ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶೇಷ ವಿನ್ಯಾಸ ಹೊಂದಿರುವ ಸಮಿಟ್ ವಾಚ್ ಸರಣಿ ಅನಾವರಣಗೊಳಿಸಿದ ಸೊನಾಟ

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಪ್ರೀಮಿಯಂ ಮಾದರಿಯ ವಿನ್ಯಾಸಗಳನ್ನು ತಲುಪಿಸುವ ಉದ್ದೇಶದಿಂದ ಪ್ರಸಿದ್ಧ ವಾಚ್ ಬ್ರ್ಯಾಂಡ್ ಸೊನಾಟ, ತನ್ನ ಪ್ರಥಮ ವಿನ್ಯಾಸ-ಆಧಾರಿತ ನೂತನ ಸಮಿಟ್ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಘೋಷಿಸಿದೆ. ಈ ವಿಶೇಷ ಸರಣಿಯು ಏಳು ವಿಶಿಷ್ಟ ವಾಚ್‌ ಗಳ ಮೂಲಕ ಲಡಾಖ್‌ ನ ಅಸಾಧಾರಣ ಪ್ರಾಕೃತಿಕ ಭೂದೃಶ್ಯಗಳನ್ನು ಜೀವಂತಗೊಳಿಸುವ ವಿನ್ಯಾಸ ಹೊಂದಿದೆ.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಪ್ರೀಮಿಯಂ ಮಾದರಿಯ ವಿನ್ಯಾಸಗಳನ್ನು ತಲುಪಿಸುವ ಉದ್ದೇಶದಿಂದ ಪ್ರಸಿದ್ಧ ವಾಚ್ ಬ್ರ್ಯಾಂಡ್ ಸೊನಾಟ, ತನ್ನ ಪ್ರಥಮ ವಿನ್ಯಾಸ-ಆಧಾರಿತ ನೂತನ ಸಮಿಟ್ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಘೋಷಿಸಿದೆ. ಈ ವಿಶೇಷ ಸರಣಿಯು ಏಳು ವಿಶಿಷ್ಟ ವಾಚ್‌ ಗಳ ಮೂಲಕ ಲಡಾಖ್‌ ನ ಅಸಾಧಾರಣ ಪ್ರಾಕೃತಿಕ ಭೂದೃಶ್ಯಗಳನ್ನು ಜೀವಂತಗೊಳಿಸುವ ವಿನ್ಯಾಸ ಹೊಂದಿದೆ. ಪುರುಷರಿಗಾಗಿ ರೂಪಿಸಲಾದ ಈ ಸರಣಿಯನ್ನು ಮಹತ್ವಾಕಾಂಕ್ಷೆಯಿಂದ ಮುನ್ನಡೆಯುವ, ದೊಡ್ಡ ಕನಸು ಕಾಣುವ, ಉನ್ನತ ಗುರಿ ಇಟ್ಟುಕೊಂಡಿರುವ ಹಾಗೂ ಇತರರು ಅಸಾಧ್ಯವೆಂದು ಭಾವಿಸುವುದನ್ನೂ ಸಾಧಿಸುವ ಧೈರ್ಯವಿರುವ ನವಯುಗದ ಪುರುಷರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ.

ಲಡಾಖ್‌ ನ ರಮಣೀಯ ಪರ್ವತ ಶಿಖರಗಳು ಮತ್ತು ಅಲ್ಲಿನ ವೈವಿಧ್ಯಮಯ ಪ್ರಾಕೃತಿಕ ಸೌಂದರ್ಯ ದಿಂದ ಪ್ರೇರಣೆ ಪಡೆದಿರುವ ಈ ಸಂಗ್ರಹವು, ಭೂದೃಶ್ಯದ ಅಪರೂಪದ ನೋಟಗಳನ್ನು ಆಧುನಿಕ ಹಾಗೂ ಧರಿಸಬಹುದಾದ ಸ್ಟೈಲ್ ಆಗಿ ಪರಿವರ್ತಿಸುತ್ತದೆ. ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಕನಸು ಕಾಣುವ, ನಿಯಮಗಳಿಗೆ ಸವಾಲು ಹಾಕುವ ಮತ್ತು ಕಲ್ಪನೆಗೂ ಮೀರಿದ್ದನ್ನು ಸಾಧಿಸಲು ಧೈರ್ಯ ತೋರುವ ಯುವ ಸಾಧಕರ ಪೀಳಿಗೆಗಾಗಿ ಸಮಿಟ್ ಸಂಗ್ರಹವು ಪರ್ವತಗಳ ಗಾಂಭೀರ್ಯ ಮತ್ತು ಉತ್ಸಾಹವನ್ನು ವಿಶಿಷ್ಟ ವಿನ್ಯಾಸದ ಭಾಷೆಯೊಂದಿಗೆ ಪರಿಚಯಿಸಲಿದೆ.

