ಲೆಕ್ಸಸ್ ಇಂಡಿಯಾದಿಂದ ಎಲ್.ಎಂ. 350ಎಚ್ ಸದೃಢ ಪ್ರಗತಿಯ ವರದಿ ಪ್ರಕಟ
ಎಲ್.ಎಂ.350ಎಚ್ ಅನ್ನು ಪ್ರಯಾಣವನ್ನು ತಮ್ಮ ವೈಯಕ್ತಿಕ ಸ್ಥಳದ ವಿಸ್ತರಣೆಯಾಗಿ ಕಾಣುವ ಅತಿಥಿ ಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಎಲ್.ಎಂ. ಲಕ್ಷುರಿ ಲೌಂಜಿಯನ್ ವ್ಹೀಲ್ಸ್ ಲೆಕ್ಸಸ್ ನ ಒಮೊಟೊನಷಿ ತತ್ವದಿಂದ ಸೂಚಿತವಾದ ಅತ್ಯಂತ ಐಷಾರಾಮಿ ಮೊಬಿಲಿಟಿ ವರ್ಗ ವಾಗಿದ್ದು ಕ್ಯಾಬಿನ್ ಅನ್ನು ಪ್ರಯತ್ನರಹಿತವಾಗಿ ಭಾವಿಸುವ ಸೌಖ್ಯ ನೀಡಲು ವಿನ್ಯಾಸಗೊಳಿಸ ಲಾಗಿದೆ.
-
ಬೆಂಗಳೂರು : ಲೆಕ್ಸಸ್ ಇಂಡಿಯಾ ತನ್ನ ಮುಂಚೂಣಿಯ ಐಷಾರಾಮಿ ಎಂ.ಪಿ.ವಿ.ಯ ಸದೃಢ ಕಾರ್ಯಕ್ಷಮತೆಯ ಅಪ್ಡೇಟ್ ಎಲ್.ಎಂ. 350ಎಚ್ ಪ್ರಕಟಿಸಿದ್ದು ಅದು ನವೆಂಬರ್ 2025ರಲ್ಲಿ ಶೇ.40ರಷ್ಟು ಪ್ರಗತಿ ದಾಖಲಿಸಿದೆ ಮತ್ತು ಜನವರಿಯಿಂದ ನವೆಂಬರ್ 2025ರವರೆಗೆ ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ಒಟ್ಟು ಶೇ.15 ವೃದ್ಧಿ ಕಂಡಿದೆ. ಎಲ್.ಎಂ. 350ಎಚ್ ಅಲ್ಟ್ರಾ-ಲಕ್ಷುರಿ ಮೊಬಿಲಿಟಿ ಕ್ಷೇತ್ರದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದಿದ್ದು ಉದ್ದೇಶಪೂರ್ವಕ ವಿನ್ಯಾಸವನ್ನು ಉನ್ನತೀಕರಿಸಿದ ಸೌಖ್ಯ ಮತ್ತು ಅನುಕೂಲದೊಂದಿಗೆ ನಿರೀಕ್ಷಿಸುವ ಅತಿಥಿಗಳನ್ನು ಆಕರ್ಷಿಸುತ್ತಿದೆ.
