ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video Cricket: ಕ್ರಿಕೆಟ್‌ನಲ್ಲಿ ಇದೇ ಮೊದಲು, ಹೆಲ್ಮೆಟ್‌ಗೆ ಚೆಂಡು ಬಡಿದು ರನೌಟ್‌

ಸ್ಟೆಲೆನ್‌ಬೋಷ್‌ನಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು. ಇಂಗ್ಲೆಂಡ್ ಬಾರಿಸಿದ 317 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 295 ರನ್ ಗಳಿಸಿ ಸೋಲಿಗೆ ತುತ್ತಾಯಿತು.

Bizarre Run Out

ಲಂಡನ್‌: ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಣ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಅತ್ಯಂತ ವಿಚಿತ್ರವಾದ ರನೌಟ್ ಒಂದು ಸಂಭವಿಸಿದೆ. ಬ್ಯಾಟರ್‌ ಒಬ್ಬ ತಾನು ಬಾರಿಸಿದ ಚೆಂಡು ಎದುರಾಳಿ ತಂಡದ ಫೀಲ್ಡರ್‌ ಹೆಲ್ಮೆಟ್‌ಗೆ ಬಡಿದು ವಿಕೆಟ್‌ ಕಳೆದುಕೊಂಡಿದ್ದಾನೆ. ಈ ವಿಡಿಯೊ(Viral Video Cricket) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಂಗ್ಲೆಂಡ್‌ನ ಬ್ಯಾಟರ್ ಆರ್ಯನ್ ಸಾವಂತ್ ವಿಚಿತ್ರ ರೀತಿಯಲ್ಲಿ ಔಟಾದ ಬ್ಯಾಟರ್‌.

11 ರನ್‌ ಗಳಿಸಿದ್ದ ಸಾವಂತ್, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಜೇಸನ್ ರೌಲ್ಸ್ ಎಸೆತವನ್ನು ಲೆಗ್‌ ಸೈಡ್‌ನತ್ತ ಬಾರಿಸಿದರು. ಈ ವೇಳೆ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್‌ ನಡೆಸುತ್ತಿದ್ದ ಜೋರ್ಚ್ ವ್ಯಾನ್ ಶಲ್ಕ್‌ವಿಕ್ ಅವರ ಹೆಲ್ಮೆಟ್‌ಗೆ ಬಡಿದ ಚೆಂಡು ನೇರವಾಗಿ ವಿಕೆಟ್‌ಗೆ ಬಡಿದಿದೆ. ಚೆಂಡು ವಿಕೆಟ್‌ಗೆ ಬಡಿಯುವ ವೇಳೆ ಸಾವಂತ್ ಕ್ರೀಸ್‌ನಿಂದ ಮುಂದಿದ್ದ ಕಾರಣ ರನೌಟ್ ಆದರು. ಕ್ರಿಕೆಟ್‌ನಲ್ಲಿ ಬ್ಯಾಟರ್‌ ಒಬ್ಬ ಈ ರೀತಿ ರನೌಟ್‌ ಆದದ್ದು ಇದೇ ಮೊದಲ ಬಾರಿ. ಬಲವಾಗಿ ಚೆಂಡು ಬಡಿದ ಪರಿಣಾಮ ಶಲ್ಕ್‌ವಿಕ್‌ಗೆ ಗಾಯವಾಯಿತು. ನೋವಿನಲ್ಲಿ ಅವರು ಮೈದಾನದಲ್ಲೇ ನರಳಾಡಿದರು.



ಈ ರನೌಟ್‌ ಕಂಡ ನೆಟ್ಟಿಗರು ಮತ್ತು ಹಲವು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಟೆಲೆನ್‌ಬೋಷ್‌ನಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು. ಇಂಗ್ಲೆಂಡ್ ಬಾರಿಸಿದ 317 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 295 ರನ್ ಗಳಿಸಿ ಸೋಲಿಗೆ ತುತ್ತಾಯಿತು.

ರಣಜಿಯಲ್ಲೂ ಕೊಹ್ಲಿ ಫೇಲ್‌

ಭಾರತ ತಂಡದ ಅನುಭವಿ ಆಟಗಾರ ವಿರಾಟ್‌ ಕೊಹ್ಲಿಯ(Virat Kohli) ಬಹುನಿರೀಕ್ಷತ ರಣಜಿ ಕಮ್‌ಬ್ಯಾಕ್‌ ಕೇವಲ 6 ರನ್‌ಗೆ ಕೊನೆಗೊಂಡಿತು. ರೈಲ್ವೇಸ್‌ ವಿರುದ್ಧ ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 'ಡಿ' ಗುಂಪಿನ ಪಂದ್ಯದ ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್‌ ನಡೆಸಿದ ಕೊಹ್ಲಿ 15 ಎಸೆತ ಎದುರಿಸಿದರೂ 6 ಗಳಿಸಿ ಹಿಮಾಂಶು ಸಾಂಗ್ವಾನ್ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಕೊಹ್ಲಿಯ ಆಟ ನೋಡಲು ಸಾಗರೋಪಾದಿಯಲ್ಲಿ ಹರಿದು ಅಭಿಮಾನಿಗಳು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಯಿಂದ ಮೈದಾನದಿಂದ ಹೊರನಡೆದರು.

ಇದನ್ನೂ ಓದಿ Virat Kohli: ಗೆಳೆಯನ ಮಗನಿಗೆ ಕ್ರಿಕೆಟ್‌ ಟಿಪ್ಸ್‌ ಕೊಟ್ಟ ಕೊಹ್ಲಿ; ವಿಡಿಯೊ ವೈರಲ್‌

ದ್ವಿತೀಯ ದಿನದಾಟದ ಮುಕ್ತಾಯಕ್ಕೆ ದೆಹಲಿ ತಂಡ 7 ವಿಕೆಟ್‌ಗೆ 334 ರನ್‌ ಬಾರಿಸಿದೆ. ಸುಮಿತ್ ಮಾಥುರ್(78) ಮತ್ತು ಸಿದ್ಧಾಂತ್ ಶರ್ಮಾ(15) ರನ್‌ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟರ್‌ ಕಾಯ್ದುಕೊಂಡಿದ್ದಾರೆ. ನಾಯಕ ಆಯುಷ್ ಬದೋನಿ 99 ರನ್‌ ಗಳಿಸಿದ್ದ ವೇಳೆ ಔಟಾಗುವ ಮೂಲಕ ಒಂದು ರನ್‌ ಅಂತರದಿಂದ ಶತಕ ವಂಚಿತರಾದರು.