ಇದನ್ನೂ ಓದಿ: Titan: ಟೈಟಾನ್ ತನ್ನ 40ನೇ ವಾರ್ಷಿಕೋತ್ಸವ: ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರಿಗೆ ‘ಯೂನಿಟಿ ವಾಚ್’ ಮೂಲಕ ಗೌರವ

ಈ ಉತ್ಪನ್ನ ಬಿಡುಗಡೆ ಕುರಿತು ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್‌ನ ಸೊನಾಟ ಬ್ರ್ಯಾಂಡ್ ಹೆಡ್ ಪುಲಕ್ ನರೈನ್ ಅವರು, "ನಮ್ಮ ಬ್ರ್ಯಾಂಡ್ ತನ್ನ ವಿನ್ಯಾಸದ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಉನ್ನತ ಹಂತಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಸಮಿಟ್ ಸಂಗ್ರಹವು ಅತ್ಯುತ್ತಮ ವಿನ್ಯಾಸ ಮತ್ತು ಆಧುನಿಕ ಸೌಂದರ್ಯಪ್ರಜ್ಞೆಯನ್ನು ಒಳಗೊಂಡಿದ್ದು ಸೊನಾಟಗೆ ಅತ್ಯಂತ ಆಕರ್ಷಕವಾದ ಅಭಿವ್ಯಕ್ತಿಯನ್ನು ನೀಡಿದೆ.

ವಿನ್ಯಾಸ ಮತ್ತು ಸೊಗಸಾದ ಕತೆಯನ್ನು ಸಾರುವ ವಿಶಿಷ್ಟ ಉತ್ಪನ್ನವನ್ನು ಪರಿಚಯಿಸುವುದರ ಜೊತೆಗೆ, ಸದಾ ನಮ್ಮ ಬ್ರ್ಯಾಂಡ್‌ ನ ಕೇಂದ್ರಬಿಂದುವಾಗಿರುವ ಯುವ ಸಾಧಕರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಲು ಈ ಸಂಗ್ರಹ ಅನುವು ಮಾಡಿಕೊಡುತ್ತದೆ. ಈ ಮೂಲಕ ಪ್ರೀಮಿಯಂ ಹಾಗೂ ಮೌಲ್ಯ ಪ್ರಜ್ಞೆಯ ವಿಭಾಗದಲ್ಲಿ ಸೊನಾಟದ ಸ್ಥಾನವನ್ನು ನಾವು ಬಲಪಡಿಸುತ್ತಿದ್ದು, ಈ ಉತ್ಪನ್ನ ಬಿಡುಗಡೆಯು ಬ್ರ್ಯಾಂಡ್‌ ಗೆ ಮತ್ತು ನಮ್ಮ ಗ್ರಾಹಕರು ಇದನ್ನು ಅನುಭವಿಸುವ ವಿಚಾರದಲ್ಲಿ ಒಂದು ಹೊಸ ಅಧ್ಯಾಯವನ್ನು ರೂಪಿಸಲಿದೆ" ಎಂದು ತಿಳಿಸಿದರು.