ಎಲ್.ಎಂ.350ಎಚ್ ಅನ್ನು ಪ್ರಯಾಣವನ್ನು ತಮ್ಮ ವೈಯಕ್ತಿಕ ಸ್ಥಳದ ವಿಸ್ತರಣೆಯಾಗಿ ಕಾಣುವ ಅತಿಥಿಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಎಲ್.ಎಂ. ಲಕ್ಷುರಿ ಲೌಂಜಿಯನ್ ವ್ಹೀಲ್ಸ್ ಲೆಕ್ಸಸ್ ನ ಒಮೊಟೊನಷಿ ತತ್ವದಿಂದ ಸೂಚಿತವಾದ ಅತ್ಯಂತ ಐಷಾರಾಮಿ ಮೊಬಿಲಿಟಿ ವರ್ಗವಾಗಿದ್ದು ಕ್ಯಾಬಿನ್ ಅನ್ನು ಪ್ರಯತ್ನರಹಿತವಾಗಿ ಭಾವಿಸುವ ಸೌಖ್ಯ ನೀಡಲು ವಿನ್ಯಾಸಗೊಳಿಸಲಾಗಿದೆ. ವಾಹನವು ಸುಧಾರಿತ ಹೈಬ್ರಿಡ್ ತಂತ್ರಜ್ಞಾನ ಹೊಂದಿದ್ದು ಅದು ಮೃದು, ಬಹುತೇಕ ನಿಶ್ಯಬ್ದದ ರೈಡ್, ನಿಖರ ನಿರ್ವಹಣೆ ಮತ್ತು ಹೆಚ್ಚು ವಿಶ್ರಾಂತಿಯುತ ಪ್ರಯಾಣಕ್ಕೆ ಅಸಾಧಾರಣ ಹಿಂಬದಿ ಸೀಟಿನ ಸೌಖ್ಯ ನೀಡುತ್ತದೆ. ನಾಲ್ಕು ಸೀಟುಗಳು ಮತ್ತು ಏಳು ಸೀಟುಗಳ ಸಂಯೋಜನೆಯಲ್ಲಿ ದೊರೆಯುವ ಇದು ಹೆಚ್ಚಿನ ಮೌಲ್ಯ ಹೊಂದಿರುವ ವ್ಯಕ್ತಿಗಳು (ಎಚ್.ಎನ್. ಐ.ಗಳು) ಮತ್ತು ಅಲ್ಟ್ರಾ ಎಚ್.ಎನ್.ಐ.ಗಳಿಗೆ ಸೌಖ್ಯದ ಔನ್ನತ್ಯವನ್ನು ಬಿಂಬಿಸುತ್ತದೆ ಮತ್ತು ಐಷಾರಾಮಿ ಮೊಬಿಲಿಟಿ ನೀಡುತ್ತದೆ.
ಇದನ್ನೂ ಓದಿ: Tata Motors: ಕೋಲ್ಕತ್ತಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್
ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಹಿಕರು ಇಕ್ಯೂಚಿ, “ನಮ್ಮ ಅತಿಥಿಗಳಿಗೆ ಅವರು ನಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಹಾಗೂ ಲೆಕ್ಸಸ್ 350ಎಚ್ ಗೆ ಅವರ ಮುಂದುವರಿದ ಬೆಂಬಲ ಮತ್ತು ಉತ್ಸಾಹಕ್ಕೆ ಅಪಾರ ಆಭಾರಿಯಾಗಿದ್ದೇವೆ. ಈ ವಾಹನವು ಅತ್ಯುತ್ತಮ ಅದ್ಧೂರಿತನ ಮತ್ತು ಪರಿಷ್ಕರಣೆಯನ್ನು ಬಿಂಬಿಸುತ್ತದೆ, ಇದರಲ್ಲಿ ಸ್ಥಳಾವಕಾಶ, ನಿಶ್ಯಬ್ದತೆ ಮತ್ತು ಸುಧಾರಿತ ಹೈಬ್ರಿಡ್ ತಂತ್ರಜ್ಞಾನದ ಭರವಸೆಯು ಒಟ್ಟಿಗೆ ಬಂದಿದ್ದು ಅತಿಥಿಗಳಿಗೆ ಐಷಾರಾಮಿ ಮೊಬಿಲಿಟಿಯಲ್ಲಿ ಹೊಸ ಮೈಲಿಗಲ್ಲು ಆವಿಷ್ಕರಿಸಲು ಅವಕಾಶ ಕಲ್ಪಿಸಿದೆ. ದೆಹಲಿ, ಮುಂಬೈ ಮತ್ತು ಹೈದರಬಾದ್ ಹಾಗೂ ಚೆನ್ನೈನಂತಹ ನಗರಗಳಿಂದ ಈ ಸ್ಥಿರವಾದ ಅಖಿಲ ಭಾರತದ ಬೇಡಿಕೆಯು ಆಲೋಚನಾಯುಕ್ತ ವಾಗಿ ವಿನ್ಯಾಸಗೊಳಿಸಿದ ಖಾಸಗಿ ಲೌಂಜ್ ಆನ್ ವ್ಹೀಲ್ಸ್ ಗೆ ಹೆಚ್ಚುತ್ತಿರುವ ಆದ್ಯತೆಯನ್ನು ಬಿಂಬಿಸು ತ್ತದೆ. ನಾವು ಮುಂದೆ ನೋಡುತ್ತಿರುವಂತೆ ನಮ್ಮ ಆದ್ಯತೆಯು ಈ ಸಂಪರ್ಕವನ್ನು ಭಾರತದಲ್ಲಿ ಲೆಕ್ಸಸ್ ಇಂಡಿಯಾದ ಪ್ರಯಾಣವನ್ನು ಮತ್ತಷ್ಟು ಉನ್ನತಗೊಳಿಸುವ ಆವಿಷ್ಕಾರ ಗಳೊಂದಿಗೆ ಈ ಸಂಪರ್ಕವನ್ನು ಮತ್ತಷ್ಟು ಸದೃಢಗೊಳಿಸುವುದಾಗಿದೆ” ಎಂದರು.
ಮಾಲೀಕತ್ವ ಪ್ರಯಾಣವು ಲೆಕ್ಸಸ್ ಇಂಡಿಯಾದ ಪ್ರಮುಖ ಅನುಕೂಲಗಳ ಬೆಂಬಲ ಪಡೆದಿದ್ದು ಅದರಲ್ಲಿ ಲೆಕ್ಸಸ್ ಲಕ್ಷುರಿ ಕೇರ್, 8 ವರ್ಷ ವಾಹನದ ವಾರೆಂಟಿ**, ಲೆಕ್ಸಸ್ ಕೇರ್ ಸರ್ವೀಸ್ ಪ್ಯಾಕೇಜ್ ಗಳ ಆಯ್ಕೆ (ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್) ಮತ್ತು 5 ವರ್ಷದ ರೋಡ್ ಸೈಡ್ ಅಸಿಸ್ಟೆನ್ಸ್ ಸರಿಸಾಟಿ ಇರದ ಮನಃಶಾಂತಿ ನೀಡುತ್ತದೆ.
ಲೆಕ್ಸಸ್ ಭಾರತದಲ್ಲಿ ತನ್ನ ಪೋರ್ಟ್ ಫೋಲಿಯೊ ವಿಸ್ತರಿಸುತ್ತಿದ್ದಂತೆ ಎಲ್.ಎಂ.ನ ಸದೃಢ ಸಾಧನೆಯು ಭಾರತೀಯ ಅತಿಥಿಗಳಿಗೆ ಪರಿವರ್ತನೀಯ ಐಷಾರಾಮಿ ಮೊಬಿಲಿಟಿ ಅನುಭವಗಳನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ಬ್ರಾಂಡ್ ನ ವಿಶಿಷ್ಟ ಸಾಮರ್ಥ್ಯ ಮರು ದೃಢೀಕರಿಸಿದೆ.
ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ. ದಯವಿಟ್ಟು ಸ್ಥಳೀಯ ಲೆಕ್ಸಸ್ ಡೀಲರ್ ಸಂಪರ್ಕಿಸಿ ಅಥವಾ ವಿವರಗಳಿಗೆ ನಿಮ್ಮ ಹೊಸ ವಾಹನದೊಂದಿಗೆ ನೀಡಲಾದ ವಾರೆಂಟಿ ಮ್ಯಾನ್ಯುಯಲ್ ಪರಿಶೀಲಿಸಿ.