ನವದೆಹಲಿ: ಲೆಕ್ಸಸ್ ಇಂಡಿಯಾ ಇಂದು ಹೊಚ್ಚಹೊಸ ಇ.ಎಸ್.500ಸಿ ಭಾರತದಲ್ಲಿ ಬಿಡುಗಡೆ ಮಾಡಿದ್ದು ಇದು ಬ್ರಾಂಡ್ ನ ವಿದ್ಯುದೀಕರಣದ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದು ಲೆಕ್ಸಸ್ ನ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿ.ಇ.ವಿ.) ವನ್ನು ಭಾರತೀಯ ಮಾರುಕಟ್ಟೆಗೆ ತಂದಿದೆ.
ಜಪಾನ್ ಮೊಬಿಲಿಟಿ ಶೋ 2025ರಲ್ಲಿ ಪ್ರಕಟಿಸಲಾದ “ಡಿಸ್ಕವರ್” ಲೆಕ್ಸಸ್ ನ ಬ್ರಾಂಡ್ ತತ್ವಗಳನ್ನು ಕೇಂದ್ರದಲ್ಲಿ ಹೊಂದಿದೆ. ಉತ್ತಮ ಉತ್ಪನ್ನಗಳು, ಉತ್ಪನ್ನ ಸೇವೆಗಳು ಮತ್ತು ಉತ್ತಮ ಅನುಭವಗಳನ್ನು ಅನ್ವೇಷಿಸುವ ಧ್ಯೇಯದಲ್ಲಿದೆ ಮತ್ತು ಅವರ ಜೀವನಶೈಲಿಗಳಿಗೆ ಹೊಸ ಮೌಲ್ಯ ಕಂಡುಕೊಳ್ಳಲು ಅತಿಥಿಗಳಿಗೆ ನೆರವಾಗುತ್ತದೆ.
1989ರಲ್ಲಿ ಮುಂಚೂಣಿಯ ಎಲ್.ಎಸ್. ಜೊತೆಯಲ್ಲಿ ಬಿಡುಗಡೆ ಮಾಡಿದ ಇ.ಎಸ್. ಲೆಕ್ಸಸ್ ನಲ್ಲಿ ಕೇಂದ್ರ ಮಾದರಿಯಾಗಿದ್ದು ತನ್ನ ನಿಶ್ಯಬ್ದತೆ, ರೈಡ್ ಕಂಫರ್ಟ್ ಮತ್ತು ವಿಶಾಲ ಒಳಾಂಗಣಕ್ಕೆ ಜಾಗತಿಕ ಪ್ರಶಂಸೆ ಪಡೆದಿದೆ. ಈ ಮಾದರಿಯು ವಿಶ್ವದಾದ್ಯಂತ 80ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದೆ. 2005ರಲ್ಲಿ ಆರ್.ಎಕ್ಸ್.400ಎಚ್ ಬಿಡುಗಡೆಯಾದ ದಿನದಿಂದಲೂ ಚಲನಶೀಲ ಕಾರ್ಯಕ್ಷಮತೆ ಮತ್ತು ಪಾರಿಸರಿಕ ಜವಾಬ್ದಾರಿಯ ಅನ್ವೇಷಣೆ ಯಲ್ಲಿ ಸತತ ವಿದ್ಯುದೀಕರಣ ಮಾರ್ಗದಲ್ಲಿದೆ. ಎಚ್.ಇ.ವಿ.ಗಳು, ಪಿ.ಎಚ್.ಇ.ವಿಗಳು ಮತ್ತು ಬಿ.ಇ.ವಿ.ಗಳಿಗೆ ಸತತ ಆದ್ಯತೆ ನೀಡುವ ಮೂಲಕ ಲೆಕ್ಸಸ್ ಇಂಗಾಲದ ತಟಸ್ಥ ಸಮಾಜ ರೂಪಿಸಲು ಶ್ರಮಿಸುತ್ತಿದ್ದು ಅತಿಥಿಗಳು ಮತ್ತು ಮಾರುಕಟ್ಟೆಗಳ ವಿಸ್ತಾರ ಅಗತ್ಯಗಳಿಗೆ ಪ್ರತಿಕ್ರಿಯೆ ನೀಡುತ್ತಿದೆ.
ಇದನ್ನೂ ಓದಿ: ಲೆಕ್ಸಸ್ ಮುಂದಿನ ತಲೆಮಾರಿನ ಎಲೆಕ್ಟ್ರಿಫೈಡ್ ತಂತ್ರಜ್ಞಾನಗಳಲ್ಲಿ ಅಗ್ರಮಾಮಿ
- ಬಹು ಮಾರ್ಗಗಳ ವಿಧಾನದ ಮೂಲಕ ಇಂಗಾಲದ ತಟಸ್ಥತೆಯ ಅನ್ವೇಷಣೆಯಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿ.ಇ.ವಿ.) ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಚ್.ಇ.ವಿ.) ಎರಡನ್ನೂ ಚಲನೆಯ ವಿಸ್ತಾರ ಶ್ರೇಣಿಯ ಅಗತ್ಯ ಪೂರೈಸಲು ಒದಗಿಸ ಲಾಗುತ್ತಿದೆ
- ಲೆಕ್ಸಸ್ ಹೊಸ ವಿನ್ಯಾಸದ ಭಾಷೆಯನ್ನು ಪ್ರದರ್ಶಿಸುತ್ತಿದ್ದು ಮುಂದಿನ ತಲೆಮಾರಿನ ಬಿಇವಿ ಪರಿಕಲ್ಪನೆ ಎಲ್.ಎಫ್.-ಝಡ್.ಸಿ.ಯಿಂದ ಸ್ಪೂರ್ತಿ ಪಡೆದಿದೆ.
- ತನ್ನ ಕೇಂದ್ರದಿಂದಲೇ ಪರಿಷ್ಕರಿಸಲ್ಪಟ್ಟಿದ್ದು ಹೊಸ ಮಟ್ಟಗಳ ನಿಶ್ಯಬ್ದತೆ ಮತ್ತು ಸುಧಾರಿತ ವಿದ್ಯುದೀಕರಣದಿಂದ ರೈಡ್ ಕಂಫರ್ಟ್
- ವಿಶಾಲವಾದ ರಿಯರ್-ಸೀಟ್ ಪ್ಯಾಕೇಜ್ ಹೊಚ್ಚಹೊಸ ತಂತ್ರಜ್ಞಾನದೊಂದಿಗೆ ಸಂಯೋಜನೆಗೊಂಡಿದ್ದು ಎಲ್ಲ ಪ್ರಯಾಣಿಕರಿಗೂ ಪ್ರೀಮಿಯಂ ಮತ್ತು ಅನುಕೂಲಕರ ಅನುಭವ ನೀಡುತ್ತದೆ
- ಹೊಚ್ಚಹೊಸ ಇ.ಎಸ್.500ಇ ಹೊಸದಾಗಿ ಅಭಿವೃದ್ಧಿಯಾದ ಬ್ಯಾಟರಿ ಪ್ಯಾಕ್ ನಿಂದ ಸನ್ನದ್ಧವಾಗಿದ್ದು ಇದು ದೊಡ್ಡ ಸಾಮರ್ಥ್ಯದ ಲಿಥಿಯಂ-ಅಯಾನ್ ಬ್ಯಾಟರಿ ಸೆಲ್ಸ್ ಬಳಸಿ ಅಭಿವೃದ್ಧಿಪಡಿಸಲಾಗಿದೆ. 74.68ಕೆ.ಡಬ್ಲ್ಯೂ.ಎಚ್. ಬ್ಯಾಟರಿ ಸಾಮರ್ಥ್ಯದೊಂದಿಗೆ ಈ ಪ್ಯಾಕ್ 252 ಕೆ.ಡಬ್ಲ್ಯೂ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಒಂದು ಚಾರ್ಜ್ ನಲ್ಲಿ 580* ಕಿ.ಮೀ. ಚಾಲನೆಯ ಶ್ರೇಣಿ ಪೂರೈಸುತ್ತದೆ.
