ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲುಗಲ್ಲು; ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

Bengaluru News: 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಭಾರತದ ಮೂಳೆ ಶಸ್ತ್ರಚಿಕಿತ್ಸಕರಿಗೆ ವರ್ಷಪೂರ್ತಿ ಅತ್ಯಾಧುನಿಕ ಪ್ರಾಯೋಗಿಕ ತರಬೇತಿ ನೀಡಲು ಮುಂದಾಗಿದ್ದು, ದೇಶದ ಮೊಟ್ಟಮೊದಲ ವಿಶೇಷ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ.

ಬೆಂಗಳೂರಿನ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್ʼ ಜತೆ ಮಹತ್ವದ ಒಪ್ಪಂದ ಮಾಡಿಕೊಂಡ 'ಡಿಪ್ಯೂ ಸಿಂಥೆಸ್' ಸಂಸ್ಥೆ.

ಬೆಂಗಳೂರು, ಆ.12: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ (Bengaluru News) ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಭಾರತದ ಮೂಳೆ ಶಸ್ತ್ರಚಿಕಿತ್ಸಕರಿಗೆ ವರ್ಷಪೂರ್ತಿ ಅತ್ಯಾಧುನಿಕ ಪ್ರಾಯೋಗಿಕ ತರಬೇತಿ ನೀಡಲು ಮುಂದಾಗಿದ್ದು, ದೇಶದ ಮೊಟ್ಟಮೊದಲ ವಿಶೇಷ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ, ವೈದ್ಯರು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಈ ಕೇಂದ್ರ ನೆರವಾಗಲಿದೆ.

ಏನು ಈ ಹೊಸ ಕೇಂದ್ರದ ಹೈಲೈಟ್ಸ್?

ಈ ಹಿಂದೆ ವರ್ಷಕ್ಕೆ ಕೇವಲ 30 ದಿನಗಳ ಕಾಲ ನಡೆಯುತ್ತಿದ್ದ ತರಬೇತಿ ದಿನಗಳನ್ನು ಈ ಹೊಸ ಕೇಂದ್ರದ ಮೂಲಕ 150ಕ್ಕೂ ಹೆಚ್ಚು ದಿನಗಳಿಗೆ ವಿಸ್ತರಿಸಲಾಗುತ್ತಿದೆ. ಅಲ್ಲದೆ ಈವರೆಗೆ ವಾರ್ಷಿಕವಾಗಿ 300ಕ್ಕೂ ಹೆಚ್ಚು ವೈದ್ಯರಷ್ಟೇ ತರಬೇತಿ ಪಡೆಯುತ್ತಿದ್ದರು. ಆದರೆ ಈ ಹೊಸ ಸೌಲಭ್ಯದಿಂದಾಗಿ ಇನ್ನು ಮುಂದೆ ಪ್ರತಿ ವರ್ಷ 1,000ಕ್ಕೂ ಹೆಚ್ಚು ಮೂಳೆ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಏನಿದು ಪ್ರಾಯೋಗಿಕ ತರಬೇತಿ? ಇದರಿಂದ ವೈದ್ಯರಿಗೇನು ಲಾಭ?

ನೇರವಾಗಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮುನ್ನ, ವೈದ್ಯರು ನಿಯಂತ್ರಿತ ವಾತಾವರಣದಲ್ಲಿ ಅನಾಟಮಿಕಲ್ ಬಯೋಸ್ಕಿಲ್ಸ್ ತರಬೇತಿ ಪಡೆಯುವುದು ಬಹಳ ಮುಖ್ಯ. ಇದು ವೈದ್ಯರಿಗೆ ಮಾನವನ ಅಂಗರಚನೆಯ ಬಗ್ಗೆ ನಿಖರ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಸರ್ಜರಿ ಮಾಡುವ ವಿಧಾನವನ್ನು ಮತ್ತಷ್ಟು ಕರಗತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಹೊಸ ಕೇಂದ್ರದಲ್ಲಿ ಒಟ್ಟು 5 ಅತ್ಯಾಧುನಿಕ ವರ್ಕ್‌ಸ್ಟೇಷನ್‌ಗಳಿರಲಿವೆ. ಮೂಳೆ ಮುರಿತ (ಟ್ರಾಮಾ), ಸೊಂಟ ಮತ್ತು ಮಂಡಿ ಮರುಜೋಡಣೆ, ರೊಬೊಟಿಕ್ ಸರ್ಜರಿ, ಸ್ಪೋರ್ಟ್ಸ್ ಮೆಡಿಸಿನ್ ಮುಂತಾದ ವಿಭಾಗಗಳಲ್ಲಿ ಭಾರತದ ಮೂಳೆ ವೈದ್ಯರಿಗೆ ಇಲ್ಲಿ ಅತ್ಯುನ್ನತ ಮಟ್ಟದ ತರಬೇತಿ ಸಿಗಲಿದೆ.

ಈ ಒಪ್ಪಂದದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಡಿಪ್ಯೂ ಸಿಂಥೆಸ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಕಾಲ್ರಾ, "ಭಾರತದಲ್ಲಿ ಶಸ್ತ್ರಚಿಕಿತ್ಸಾ ಶಿಕ್ಷಣವನ್ನು ಉನ್ನತೀಕರಿಸುವ ನಮ್ಮ ಬದ್ಧತೆಗೆ ಈ ಒಪ್ಪಂದ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಹ್ಯಾಂಡ್ಸ್ - ಆನ್ ಪ್ರಾಯೋಗಿಕ ತರಬೇತಿಯು ವೈದ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗುವ ಹೊಸ ತಂತ್ರಜ್ಞಾನಗಳನ್ನು ಕಲಿಯಲು ನೆರವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Belagavi News: ಬೆಳಗಾವಿಯಲ್ಲಿ ಅಪರೂಪದ ಘಟನೆ; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಪ್ರಸಿದ್ಧ ಜಾನ್ಸನ್ ಅಂಡ್ ಜಾನ್ಸನ್ ಒಡೆತನದ ಡಿಪ್ಯೂ ಸಿಂಥೆಸ್ ಮೂಳೆ ಚಿಕಿತ್ಸಾ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವ ಜಗತ್ತಿನ ಅತಿ ದೊಡ್ಡ ಸಂಸ್ಥೆಯಾಗಿದೆ. ಕಳೆದ 130 ವರ್ಷಗಳಿಂದ ಜಗತ್ತಿನಾದ್ಯಂತ ಲಕ್ಷಾಂತರ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಇದು ವೈದ್ಯರಿಗೆ ಬೆನ್ನೆಲುಬಾಗಿ ನಿಂತಿದೆ. ಕೆಲ ದಿನಗಳ ಹಿಂದಷ್ಟೇ ಸಂಸ್ಥೆಯು ಬೆಂಗಳೂರಿನಲ್ಲಿ ಜಿಸಿಸಿ ಕಚೇರಿಯನ್ನು ತೆರೆಯುವುದಾಗಿ ಘೋಷಿಸಿತ್ತು. ಇದೀಗ ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ.