ವಾಟ್ಸಪ್ ನಲ್ಲಿ ಬಿಸಿನೆಸ್ ಎಐ ಭಾರತದ ಎಲ್ಲ ಸ್ಥಳೀಯ ಭಾಷೆಗಳಲ್ಲಿಯೂ ಲಭ್ಯವಿದೆ — ಇದು, 24/24 ಗ್ರಾಹಕರ ಪ್ರಶ್ನೆಗಳಿಗೆ ಸ್ಪಂದಿಸುತ್ತದೆ, ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ ಮತ್ತು ಮಾರಾಟ ಹೆಚ್ಚಲು ಸಹಾಯ ಮಾಡುತ್ತದೆ
ಬೆಂಗಳೂರು: ವಾಟ್ಸಪ್, ಭಾರತದಲ್ಲಿ ವಾಟ್ಸಪ್ ನಲ್ಲಿ ಬಿಸಿನೆಸ್ ಎಐ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಇದರಿಂದಾಗಿ ವಾಟ್ಸಪ್-ಬಿಸಿನೆಸ್ ಅಪ್ಲಿಕೇಶನ್‌ನಲ್ಲಿ ಎಐ-ಚಾಲಿತ ಗ್ರಾಹಕ ಬೆಂಬಲ ನೇರವಾಗಿ ಸಿಗುತ್ತದೆ. ಇದು ಭಾರತದ ಎಲ್ಲ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ. ಇದರಿಂದ ಬಿಸಿನೆಸ್ ಗಳು ಗ್ರಾಹಕರ ಪ್ರಶ್ನೆಗಳಿಗೆ 24/7 ಪ್ರತಿಕ್ರಿಯಿಸಲು, ಲೀಡ್‌ಗಳನ್ನು ವ್ಯವಹಾರವಾಗಿ ಪರಿವರ್ತಿಸಲು, ಭೇಟಿಗಳನ್ನು ಬುಕ್ ಮಾಡಲು ಮತ್ತು ಮಾರಾಟವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಟೂಲ್ಸ್ ಅಥವಾ ವೇದಿಕೆಗಳ ಅಗತ್ಯವಿಲ್ಲ.
ವಾಟ್ಸಪ್ ನಲ್ಲಿ ಬಿಸಿನೆಸ್ ಎಐ ಅನ್ನು ಆಯಾ ವ್ಯವಹಾರಕ್ಕೆ ಸರಿಹೊಂದುವಂತೆ ಕಸ್ಟಮೈಸ್ ಮಾಡಬಹುದು. ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ಸ್ವಯಂಚಾಲಿತವಾಗಿ ನೀಡುವುದು ಮತ್ತು ಉತ್ಪನ್ನಗಳು ಮತ್ತು ಸೇವೆಗಳು, ಬೆಲೆ ನಿಗದಿ, ರಿಯಾಯಿತಿಗಳು, ಶಿಪ್ಪಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಇವೆಲ್ಲ ಸರಳವಾಗುತ್ತವೆ. ಶೀಘ್ರದಲ್ಲೆ ಇದು ಗ್ರಾಹಕರ ಬಳಕೆಗೆ ಲಭ್ಯವಿರಲಿದೆ. ದರ ನೆರವಿನಿಂದ ಯುಪಿಐ ಮೂಲಕ ವಾಟ್ಸಪ್ ಚಾಟ್ ನಿಂದ ನೇರವಾಗಿ ಪಾವತಿಗಳನ್ನು ಸಹ ಮಾಡಬಹುದು. ಸ್ವಲ್ಪ ಕ್ಲಿಷ್ಟವಾದ ಪ್ರಶ್ನೆ ಎದುರಾದಾಗ ಅಥವಾ ನಿರ್ದಿಷ್ಟ ಬೇಡಿಕೆಗಳಿದ್ದಾಗ ವ್ಯಾಪಾರಸ್ಥರು ಎಐ ಏಜೆಂಟ್ ಬದಲು ತಾವೇ ನೇರವಾಗಿ ಉತ್ತರಿಸಬಹುದು. ಮುಂಬರುವ ವಾರಗಳಲ್ಲಿ ಎಲ್ಲ ಅರ್ಹ ವ್ಯಾಪಾರಸ್ಥರು ವಾಟ್ಸಪ್ ಬಿಸಿನೆಸ್ ಅಪ್ಲಿಕೇಶನ್ ಬಿಸಿನೆಸ್ ಎಐ ಅನ್ನು ಬಳಸಬಹುದಾಗಿರುತ್ತದೆ.
ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್
ಕಾಂತರ್ ಅಧ್ಯಯನ (2025) ಪ್ರಕಾರ ಭಾರತದಲ್ಲಿ 91% ಆನ್‌ಲೈನ್ ವಯಸ್ಕರು ವಾರಕ್ಕೊಮ್ಮೆ ಯಾವುದಾದರೂ ಬಿಸಿನೆಸ್ ನೊಂದಿಗೆ ಚಾಟ್ ಮಾಡುತ್ತಾರೆ. ಹಾಗಾಗಿ ಭಾರತೀಯರಿಗೆ ಬಿಸಿನೆಸ್ ಸಂವಹನ ನಡೆಸಲು ಮೆಸೇಜಿಂಗ್ ಒಂದು ಅತೀ ಮುಖ್ಯ ಮಾರ್ಗವಾಗಿದೆ. ವ್ಯವಹಾರಸ್ಥರು ಮತ್ತು ಅವರ ಗ್ರಾಹಕರ ನಡುವಿನ ಸಂಪರ್ಕಕ್ಕೆ ವಾಟ್ಸಪ್ ಒಂದು ಪ್ರಧಾನ ಕೇಂದ್ರವಾಗಿದೆ. ವಾಟ್ಸಪ್ ಬಿಸಿನೆಸ್ ಎಐ, ಸಣ್ಣ ವ್ಯಾಪಾರಸ್ಥರಿಗೆ ದಿನದ ಯಾವುದೇ ಸಮಯದಲ್ಲಿಯೂ ಗ್ರಾಹಕರೊಂದಿಗೆ ಸೂಕ್ತವಾಗಿ ಸ್ಪಂದಿಸಲು ಮತ್ತು ಸ್ಪರ್ಧಾತ್ಮಕ ಮುನ್ನಡೆ ಹೊಂದಲು ನೆರವಾಗುವ ಟೂಲ್ಸ್ ಒದಗಿಸುತ್ತದೆ.
ಬಿಸಿನೆಸ್ ಎಐ ಬಿಡುಗಡೆ ಬಗ್ಗೆ ಮಾತನಾಡಿದ ಮೆಟಾ ಇಂಡಿಯಾದ ಬಿಸಿನೆಸ್ ಮೆಸೇಜಿಂಗ್ ಡೈರೆಕ್ಟರ್ ರವಿ ಗಾರ್ಗ್, “ಸಣ್ಣ ವ್ಯವಹಾರಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿವೆ. ಅಂತಹ ವ್ಯವಹಾರಸ್ಥರಿಗೆ ಗ್ರಾಹಕರ ಜೊತೆಗಿನ ಪ್ರತಿಯೊಂದು ಸಂಭಾಷಣೆಯೂ ಅಮೂಲ್ಯ ವಾಗಿರುತ್ತದೆ. ಸಂಪನ್ಮೂಲಗಳು ಸೀಮಿತವಾಗಿದ್ದು, ಗ್ರಾಹಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸುವುದು ಸಣ್ಣ ವ್ಯವಹಾರಗಳಿಗೆ ಒಂದು ದೊಡ್ಡ ಸವಾಲು. ಈ ಮಾತನ್ನು ನಾವು ಅನೇಕ ವರ್ಷಗಳಿಂದ ಕೇಳುತ್ತ ಬಂದಿದ್ದೇವೆ. ಈ ವಿಷಯದಲ್ಲಿ ಎಐ, ಅವರಿಗೊಂದು ದೊಡ್ಡ ನೆರವಾಗಲಿದೆ. ಅದಕ್ಕಾಗಿ ಸಣ್ಣ ವ್ಯವಹಾರಗಳಿಗಾಗಿ ವಾಟ್ಸಪ್ ನಲ್ಲಿ ಬಿಸಿನೆಸ್ ಎಐ ಅನ್ನು ಪರಿಚಯಿಸುತ್ತಿದ್ದೇವೆ. ಇನ್ನು ಅವರು ಯಾವುದೇ ಸಮಯದಲ್ಲೂ ಗ್ರಾಹಕರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತದೆ. ಎಷ್ಟು ಕೆಲಸಗಳಿದ್ದರೂ ನಿಭಾಯಿಸಲು ಸಾಧ್ಯವಾಗುತ್ತದೆ."
ಈಗಾಗಲೇ ನೋಡುತ್ತಿರುವಂತೆ ಭಾರತದಾದ್ಯಂತ, ವಾಟ್ಸಪ್ ಬಿಸಿನೆಸ್ ಅಪ್ಲಿಕೇಶನ್‌ನಲ್ಲಿ ಬಿಸಿನೆಸ್ ಎಐ ಅನ್ನು ಹಾಕಿಕೊಂಡ ಸಣ್ಣ ವ್ಯವಹಾರಸ್ಥರು ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುತ್ತಿದ್ದಾರೆ ಮತ್ತು ಅವರ ವ್ಯಾಪಾರ ಬೆಳೆಯುತ್ತಿದೆ.