- ಈ ಆಲ್-ನ್ಯೂ ಇ.ಎಸ್.500ಇ ಐದು ಪ್ರೀಮಿಯಂ ಹೊರಾಂಗಣ ಬಣ್ಣದ ಆಯ್ಕೆಗಳು ಮತ್ತು ಎರಡು ಒಳಾಂಗಣ ಬಣ್ಣಗಳಲ್ಲಿ ಲಭ್ಯವಿದೆ
- ಉತ್ಪನ್ನದ ಬೆಲೆ ರೂ. xxxxxx ಎಕ್ಸ್-ಶೋರೂಂ ಹೊಂದಿದೆ
ಲೆಕ್ಸಸ್ ವಿದ್ಯುದೀಕರಣದ ಮೂಲಕ ತನ್ನ ಕೇಂದ್ರ ವಾಹನದ ಕಾರ್ಯಕ್ಷಮತೆ ಸುಧಾರಿ ಸುವ ಮೂಲಕ ವಿಶಿಷ್ಟ ಬ್ರಾಂಡ್ ಅನುಭವ ನೀಡಲು ಬದ್ಧವಾಗಿದೆ. ಈ ಚಳವಳಿಯು ಭವಿಷ್ಯದ ಚಲನೆಯನ್ನು ಮರು ವ್ಯಾಖ್ಯಾನಿಸುವ ಆಧುನಿಕ ಜೀವನಶೈಲಿಯನ್ನು ಸಮೃದ್ಧಗೊಳಿಸುವ ಸೇವೆಗಳಿಗೆ ಆದ್ಯತೆ ನೀಡುತ್ತದೆ.
ಲೆಕ್ಸಸ್ ನ ಬಹುಮಾರ್ಗದ ವಿಧಾನದಿಂದ ಮಾರ್ಗದರ್ಶಿತವಾದ ಆಲ್-ನ್ಯೂ ಇ.ಎಸ್. ಅನ್ನು ಎಕ್ಸ್ಪೀರಿಯೆನ್ಸ್ ಎಲಿಗೆನ್ಸ್ ಮತ್ತು ಎಲೆಕ್ಟ್ರಿಫೈಡ್ ಸೆಡಾನ್ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗಿದ್ದು ಈ ಮಾದರಿಯು ಪರಿಷ್ಕೃತ ಚಾಲನೆಯ ಅನುಭವ, ಮತ್ತಷ್ಟು ಉನ್ನತೀಕರಿಸಿದ ನಿಶ್ಯಬ್ದತೆ ಮತ್ತು ರೈಡ್ ಕಂಫರ್ಟ್ ನೀಡುವುದಲ್ಲದೆ ಅತಿಥಿಗಳ ಅಗತ್ಯಗಳಿಗೆ ಪೂರಕವಾಗಿರುತ್ತದೆ.
ಇಂಗಾಲದ ತಟಸ್ಥತೆಯ ಮಾರ್ಗದ ಅನ್ವೇಷಣೆಯಲ್ಲಿ ಬಿ.ಇ.ವಿ. ಮತ್ತು ಎಚ್.ಇ.ವಿ. ಎರಡನ್ನು ಚಲನೆಯ ಬೇಡಿಕೆಗಳ ವಿಸ್ತಾರ ಅಗತ್ಯಗಳನ್ನು ಪೂರೈಸಲು ಒದಗಿಸಲಾಗುತ್ತಿದೆ. ಇಂದು ಇ.ಎಸ್.ಬಿ.ಇ.ವಿ.ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಮತ್ತು ಇ.ಎಸ್.ಎಚ್.ಇ.ವಿ. ವಿವರಗಳನ್ನು ಈ ವರ್ಷದ ನಂತರದಲ್ಲಿ ಸೂಕ್ತ ಕಾಲದಲ್ಲಿ ಪ್ರಕಟಿಸ ಲಾಗುತ್ತದೆ.
ಈ ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದು ಲೆಕ್ಸಸ್ ಇಂಟರ್ನ್ಯಾಷನಲ್ ಚೀಫ್ ಎಂಜಿನಿಯರ್ ಕೊಹೀ ಚೈಶಿ, “ಇ.ಎಸ್. ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಲೆಕ್ಸಸ್ ಶ್ರೇಣಿಯ ಅತ್ಯಂತ ಜನಪ್ರಿಯ ಮಾಡೆಲ್ ಗಳಲ್ಲಿ ಒಂದಾಗಿದೆ ಮತ್ತು ನಾವು ಇಂದು ಆಲ್-ನ್ಯೂ ಇ.ಎಸ್.500ಇ ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಈ ಫೀಚರ್ ಸನ್ನದ್ಧ ವಾಹನವನ್ನು ಚಾಲನೆಯ ಕಾರ್ಯಕ್ಷಮತೆ, ಸೌಖ್ಯ ಮತ್ತು ಸುರಕ್ಷತೆಗೆ ಗೌರವ ನೀಡುವ ಹೊಸ ಇ.ಎಸ್. ಕುಟುಂಬದ ಭಾಗವಾಗಲು ಬಯಸುವ ಅತಿಥಿಗಳಿಗೆ ವಿನ್ಯಾಸಗೊಳಿಸಲಾಗಿದೆ.
ಈ ಸೆಡಾನ್ ಉನ್ನತ ಬಾಡಿ ರಿಜಿಡಿಟಿ ಮತ್ತು ಕಡಿಮೆ ಗುರುತ್ವಾಕರ್ಷಣೆಯಂತಹ ಪ್ರಮುಖ ಅನುಕೂಲಗಳನ್ನು ಹಪಂದಿದ್ದು ಅಸಾಧಾರಣ ರೈಡ್ ಕಂಫರ್ಟ್, ಸ್ಥಿರತೆಯ ನಿರ್ವಹಣೆ ಮತ್ತು ನಿಶ್ಯಬ್ದತೆ ನೀಡುತ್ತದೆ. ಫ್ಲೋಯಿಂಗ್ ಸಿಲ್ಹೌಟ್ ಮತ್ತು ವಿಶಾಲ ಒಳಾಂಗಣವನ್ನು ಆಲೋಚನಾಯುಕ್ತ ವಿನ್ಯಾಸ ಮತ್ತು ಸುಧಾರಿತ ಆವಿಷ್ಕಾರದ ಮೂಲಕ ಸಾಧಿಸಲಾಗಿದ್ದು ಹೊಸ ಇ.ಎಸ್. ಸೆಡಾನ್ ಅನುಭವವನ್ನು ಮತ್ತಷ್ಟು ಎತ್ತರಿಸುತ್ತದೆ.
ಹೊಸದಾಗಿ ಅಭಿವೃದ್ಧಿಪಡಿಸಲಾದ ಟಿ.ಎನ್.ಜಿ.ಎ ಜಿ.ಎ.-ಕೆ ಪ್ಲಾಟ್ ಫಾರಂನಲ್ಲಿ ನಿರ್ಮಿಸಲಾದ ಈ ಮಾದರಿಯು ಲೆಕ್ಸಸ್ ನ ವಿದ್ಯುದೀಕರಿಸಿದ ವಾಹನದ ಆಯ್ಕೆಗಳನ್ನು ವಿಸ್ತರಿಸುವುದೇ ಅಲ್ಲದೆ ಇಂಗಾಲದ ಹೊರಹೊಮ್ಮುವಿಕೆ ಕಡಿಮೆ ಮಾಡುತ್ತದೆ, ಅಲ್ಲದೆ ತಾಜಾ ಮತ್ತು ಸರಿಸಾಟಿ ಇರದ ಸೆಡಾನ್ ಅನುಭವ ನೀಡುತ್ತದೆ” ಎಂದರು.
