ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉದ್ಯಮಗಳಿಗೆ ಸುರಕ್ಷಿತ ಮತ್ತು ಸದೃಢ ಡಿಜಿಟಲ್ ಮೂಲಸೌಕರ್ಯಗಳ ನಿರ್ಮಾಣಕ್ಕೆ ನೆರವಾಗುತ್ತಾ ಭರ್ಜರಿ ಬೆಳವಣಿಗೆ ಸಾಧಿಸಿದ ಮ್ಯಾನೇಜ್‌ಇಂಜಿನ್

2002ರಲ್ಲಿ, ಐಟಿ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಪರಿಪೂರ್ಣ ಗೊಳಿಸುವ ಉದ್ದೇಶದೊಂದಿಗೆ ಕಂಪನಿಯನ್ನು 'ಮ್ಯಾನೇಜ್‌ಇಂಜಿನ್' ಎಂದು ಮರು ನಾಮ ಕರಣ ಮಾಡಲಾಯಿತು. ಇಂದು, ಈ ಸಂಸ್ಥೆ ಭಾರತದಾದ್ಯಂತ 38ಕ್ಕೂ ಹೆಚ್ಚು ಮತ್ತು ಜಾಗತಿಕ ವಾಗಿ 35ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, 180ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ

ಝೋಹೋ ಕಾರ್ಪೊರೇಶನ್‌ ನ ಎಂಟರ್‌ ಪ್ರೈಸ್ ಐಟಿ ನಿರ್ವಹಣಾ ವಿಭಾಗವಾದ ಮ್ಯಾನೇಜ್‌ ಇಂಜಿನ್, ವೇಗವಾಗಿ ಡಿಜಿಟಲ್ ಗೆ ರೂಪಾಂತರಗೊಳ್ಳುತ್ತಿರುವ ಸಂಸ್ಥೆಗಳಿಗೆ ವಿಶ್ವಾಸಾರ್ಹ ಐಟಿ ನಿರ್ವಹಣೆ ಮತ್ತು ಸೈಬರ್ ಸೆಕ್ಯೂರಿಟಿ ಪಾಲುದಾರನಾಗಿ ತನ್ನ ಸ್ಥಾನ ವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸರಳ ಹಾಗೂ ಸುಲಭವಾಗಿ ಅಳವಡಿಸ ಬಹುದಾದ ಟೂಲ್ (ಪರಿಕರ) ಗಳನ್ನು ನಿರ್ಮಿಸುವ ದೃಷ್ಟಿಯೊಂದಿಗೆ 2002ರಲ್ಲಿ ಸ್ಥಾಪನೆ ಯಾದ ಮ್ಯಾನೇಜ್‌ಇಂಜಿನ್ ಸಂಸ್ಥೆಯು, ಇಂದು ಭಾರತದಲ್ಲಿ 10,000ಕ್ಕೂ ಹೆಚ್ಚು ಗ್ರಾಹಕ ರನ್ನು ಹೊಂದಿರುವ ಸಮಗ್ರ 'ಎಂಡ್-ಟು-ಎಂಡ್' ಐಟಿ ನಿರ್ವಹಣಾ ವೇದಿಕೆಯಾಗಿ ಬೆಳವಣಿಗೆ ಹೊಂದಿದೆ.

ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮ್ಯಾನೇಜ್‌ಇಂಜಿನ್‌ ಸಂಸ್ಥೆಯು ನಿಜವಾಗಿ ಆರಂಭವಾಗಿದ್ದು 1996ರಲ್ಲಿ. ಆಗ ಕಂಪನಿ ಹೆಸರು ಅಡ್ವೆಂಟ್‌ನೆಟ್ ಎಂಬುದಾಗಿತ್ತು.