ಸಾಯಿಲ್ ಕಾನ್ಸೆಪ್ಟ್ (Soil Concept), ಇದೊಂದು 100% ಸಸ್ಯಾಧಾರಿತ ವೈಯಕ್ತಿಕ ಆರೈಕೆ ಬ್ರ್ಯಾಂಡ್. ವ್ಯವಹಾರೇತರ ಸಮಯಗಳಲ್ಲಿ ಸಹ ಅನೇಕ ಕರೆಗಳು ಬರುತ್ತಿದ್ದವು. ಆದರೆ ಉತ್ತರಿಸ ಲಾಗದ ಕಾರಣ, ಸಂಭಾವ್ಯ ಗ್ರಾಹಕರನ್ನು ಕಳೆದುಕೊಳ್ಳುತ್ತಿತ್ತು. ಪರ್ಪಲ್ ಸನ್-ಸೆಟ್ (The Purple Sunset), ಇದೊಂದು ವೈಯಕ್ತಿಕಗೊಳಿಸಿದ, ಹ್ಯಾಂಪರ್‌ಗಳಲ್ಲಿ ಪರಿಣತಿ ಹೊಂದಿರುವ ಕಸ್ಟಮೈಸ್ಡ್ ಉಡುಗೊರೆ ವ್ಯವಹಾರ. ಇದರ ಮಾಲೀಕರು ಬೇರೆ ಬೇರೆ ಕೆಲಸ ಮಾಡುತ್ತ ನಿತ್ಯ 60-70 ಗ್ರಾಹಕರ ಪ್ರಶ್ನೆಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದರು. ಈ ಎರಡೂ ವ್ಯವಹಾರಗಳು ಆಯ್ದ ವ್ಯವಹಾರ ಗಳ ಅಡಿಯಲ್ಲಿ ಬರುತ್ತಿದ್ದವು.
ಸಾಯಿಲ್ ಕಾನ್ಸೆಪ್ಟ್ ನ ಸಹ-ಸಂಸ್ಥಾಪಕಿ ತುಬಾ ಸಿದ್ದಿಕಿ, "ನಾವು ತಡರಾತ್ರಿಯಲ್ಲಿ ಬರುತ್ತಿದ್ದ ಲೀಡ್‌ಗಳನ್ನು ಕಳೆದುಕೊಳ್ಳುತ್ತಿದ್ದೆವು ಮತ್ತು ಈಗ 24/7 ಬೆಂಬಲ ಇರುವುದರಿಂದ ನಮ್ಮ ಲೀಡ್ ಪರಿವರ್ತನೆ ದರ 80-90% ಕ್ಕೆ ಏರಿದೆ. ವಾಟ್ಸಪ್ ನಲ್ಲಿ ಬಿಸಿನೆಸ್ ಎಐ ಅನ್ನು ಹೊಂದಿಸುವುದು ಅತ್ಯಂತ ಸರಳವಾಗಿದೆ - ಕೋಡಿಂಗ್ ಬೇಕಿಲ್ಲ, ಸಂಕೀರ್ಣವಾದ ಅನ್ಯ ವ್ಯಕ್ತಿಯ ಸಾಫ್ಟ್ ವೇರ್ ಬೇಕಿಲ್ಲ. ನಾನು ನಮ್ಮ ಉತ್ಪನ್ನ ಕ್ಯಾಟಲಾಗ್ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದೇನೆ ಮತ್ತು ಎಐ ನನ್ನ ವ್ಯವಹಾರದ ವಿವರಗಳು ಮತ್ತು ಉದ್ದೇಶವನ್ನು ಅರ್ಥಮಾಡಿಕೊಂಡಿದೆ. ಈಗ ನಮ್ಮ ಗ್ರಾಹಕರ ಸಂಖ್ಯೆ 15,000+. ಇಷ್ಟು ಜನ ಗ್ರಾಹಕರನ್ನು ನಿರ್ವಹಿಸಲು ಮತ್ತು ಬೆಳೆಯಲು ನಮಗೆ ಸಾಯಿಲ್ ಕಾನ್ಸೆಪ್ಟ್ ಸಹಾಯ ಮಾಡುತ್ತಿದೆ. ಇದೊಂದು ಗೇಮ್-ಚೇಂಜರ್."