ಈ ಸಂದರ್ಭ ಕುರಿತು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಹಿಕರು ಇಕ್ಯೂಚಿ, “ಆಲ್-ನ್ಯೂ ಲೆಕ್ಸಸ್ ಇ.ಎಸ್.500ಇ ಭಾರತದಲ್ಲಿ ಐಷಾರಾಮಿ ಮೊಬಿಲಿಟಿಯ ಭವಿಷ್ಯಕ್ಕೆ ನಮ್ಮ ಧ್ಯೇಯವನ್ನು ಪ್ರತಿನಿಧಿಸುತ್ತದೆ. ಭಾರತೀಯ ಮಾರುಕಟ್ಟೆಗೆ ನಮ್ಮ ಹೊಸ ಬಿ.ಇ.ವಿ. ಬಿಡುಗಡೆಯಿಂದ ನಾವು ವಿದ್ಯುದೀಕರಣದ ಬಹು ಮಾರ್ಗಗಳ ವಿಧಾನವನ್ನು ಮರು ವ್ಯಾಖ್ಯಾನಿಸುತ್ತಿದ್ದೇವೆ ಮತ್ತು ದೇಶದಲ್ಲಿ ಸುಸ್ಥಿರ ಮೊಬಿಲಿಟಿ ಸುಧಾರಿಸಲು ನಮ್ಮ ಬದ್ಧತೆಯನ್ನು ಮರು ದೃಢೀಕರಿಸುತ್ತಿದ್ದೇವೆ.
ಪರಿಷ್ಕರಣೆ ಮತ್ತು ಜಪಾನಿನ ಸ್ಫೂರ್ತಿಯ ಒಮೊಟೆನಷಿಯ ಆಳವಾದ ಅತಿಥಿ-ಕೇಂದ್ರಿತ ಮೌಲ್ಯಗಳಿಗೆ ಬದ್ಧವಾಗಿರುವ ಇ.ಎಸ್. ತಡೆರಹಿತವಾಗಿ ಐಷಾರಾಮಿಕ ಸೌಖ್ಯ ಮತ್ತು ಕಾರ್ಯಕ್ಷಮತೆಯನ್ನು ಸಂಯೋಜಿಸುತ್ತದೆ. ಭಾರತವು ಹೆಚ್ಚು ಸುಸ್ಥಿರ ಮೊಬಿಲಿಟಿ ಇಕೊಸಿಸ್ಟಂನತ್ತ ಹೊರಳುತ್ತಿರುವಂತೆ ನಾವು ನಮ್ಮ ಅತಿಥಿಗಳಿಗೆ ಐಷಾರಾಮ ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ಪಾರಿಸರಿಕ ಅರಿವನ್ನು ಸಾಮರಸ್ಯಗೊಳಿಸುತ್ತಿದ್ದೇವೆ. ಹೊಸ ಇ.ಎಸ್. ಬ್ರಾಂಡ್ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಮತ್ತು ಅತಿಥಿಯ ಸಂತೋಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಲೆಕ್ಸಸ್ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ” ಎಂದರು.
1.ಆಲ್-ನ್ಯೂ ಇ.ಎಸ್. ಪ್ರಮುಖ ವಿಶೇಷತೆಗಳು
ಕಾರ್ಯಕ್ಷಮತೆಯ ಅಂತಃಸ್ಸತ್ವದ ಅನ್ವೇಷಣೆ. ಚಲನಶೀಲ ಕಾರ್ಯಕ್ಷಮತೆ ಮತ್ತು ಅನನ್ಯ ಪ್ರಮಾಣಗಳು
ಹೊಸದಾಗಿ ಪರಿಷ್ಕರಿಸಿದ ಸೆಡಾನ್ ಪ್ರಮಾಣಗಳು ಇ.ಎಸ್.ನ ವಿಶೇಷ ಗುಣವನ್ನು ಉನ್ನತೀ ಕರಿಸುವುದಲ್ಲದೆ ಬಹು ಮಾರ್ಗ ವಿಧಾನವನ್ನು ಅಪ್ಪಿಕೊಳ್ಳುತ್ತವೆ
ಈ ಚಲನಶೀಲ ಮಾದರಿಯನ್ನು ಏರೋಡೈನಮಿಕ್ ಎಕ್ಸೆಲೆನ್ಸ್ ಗೆ ವಿನ್ಯಾಸಗೊಳಿಸ ಲಾಗಿದ್ದು ಚಲನಶೀಲ ಕಾರ್ಯಕ್ಷಮತೆಯ ಸದೃಢ ಭಾವನೆ ಅಭಿವ್ಯಕ್ತಿಸುತ್ತದೆ
ಸ್ವಚ್ಛ, ಕನಿಷ್ಠಾತ್ಮಕ ಒಳಾಂಗಣವು ಮುಕ್ತ, ವಿಶಾಲ ಪರಿಸರವು ಅದ್ಭುತ ನೋಟ ನೀಡುತ್ತದೆ
ವಿಶೇಷ ಪ್ಲಾಟ್ ಫಾರಂ ವಿನ್ಯಾಸ ಮತ್ತು ಉನ್ನತೀಕರಿಸಿದ ರಚನಾತ್ಮಕ ಬಿಗಿತದ ಮೂಲಕ ಅಸಾಧಾರಣ ರೈಡ್ ಗುಣಮಟ್ಟ ನೀಡುತ್ತದೆ
ಸುಧಾರಿತ ತಂತ್ರಜ್ಞಾನಗಳು ಚಾಲನೆಯ ಕಾರ್ಯಕ್ಷಮತೆಯನ್ನು ಚಾಲಕನ ಉದ್ದೇಶಕ್ಕೆ ನಿಖರವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ.
ಸುಧಾರಿತ ತಂತ್ರಜ್ಞಾನಗಳು ಜೀವನಕ್ಕೆ ಲೆಕ್ಸಸ್ ಅನುಭವ ತರುತ್ತದೆ..
- ವಿಶ್ವದ ಮೊದಲ * ರೆಸ್ಪಾನ್ಸಿವ್ ಹಿಡನ್ ಸ್ವಿಚ್‌ಗಳು ಸಂಸ್ಕರಿಸಿದ ಒಳಾಂಗಣ ವಿನ್ಯಾಸದೊಂದಿಗೆ ಕಾರ್ಯವನ್ನು ಸರಾಗವಾಗಿ ಸಂಯೋಜಿಸುವ ಮೂಲಕ ಬಳಕೆ ಮತ್ತು ಸೌಂದರ್ಯದ ಸಾಮರಸ್ಯ ಎರಡನ್ನೂ ಹೆಚ್ಚಿಸುತ್ತವೆ.
