ಗರ್ಭಾವಸ್ಥೆಯ ಗಡ್ಡೆಯಿಂದ ಬಳಲುತ್ತಿದ್ದ 26 ವರ್ಷದ ಮಹಿಳೆಗೆ ಯಶಸ್ವಿ ಚಿಕಿತ್ಸೆ
ಚಿಕಿತ್ಸೆಯ ಸಮಯದಲ್ಲಿ ಆಕೆಯ ಗರ್ಭಾಶಯ ಮತ್ತು ಸಂತಾನೋತ್ಪತ್ತಿ ಸಾಮ ರ್ಥ್ಯಕ್ಕೆ ಯಾವುದೇ ತೊಂದರೆಯಾಗದಂತೆ ಜಾಗರೂಕತೆ ವಹಿಸಲಾಗಿದೆ. ಈ ರೋಗಿಯು ಗರ್ಭಾ ಶಯದೊಳಗೆ ಅಸಹಜ ಅಂಗಾಂಶಗಳ ಬೆಳವಣಿಗೆಯಿಂದ ಉಂಟಾಗುವ ಅಪರೂಪದ ಗಡ್ಡೆ ಹೊಂದಿರುವ 'ಜೆಸ್ಟೇಶನಲ್ ಟ್ರೋಫೋಬ್ಲಾಸ್ಟಿಕ್ ನಿಯೋಪ್ಲಾಸಿಯಾ' ಎಂಬ ಸಂಕೀರ್ಣ ಸಮಸ್ಯೆ ಯಿಂದ ಬಳಲುತ್ತಿದ್ದರು. ಈ ಗಡ್ಡೆಯನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ ತೀವ್ರವಾದ ಆಂತರಿಕ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು
-
ಅಪರೂಪದ ಹಾಗೂ ಪ್ರಾಣಾಪಾಯ ಉಂಟು ಮಾಡಿದ್ದ ಗರ್ಭಾವಸ್ಥೆಯ ಗಡ್ಡೆಯಿಂದ ಬಳಲುತ್ತಿದ್ದ 26 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸಿ ಹೊಸ ಬದುಕು ನೀಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆ
- ಪ್ರತೀ 1000 ಗರ್ಭಧಾರಣೆಗಳಲ್ಲಿ ಇಬ್ಬರಲ್ಲಿ ಮಾತ್ರ ಇಂತಹ ಅಪರೂಪದ ಗಡ್ಡೆಗಳು ಕಂಡುಬರುತ್ತವೆ
ಬೆಂಗಳೂರು: ಅತ್ಯಂತ ಪ್ರತಿಷ್ಠಿತ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಬಹಳ ಅಪಾಯಕಾರಿ ಮತ್ತು ಅಪರೂಪದ ಗರ್ಭಧಾರಣೆ ಸಂಬಂಧಿತ ಗಡ್ಡೆ ಹೊಂದಿದ್ದ 26 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸಿ ಹೊಸ ಬದುಕನ್ನು ನೀಡಿ ಮಹತ್ವದ ಸಾಧನೆ ಮಾಡಿ ದ್ದಾರೆ.
ವಿಶೇಷವೆಂದರೆ, ಚಿಕಿತ್ಸೆಯ ಸಮಯದಲ್ಲಿ ಆಕೆಯ ಗರ್ಭಾಶಯ ಮತ್ತು ಸಂತಾನೋತ್ಪತ್ತಿ ಸಾಮ ರ್ಥ್ಯಕ್ಕೆ ಯಾವುದೇ ತೊಂದರೆಯಾಗದಂತೆ ಜಾಗರೂಕತೆ ವಹಿಸಲಾಗಿದೆ. ಈ ರೋಗಿಯು ಗರ್ಭಾ ಶಯದೊಳಗೆ ಅಸಹಜ ಅಂಗಾಂಶಗಳ ಬೆಳವಣಿಗೆಯಿಂದ ಉಂಟಾಗುವ ಅಪರೂಪದ ಗಡ್ಡೆ ಹೊಂದಿರುವ 'ಜೆಸ್ಟೇಶನಲ್ ಟ್ರೋಫೋಬ್ಲಾಸ್ಟಿಕ್ ನಿಯೋಪ್ಲಾಸಿಯಾ' ಎಂಬ ಸಂಕೀರ್ಣ ಸಮಸ್ಯೆ ಯಿಂದ ಬಳಲುತ್ತಿದ್ದರು. ಈ ಗಡ್ಡೆಯನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ ತೀವ್ರವಾದ ಆಂತರಿಕ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಆದರೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಕನ್ಸಲ್ಟೆಂಟ್ ಆಗಿರುವ ಡಾ. ನಿರ್ಮಲಾ ಚಂದ್ರಶೇಖರ್ ನೇತೃತ್ವದ ಬಹುಶಿಸ್ತೀಯ ವೈದ್ಯಕೀಯ ತಂಡವು ಈ ಸಂಕೀರ್ಣ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ರೋಗಿಯು ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದಾಗ 'ಮಿಸ್ಡ್ ಅಬಾರ್ಷನ್' (ಗರ್ಭ ಪಿಂಡದ ಬೆಳವಣಿಗೆ ನಿಂತುಹೋಗುವ ಒಂದು ರೀತಿಯ ಗರ್ಭಪಾತ) ಮತ್ತು ನಿರಂತರ ರಕ್ತಸ್ರಾವ ಆಗುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆಕೆಗೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಆ ವರದಿಯು ಗರ್ಭಾಶಯದೊಳಗೆ ಅಸಹಜವಾದ ಅಂಗಾಂಶದ ಬೆಳವಣಿಗೆಯನ್ನು ತೋರಿಸಿತು ಮತ್ತು ಆ ಭಾಗದಲ್ಲಿ ರಕ್ತದ ಹರಿವು ಗಣನೀಯವಾಗಿ ಹೆಚ್ಚಾಗಿತ್ತು.