ಗುಣವೀನ್ ಕೌರ್ ಸಂಸ್ಥಾಪಕರು, ದಿ ಪರ್ಪಲ್ ಸನ್-ಸೆಟ್: "ಇದು ಎಷ್ಟು ಸರಳವಾಗಿದೆ ಎಂಬುದನ್ನು ನೋಡಿ ಅಚ್ಚರಿಯಾಯಿತು. ಕೆಲವೇ ಗಂಟೆಗಳಲ್ಲಿ ಬಿಸಿನೆಸ್ ಎಐ ನನ್ನ ವ್ಯವಹಾರದ ಬಗ್ಗೆ ಎಲ್ಲವನ್ನೂ ಕಲಿತುಕೊಂಡಿತು ಮತ್ತು ನಾನು ಉತ್ತರಿಸುವಂತೆಯೇ ಗ್ರಾಹಕರಿಗೆ ಉತ್ತರಿಸುತ್ತದೆ. ಎಐ ಪ್ರಶ್ನೆಗಳನ್ನು ನಿರ್ವಹಿಸಲು ಆರಂಭಿಸಿದ ಮೇಲೆ ಪ್ರತಿದಿನ 6-7 ಆರ್ಡರ್‌ಗಳು ನೇರವಾಗಿ ಕ್ಲೋಸ್ ಆಗುತ್ತಿವೆ. ಜೊತೆಗೆ ಮಾರಾಟದಲ್ಲಿ 40% ಹೆಚ್ಚಳ ಕಾಣುತ್ತಿದೆ. ಇದು ಇನ್ನಷ್ಟು ಬೆಳೆಯುತ್ತದೆ."
ಈ ಸಮಯದಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಬಿಸಿನೆಸ್ ಎಐ ಗೆ ಅರ್ಹರಾಗಲು ಮತ್ತು ವಾಟ್ಸಪ್ ಬಿಸಿನೆಸ್ ಅಪ್ಲಿಕೇಶನ್ ಅನ್ನು ಬಳಸಲು ಕೆಲವೊಂದು ಮಾನ ದಂಡಗಳನ್ನು ಪೂರೈಸಬೇಕು.
ಬಿಸಿನೆಸ್ ಎಐ ಅನ್ನು ಹೇಗೆ ಬಳಸುವುದು ಮತ್ತು ಹೊಂದಿಸುವುದು
ವಾಟ್ಸಪ್ ಬಿಸಿನೆಸ್ ಅಪ್ಲಿಕೇಶನ್ ಬಳಸಲು ಅರ್ಹವಾಗಿರುವ ವ್ಯವಹಾರಗಳು ಟೂಲ್ಸ್ ಟ್ಯಾಬ್ ಗೆ ಹೋಗಿ 'ನಿಮ್ಮ ವ್ಯಾಪಾರ ಎಐ (Your Business AI’)' ಅನ್ನು ಆಯ್ಕೆ ಮಾಡಬೇಕು. ತಮಗೆ ಬೇಕಾದಂತಹ ವೈಶಿಷ್ಟ್ಯಗಳನ್ನು ಹೊಂದಲು ಅಲ್ಲಿ ನೀಡಿರುವ ಕೆಲವೊಂದು ಹೆಜ್ಜೆಗಳನ್ನು ಅನುಸರಿಸಬಹುದು.
ಒಮ್ಮೆ ಸಕ್ರಿಯಗೊಳಿಸಿದ ನಂತರ ಬಿಸಿನೆಸ್ ಎಐ ವಾಟ್ಸಪ್ ನಲ್ಲಿ ತಕ್ಷಣವೇ ಕೆಲಸಕ್ಕೆ ಸಿದ್ಧವಾಗಿರುತ್ತದೆ. ಗ್ರಾಹಕರೊಂದಿಗೆ ಸಂಭಾಷಿಸುತ್ತದೆ, ಪ್ರಶ್ನೆಗಳಿಗೆ ಉತ್ತರಿಸುತ್ತದೆ, ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ, ಈಗಾಗಲೇ ತಮ್ಮ ಪ್ರೊಫೈಲ್ ಮತ್ತು ಕೆಟಲಾಗ್ ಗಳಲ್ಲಿ ಇರುವಂತಹ ಪ್ರಮುಖ ವ್ಯವಹಾರ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಮತ್ತು ಮಾರಾಟವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
ಆದರೆ ಬಿಸಿನೆಸ್ ಎಐ ಯಾವಾಗಲೂ ವ್ಯವಹಾರಸ್ಥರ ನಿಯಂತ್ರಣದಲ್ಲಿಯೇ ಇರುತ್ತದೆ. ಅಗತ್ಯವಿದ್ದಾಗ ಅವರು, ಈ ಎಐ ನೆರವಿಲ್ಲದೆಯೇ ಗ್ರಾಹಕರಿಗೆ ನೇರವಾಗಿ ಉತ್ತರಿಸಬಹುದು; ವಾಟ್ಸಒ ನಲ್ಲಿ ಬಿಸಿನೆಸ್ ಎಐ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಿಹೊಂದಿಸಬಹುದು ಅಥವಾ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಆಫ್ ಮಾಡಬಹುದು. ನಿಮ್ಮ ಬಿಸಿನೆಸ್ ಎಐ ಅನ್ನು ಹೇಗೆ ಹೊಂದಿಸುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಹಾಯ ಕೇಂದ್ರಕ್ಕೆ (Help Center) ಭೇಟಿ ನೀಡಿ.