Belagavi News: ಬೆಳಗಾವಿಯಲ್ಲಿ ಅಪರೂಪದ ಘಟನೆ; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
Belagavi News: ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ರೇಣುಕಾ ಗಣಾಚಾರಿ ಅವರು ಒಂದೇ ಹೆರಿಗೆ ವೇಳೆ ಮೂವರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ. ವೈದ್ಯರ ತಂಡದ ಯಶಸ್ವಿ ಪ್ರಯತ್ನದಿಂದ ಹೆರಿಗೆ ಸುಗಮವಾಗಿ ನೆರವೇರಿದ್ದು, ತಾಯಿ ಹಾಗೂ ಮೂವರು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ.
ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ತ್ರಿವಳಿ ಮಕ್ಕಳು. -
ಬೆಳಗಾವಿ, ಆ.11: ಜಿಲ್ಲೆಯ ಗೋಕಾಕ್ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ತ್ರಿವಳಿ ಮಕ್ಕಳ ಜನನವಾಗಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ರೇಣುಕಾ ಗಣಾಚಾರಿ ಅವರು ಒಂದೇ ಹೆರಿಗೆ ವೇಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡದ ಯಶಸ್ವಿ ಪ್ರಯತ್ನದಿಂದ ಹೆರಿಗೆ ಸುಗಮವಾಗಿ ನೆರವೇರಿದ್ದು, ತಾಯಿ ಹಾಗೂ ಮೂವರು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ.
ಡಾ. ಶ್ವೇತಾ ನಾಯಿಕ ನೇತೃತ್ವದಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೆರಿಗೆಯ ಬಳಿಕ ತಾಯಿ ಮತ್ತು ಮೂವರು ಶಿಶುಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಿ ಆರೈಕೆ ನೀಡಲಾಗುತ್ತಿದೆ.
ಒಂದೇ ಹೆರಿಗೆ ವೇಳೆ ತ್ರಿವಳಿ ಮಕ್ಕಳ ಜನನವಾಗಿರುವುದಕ್ಕೆ ರೇಣುಕಾ ಗಣಾಚಾರಿ ಹಾಗೂ ಅವರ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆ ಬರಬಹುದು ಹುಷಾರ್
ತ್ರಿವಳಿ ಮಕ್ಕಳ ಜನನದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ತಾಯಿ ಮತ್ತು ಶಿಶುಗಳ ಆರೋಗ್ಯ ವಿಚಾರಿಸಿದರು. ಮೂವರು ಶಿಶುಗಳು ಆರೋಗ್ಯವಾಗಿರುವುದರಿಂದ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗೋಕಾಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಸಮಯೋಚಿತ ಕ್ರಮ ಹಾಗೂ ಯಶಸ್ವಿ ವೈದ್ಯಕೀಯ ಸೇವೆಯಿಂದ ತಾಯಿ ಮತ್ತು ಮೂವರು ಶಿಶುಗಳು ಸುರಕ್ಷಿತವಾಗಿ ಹೆರಿಗೆ ನಂತರದ ಆರೈಕೆಯಲ್ಲಿದ್ದಾರೆ.