ಬಳಕೆದಾರರೊಂದಿಗೆ ಸಂಪರ್ಕ ಸಾಧಿಸುವ 14-ಇಂಚಿನ ಡಿಸ್ಪ್ಲೇ ಹೊಂದಿರುವ ಹೊಸ ತಲೆಮಾರಿನ ಮಲ್ಟಿಮೀಡಿಯಾ** ವ್ಯವಸ್ಥೆಯು ಚಲನಶೀಲತೆಯ ಮೂಲಕ ಸ್ವಾತಂತ್ರ್ಯ ಮತ್ತು ಸ್ಫೂರ್ತಿಯನ್ನು ಉಂಟುಮಾಡುತ್ತದೆ. ಇದು ಪರಿಣಾಮಕಾರಿ, ಅರ್ಥಗರ್ಭಿತ ಮತ್ತು ನಿಖರವಾಗಿದೆ. ತ್ವರಿತ ಪ್ರತಿಕ್ರಿಯೆ ಮತ್ತು ಸುಲಭ ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ, ಇದು ಅತಿಥಿಗಳ ನಿರೀಕ್ಷೆಗಳನ್ನು ಅರ್ಥಮಾಡಿ ಕೊಳ್ಳುತ್ತದೆ ಮತ್ತು ಪ್ರತಿ ಪ್ರಯಾಣಕ್ಕೂ ಬಳಕೆದಾರ-ಕೇಂದ್ರಿತ ವಿನ್ಯಾಸವನ್ನು ನೀಡುತ್ತದೆ.
- ಆತ್ಮವಿಶ್ವಾಸ ಉತ್ತೇಜಿಸುವ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳು.
- ಹೊಸ ತಲೆಮಾರಿನ ಲೆಕ್ಸಸ್ ಸುರಕ್ಷತಾ ವ್ಯವಸ್ಥೆ+: ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳ ಸಮಗ್ರ ಸೂಟ್. ಸುಧಾರಿತ ವೈಶಿಷ್ಟ್ಯಗಳ ಮೂಲಕ ಸುರಕ್ಷತೆ ಮತ್ತು ಸೌಕರ್ಯವನ್ನು ಅನುಸರಿಸುತ್ತದೆ.
[ಇ.ಎಸ್. ಪ್ರಮುಖ ವಿಶೇಷತೆಗಳು]
- ಬಿ.ಇ.ವಿ.
- ES500e [AWD]
ಒಟ್ಟು ಉದ್ದ 5145^ ಎಂಎಂ
ಒಟ್ಟು ಅಗಲ 1920 ಎಂಎಂ
ಒಟ್ಟಾರೆ ಎತ್ತರ 1575 ಎಂಎಂ
ವ್ಹೀಲ್ ಬೇಸ್ 2950 ಎಂಎಂ
ಟೈರ್ ಗಾತ್ರ 235/45R21
ಸಿಸ್ಟಂ ಔಟ್ ಪುಟ್ ಕೆ.ಡಬ್ಲ್ಯೂ
- 252
ಆಕ್ಸಲರೇಷನ್ ಗಂಟೆಗೆ 0-100 ಕಿ.ಮೀ.
- 5.5
ಕ್ರೂಸಿಂಗ್ ಶ್ರೇಣಿ 580 *ಕಿ.ಮೀ.
ಚಾರ್ಜಿಂಗ್ ಸಮಯ (150 kW: 10-80%) 28 ನಿಮಿಷಗಳ
ಹೊಸ ಇ.ಎಸ್. ಹೊಸ ಮೌಲ್ಯ ಸೃಷ್ಟಿಸಲು ಕ್ಲೀನ್ ಟೆಕ್ x ಎಲಿಗನ್ಸ್ ವಿನ್ಯಾಸ ಪರಿಕಲ್ಪನೆ ಯನ್ನು ಪರಿಚಯಿಸುತ್ತದೆ. ಇದರ ವಿಶಿಷ್ಟ ಸೊಬಗನ್ನು ಮತ್ತಷ್ಟು ಪರಿಷ್ಕರಿಸಲಾಗಿದೆ, ಸರಳ, ಸ್ವಚ್ಛ ಸೌಂದರ್ಯವನ್ನು ಸಾಧಿಸಲು ಕ್ರಿಯಾತ್ಮಕ ಮತ್ತು ಭಾವನಾತ್ಮಕ ಮೌಲ್ಯಗಳನ್ನು ಮಿಶ್ರಣ ಮಾಡಲಾಗಿದೆ.
ಹೊರಭಾಗವು ಮುಂದಿನ ಪೀಳಿಗೆಯ ಬಿಇವಿ ಪರಿಕಲ್ಪನೆ ಎಲ್.ಫ್.ಝಡ್.ಸಿ.ಯ ವಿನ್ಯಾಸ ವಿಷಯವಾದ ಪ್ರೊವೊಕೇಟಿವ್ ಸಿಂಪ್ಲಿಸಿಟಿಯಿಂದ ಸ್ಫೂರ್ತಿ ಪಡೆಯುತ್ತದೆ, ಇದು ಸಂಸ್ಕರಿಸಿದ ಕನಿಷ್ಠೀಯತಾವಾದದ ಮೂಲಕ ದಿಟ್ಟ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಒಳಗೆ, ಹೊಸ ಇ.ಎಸ್. ಸಮಯವು ಸಾಕಾರಗೊಳ್ಳುತ್ತದೆ.ಕಾಲಕ್ರಮೇಣ ವಿಕಸನಗೊಳ್ಳುವ ಸೌಂದರ್ಯವನ್ನು ಸಂಭ್ರಮಿಸುವ ಲೆಕ್ಸಸ್‌ನ ಟೈಮ್ ಇನ್ ಡಿಸೈನ್ ತತ್ವಶಾಸ್ತ್ರದಿಂದ ಪ್ರೇರಿತವಾದ ಐಷಾರಾಮಿ ಪರಿಕಲ್ಪನೆ. ಒಳಾಂಗಣವನ್ನು ವಾಸದ ಕೋಣೆಯಂತೆ ಆಹ್ವಾನಿಸುವ ಮತ್ತು ವಿಶ್ರಾಂತಿ ನೀಡುವ ರೀತಿಯಲ್ಲಿ ರಚಿಸಲಾಗಿದೆ, ಇದು ಕ್ಯಾಬಿನ್‌ನಲ್ಲಿ ತಲ್ಲೀನಗೊಳಿಸುವ ಅನುಭವವನ್ನು ಸೃಷ್ಟಿಸುತ್ತದೆ.
3.ಮುಖ್ಯ ಒಳಾಂಗಣ ವಿಶೇಷತೆಗಳು
ಹೊಸ ಸೆಡಾನ್ ಪ್ರಮಾಣಗಳು ಮಲ್ಟಿ-ಪಾಥ್ ವೇ ವಿಧಾನ ಬಳಸಿ ಇ.ಎಸ್. ಗುರುತನ್ನು ಉನ್ನತೀಕರಿಸುತ್ತವೆ
ಹೊಸ ತಲೆಮಾರಿನ ಸ್ಪಿಂಡಲ್ ಬಾಡಿ, ಶಕ್ತಿಯುತ ನಿಲುವು ಮತ್ತು ಸಮತೋಲನದ ಪ್ರಮಾಣಗಳಿಂದ ಪ್ರವೇಶ ಮತ್ತು ನಿರ್ಗಮನವನ್ನು ಅತ್ಯಂತ ಸುಲಭವಾಗಿಸುತ್ತದೆ.
ಟ್ವಿನ್ ಎಲ್- ಸಿಗ್ನೇಚರ್ ಲ್ಯಾಂಪ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಇನ್ವರ್ಡ್-ಫೇಸಿಂಗ್ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಔಟ್ವರ್ಡ್-ಫೇಸಿಂಗ್ ಟರ್ನ್ ಸಿಗ್ನಲ್ಸ್ ಲೆಕ್ಸಸ್ ನ ವಿಶಿಷ್ಟತೆ ಯನ್ನು ಉನ್ನತೀಕರಿಸುವ ಡಬಲ್ ಸಿಗ್ನೇಚರ್ ತೋರುತ್ತದೆ, ಅಲ್ಲದೆ ಲೆಕ್ಸಸ್ ನ ವಿಶಿಷ್ಟ ಗುರುತನ್ನು ಎತ್ತಿ ತೋರುವುದಲ್ಲದೆ ಟರ್ನ್ ಇಂಡಿಕೇಟರ್ ಗಳ ವಿಸಿಬಿಲಿಟಿ ಮತ್ತು ಕಾರ್ಯಕ್ಷಮತೆ ಸುಧಾರಿಸುತ್ತದೆ.
