ಬೆಂಗಳೂರು: ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ FZ-S Fi Hybrid ಮೋಟಾರ್ ಸೈಕಲ್ ಹಾಗೂ 125ಸಿಸಿ ಸಾಮರ್ಥ್ಯದ Fascino ಮತ್ತು RayZR Hybrid ಸ್ಕೂಟರ್ ಗಳಿಗಾಗಿ ‘ಮೆಗಾ ಮೈಲೇಜ್ ಚಾಲೆಂಜ್’ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಸ್ಮಾರ್ಟ್ ಮೋಟಾರ್ ಜನರೇಟರ್ ವ್ಯವಸ್ಥೆ ಹೊಂದಿರುವ ಹೈಬ್ರಿಡ್ ತಂತ್ರಜ್ಞಾನದ ಅದ್ಭುತ ಇಂಧನ ದಕ್ಷತೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಅಧಿಕೃತ ಡೀಲರ್ ಶಿಪ್ ಗಳಾದ Eye Automobiles, ವೈಟ್ ಫೀಲ್ಡ್ ಯಮಹಾ, ಗರುಡ ಮೋಟಾರ್ ಸೈಕಲ್ಸ್, ವಿನಾಯಕ ಮೋಟಾರ್ಸ್ ಮತ್ತು ಪನಾಚೆ ಎಂಟರ್ ಪ್ರೈಸಸ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಯಮಹಾ ಗ್ರಾಹಕರು ಮತ್ತು ಅವರ ಕುಟುಂಬ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.
ಇದನ್ನೂ ಓದಿ: Yamaha: EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ
ಈ ವಾಹನಗಳಲ್ಲಿನ ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ಮತ್ತು ಸ್ಟಾಪ್ ಅಂಡ್ ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್), ಇಂಧನ ಬಳಕೆಯನ್ನು ಉತ್ತಮಗೊಳಿಸುವುದಲ್ಲದೆ, ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯು ಎಂಜಿನ್ ಅನ್ನು ಶಬ್ದವಿಲ್ಲದೆ ಸ್ಟಾರ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೇ, ಎಲೆಕ್ಟ್ರಿಕ್- ಅಸಿಸ್ಟೆಡ್ ಟಾರ್ಕ್ ಮೂಲಕ ವಾಹನಕ್ಕೆ ಉತ್ತಮ ಆಕ್ಸಲರೇಷನ್ ನೀಡುತ್ತದೆ ಮತ್ತು ವಾಹನವು ಚಲಿಸದೆ ಸುಮ್ಮನೆ ನಿಂತಾಗ ಎಂಜಿನ್ ಅನ್ನು ಸ್ಥಗಿತಗೊಳಿಸುವ ಮೂಲಕ ಇಂಧನವನ್ನು ಉಳಿಸುತ್ತದೆ.
ಈ ಹೈಬ್ರಿಡ್ ಆವಿಷ್ಕಾರವು ಸವಾರರಿಗೆ ಕಡಿಮೆ ವೆಚ್ಚದಲ್ಲಿ ದೀರ್ಘ ಪ್ರಯಾಣದ ಆನಂದ ನೀಡುವುದಲ್ಲದೆ, ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಕಾರ್ಯಕ್ಷಮತೆ ಮತ್ತು ದಕ್ಷತೆ ಬಯಸುವ ಪರಿಸರ ಪ್ರೇಮಿ ಸವಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಬೆಂಗಳೂರಿನ ಸಮೃದ್ಧಿ ಕನ್ವೆನ್ಷನ್ ಸೆಂಟರ್ ನಿಂದ ಆರಂಭವಾದ ಈ ‘ಮೆಗಾ ಮೈಲೇಜ್ ಚಾಲೆಂಜ್’ಗೆ ಚಾಲನೆ ನೀಡಲಾಗಿದ್ದು, ಅದಕ್ಕೂ ಮುನ್ನ ಎಲ್ಲಾ ಯಮಹಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಗಳಿಗೆ ಇಂಧನ ತುಂಬಿಸಲಾಯಿತು. ಮೋಟಾರ್ ಸೈಕಲ್ ಗಳಿಗೆ 60 ಕಿ.ಮೀ ಮತ್ತು ಸ್ಕೂಟರ್ ಗಳಿಗೆ 35 ಕಿ.ಮೀ ದೂರದ ನಿಗದಿತ ಮಾರ್ಗವನ್ನು ನಿಗದಿ ಪಡಿಸಲಾಗಿತ್ತು. ಈ ಮಾರ್ಗವು ನಗರದ ರಸ್ತೆಗಳು, ಟ್ರಾಫಿಕ್ ಮತ್ತು ಮುಕ್ತ ರಸ್ತೆಗಳು ಸೇರಿದಂತೆ ವಿವಿಧ ರೀತಿಯ ರಸ್ತೆಗಳನ್ನು ಒಳಗೊಂಡಿತ್ತು. ಈ ಸ್ಪರ್ಧೆಯು ಭಾಗವಹಿಸಿ ದವರಿಗೆ ವಾಹನದ ಸಸ್ಪೆನ್ಷನ್, ಚಾಲನಾ ಸೌಲಭ್ಯ, ಬ್ರೇಕಿಂಗ್, ಆಕ್ಸಲರೇಷನ್ ಮತ್ತು ಪಿಕ್-ಅಪ್ ಅನ್ನು ನೇರವಾಗಿ ಪರೀಕ್ಷಿಸಲು ಉತ್ತಮ ಅವಕಾಶ ನೀಡಿತು.
ಸವಾರಿಯನ್ನು ಪೂರ್ಣಗೊಳಿಸಿ ಮರಳಿದ ನಂತರ, ವಾಹನಗಳಿಗೆ ಮೊದಲಿದ್ದ ಮಟ್ಟಕ್ಕೆ ಪುನಃ ಇಂಧನ ತುಂಬಿಸಿ, ಮೈಲೇಜ್ ಅನ್ನು ಲೆಕ್ಕಹಾಕಲು ಎಷ್ಟು ಇಂಧನ ಬಳಕೆ ಆಗಿದೆ ಎಂಬುದನ್ನು ದಾಖಲಿಸಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಯಮಹಾ ತಜ್ಞರು ಉತ್ತಮ ಮೈಲೇಜ್ ಪಡೆಯಲು ಅಗತ್ಯವಿರುವ ಪರಿಣಾಮಕಾರಿ ಚಾಲನಾ ವಿಧಾನಗಳು ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ಯನ್ನು ಹಂಚಿಕೊಂಡರು.
ಗೌರವದ ಸಂಕೇತವಾಗಿ ಪ್ರತಿಯೊಬ್ಬ ಭಾಗವಹಿಸಿದವರಿಗೂ ವಿಶೇಷ ಸ್ಮರಣಿಕೆಗಳನ್ನು ನೀಡಲಾಯಿತು ಮತ್ತು ಉಚಿತವಾಗಿ ಬೈಕ್ ವಾಶ್ ಮಾಡಿಕೊಡಲಾಯಿತು. ಇದರೊಂದಿಗೆ, ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ಯಮಹಾ ಸಂಸ್ಥೆಯು ಎಲ್ಲಾ ವಾಹನಗಳಿಗೆ ಸಮಗ್ರ ‘10-ಪಾಯಿಂಟ್ ಇನ್ಸ್ ಪೆಕ್ಷನ್’ ಸೌಲಭ್ಯವನ್ನು ಒದಗಿಸುವ ಮೂಲಕ ಸುರಕ್ಷತೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿತು.
125cc Fi ಹೈಬ್ರಿಡ್ ಸ್ಕೂಟರ್ ಮೆಗಾ ಮೈಲೇಜ್ ಚಾಲೆಂಜ್‌ನಲ್ಲಿ ತಮ್ಮ ಸಾಧನೆಗಳಿಗಾಗಿ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆದ ಅಗ್ರ 5 ವಿಜೇತರು ಕೆಳಗೆ:
Winner Customer Name Mileage Achieved
1 Mr. Sasi Dhar 115.15 KMPL
2 Mr. Durgappa 100 KMPL
3 Mr. Gowtham 97.43 KMPL
4 Mr. Satyaraj 96.25 KMPL
5 Mr. Narasimha 92.6 KMPL
FZ-S Fi ಹೈಬ್ರಿಡ್ ಮೆಗಾ ಮೈಲೇಜ್ ಚಾಲೆಂಜ್‌ನಲ್ಲಿ ತಮ್ಮ ಸಾಧನೆಗಳಿಗಾಗಿ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆದ ಅಗ್ರ 3 ವಿಜೇತರು ಕೆಳಗೆ:
Winner Customer Name Mileage Achieved
1 Mr. Prabhakaran 103.7 KMPL
2 Mr. Rakshith 92.4 KMPL
3 Mr. Ambrish 92 KMPL