ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊಸ BMW X1 ಲಾಂಗ್ ವೀಲ್‌ಬೇಸ್ ಭಾರತದಲ್ಲಿ ಬಿಡುಗಡೆ

BMW ಗ್ರೂಪ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, “BMW X1 ಭಾರತದಲ್ಲಿ ಅತ್ಯಂತ ಯಶಸ್ವಿ ಐಷಾರಾಮಿ SUVಗಳಲ್ಲಿ ಒಂದಾಗಿದೆ. ಹೊಸ ಲಾಂಗ್ ವೀಲ್‌ಬೇಸ್ ಮಾದರಿಯು ಹೆಚ್ಚಿನ ಸ್ಥಳಾವಕಾಶ, ಸೌಕರ್ಯ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಿದೆ,” ಎಂದು ಹೇಳಿದರು

ಬೆಂಗಳೂರು: BMW ಗ್ರೂಪ್ ಇಂಡಿಯಾ ತನ್ನ ಜನಪ್ರಿಯ ಐಷಾರಾಮಿ SUV ಮಾದರಿಯಾದ ಹೊಸ BMW X1 ಲಾಂಗ್ ವೀಲ್‌ಬೇಸ್ (LWB) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೆಚ್ಚು ವಿಶಾಲವಾದ ಒಳಾಂಗಣ, ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಮತ್ತು ಉತ್ತಮ ಚಾಲನಾ ಅನುಭವದೊಂದಿಗೆ ಈ ಹೊಸ ಮಾದರಿ ಭಾರತೀಯ ಮಾರುಕಟ್ಟೆಗೆ ಬಂದಿದೆ.

ಹೊಸ BMW X1 LWB ಯ ಆರಂಭಿಕ ಎಕ್ಸ್‌ಶೋರೂಂ ಬೆಲೆ ₹49.90 ಲಕ್ಷವಾಗಿದೆ. ಈ ಕಾರನ್ನು ಚೆನ್ನೈನ BMW ಗ್ರೂಪ್ ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ಪೆಟ್ರೋಲ್ ಮಾದರಿಯಲ್ಲಿ ಉತ್ಪಾದಿಸ ಲಾಗುತ್ತಿದ್ದು, ಇಂದಿನಿಂದ ದೇಶಾದ್ಯಂತ BMW ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್‌ಗೆ ಲಭ್ಯವಿದೆ.

BMW ಗ್ರೂಪ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, “BMW X1 ಭಾರತದಲ್ಲಿ ಅತ್ಯಂತ ಯಶಸ್ವಿ ಐಷಾರಾಮಿ SUVಗಳಲ್ಲಿ ಒಂದಾಗಿದೆ. ಹೊಸ ಲಾಂಗ್ ವೀಲ್‌ಬೇಸ್ ಮಾದರಿಯು ಹೆಚ್ಚಿನ ಸ್ಥಳಾವಕಾಶ, ಸೌಕರ್ಯ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಿದೆ,” ಎಂದು ಹೇಳಿದರು.

ಇದನ್ನೂ ಓದಿ: ಮಾಸ್ಟರ್‌ಪೀಸ್ : BMW R nineT ಮತ್ತು BMW RnineT ಸ್ಕ್ರಾಂಬ್ಲರ್ ಭಾರತದಲ್ಲಿ ಬಿಡುಗಡೆ

4,616 ಮಿ.ಮೀ. ಉದ್ದ, 2,104 ಮಿ.ಮೀ. ಅಗಲ, 1,641 ಮಿ.ಮೀ. ಎತ್ತರ ಹಾಗೂ 2,800 ಮಿ.ಮೀ. ವೀಲ್‌ಬೇಸ್ ಹೊಂದಿರುವ ಈ SUV ತನ್ನ ಸೆಗ್‌ಮೆಂಟ್‌ನಲ್ಲಿಯೇ ಅತ್ಯಂತ ಉದ್ದದ ಮಾದರಿಗಳಲ್ಲಿ ಒಂದಾಗಿದೆ. ಹೆಚ್ಚುವರಿ ವೀಲ್‌ಬೇಸ್‌ನಿಂದ ಹಿಂಭಾಗದ ಪ್ರಯಾಣಿಕರಿಗೆ 150 ಮಿ.ಮೀ. ಹೆಚ್ಚುವರಿ ಲೆಗ್‌ರೂಮ್ ಮತ್ತು 109 ಮಿ.ಮೀ. ಹೆಚ್ಚುವರಿ ಹೆಡ್‌ರೂಮ್ ದೊರೆಯಲಿದೆ.

ಹೊಸ X1 LWB ನಲ್ಲಿ ಅಡಾಪ್ಟಿವ್ LED ಹೆಡ್‌ಲೈಟ್‌ಗಳು, 18 ಇಂಚಿನ M ಲೈಟ್ ಅಲಾಯ್ ವೀಲ್‌ಗಳು, ಪನೋರಮಿಕ್ ಸನ್‌ರೂಫ್, ವೈಡ್‌ಸ್ಕ್ರೀನ್ ಕರ್ವ್ಡ್ ಡಿಸ್‌ಪ್ಲೇ, BMW ಆಪರೇಟಿಂಗ್ ಸಿಸ್ಟಮ್ 9 ಮತ್ತು 12 ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳಿವೆ.

BMW 221

1.5 ಲೀಟರ್ BMW ಟ್ವಿನ್‌ಪವರ್ ಟರ್ಬೊ ಪೆಟ್ರೋಲ್ ಎಂಜಿನ್ 156 hp ಶಕ್ತಿ ಮತ್ತು 230 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಉತ್ತಮ ನಿಯಂತ್ರಣ ಮತ್ತು ಚುರುಕು ಚಾಲನಾ ಅನುಭವ ನೀಡುತ್ತದೆ.

BMW ಡಿಜಿಟಲ್ ಕೀ ಪ್ಲಸ್, ಕಂಫರ್ಟ್ ಆಕ್ಸೆಸ್ 2.0, MyBMW ಆ್ಯಪ್ ಹಾಗೂ NFC ಆಧಾರಿತ ಕೀ ಸೌಲಭ್ಯಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಪಾರ್ಕಿಂಗ್ ಅಸಿಸ್ಟೆಂಟ್, ರಿಯರ್ ವ್ಯೂ ಕ್ಯಾಮೆರಾ ಮತ್ತು 360 ಡಿಗ್ರಿ ಸರೌಂಡ್ ವ್ಯೂ ಹೊಂದಿರುವ ಪಾರ್ಕಿಂಗ್ ಅಸಿಸ್ಟೆಂಟ್ ಪ್ಲಸ್ ಸುರಕ್ಷತೆ ಮತ್ತು ಪಾರ್ಕಿಂಗ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಹೊಸ BMW X1 LWB ನೈಟ್‌ಡಸ್ಕ್ ಬ್ಲೂ, ಸ್ಕೈಸ್ಕ್ರೇಪರ್ ಗ್ರೇ, ಕಾರ್ಬನ್ ಬ್ಲ್ಯಾಕ್ ಮತ್ತು ಮಿನರಲ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.