ಪರಿಷ್ಕರಿಸಿದ ಏರೊಡೈನಮಿಕ್ಸ್ ಮತ್ತು ರಿಯರ್ ವಿನ್ಯಾಸವು ಕಡಿಮೆ ಗುರುತ್ವಾಕರ್ಷಣೆ ಮತ್ತು ಚಾಲನೆಯ ಕಾರ್ಯಕ್ಷಮತೆ ಬಿಂಬಿಸುತ್ತದೆ.
ಹೊಸ ಇ.ಎಸ್. ವಿಶೇಷ ಸೊಗಸು ತೋರುತ್ತಿದ್ದು ಇದು ಹಿಂಬದಿಯತ್ತ ಬಾಡಿ ಟೇಪರಿಂಗ್ ಮೂಲಕ ಕಡಿಮೆ ಗುರುತ್ವಾಕರ್ಷಣೆಯ ನಿಲುವು ಸೃಷ್ಟಿಸುತ್ತದೆ, ಇದರಿಂದ ಚಲನಶೀಲ ಕಾರ್ಯಕ್ಷಮತೆ ಸೃಷ್ಟಿಸುತ್ತದೆ.
ಈ ಹಿಂಬದಿಯು ಹೊಸ ಡಿಸೈನ್ ಐಕಾನ್ ರಿಯರ್ ಎಲ್-ಸಿಗ್ನೇಚರ್ ಲ್ಯಾಂಪ್ ಹೊಂದಿದ್ದು ಇದನ್ನು ಲೆಕ್ಸಸ್ ಎಂದು ತಕ್ಷಣವೇ ಗುರುತಿಸಬಹುದು. ಬೆಳಕಿನ ಲೆಕ್ಸಸ್ ಲೊಗೊ ಒಳಗೊಂಡ ಸಿಂಗಲ್ ಲೈಟ್ ಬಾರ್ ಟೈಲ್ ಲೈಟ್ ಮತ್ತು ಸ್ಪಾಟ್ ಲೈಟ್ ಕಾರ್ಯ ವನ್ನು ಕ್ರೋಢೀಕರಿಸುತ್ತದೆ.
ಹೊರಾಂಗಣ ಬಣ್ಣಗಳನ್ನು ಪ್ರತಿನಿತ್ಯದ ಜೀವನಶೈಲಿಗೆ ವಿನ್ಯಾಸಗೊಳಿಸಲಾಗಿದೆ.
ಈ ವಾಹನವನ್ನ ವೈಟ್ ನೋವಾ, ಸೋನಿಕ್ ಟೈಟಾನಿಯಂ, ಗ್ರಾಫೈಟ್ ಬ್ಲಾಕ್, ಸೋನಿಕ್ ಕಾಪರ್ ಮತ್ತು ಸೌ ಎಂಬ ಐದು ಹೊರಾಂಗಣ ಬಣ್ಣಗಳನ್ನು ಒದಗಿಸಲಾಗುತ್ತಿದ್ದು ಅದನ್ನು ವಿಸ್ತಾರ ಶ್ರೇಣಿಯ ಜೀವನಶೈಲಿಗಳಿಗೆ ವಿನ್ಯಾಸಗೊಳಿಸಲಾಗಿದೆ.
4.ಪ್ರಮುಖ ಒಳಾಂಗಣದ ವಿಶೇಷತೆಗಳು
ಸರಳ ಮತ್ತು ಸ್ವಚ್ಛ ಒಳಾಂಗಣವು ಮುಕ್ತತೆ ಮತ್ತು ವಿಸ್ತಾರ ವಿಸಿಬಿಲಿಟಿಯ ಭಾವ ನೀಡುತ್ತದೆ. ಲೆಕ್ಸಸ್ ಸರಳ, ಸ್ವಚ್ಛ ಒಳಾಂಗಣಕ್ಕೆ ಮುಕ್ತ, ವಿಸ್ತಾರ ಮೇಲ್ಭಾಗವನ್ನು ಉನ್ನತ ವಿಸಿಬಿಲಿಟಿಯನ್ನು ನೀಡುತ್ತದೆ. ಮೈಕ್ರೊ ಜಿಯೊ ವಿಶೇಷತೆಗಳು ಫೈನ್ ಜಿಯೊಮೆಟ್ರಿಕ್ ಪ್ಯಾಟ್ರನ್ಸ್ ಪರಿಷ್ಕರಿಸಿದ, ಆಧುನಿಕ ಫೀಲ್ ನೀಡುತ್ತದೆ. ಲೆಕ್ಸಸ್ ಮೊಟ್ಟಮೊದಲ ಬಾರಿಗೆ ಸರ್ಫೇಸ್-ಇಲ್ಯುಮಿನೇಟೆಡ್ ಡೋರ್ ಟ್ರಿಮ್ ಪರಿಚಯಿಸಿದ್ದು ಅದು ಒಳಾಂಗಣ ಬೆಳಕಿಗೆ ಹೊಂದಿಕೊಳ್ಳುತ್ತದೆ. ಮಾರ್ಕ್ ಲೆನಿವ್ಸನ್ ಸರೌಂಡ್ ಔಂಡ್ ಸಿಸ್ಟಂ ಈ ಅನುಭವವನ್ನು ಸ್ಪೀಕರ್ ಸ್ಥಳ ಮತ್ತು ತಲ್ಲೀನಗೊಳಿಸುವ 3ಡಿ ಸೌಂಡ್ ಮೂಲಕ ಪೂರ್ಣಗೊಳಿಸುತ್ತದೆ, ಇದು ವಾತಾವರಣದ ಬೆಳಕಿಗೆ ಹೊಂದಿಕೊಳ್ಳುತ್ತದೆ.
ಹೊಸ ಇ.ಎಸ್. ಕಾಕ್ ಪಿಟ್ ವಿಶಿಷ್ಟವಾದ 12.3-ಇಂಚು ಡಿಜಿಟಲ್ ಡಿಸ್ಪ್ಲೇ ಹೊಂದಿದ್ದು ಅದು ಮೃದುವಾದ ಕಣ್ಣಿನ ಚಲನೆ ಮತ್ತು ಮುಕ್ತ, ವಿಶಾಲತೆಯ ಭಾವನೆ ನೀಡುತ್ತದೆ. ಈ ಸಂಯೋಜನೆಯು ವಿಶಿಷ್ಟ ವಸ್ತುಗಳು ಮತ್ತು ವಾತಾವರಣದ ಬೆಳಕಿನ ಸಂಯೋಜನೆ ಯಂದ ಲೆಕ್ಸಸ್ ಕಾಕ್ ಪಿಟ್ ಅಭಿವ್ಯಕ್ತಿಯನ್ನು ವಿಸ್ತರಿಸುತ್ತದೆ. ಈ ಒಳಾಂಗಣ ಬಣ್ಣದ ಸರಣಿಯಲ್ಲಿ ಹೇಝೆಲ್ ಮತ್ತು ಬಿಳಿ ಎರಡು ಆಯ್ಕೆಗಳಿದ್ದು ಅವು ಸುಧಾರಿತ ಮತ್ತು ಪ್ರೀಮಿಯಂ ಭಾವ ನೀಡುತ್ತವೆ.