ಇಂತಹ ಸಂದರ್ಭಗಳಲ್ಲಿ, ರೋಗಿಯ ಜೀವ ಉಳಿಸಲು ತುರ್ತಾಗಿ ಗರ್ಭಾಶಯವನ್ನು ತೆಗೆದು ಹಾಕುವುದು (ಹಿಸ್ಟರೆಕ್ಟಮಿ) ಅನಿವಾರ್ಯವಾಗುತ್ತದೆ. ಪರಿಸ್ಥಿತಿಯ ಗಂಭೀರತೆ ಮತ್ತು ಸಂಕೀರ್ಣತೆ ಯನ್ನು ಅರಿತ ರೋಗಿಯ ಕುಟುಂಬದವರು ಮೊದಲು ಗರ್ಭಾಶಯ ತೆಗೆದು ಹಾಕುವಂತೆ ವಿನಂತಿಸಿ ದ್ದರು. ಆದರೆ, ಸಂಪೂರ್ಣ ತಪಾಸಣೆಯ ನಂತರ ಫೋರ್ಟಿಸ್ ನಾಗರಭಾವಿಯ ವೈದ್ಯಕೀಯ ತಂಡವು, ರೋಗಿಯ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸುವ ನಿರ್ಧಾರ ಮಾಡಿ, ಆ ನಿಟ್ಟಿನಲ್ಲಿ ಹಂತ ಹಂತವಾಗಿ ಎಚ್ಚರಿಕೆಯಿಂದ ಸಂರಕ್ಷಾಣಾತ್ಮಕ ಚಿಕಿತ್ಸಾ ವಿಧಾನವನ್ನು ಆಯ್ಕೆ ಅನುಸರಿಸಿತು.
ವೈದ್ಯರ ತಂಡವು ಮೊದಲು ಗರ್ಭಾಶಯಕ್ಕೆ ರಕ್ತ ಪೂರೈಕೆಯಾಗುವುದನ್ನು ತಾತ್ಕಾಲಿಕವಾಗಿ ತಡೆಯುವ ಪ್ರಕ್ರಿಯೆಯನ್ನು ನಡೆಸಿತು. ಇದರಿಂದ ತೀವ್ರ ರಕ್ತಸ್ರಾವ ಆಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಆಯಿತು. ನಂತರ, ಅಲ್ಟ್ರಾಸೌಂಡ್ ಮಾರ್ಗದರ್ಶನದೊಂದಿಗೆ ಅತ್ಯಂತ ಜಾಗರೂಕತೆಯಿಂದ ಅಸಹಜ ಅಂಗಾಂಶವನ್ನು ತೆಗೆದುಹಾಕಲಾಯಿತು. ಈ ಸಂದರ್ಭದಲ್ಲಿ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು, ಯಾವುದೇ ಪ್ರಮುಖ ತೊಡಕುಗಳಿಲ್ಲದೆ ಸುಲಭ ವಾಗಿ ಚೇತರಿಸಿಕೊಂಡರು. ನಂತರದ ಪರೀಕ್ಷೆಗಳು ಇದು 'ಪಾರ್ಶಿಯಲ್ ಮೋಲಾರ್ ಪ್ರೆಗ್ನೆನ್ಸಿ' (ಅಪರೂಪದ, ಆದರೆ ಗುಣಪಡಿಸಬಹುದಾದ ಸ್ಥಿತಿ) ಎಂದು ಖಚಿತಪಡಿಸಿದವು. ಚಿಕಿತ್ಸೆಯ ನಂತರ, ರೋಗಿಯ ಗರ್ಭಧಾರಣೆಯ ಹಾರ್ಮೋನ್ ಮಟ್ಟವು ಸಹಜ ಸ್ಥಿತಿಗೆ ಮರಳಿದ್ದು, ಇದರಿಂದ ಗರ್ಭಾಶಯವನ್ನು ತೆಗೆದುಹಾಕುವ ಅಗತ್ಯವಿಲ್ಲದೇ ರೋಗಿಯು ಸಂಪೂರ್ಣವಾಗಿ ಚೇತರಿಸಿ ಕೊಂಡಿರುವುದು ಖಚಿತವಾಯಿತು.
ಈ ಪ್ರಕರಣದ ವಿವರಗಳನ್ನು ನೀಡುತ್ತಾ ಮಾತನಾಡಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಕನ್ಸಲ್ಟೆಂಟ್ ಡಾ. ನಿರ್ಮಲಾ ಚಂದ್ರಶೇಖರ್ ಅವರು, “ಇದು ಅತ್ಯಂತ ಸವಾಲಿನ ಪ್ರಕರಣವಾಗಿತ್ತು, ಏಕೆಂದರೆ ಇಲ್ಲಿ ಹಠಾತ್ ಮತ್ತು ತೀವ್ರವಾದ ರಕ್ತ ಸ್ರಾವ ಆಗುವ ಅಪಾಯವಿತ್ತು. ಇಲ್ಲಿ ರೋಗಿಯ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ ಯಾಗಿತ್ತು ಮತ್ತು ಅದೇ ಸಮಯದಲ್ಲಿ ಆಕೆಯ ಗರ್ಭಾಶಯವನ್ನು ಸಂರಕ್ಷಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದು ನಮ್ಮ ಗುರಿಯಾಗಿತ್ತು. ಮೊದಲು ಗರ್ಭಾಶಯಕ್ಕೆ ರಕ್ತದ ಹರಿವನ್ನು ಎಚ್ಚರಿಕೆಯಿಂದ ಕಡಿಮೆ ಮಾಡಿ, ನಂತರ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಅಸಹಜ ಅಂಗಾಂಶವನ್ನು ತೆಗೆದುಹಾಕುವ ಮೂಲಕ, ನಾವು ಸುರಕ್ಷಿತವಾಗಿ ಮತ್ತು ಆಕೆಯ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸಿಕೊಂಡೇ ಸಮರ್ಪಕ ಚಿಕಿತ್ಸೆ ಒದಗಿಸಲು ಯಶಸ್ವಿ ಯಾಗಿದ್ದೇವೆ” ಎಂದು ಹೇಳಿದರು.
ಫೋರ್ಟಿಸ್ ಆಸ್ಪತ್ರೆ ಮತ್ತು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ರೋಗಿಯು, “ನಾನು ಕೆಟ್ಟದ್ದಾಗಬಹುದೆಂದು ಭಯ ಪಟ್ಟಿದ್ದೆ. ಪರಿಸ್ಥಿತಿ ಇಷ್ಟು ಗಂಭೀರವಾಗಬಹುದು ಎಂದು ನಾನು ಯಾವತ್ತೂ ಊಹಿಸಿರಲಿಲ್ಲ. ಫೋರ್ಟಿಸ್ ನಾಗರಭಾವಿಯ ವೈದ್ಯರು ಎಲ್ಲವನ್ನೂ ತಾಳ್ಮೆ ಯಿಂದ ವಿವರಿಸಿದರು ಮತ್ತು ನನ್ನನ್ನು ಬಹಳ ಕಾಳಜಿಯಿಂದ ನೋಡಿಕೊಂಡರು. ನನ್ನ ಜೀವ ಉಳಿಸಿದ್ದಕ್ಕೆ ಮತ್ತು ಭವಿಷ್ಯದಲ್ಲಿ ತಾಯಿಯಾಗುವ ನನ್ನ ಕನಸನ್ನು ಜೀವಂತವಾಗಿಟ್ಟಿದ್ದಕ್ಕೆ ನಾನು ಅವರಿಗೆ ಚಿರಋಣಿಯಾಗಿದ್ದೇನೆ” ಎಂದು ಹೇಳಿದರು.
ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಶ್ರೀ ರತೀಫ್ ನಾಯಕ್ ಅವರು ಮಾತನಾಡಿ, “ಜೆಸ್ಟೇಶನಲ್ ಟ್ರೋಫೋಬ್ಲಾಸ್ಟಿಕ್ ಗಡ್ಡೆಗಳಿಗೆ ಚಿಕಿತ್ಸೆ ಒದಗಿಸಲು ಆರಂಭಿಕ ಹಂತದ ರೋಗನಿರ್ಣಯ ಮತ್ತು ಸಮನ್ವಯದ ಬಹುಶಿಸ್ತೀಯ ಪರಿಣತಿ ಬಹಳ ಅವಶ್ಯ. ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಬಂದಾಗ ಸುಧಾರಿತ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸಬಹುದಾದ ಚಿಕಿತ್ಸೆಯನ್ನು ನೀಡಲು ಫೋರ್ಟಿಸ್ ನಾಗರಭಾವಿಯು ಸುಸಜ್ಜಿತವಾಗಿದೆ. ಈ ಯಶಸ್ವಿ ಪ್ರಕರಣವು ಹೆಚ್ಚಿನ ಅಪಾಯದ ಮತ್ತು ಸಂಕೀರ್ಣವಾದ ಪ್ರಸೂತಿ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ನಮ್ಮ ಆಸ್ಪತ್ರೆಯು ಸದಾ ಸಿದ್ಧವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ತೊರಿಸಿಕೊಟ್ಟಿದೆ” ಎಂದು ಹೇಳಿದರು.