ಇದನ್ನೂ ಓದಿ: Safari Begins today: ಇಂದಿನಿಂದಲೇ ಸಫಾರಿ ಶುರು

2002ರಲ್ಲಿ, ಐಟಿ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಪರಿಪೂರ್ಣ ಗೊಳಿಸುವ ಉದ್ದೇಶದೊಂದಿಗೆ ಕಂಪನಿಯನ್ನು 'ಮ್ಯಾನೇಜ್‌ಇಂಜಿನ್' ಎಂದು ಮರು ನಾಮಕರಣ ಮಾಡಲಾಯಿತು. ಇಂದು, ಈ ಸಂಸ್ಥೆ ಭಾರತದಾದ್ಯಂತ 38ಕ್ಕೂ ಹೆಚ್ಚು ಮತ್ತು ಜಾಗತಿಕವಾಗಿ 35ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, 180ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಮ್ಯಾನೇಜ್‌ಇಂಜಿನ್ ವಿಶ್ವಾದ್ಯಂತ 6,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಭಾರತದ ಚೆನ್ನೈ ಮತ್ತು ಮುಂಬೈನಲ್ಲಿರುವ ಎರಡು ಡೇಟಾ ಸೆಂಟರ್‌ ಗಳು ಸೇರಿದಂತೆ ಜಾಗತಿಕವಾಗಿ ಸುಮಾರು 20 ಡೇಟಾ ಸೆಂಟರ್‌ ಗಳ ಬೆಂಬಲದೊಂದಿಗೆ ಆನ್- ಪ್ರಿಮೈಸ್ ಮತ್ತು ಕ್ಲೌಡ್ ಉತ್ಪನ್ನಗಳನ್ನು ಒದಗಿಸುತ್ತಿದೆ. ಬೆಂಗಳೂರಿನಲ್ಲಿಯೇ ಈ ಕಂಪನಿಯು ಸ್ಥಳೀಯ ಕಾರ್ಯಾಚರಣೆ ಮತ್ತು ಬೆಂಬಲ ತಂಡದ ಮೂಲಕ 1,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದೆ.

ಕುರಿತು ಮ್ಯಾನೇಜ್‌ಇಂಜಿನ್‌ ರೆವೆನ್ಯೂ ಮತ್ತು ಗ್ರೋತ್ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷರಾದ ಅರುಣ್ ಕುಮಾರ್ ಮಾತನಾಡಿ, "ಎಐ ತಂತ್ರಜ್ಞಾನವು ಉದ್ಯಮಗಳಿಗೆ ವೇಗವಾಗಿ ಹೊಸತನ ಒದಗಿಸುತ್ತಿದೆ. ಆದರೆ, ಜೊತೆಗೆ ಸೈಬರ್ ಅಪಾಯಗಳನ್ನೂ ಹೆಚ್ಚಿಸು ತ್ತಿದೆ. ಸಂಸ್ಥೆಗಳು ಇತರರಿಗಿಂತ ಮುಂದಿರಲು ಬಲವಾದ, ವಿಶ್ವಾಸಾರ್ಹ ಮತ್ತು ದೃಢವಾದ ಮೂಲಸೌಕರ್ಯ ವ್ಯವಸ್ಥೆ ಹೊಂದುವುದು ಅಗತ್ಯವಿದೆ. ಉದ್ಯಮಗಳು ತಮ್ಮ ಬೆಳವಣಿಗೆಗೆ ಪೂರಕವಾದ ಸುರಕ್ಷಿತ ಐಟಿ ಅಡಿಪಾಯದೊಂದಿಗೆ ಆತ್ಮವಿಶ್ವಾಸದಿಂದ ಹೊಸ ಆವಿಷ್ಕಾರ ಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ" ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ, ಮ್ಯಾನೇಜ್‌ಇಂಜಿನ್ ಎಐ ಟೂಲ್ ಗಳಿಂದ ಸಮಗ್ರ ಉತ್ಪನ್ನ ಗಳ ಶ್ರೇಣಿಯಾಗಿ ಬೆಳೆದು ನಿಂತಿದೆ. ಐಟಿ ಸೇವಾ ನಿರ್ವಹಣೆ (ಐಟಿಎಸ್ಎಂ), ಮೂಲ ಸೌಕರ್ಯ ಮತ್ತು ನೆಟ್‌ ವರ್ಕ್ ಮಾನಿಟರಿಂಗ್, ಯೂನಿಫೈಡ್ ಎಂಡ್‌ ಪಾಯಿಂಟ್ ಮ್ಯಾನೇಜ್‌ ಮೆಂಟ್, ಸೈಬರ್ ಸೆಕ್ಯೂರಿಟಿ, ಆಕ್ಟಿವ್ ಡೈರೆಕ್ಟರಿ ಮ್ಯಾನೇಜ್‌ಮೆಂಟ್, ಐಟಿ ಅನಾಲಿಟಿಕ್ಸ್ ಮತ್ತು ಕಂಪ್ಲೈಯನ್ಸ್ ರಿಪೋರ್ಟಿಂಗ್ ಸೇರಿದಂತೆ 60ಕ್ಕೂ ಹೆಚ್ಚು ಉತ್ಪನ್ನ ಗಳನ್ನು ಒಳಗೊಂಡಿದೆ.

