ. Reno16c ಮಾಡೆಲ್ 7000mAh ಬೃಹತ್ ಬ್ಯಾಟರಿ ಮತ್ತು 80W SUPERVOOC™ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಬಳಕೆದಾರರು ದಿನವಿಡೀ ಯಾವುದೇ ಅಡೆತಡೆಯಿಲ್ಲದೆ ತಮ್ಮ ಕೆಲಸಗಳನ್ನು ಮುಂದುವರಿಸಲು, ಮನರಂಜನೆಯನ್ನು ಆನಂದಿಸಲು ಮತ್ತು ಪ್ರಪಂಚದೊಂದಿಗೆ ಸಂಪರ್ಕದಲ್ಲಿರಲು ಈ ಶಕ್ತಿಯುತ ಬ್ಯಾಟರಿ ಅನುಕೂಲ ಮಾಡಿ ಕೊಡುತ್ತದೆ.

OPPO Enco Air5 ಮೂಲಕ ಸಂಪೂರ್ಣ ಆಡಿಯೋ ಅನುಭವ

Reno16 ಸರಣಿಯೊಂದಿಗೆ ಬಿಡುಗಡೆಯಾಗುತ್ತಿರುವ ಹೊಸ OPPO Enco Air5, 52dB ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಸೌಲಭ್ಯದೊಂದಿಗೆ ಅದ್ಭುತವಾದ ಆಡಿಯೋ ಅನುಭವವನ್ನು ನೀಡುತ್ತದೆ. ಇದು 5,000Hz ವರೆಗಿನ ವಿಶಾಲವಾದ ಫ್ರೀಕ್ವೆನ್ಸಿ ರೇಂಜ್‌ನಲ್ಲಿ ಕಾರ್ಯನಿರ್ವಹಿಸುವು ದರಿಂದ, ಸಂಗೀತದ ಪ್ರತಿಯೊಂದು ಸೂಕ್ಷ್ಮತೆಯನ್ನು ಸ್ಪಷ್ಟವಾಗಿ ಕೇಳಬಹುದು. ಇದಲ್ಲದೆ, ಇದರಲ್ಲಿರುವ ಟ್ರಿಪಲ್ ಮೈಕ್ರೊಫೋನ್ ಸಿಸ್ಟಮ್ ಮತ್ತು AI ಕಾಲ್ ನಾಯ್ಸ್ ರಿಡಕ್ಷನ್ ಫೀಚರ್, ಗದ್ದಲದ ಅಥವಾ ಗಾಳಿ ಬೀಸುವ ಜಾಗದಲ್ಲೂ ನಿಮ್ಮ ಧ್ವನಿಯನ್ನು ಸ್ಪಷ್ಟವಾಗಿ ತಲುಪಿಸುತ್ತವೆ.

ದಿನವಿಡೀ ಆರಾಮದಾಯಕವಾಗಿ ಧರಿಸಬಹುದಾದ ಕೇವಲ 4.3ಗ್ರಾಂ ತೂಕದೊಂದಿಗೆ ಈ ಇಯರ್‌ ಬಡ್ಸ್ ವಿನ್ಯಾಸಗೊಳಿಸಲಾಗಿದೆ. ಇವು IP55 ಧೂಳು ಮತ್ತು ನೀರಿನ ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿವೆ. ಒಮ್ಮೆ ಚಾರ್ಜ್ ಮಾಡಿದರೆ 54 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಮತ್ತು TÜV Rheinland ಪ್ರಮಾಣೀಕರಿಸಿದ ಬ್ಯಾಟರಿ ಬಾಳಿಕೆಯನ್ನು ಇವು ನೀಡುತ್ತವೆ. 12mm ಡೈನಾಮಿಕ್ ಬಾಸ್ ಡ್ರೈವರ್, OPPO Alive Audio ಮತ್ತು ಕ್ಲಿಯರ್ ಅಕೌಸ್ಟಿಕ್ ಕ್ಯಾವಿಟಿ ಡಿಸೈನ್ ಸಂಗೀತದ ಪ್ರತಿಯೊಂದು ಸೂಕ್ಷ್ಮತೆಯನ್ನು ಬಹಳ ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ನೀಡುತ್ತವೆ. Sound Master EQ ಮತ್ತು 10-ಬ್ಯಾಂಡ್ ಪ್ರೊ ಈಕ್ವಲೈಜರ್ ಫೀಚರ್‌ಗಳ ಮೂಲಕ ನಿಮ್ಮ ಧ್ವನಿಯ ಗುಣಮಟ್ಟವನ್ನು ನಿಮಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.