5.ನಿಶ್ಯಬ್ದತೆ ಮತ್ತು ಸೌಖ್ಯ. ಚಾಲನೆಯ ಡೈನಮಿಕ್ಸ್ ವಿಕಾಸ
“ಎಲ್ಲ ಸೀಟುಗಳಿಗೆ “ಸುಖಕರ ಸಮಯ” ನೀಡುವ ಪರಿಕಲ್ಪನೆ ಹೊಂದಿದ ಇ.ಎಸ್. ಅನ್ನು ಪ್ರತಿ ಪ್ರಯಾಣಿಕರಿಗೂ ವಿರಾಮದ ಮತ್ತು ಪರಿಷ್ಕರಿಸಿದ ಅನುಭವ ನೀಡಲು ವಿನ್ಯಾಸ ಗೊಳಿಸಲಾಗಿದೆ. ತನ್ನ ನಿಶ್ಯಬ್ದತೆಯ ಸಾಮರ್ಥ್ಯಗಳು ಮತ್ತು ರೈಡ್ ಕಂಫರ್ಟ್ ಮೇಲೆ ನಿರ್ಮಿಸಲಾದ ಈ ಹೊಚ್ಚಹೊಸ ಮಾದರಿಯು ಒಟ್ಟಾರೆ ಚಾಲನೆಯ ರಿಫೈನ್ಮೆಂಟ್ ಅನ್ನು ಉನ್ನತೀಕರಿಸುತ್ತದೆ.
ಹೊಸ ಇ.ಎಸ್. ಅನ್ನು ಟಿ.ಎನ್.ಜಿ.ಎ ಜಿ.ಎ.-ಕೆ ಪ್ಲಾಟ್ ಫಾರಂ ಮರು ದೃಢೀಕರಿಸಿದ ಅತ್ಯಂತ ಕಠಿಣ ರಚನೆ ಹೊಂದಿದ್ದು ಅದು ಕಂಪನಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ, ಇದರಿಂದ ಸ್ಟೀರಿಂಗ್ ಪ್ರತಿಕ್ರಿಯೆ, ಆಕ್ಸಲರೇಷನ್ ಮತ್ತು ಒಟ್ಟಾರೆ ಡ್ರೈವಿಂಗ್ ಡೈನಮಿಕ್ಸ್ ಸುಧಾರಣೆ ನೀಡುತ್ತದೆ.
ಮುಂಬದಿಯ ಸಸ್ಪೆನ್ಷನ್ ಮ್ಯಾಕ್ ಫರ್ಸನ್ ಸ್ಟ್ರಟ್ ಬಳಸುತ್ತದೆ, ಅಲ್ಲದೆ ಮಲ್ಟಿ-ಲಿಂಕ್ ರಿಯರ್ ಸಸ್ಪೆನ್ಷನ್ ಮೊಟ್ಟಮೊದಲ ಬಾರಿಗೆ ಇ.ಎಸ್.ನಲ್ಲಿ ಪರಿಚಯಿಸಲಾಗಿದ್ದು ಅದು ರಸ್ತೆಯ ಮೇಲೆ ಶಕ್ತಿಯ ಪೂರೈಕೆ ಹೆಚ್ಚಿಸುತ್ತದೆ ಮತ್ತು ಮೃದುವಾದ ವಾಹನದ ಪೋಸ್ಚರ್ ನಿಯಂತ್ರಣ ನೀಡುತ್ತದೆ.
ಡೈರೆಕ್ಟ್4 ಟ್ರಾಕ್ಷನ್ ಮತ್ತು ನಿರ್ವಹಣೆಯ ಸ್ಥಿರತೆಯನ್ನು ಹಲವಾರು ರಸ್ತೆಯ ಪರಿಸ್ಥಿತಿ ಗಳಲ್ಲಿ ಸುಧಾರಿಸುತ್ತದೆ. ಮುಂಬದಿ ಮತ್ತು ಹಿಬದಿಯ ಇಆಕ್ಸಲ್ ಗಳಿಗೆ ಸುಧಾರಿತ ಎ.ಡಬ್ಲ್ಯೂ.ಡಿ. ನಿಯಂತ್ರಣ ಅಳವಡಿಸಿದ ಈ ಸಿಸ್ಟಂ ವಿದ್ಯುತ್ ದಕ್‍ಷತೆಯನ್ನು ಹೆಚ್ಚಿಸು ವುದಲ್ಲದೆ ವಿಶ್ವಾಸದ ಚಾಲನೆಯ ಕಾರ್ಯಕಷಮತೆ ಕಾಪಾಡುತ್ತದೆ.
- ಜೀವನಕ್ಕೆ ಲೆಕ್ಸಸ್ ಹೊಸ ಅತ್ಯಾಧುನಿಕ ತಂತ್ರಜ್ಞಾನ ತರುತ್ತದೆ
ಹೊಸದಾಗಿ ಅಭಿವೃದ್ಧಿಪಡಿಸಿದ ರೆಸ್ಪಾನ್ಸಿವ್ ಹಿಡನ್ ಸ್ವಿಚ್ ಗಳು ಸ್ಟೀರಿಂಗ್ ವ್ಹೀಲ್ ಗೆ ಮತ್ತು ಇನ್ಸ್ಟ್ರುಮೆಂಟ್ ಪ್ಯಾನೆಲ್ ಗೆ ಅಳವಡಿಸಲಾಗಿದ್ದು ಅವು ಅಸಾಧಾರಣ ಕಾರ್ಯ ಕ್ಷಮತೆ ಮತ್ತು ಬಳಸಬಲ್ಲತೆ ನೀಡುವ ಮೂಲಕ ಸ್ವಚ್ಛ, ಕನಿಷ್ಠಾತ್ಮಕ ಕ್ಯಾಬಿನ್ ಪರಿಸರ ನೀಡುತ್ತದೆ.
- ಆಲ್-ನ್ಯೂ ಇ.ಎಸ್.500ಇ ಹೊಸ ತಲೆಮಾರಿನ ಲೆಕ್ಸಸ್ ಸೇಫ್ಟಿ ಸಿಸ್ಟಮ್+ ಅನ್ನು ಹೊಂದಿದ್ದು, ಚಾಲಕ ಜಾಗೃತಿ ಮತ್ತು ಪ್ರಯಾಣಿಕರ ರಕ್ಷಣೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಚಾಲಕ-ಸಹಾಯ ತಂತ್ರಜ್ಞಾನಗಳನ್ನು ನೀಡುತ್ತದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಪ್ರಿ-ಕೊಲಿಷನ್ ಸಿಸ್ಟಮ್ (ಪಿಸಿಎಸ್), ಆಟೋ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಲೇನ್ ಡಿಪಾರ್ಚರ್ ಅಲರ್ಟ್ (ಎಲ್.ಡಿ.ಎ), ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ (ಡಿ.ಆರ್.ಸಿ.ಸಿ.), ಲೇನ್ ಟ್ರೇಸಿಂಗ್ ಅಸಿಸ್ಟ್ (ಎಲ್.ಟಿ.ಎ), ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್ (ಎ.ಎಚ್.ಎಸ್) ಮತ್ತು ಡ್ರೈವ್ ಮಾನಿಟರಿಂಗ್ ಕ್ಯಾಮೆರಾ (ಡಿ.ಎಂ.ಸಿ.) ಸೇರಿವೆ.