ಇದರ ಏಕೀಕೃತ ವೇದಿಕೆಯು ಎಂಟರ್‌ ಪ್ರೈಸ್ ಐಟಿಯ ಐದು ನಿರ್ಣಾಯಕ ಸ್ತಂಭಗಳಾದ: ಜನರು, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು, ಮೂಲಸೌಕರ್ಯ ಮತ್ತು ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ. ಇದು ಸಂಸ್ಥೆಗಳಿಗೆ ಹಾರ್ಡ್‌ ವೇರ್ ಮತ್ತು ಸಾಫ್ಟ್‌ ವೇರ್ ಗಳನ್ನು ಟ್ರ್ಯಾಕ್ ಮಾಡಲು, ಪರವಾನಗಿ ಪಡೆದ ಮತ್ತು ನವೀಕರಿಸಿದ ಸಿಸ್ಟಮ್‌ ಗಳನ್ನು ಹೊಂದಲು, ಪಾಸ್‌ ವರ್ಡ್ ನೀತಿಗಳನ್ನು ಜಾರಿಗೊಳಿಸಲು, ಪ್ಯಾಚ್‌ ಗಳನ್ನು ನಿರ್ವಹಿಸಲು, ಸೆಷನ್ ರೆಕಾರ್ಡಿಂಗ್‌ ನೊಂದಿಗೆ ಸುರಕ್ಷಿತ ರಿಮೋಟ್ ಪ್ರವೇಶವನ್ನು ಒದಗಿಸಲು ಮತ್ತು ಒಂದೇ ವ್ಯವಸ್ಥೆಯಡಿ ಬದಲಾವಣೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ತನ್ನ ಎಐ- ಚಾಲಿತ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಮ್ಯಾನೇಜ್‌ಇಂಜಿನ್ ಇತ್ತೀಚೆಗೆ ತನ್ನ 'ಫುಲ್-ಸ್ಟ್ಯಾಕ್ ಅಬ್ಸರ್ವೇಬಿಲಿಟಿ' ವೇದಿಕೆಯಾದ ಸೈಟ್24x7 ನಲ್ಲಿ 'ಕಾಸಲ್ ಇಂಟೆಲಿಜೆನ್ಸ್' ಮತ್ತು ಸ್ವಾಯತ್ತ ಎಐ ಅನ್ನು ಪರಿಚಯಿಸಿದೆ. ಈ ಸುಧಾರಣೆಗಳು ಅಸಹಜತೆಗಳನ್ನು ಮೊದಲೇ ಪತ್ತೆಹಚ್ಚುವ (ಪ್ರಿಡಿಕ್ಟಿವ್ ಅನಾಮಲಿ ಡಿಟೆಕ್ಷನ್) ಮತ್ತು ಡೊಮೇನ್- ಅವೇರ್ ಈವೆಂಟ್ ಕೋರಿಲೇಶನ್ ಅನ್ನು ಒಳಗೊಂಡಿವೆ. ಈ ವ್ಯವಸ್ಥೆಗಳು ಐಟಿ ತಂಡಗಳಿಗೆ ಅನಗತ್ಯ ಅಲರ್ಟ್‌ ಗಳ ಗದ್ದಲವನ್ನು ಕಡಿಮೆ ಮಾಡಲು, ಮೂಲ ಕಾರಣಗಳನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ಸಿಸ್ಟಮ್ ಚೇತರಿಸಿಕೊಳ್ಳುವ ಸಮಯ ವನ್ನು (ಎಂಟಿಟಿಆರ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಝೋಹೋದ ಆರ್ಕೆ ಸ್ಟ್ರೇಶನ್ ಪ್ಲಾಟ್‌ ಫಾರ್ಮ್ ಆದ Qntrl ಮೂಲಕ ನಿಯಂತ್ರಿತ ಪರಿಹಾರ ಕಾರ್ಯಗಳನ್ನು ಸಂಯೋಜಿಸುವ ಮೂಲಕ, ಕಂಪನಿಯು ಉದ್ಯಮ-ದರ್ಜೆಯ ಆಡಳಿತ ಮತ್ತು ಆಡಿಟಿಂಗ್ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ, ಹೆಚ್ಚು ಸ್ವಾಯತ್ತ ಮತ್ತು ಸ್ವಯಂ-ಗುಣಪಡಿಸುವ ಐಟಿ ಕಾರ್ಯಾಚರಣೆ ನಡೆಯುವಂತೆ ಅನುವು ಮಾಡಿಕೊಡುತ್ತದೆ.