ಹೊಸ Bluetooth 6.1 ತಂತ್ರಜ್ಞಾನದೊಂದಿಗೆ ಆಂಡ್ರಾಯ್ಡ್, iOS ಮತ್ತು ವಿಂಡೋಸ್ ಸಾಧನ ಗಳನ್ನು ಏಕಕಾಲದಲ್ಲಿ ಕನೆಕ್ಟ್ ಮಾಡಿಕೊಳ್ಳಬಹುದು. AI Translate, Google Gemini ಮತ್ತು Spotify ನಂತಹ ಫೀಚರ್‌ಗಳೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳುವ ಈ OPPO Enco Air5, Reno16 ಸರಣಿಗೆ ಹೆಚ್ಚು ಸ್ಮಾರ್ಟ್ ಮತ್ತು ಉತ್ತಮ ಆಡಿಯೋ ಅನುಭವವನ್ನು ನೀಡುತ್ತದೆ. ಇವು ಲ್ಯಾವೆಂಡರ್ ಪರ್ಪಲ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿವೆ.

ಬೆಲೆ ಮತ್ತು ಲಭ್ಯತೆ

Reno16 5G 8GB + 256GB ವೇರಿಯಂಟ್ INR 61,999 ಬೆಲೆಯಲ್ಲಿ ಮತ್ತು 12GB + 256GB ವೇರಿಯಂಟ್ INR 67,999 ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ, Reno16c 5G ಮೂರು ವೇರಿಯಂಟ್‌ ಗಳಲ್ಲಿ ಲಭ್ಯವಿದೆ: 8GB + 128GB INR 46,999, 8GB + 256GB INR 49,999 ಮತ್ತು 12GB + 256GB INR 55,999. ಹೊಸ OPPO Reno16 ಸರಣಿಯು ಜುಲೈ 9, 2026 ರಿಂದ Amazon, Flipkart, ಪ್ರಮುಖ ರಿಟೇಲ್ ಔಟ್‌ಲೆಟ್‌ಗಳು ಮತ್ತು OPPO E-store ನಲ್ಲಿ ಲಭ್ಯವಿರುತ್ತದೆ.

*

  • Reno16 ಸರಣಿಯಲ್ಲಿ AI Remix, Pop Cam ಮತ್ತು Popout 2.0 ನಂತಹ ಹೊಸ AI ಎಡಿಟಿಂಗ್ ಫೀಚರ್‌ಗಳನ್ನು ಸೇರಿಸಲಾಗಿದೆ.
  • Reno ಮಾದರಿಗಳಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ AI Snap Key, AI Mind Space ಸೇರಿದಂತೆ ಅತ್ಯಗತ್ಯ ಫೀಚರ್‌ಗಳನ್ನು ಒಂದೇ ಬಟನ್ ಒತ್ತುವ ಮೂಲಕ ತಕ್ಷಣವೇ ಬಳಸಬಹುದು.
  • ಕಂಪನಿಯ ಮೊದಲ ಸ್ಮಾರ್ಟ್ ಕ್ಯಾಮೆರಾ ಕಂಪ್ಯಾನಿಯನ್ ಮತ್ತು ಆಕ್ಸೆಸರಿಯಾಗಿ OPPO Bubble ಮಾರುಕಟ್ಟೆಗೆ ಬಂದಿದೆ.
  • Reno16 ಸರಣಿಯೊಂದಿಗೆ ಬಿಡುಗಡೆಯಾಗುತ್ತಿರುವ ಹೊಸ OPPO Enco Air5 ಇಯರ್‌ಬಡ್ಸ್, Active Noise Cancellation ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡುತ್ತದೆ