ಪರ್ವತ ಶ್ರೇಣಿಗಳ ಬಂಗಾರದ ಬಣ್ಣದ ಸೌಂದರ್ಯ, ಅತ್ಯಂತ ಎತ್ತರದ ಹಿಮಶಿಖರಗಳ ವೈಭವದ ಉಪಸ್ಥಿತಿಯಿಂದ ಹಿಡಿದು ಪ್ರಶಾಂತ ತಾಣಗಳ ಮನಮೋಹಕ ನೋಟಗಳು, ಕಂದು ಬಣ್ಣದ ಬಂಜರು ಭೂಮಿ, ಬಂಗಾರ ಬಣ್ಣದ ಮರಳ ದಿಬ್ಬಗಳು, ವಿಶಾಲವಾದ ನೀಲಿ ದಿಗಂತಗಳು ಮತ್ತು ಸೂರ್ಯಾಸ್ತದ ನಂತರ ಹೊಳೆಯುವ ಹಿಮನದಿಗಳವರೆಗೆ (ಗ್ಲೇಸಿಯರ್ಸ್) - ಪ್ರತಿಯೊಂದು ವಾಚ್ ಕೂಡ ಈ ಪ್ರದೇಶದ ವಿಭಿನ್ನ ಭಾವವನ್ನು ಸೆರೆಹಿಡಿಯುತ್ತದೆ.

ಈ ಎಲ್ಲವೂ ಒಂದಾಗಿ, ವೈವಿಧ್ಯಮಯ ತೀವ್ರತೆಗಳಿಂದ ರೂಪುಗೊಂಡ ಭೂದೃಶ್ಯದ ಉತ್ಸಾಹ ವನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ಆರೋಹಣವೂ ದೃಢಸಂಕಲ್ಪವನ್ನು ಬೇಡುವ ಹಾಗೂ ಪ್ರತಿಯೊಂದು ಪ್ರಯಾಣವೂ ಗಡಿಗಳನ್ನು ದಾಟಿ ಮುನ್ನುಗ್ಗುವ ಹಂಬಲವನ್ನು ಸಾರುವ ಲಡಾಖ್‌ ನ ಪ್ರಾಕೃತಿಕ ವೈವಿಧ್ಯತೆಯನ್ನು ಈ ಸಂಗ್ರಹವು ಪ್ರತಿಬಿಂಬಿಸುತ್ತದೆ. ಸಮಿಟ್ ಸರಣಿಯ ಮೂಲಕ, ಸೊನಾಟ ಸಂಸ್ಥೆಯು ಬೋಲ್ಡ್ ಕನಸುಗಳಿಂದ ಮುನ್ನಡೆಯುವ, ಎತ್ತರಕ್ಕೆ ಏರುವ ಹಾಗೂ ಪ್ರತಿಯೊಂದು ಹೆಜ್ಜೆಯಲ್ಲೂ ವಾಚ್ ಔಟ್ ಫಾರ್ ಅಸ್ ಉತ್ಸಾಹದೊಂದಿಗೆ ತಮ್ಮದೇ ಆದ ಹಾದಿ ಯನ್ನು ನಿರ್ಮಿಸಲು ಹೊರಡುವ ಧೈರ್ಯವಿರುವ ಯುವ ಪೀಳಿಗೆಗೆ ಹತ್ತಿರವಾಗಲಿದೆ.

ವಿವಿಧ ಸಂದರ್ಭಗಳಿಗೆ ಸುಲಭವಾಗಿ ಹೊಂದುವಂತೆ ವಿನ್ಯಾಸಗೊಳಿಸಲಾದ ಈ ಸಂಗ್ರಹವು ಆಧುನಿಕ ಸೌಂದರ್ಯಪ್ರಜ್ಞೆ ಮತ್ತು ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. ಇದು ದೈನಂದಿನ ಕ್ಷಣಗಳಿಂದ ಹಿಡಿದು ವಿಶೇಷ ಕಾರ್ಯಕ್ರಮಗಳವರೆಗೂ ಧರಿಸಲು ಅತ್ಯಂತ ಸೂಕ್ತವಾಗಿದೆ.ರೂ. 4,500 ರಿಂದ ರೂ. 5,500 ಬೆಲೆಯ ಶ್ರೇಣಿಯಲ್ಲಿ ಲಭ್ಯವಿರುವ ಸಮಿಟ್ ಸಂಗ್ರಹವು ಈಗ ಸೊನಾಟ ಶೋರೂಮ್‌ ಗಳು, ಅಧಿಕೃತ ರಿಟೇಲ್ ಮಳಿಗೆಗಳು, ಪ್ರಮುಖ ಇ- ಕಾಮರ್ಸ್ ವೇದಿಕೆಗಳು ವೆಬ್‌ ಸೈಟ್‌ ನಲ್ಲಿ ಖರೀದಿಗೆ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.