ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿವಿಎಸ್ ಜುಪಿಟರ್: ಒಂದು ಕೋಟಿ ಭಾರತೀಯರ ವಿಶ್ವಾಸ ಗಳಿಸಿದ ಭಾರತದ ಸ್ಕೂಟರ್

ಈ ಐತಿಹಾಸಿಕ ಸಾಧನೆಯೊಂದಿಗೆ, ಟಿವಿಎಸ್ ಜುಪಿಟರ್ ಒಂದು ಕೋಟಿ ಸಂಖ್ಯೆಯನ್ನು ತಲುಪಿದ ಭಾರತದ ಅತ್ಯಂತ ವೇಗದ ಮತ್ತು ಅತ್ಯಂತ ಕಿರಿಯ ಸ್ಕೂಟರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ದೇಶದ ಅತ್ಯಂತ ಪ್ರತಿಷ್ಠಿತ ಸಂಚಾರ ಬ್ರ್ಯಾಂಡ್‌ ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಬೆಂಗಳೂರು: ಟಿವಿಎಸ್ ವೇಣು ಸಮೂಹದ ಭಾಗ ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ, ತಮಿಳು ನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕದಿಂದ ಟಿವಿಎಸ್ ಜುಪಿಟರ್ ಸ್ಕೂಟರ್‌ನ ಒಟ್ಟು ಒಂದು ಕೋಟಿ ಉತ್ಪಾದನಾ ಮೈಲಿಗಲ್ಲನ್ನು ಪೂರೈಸಿರುವುದಾಗಿ ಘೋಷಿಸಿದೆ.

ಈ ಐತಿಹಾಸಿಕ ಸಾಧನೆಯೊಂದಿಗೆ, ಟಿವಿಎಸ್ ಜುಪಿಟರ್ ಒಂದು ಕೋಟಿ ಸಂಖ್ಯೆಯನ್ನು ತಲುಪಿದ ಭಾರತದ ಅತ್ಯಂತ ವೇಗದ ಮತ್ತು ಅತ್ಯಂತ ಕಿರಿಯ ಸ್ಕೂಟರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ದೇಶದ ಅತ್ಯಂತ ಪ್ರತಿಷ್ಠಿತ ಸಂಚಾರ ಬ್ರ್ಯಾಂಡ್‌ ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಇದನ್ನೂ ಓದಿ: Bike taxi services: ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ: ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದ ಸಚಿವ ಬೈರತಿ ಸುರೇಶ್‌

ಕಳೆದ 13 ವರ್ಷಗಳಲ್ಲಿ, ಟಿವಿಎಸ್ ಜುಪಿಟರ್ ಭಾರತದೊಂದಿಗೆ ವಿಕಸನಗೊಂಡಿದ್ದು, ದೇಶಾದ್ಯಂತ ಮನೆಮನೆಗಳ ದೈನಂದಿನ ಸಂಚಾರದ ಅವಿಭಾಜ್ಯ ಅಂಗವಾಗಿದೆ. 2013ರಲ್ಲಿ ಜ್ಯಾದಾ ಕಾ ಫಾಯ್ದಾ (ಹೆಚ್ಚಿನ ಲಾಭ) ಎಂಬ ತತ್ವದೊಂದಿಗೆ ಪರಿಚಯಿಸಲ್ಪಟ್ಟ ಈ ಬ್ರ್ಯಾಂಡ್, ಪ್ರತಿಯೊಂದರಲ್ಲೂ ಹೆಚ್ಚಿನದನ್ನು ನೀಡುವ ಮೂಲಕ ದೈನಂದಿನ ಸಂಚಾರಕ್ಕೆ ಹೊಸ ವ್ಯಾಖ್ಯಾನ ಬರೆಯಲು ಮುಂದಾಯಿತು.

ಇಂದು ಟಿವಿಎಸ್ ಜುಪಿಟರ್ ಹೆಚ್ಚಿನ ಕಾರ್ಯಕ್ಷಮತೆ, ಹೆಚ್ಚಿನ ಮೈಲೇಜ್, ಹೆಚ್ಚಿನ ಆರಾಮ ಮತ್ತು ಹೆಚ್ಚಿನ ಅನುಕೂಲತೆಯನ್ನು ನೀಡುವುದನ್ನು ಮುಂದುವರೆಸಿದ್ದು, ಭಾರತದ ಬೆಳೆಯುತ್ತಿರುವ ಆತ್ಮವಿಶ್ವಾಸ, ಆಕಾಂಕ್ಷೆಗಳು ಮತ್ತು ಬದಲಾಗುತ್ತಿರುವ ಸಂಚಾರದ ಅಗತ್ಯಗಳಿಗೆ ತಕ್ಕಂತೆ ತನ್ನ ಜ್ಯಾದಾ ಭರವಸೆಯನ್ನು ಬೆಳೆಸುತ್ತಿದೆ.