ಪಕ್ಕದಲ್ಲಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚಲು ಬ್ಲೈಂಡ್ ಸ್ಪಾಟ್ ಮಾನಿಟರ್ (ಬಿ.ಎಸ್.ಎಂ) ಅನ್ನು ಅಳವಡಿಸಿಕೊಳ್ಳಲಾಗಿದೆ. ಪನೋರಮಿಕ್ ವ್ಯೂ ಮಾನಿಟರ್ ಸುತ್ತಮುತ್ತಲಿನ ಪ್ರದೇಶದ ಚಾಲಕ ಎಚ್ಚರಿಸಲು ಬೆಂಬಲಿಸಲು ಹೊಸದಾಗಿ ಅಭಿವೃದ್ಧಿ ಪಡಿಸಿದ 3ಇ ನೋಟ ಒಳಗೊಂಡಿದೆ.
8.ತಡೆರಹಿತ ಸೌಕರ್ಯ ಮತ್ತು ಅನುಕೂಲತೆ
ಹೊಸ ಇ.ಎಸ್.500ಇ ವಾಹನವು ಸುಧಾರಿತ ಒಟ್ಟಾರೆ ಮಾಲೀಕತ್ವದ ಅನುಭವದೊಂದಿಗೆ ನಿಯಂತ್ರಣ, ಅನುಕೂಲತೆ ಮತ್ತು ಮನಸ್ಸಿನ ಶಾಂತಿಯನ್ನು ನೀಡಲು ವಿನ್ಯಾಸಗೊಳಿಸ ಲಾದ ಸಂಪರ್ಕಿತ ವೈಶಿಷ್ಟ್ಯಗಳ ಸಮಗ್ರ ಸೂಟ್ ನೊಂದಿಗೆ ಸಜ್ಜುಗೊಂಡಿದೆ. ಅತಿಥಿಗಳು ಲೆಕ್ಸಸ್ ಇಂಡಿಯಾ ಅಪ್ಲಿಕೇಶನ್ ಮೂಲಕ ಬ್ಯಾಟರಿ ಸ್ಥಿತಿಯನ್ನು ದೂರದಿಂದಲೇ ಗಮನಿಸಬಹುದು. ಚಾಲನಾ ಶ್ರೇಣಿಯನ್ನು ಪರಿಶೀಲಿಸಬಹುದು, ಚಾರ್ಜಿಂಗ್ ಅವಧಿ ನಿಗದಿಪಡಿಸಬಹುದು ಮತ್ತು ಚಾರ್ಜಿಂಗ್ ಇತಿಹಾಸವನ್ನು ಗಮನಿಸಬಹುದು.
ಸಂಪರ್ಕಿತ ವ್ಯವಸ್ಥೆಯು ಗ್ರಾಹಕರಿಗೆ ಹವಾನಿಯಂತ್ರಣ, ಸೀಟ್ ಹೀಟಿಂಗ್ ಮತ್ತು ಸೀಟ್ ವೆಂಟಿಲೇಷನ್ ಸೇರಿದಂತೆ ಕ್ಯಾಬಿನ್ ಹವಾಮಾನ ನಿಗದಿಪಡಿಸಲು ಮತ್ತು ದೂರದಿಂದಲೇ ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ವಾಹನವು ಪ್ರತಿ ಚಾಲನೆಗೆ ಮೊದಲು ಆರಾಮದಾಯಕ ಮತ್ತು ಸಜ್ಜಾಗಿರುತ್ತದೆ. ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ವಾಚ್ ಅಳವಡಿಕೆ ಪ್ರಮುಖ ಕಾರ್ಯಗಳಿಗೆ ತಡೆರಹಿತ ಪ್ರವೇಶವನ್ನು ಖಚಿತಪಡಿಸುತ್ತದೆ. ಲೈವ್ ಕಾರ್ ಟ್ರ್ಯಾಕಿಂಗ್ ಮತ್ತು ಸಂಯೋಜಿತ ತುರ್ತು ಕರೆ ವಿಶೇಷತೆಯು ಅಗತ್ಯವಿದ್ದಾಗ ಹೆಚ್ಚುವರಿ ಭರವಸೆ ಮತ್ತು ಸುರಕ್ಷತೆಯ ಬೆಂಬಲವನ್ನು ಒದಗಿಸುತ್ತದೆ.
ಈ ವಾಹನಗಳು ನಾಲ್ಕು ಬಾಗಿಲುಗಳಿಗೆ ಆಟೋ ಮತ್ತು ಈಸಿ ಡೋರ್ ಕ್ಲೋಷರ್ ಮತ್ತು ಪವರ್ ಟ್ರಕ್ ಲಿಡ್ ನೊಂದಿಗೆ ಬರುತ್ತವೆ.
ಮನಃಶಾಂತಿ: ಸಮಗ್ರ ಮೌಲ್ಯವರ್ಧಿತ ಸೇವಾ ಕೊಡುಗೆಗಳು
ಲೆಕ್ಸಸ್ ಇಂಡಿಯಾ ಉನ್ನತೀಕರಿಸಿದ ರೋಡ್ ಸೈಡ್ ಅಸಿಸ್ಟೆನ್ಸ್ ಅಲ್ಲದೆ ಚಾರ್ಜಿಂಗ್ ಆಯ್ಕೆಗಳನ್ನು ನೀಡುತ್ತದೆ. ವಾಹನವು ಎಸಿ ಮತ್ತು ಡಿಸಿ ವೇಗದ ಚಾರ್ಜಿಂಗ್ ಎರಡಕ್ಕೂ ಹೊಂದಿಕೊಳ್ಳುತ್ತದೆ, ನಗರ ಪ್ರಯಾಣ ಮತ್ತು ದೀರ್ಘ ಪ್ರಯಾಣ ಎರಡಕ್ಕೂ ಸೂಕ್ತವಾದ ಅನುಕೂಲಕರ ಚಾರ್ಜಿಂಗ್ ಪರಿಹಾರಗಳನ್ನು ಒದಗಿಸುತ್ತದೆ. ವಾಹನವು 2.8 ಕೆ.ಡಬ್ಲ್ಯೂ ಪೋರ್ಟಬಲ್ ಚಾರ್ಜರ್ ಮತ್ತು 11- ಕೆ.ಡಬ್ಲ್ಯೂ ಹೋಮ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದು ಟೋವಿಂಗ್, ಟ್ಯಾಕ್ಸಿ ಸರ್ವೀಸ್ ಮತ್ತು ರಿಪೇಟ್ರಿಯೇಷನ್, ಆನ್ಸೈಟ್ ಮೊಬೈಲ್ ಚಾರ್ಜಿಂಗ್ ಮತ್ತು ಹತ್ತಿರ ಡೀಲರ್ ಶಿಪ್ ಅಥವಾ ಚಾರ್ಜಿಂಗ್ ಸ್ಟೇಷನ್ ಗೆ ಟೌವಿಂಗ್ ಮತ್ತು ಟ್ಯಾಕ್ಸಿ ಅನ್ನು ಒಳಗೊಂಡಿರುವ 5 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ (ಆರ್.ಎಸ್.ಎ) ಪ್ಯಾಕೇಜ್ ಅನ್ನು ಸಹ ಒಳಗೊಂಡಿದೆ,ಇದರೊಂದಿಗೆ
ಇದರ ಜೊತೆಗೆ, ಆಲ್-ನ್ಯೂ ಇ.ಎಸ್.500ಇ 8-ವರ್ಷ/200,000 ಕಿಮೀ ವಾಹನ ಮತ್ತು ಬ್ಯಾಟರಿ ವಾರೆಂಟೀ** ಮೂಲಕ ಉನ್ನತೀಕರಿಸಿದ ಮಾಲೀಕತ್ವದ ಅನುಭವವನ್ನು ನೀಡುತ್ತದೆ, ಇದು ಭಾರತೀಯ ಐಷಾರಾಮಿ ಕಾರು ಉದ್ಯಮದಲ್ಲಿ ಸಂಪೂರ್ಣ ಮನಃಶಾಂತಿಯನ್ನು ನೀಡುವುದಾಗಿದೆ. ಇದಲ್ಲದೆ, ಕಡಿಮೆ ಇ.ಎಂ.ಐ ಗಳು ಮತ್ತು ಖಾತರಿಪಡಿಸಿದ ಗ್ಯಾರೆಂಟೀಡ್ ಫ್ಯೂಚರ್ ರೆಸಿಡೆಂಟ್ ವ್ಯಾಲ್ಯೂವನ್ನು ಖಚಿತವಾದ ಬೈ ಬ್ಯಾಕ್ ಪ್ರೋಗ್ರಾಂ ಅನ್ನು ಪ್ರೀಮಿಯಂ ಮಾಲೀಕತ್ವದ ಅನುಭವದೊಂದಿಗೆ ಆರ್ಥಿಕ ನಮ್ಯತೆಯನ್ನು ಬಯಸುವ ಅತಿಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕಂಫರ್ಟ್ ಮತ್ತು ರಿಲ್ಯಾಕ್ಸ್ ಆಯ್ಕೆಗಳೊಂದಿಗೆ ಬರುವ ಅನನ್ಯ ಲೆಕ್ಸಸ್ ಲಕ್ಸರಿ ಕೇರ್ ಸೇವಾ ಪ್ಯಾಕೇಜ್‌ಗಳು 3 ವರ್ಷ/40,000 ಕಿಮೀ, 5 ವರ್ಷ/60,000 ಕಿಮೀ, ಅಥವಾ 8 ವರ್ಷ/90,000 ಕಿಮೀಗೆ ಲಭ್ಯವಿದೆ.
