ನವದೆಹಲಿ: ಹಬ್ಬದ ಸಂಭ್ರಮ ಡಬಲ್ ಮಾಡಲು ಯಮಹಾ ಇಂಡಿಯಾ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಫೆಸ್ಟಿವಲ್ ಆಫರ್ ಮೂಲಕ ರಿಯಾಯಿತಿ, ಕಡಿಮೆ ಡೌನ್‌ಪೇಮೆಂಟ್, ಇನ್ಶೂರೆನ್ಸ್ ಸೇರಿದಂತೆ ಹಲವು ಭರ್ಜರಿ ಸೌಲಭ್ಯಗಳನ್ನು ಘೋಷಿಸಲಾಗಿದೆ. ಕಂಪನಿಯು ತನ್ನ ಜನಪ್ರಿಯ ಹೈಬ್ರಿಡ್ ಸ್ಕೂಟರ್‌ಗಳು ಹಾಗೂ ಪವರ್‌ಫುಲ್ ಮೋಟಾರ್‌ಸೈಕಲ್‌ಗಳ ವೇರಿಯೆಂಟ್ ಮೇಲೆ ಆಕರ್ಷಕ ಇನ್ಶೂರೆನ್ಸ್ ಆಫರ್‌ಗಳು ಮತ್ತು ಅತ್ಯಂತ ಕಡಿಮೆ ಡೌನ್ ಪೇಮೆಂಟ್ (Low Down Payment) ಯೋಜನೆಗಳನ್ನು ಪರಿಚಯಿಸಿದೆ.
ಯಮಹಾ ಸ್ಕೂಟರ್ ಹಾಗೂ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಹೆಚ್ಚುವರಿ ಹೊರೆ ಇಲ್ಲದೆ ವಾಹನ ಖರೀದಿಸಲು ಹಬ್ಬದ ಆಫರ್ ನೀಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಹೊಸ ವಾಹನ ಮನೆಗೆ ತರಲು ಹೆಚ್ಚಿನ ಮಂದಿ ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಯಮಹಾ ಹೊಸ ಆಫರ್ ಮೂಲಕ ನೆರವಾಗಿದೆ.
ಇದನ್ನೂ ಓದಿ: Yamaha: ಬೆಂಗಳೂರಿನಲ್ಲಿ ಯಮಹಾದಿಂದ ಮೊಟ್ಟಮೊದಲ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜನೆ
ಯಮಹಾ ಹೈಬ್ರಿಡ್ ಸ್ಕೂಟರ್ ಫ್ಯಾಸಿನೊ 125 ಹಾದೂ ರೇಝಡ್‌ಆರ್ 125 ಸ್ಕೂಟರ್‌ಗೆ 3,399 ರೂಪಾಯಿ ವಿಮೆ ಸೌಲಭ್ಯ ಹಾಗೂ ಕೇವಲ 2,499 ರೂಪಾಯಿ ಡೌನ್‌ಪೇಮೆಂಟ್ ಸೌಲಭ್ಯ ನೀಡಲಾಗಿದೆ. ಇನ್ನು ಯಮಹಾ FZ ಸರಣಿಯ ಬಹುತೇಕ ಎಲ್ಲಾ ಬೈಕ್‌ಗಳಿಗೆ 5,999 ರೂಪಾಯಿ ವಿಮಾ ಸೌಲಭ್ಯ ನೀಡಲಾಗುತ್ತಿದೆ.
ಜೊತೆಗೆ ಕೇವಲ 3900 ರೂಪಾಯಿ ಡೌನ್ ಪೇಮೆಂಟ್ ಪಾವತಿ ಮಾಡಿ ಹೊಸ ಬೈಕ್ ಮನೆಗೆ ತರಲು ಸಾಧ್ಯವಿದೆ. ಇನ್ನು ಯಮಹಾ XSR155 ಬೈಕ್‌ಗೆ 5,555 ರೂಪಾಯಿ ವಿಮೆ ನೀಡಲಾಗಿದೆ. ಇನ್ನು ಡೌನ್‌ಪೇಮೆಂಟ್ ಕೇವಲ 4,999 ರೂಪಾಯಿ ನೀಡಲಾಗಿದೆ. ಯಮಹಾ ಬೈಕ್ ಪೈಕಿ ಸ್ಪೋರ್ಟ್ಸ್ ವೇರಿಯೆಂಟ್ R15 ಹಾಗೂ MT15 ಬೈಕ್‌ನ್ನು ಕೇವಲ 4,999 ರೂಪಾಯಿ ಡೌನ್‌ಪೇಮೆಂಟ್ ಮಾಡಿ ಖರೀದಿಸಲು ಸಾಧ್ಯವಿದೆ.
ಹಬ್ಬದ ಆಫರ್ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಲಭ್ಯವಿದೆ. ಆಧರೆ ತಮಿಳು ನಾಡು ಹಾಗೂ ಕೇರಳದಲ್ಲಿ ಲಭ್ಯವಿಲ್ಲ. ದೇಶದ ಎಲ್ಲಾ ಯಮಹಾ ಅಧಿಕೃತ ಶೋ ರೂಂ ಹಾಗೂ ವೆಸ್‌ಸೈಟ್ ಮೂಲಕ ಆಫರ್ ಬೆಲೆಯಲ್ಲಿ ಬೈಕ್ , ಸ್ಕೂಟರ್ ಖರೀದಿಸಲು ಸಾಧ್ಯವಿದೆ. ಇನ್ನು ಯಮಹಾ ಖರೀದಿಸಲು ಬಯಸುವ ಗ್ರಾಹಕರು ಆಫರ್ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಹಾಗೂ ಸುಲಭ ಸಾಲ ಸೌಲಭ್ಯ ಮೂಲಕ ಖರೀದಿ ಸಾಧ್ಯವಿದೆ.