ಈ ಮೈಲುಗಲ್ಲಿನ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಇಂಡಿಯಾ ದ್ವಿಚಕ್ರ ವಾಹನ ಬ್ಯುಸಿನೆಸ್‌ ನ ಪೀಪಲ್ ಮೊಬಿಲಿಟಿ ವಿಭಾಗದ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್, "ಕಳೆದ ಒಂದು ದಶಕದಲ್ಲಿ ಭಾರತದ ಸಾಮೂಹಿಕ ಮನೋಭಾವ ಬದಲಾಗಿದೆ. ನಾವು ಕೊರತೆಯ ಮನಸ್ಥಿತಿಯಿಂದ ಆತ್ಮವಿಶ್ವಾಸ, ಬೆಳವಣಿಗೆ ಮತ್ತು ಸಮೃದ್ಧಿಯ ಮನಸ್ಥಿತಿಯತ್ತ ಸಾಗಿದ್ದೇವೆ; ಗ್ರಾಹಕರು ಈಗ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ.

ಜ್ಯಾದಾ ತತ್ವ ಹೊಂದಿರುವ ಟಿವಿಎಸ್ ಜುಪಿಟರ್, ಈ ಬದಲಾಗುತ್ತಿರುವ ಭಾರತ ಮತ್ತು ಅದರ ಬೆಳೆಯುತ್ತಿರುವ ಆಕಾಂಕ್ಷೆಗಳ ಪ್ರತಿರೂಪವಾಗಿದೆ. ಒಂದು ಕೋಟಿ ಭಾರತೀಯರಿಗೆ ಟಿವಿಎಸ್ ಜುಪಿಟರ್ ದೈನಂದಿನ ಪ್ರಯಾಣದ ಭಾಗವಾಗಿ, ಅವರ ಜೀವನದಲ್ಲಿ ಸಂತೋಷವನ್ನು ತಂದಿದೆ. ಈ ಸಾಧನೆಯು ಟಿವಿಎಸ್ ಜುಪಿಟರ್ ಗಳಿಸಿರುವ ನಂಬಿಕೆ ಮತ್ತು ಗ್ರಾಹಕರು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಇದು ನಮ್ಮ ಉದ್ಯೋಗಿಗಳು, ಡೀಲರ್ ಪಾಲುದಾರರು ಮತ್ತು ಪೂರೈಕೆದಾರರ ಕಠಿಣ ಪರಿಶ್ರಮ ಹಾಗೂ ನಮ್ಮ ಎಂಜಿನಿಯರಿಂಗ್, ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯಗಳ ಬಲವನ್ನೂ ತೋರಿಸುತ್ತದೆ. ಭಾರತವು ಪ್ರಗತಿ ಸಾಧಿಸಿ ಹೊಸ ಎತ್ತರಕ್ಕೆ ಏರುತ್ತಿರುವಂತೆಯೇ ಇನ್ನೂ ಅನೇಕ ಮೈಲಿಗಲ್ಲುಗಳು ನಮಗಾಗಿ ಕಾಯುತ್ತಿವೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದರು.ಟಿವಿಎಸ್ ಜುಪಿಟರ್ ತನ್ನ ಮುಂದಿನ ಅಧ್ಯಾಯಕ್ಕೆ ಕಾಲಿಡುತ್ತಿರುವಂತೆ, ಭಾರತದ ಬದಲಾಗುತ್ತಿರುವ ಆಕಾಂಕ್ಷೆಗಳೊಂದಿಗೆ ವಿಕಸನಗೊಳ್ಳುವುದು ಮತ್ತು ದೈನಂದಿನ ಸಂಚಾರವನ್ನು ಹೆಚ್ಚು ಲಾಭದಾಯಕವಾಗಿಸುವುದು ಅದರ ಮುಖ್ಯ ಗುರಿಯಾಗಿದೆ.

ಜ್ಯಾದಾ ತತ್ವವನ್ನು ತನ್ನ ಹೃದಯದಲ್ಲಿರಿಸಿಕೊಂಡು, ಟಿವಿಎಸ್ ಜುಪಿಟರ್ ಭಾರತದ ಬದಲಾಗು ತ್ತಿರುವ ಸಂಚಾರ ಅಗತ್ಯಗಳಿಗೆ ತಕ್ಕಂತೆ ಮುಂದುವರಿಯಲಿದ್ದು, ದೈನಂದಿನ ಪ್ರಯಾಣಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತಾ ಮುಂದಿನ ಪೀಳಿಗೆಗಳಿಗೂ ವಿಶ್ವಾಸಾರ್ಹ ಸಂಚಾರ ಸಂಗಾತಿ ಯಾಗಿ ಉಳಿಯಲಿದೆ.