ಹೊಸ ಇ.ಎಸ್.500ಇ ಬುಕಿಂಗ್‌ಗಳು ಇಂದಿನಿಂದ ಪ್ರಾರಂಭವಾಗುತ್ತವೆ. ಅತಿಥಿಗಳು ತಮ್ಮ ಹತ್ತಿರದ ಲೆಕ್ಸಸ್ ಗೆಸ್ಟ್ ಎಕ್ಸ್ ಪೀರಿಯೆನ್ಸ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಬುಕಿಂಗ್‌ಗಳನ್ನು ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ, ಅತಿಥಿಗಳು ಇಲ್ಲಿಗೆ ಲಾಗಿನ್ ಆಗಬಹುದು
* ಎ.ಆರ್.ಎ.ಐ. ಪ್ರಮಾಣೀಕರಿಸಿದೆ
** ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ಸ್ಥಳೀಯ ಲೆಕ್ಸಸ್ ಡೀಲರ್ ಅನ್ನು ಸಂಪರ್ಕಿಸಿ ಅಥವಾ ನಿಮ್ಮ ಹೊಸ ವಾಹನದೊಂದಿಗೆ ಒದಗಿಸಲಾದ ವಾರಂಟಿ ಕೈಪಿಡಿಯನ್ನು ನೋಡಿ.
* ಏಪ್ರಿಲ್ 2025 ರಿಂದ, ಪ್ರಕಟಿಸಲಾದ ಮಾದರಿಗಳಿಗಾಗಿ ಲೆಕ್ಸಸ್ ಆಂತರಿಕ ಡೇಟಾವನ್ನು ಆಧರಿಸಿದೆ.
*
- ಲೆಕ್ಸಸ್ ಮುಂದಿನ ತಲೆಮಾರಿನ ಎಲೆಕ್ಟ್ರಿಫೈಡ್ ತಂತ್ರಜ್ಞಾನಗಳಲ್ಲಿ ಅಗ್ರಮಾಮಿ
- ಬಹು ಮಾರ್ಗಗಳ ವಿಧಾನದ ಮೂಲಕ ಇಂಗಾಲದ ತಟಸ್ಥತೆಯ ಅನ್ವೇಷಣೆಯಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿ.ಇ.ವಿ.) ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಚ್.ಇ.ವಿ.) ಎರಡನ್ನೂ ಚಲನೆಯ ವಿಸ್ತಾರ ಶ್ರೇಣಿಯ ಅಗತ್ಯ ಪೂರೈಸಲು ಒದಗಿಸಲಾಗುತ್ತಿದೆ
- ಲೆಕ್ಸಸ್ ಹೊಸ ವಿನ್ಯಾಸದ ಭಾಷೆಯನ್ನು ಪ್ರದರ್ಶಿಸುತ್ತಿದ್ದು ಮುಂದಿನ ತಲೆಮಾರಿನ ಬಿಇವಿ ಪರಿಕಲ್ಪನೆ ಎಲ್.ಎಫ್.-ಝಡ್.ಸಿ.ಯಿಂದ ಸ್ಪೂರ್ತಿ ಪಡೆದಿದೆ.
- ತನ್ನ ಕೇಂದ್ರದಿಂದಲೇ ಪರಿಷ್ಕರಿಸಲ್ಪಟ್ಟಿದ್ದು ಹೊಸ ಮಟ್ಟಗಳ ನಿಶ್ಯಬ್ದತೆ ಮತ್ತು ಸುಧಾರಿತ ವಿದ್ಯುದೀಕರಣದಿಂದ ರೈಡ್ ಕಂಫರ್ಟ್
- ವಿಶಾಲವಾದ ರಿಯರ್-ಸೀಟ್ ಪ್ಯಾಕೇಜ್ ಹೊಚ್ಚಹೊಸ ತಂತ್ರಜ್ಞಾನದೊಂದಿಗೆ ಸಂಯೋಜನೆಗೊಂಡಿದ್ದು ಎಲ್ಲ ಪ್ರಯಾಣಿಕರಿಗೂ ಪ್ರೀಮಿಯಂ ಮತ್ತು ಅನುಕೂಲಕರ ಅನುಭವ ನೀಡುತ್ತದೆ
- ಹೊಚ್ಚಹೊಸ ಇ.ಎಸ್.500ಇ ಹೊಸದಾಗಿ ಅಭಿವೃದ್ಧಿಯಾದ ಬ್ಯಾಟರಿ ಪ್ಯಾಕ್ ನಿಂದ ಸನ್ನದ್ಧವಾಗಿದ್ದು ಇದು ದೊಡ್ಡ ಸಾಮರ್ಥ್ಯದ ಲಿಥಿಯಂ-ಅಯಾನ್ ಬ್ಯಾಟರಿ ಸೆಲ್ಸ್ ಬಳಸಿ ಅಭಿವೃದ್ಧಿಪಡಿಸಲಾಗಿದೆ. 74.68ಕೆ.ಡಬ್ಲ್ಯೂ.ಎಚ್. ಬ್ಯಾಟರಿ ಸಾಮರ್ಥ್ಯದೊಂದಿಗೆ ಈ ಪ್ಯಾಕ್ 252 ಕೆ.ಡಬ್ಲ್ಯೂ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಒಂದು ಚಾರ್ಜ್ ನಲ್ಲಿ 580* ಕಿ.ಮೀ. ಚಾಲನೆಯ ಶ್ರೇಣಿ ಪೂರೈಸುತ್ತದೆ.
- ಈ ಆಲ್-ನ್ಯೂ ಇ.ಎಸ್.500ಇ ಐದು ಪ್ರೀಮಿಯಂ ಹೊರಾಂಗಣ ಬಣ್ಣದ ಆಯ್ಕೆಗಳು ಮತ್ತು ಎರಡು ಒಳಾಂಗಣ ಬಣ್ಣಗಳಲ್ಲಿ ಲಭ್ಯವಿದೆ
- ಉತ್ಪನ್ನದ ಬೆಲೆ ರೂ. xxxxxx ಎಕ್ಸ್-ಶೋರೂಂ ಹೊಂದಿದೆ