ಕುರಿತು ಮ್ಯಾನೇಜ್‌ಇಂಜಿನ್‌ನ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ರೋಮಾನಸ್ ಪ್ರಭು ರೇಮಂಡ್ ಮಾತನಾಡಿ, "ಐಟಿ ಪರಿಸರಗಳು ಹೆಚ್ಚು ಹೈಬ್ರಿಡ್ ಮತ್ತು ಪರಸ್ಪರ ಇಂಟರ್ ಕನೆಕ್ಟ್ ಆಗುತ್ತಿರುವಂತೆ, ಸ್ಪಷ್ಟತೆ ಮತ್ತು ಸಂದರ್ಭೋಚಿತ ಮಾಹಿತಿ ಅತ್ಯಂತ ನಿರ್ಣಾಯಕವಾಗುತ್ತವೆ. ಅದು ಡಿಪಿಡಿಪಿ ಅಡಿಯಲ್ಲಿನ ಅನುಸರಣೆ ಯಾಗಿರಲಿ ಅಥವಾ 'ಕಾಸಲ್ ಇಂಟೆಲಿಜೆನ್ಸ್' ಮೂಲಕ ವೇಗವಾಗಿ ಘಟನೆಗಳಿಗೆ ಪ್ರತಿಕ್ರಿ ಯಿಸುವುದಾಗಿರಲಿ, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು ಮತ್ತು ಮೂಲಸೌಕರ್ಯ ಗಳಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಾಗಲಿ ಹೀಗೆ ಎಲ್ಲದರ ಕುರಿತು ಸಂಸ್ಥೆಗಳಿಗೆ ಸ್ಪಷ್ಟತೆ ಬೇಕು. ನಮ್ಮ ವೇದಿಕೆಯು ಉದ್ಯಮಗಳಿಗೆ ಕೇವಲ ಸಮಸ್ಯೆಗಳನ್ನು ಪತ್ತೆಹಚ್ಚಲು ಮಾತ್ರವಲ್ಲದೆ, ಅವುಗಳ ಪ್ರಭಾವವನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದರು.

ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಜಾರಿಗೆ ಬರುತ್ತಿರು ವುದರಿಂದ, ಉದ್ಯಮಗಳು ಗ್ರಾಹಕರ ಸ್ಪಷ್ಟ ಸಮ್ಮತಿ, ಉದ್ದೇಶದ ಮಿತಿ, 72 ಗಂಟೆಗಳೊಳಗೆ ಡೇಟಾ ಸೋರಿಕೆಯ ವರದಿ ಮತ್ತು ಡೇಟಾ ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಮ್ಯಾನೇಜ್‌ಇಂಜಿನ್ ಈಗಾಗಲೇ ಜಾಗತಿಕ ಚೌಕಟ್ಟುಗಳಾದ ಜಿಡಿಪಿಆರ್ (ಯುರೋಪ್), ಸೈಬರ್ ಎಸೆನ್ಷಿಯಲ್ಸ್ (ಯುಕೆ) ಮತ್ತು ಎಸೆನ್ಷಿಯಲ್ ಏಯ್ಟ್ (ಆಸ್ಟ್ರೇಲಿಯಾ) ನಂತಹ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ತನ್ನ ಆಂತರಿಕ ಪ್ರಕ್ರಿಯೆಗಳು ಮತ್ತು ಉತ್ಪನ್ನದ