Health Tips: ವಯಸ್ಕರಲ್ಲಿ ಮೊಡವೆ: ಪರಿಹಾರವೇನು?
ಹದಿಹರೆಯ ಮಾತ್ರವಲ್ಲ, 20, 3೦, 4೦ ವರ್ಷಗಳಾದರೂ ಮೊಡವೆಯ ತೊಂದರೆ ಮುಗಿಯುತ್ತಿಲ್ಲ ಎಂದು ಅಲವತ್ತುಕೊಂಡು, ಚರ್ಮ ವೈದ್ಯರಲ್ಲಿ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ನಿಜ..ಈ ಸಮಸ್ಯೆ ಇತ್ತೀಚೆಗೆ ವಯಸ್ಕರನ್ನೂ ಈ ಪರಿಯಲ್ಲಿ ಕಾಡುತ್ತಿರುವುದೇಕೆ?


ನವದೆಹಲಿ: ಮೊಡವೆಯೆಂದರೆ (Acne problem) ಹದಿಹರೆಯದ ಒಡವೆ ಎಂಬ ಮಾತಿದೆ. ಆದ ರೀಗ ಆ ಮಾತು ಅರ್ಧ ಸತ್ಯ. ಮೊಡವೆಗೆ ಬೇಕಿದೆ ಎಲ್ಲಾ ಪ್ರಾಯದವರ ಗೊಡವೆ! ಮೊದಲಿನಂತೆ ಎಳೆ ಪ್ರಾಯ ದಲ್ಲಿ ಒಂದಿಷ್ಟು ವರ್ಷಗಳು ಕಾಡಿಸಿ ಮರೆಯಾಗುವ ತಾತ್ಕಾಲಿಕ ತೊಂದರೆಯಾಗಿ ಇದು ಉಳಿ ದಿಲ್ಲ. ಮೂವತ್ತು ವರ್ಷದ ವಯಸ್ಕರನ್ನೂ ಗಂಡು-ಹೆಣ್ಣೆನ್ನದೆ ಪೀಡಿಸುತ್ತಿರುವ ಈ ಸಮಸ್ಯೆ ಈಗ ಹಿಂದೆಂದಿಗಿಂತ ದೊಡ್ಡದಾಗಿದೆ. ಎಷ್ಟು ವರ್ಷಗಳಾದರೂ ಕನ್ನಡಿಯಂಥ ಕೆನ್ನೆ ಹೊಂದುವುದನ್ನು ಕನಸಾಗಿಯೇ ಉಳಿಸುವಂಥ ಈ ಸಮಸ್ಯೆ ಇತ್ತೀಚೆಗೆ ವಯಸ್ಕರನ್ನೂ ಈ ಪರಿಯಲ್ಲಿ ಕಾಡುತ್ತಿರುವುದೇಕೆ?
ಹದಿಹರೆಯ ಮಾತ್ರವಲ್ಲ, 20, 3೦, 4೦ ವರ್ಷಗಳಾದರೂ ಮೊಡವೆಯ ತೊಂದರೆ ಮುಗಿಯುತ್ತಿಲ್ಲ ಎಂದು ಅಲವತ್ತು ಕೊಂಡು, ಚರ್ಮ ವೈದ್ಯರಲ್ಲಿ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ನಿಜ. ಎಳೆ ಪ್ರಾಯದವರಂತೆ ಸುಲಭ ಮತ್ತು ಸರಳ ಚಿಕಿತ್ಸೆಗಳಿಗೆ ವಯಸ್ಕರ ಮೊಡವೆಗಳು ಬಗ್ಗುವುದೂ ಇಲ್ಲ. ಈ ತೊಂದರೆಯನ್ನು ಉಂಟುಮಾಡುವ ಕಾರಣಗಳ ಬೇರು ಆಳವಾಗಿ ಇರುವುದು ಇದರ ಮೂಲ. ಇದಕ್ಕಿಂತ ಮುಖ್ಯವಾಗಿ, ಮಹಿಳೆಯರು ಮತ್ತು ಪುರು ಷರಲ್ಲಿ ಈ ತೊಂದರೆಗಳು ಭಿನ್ನ ಕಾರಣಕ್ಕಾಗಿ ಬರುತ್ತವೆ; ಕೇವಲ ಹದಿಹರೆಯದ ಹಾರ್ಮೋನುಗಳ ಏರಿಳಿತಕ್ಕಲ್ಲ.
ಮಹಿಳೆಯರಲ್ಲಿ ಏನು ಕಾರಣ?: ಮಹಿಳೆಯರಲ್ಲಿ ಇದು ಕಾಣುವುದಕ್ಕೆ ಎಲ್ಲಕ್ಕಿಂತ ಪ್ರಧಾನ ಕಾರಣ ಚೋದಕಗಳ ಅಸಮತೋಲನ. ಅಂದರೆ ಪಿಸಿಒಎಸ್ ಅಥವಾ ಥೈರಾಯ್ಡ್ ತೊಂದರೆ ಗಳು ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾರಣವಾಗಬಲ್ಲವು. ಇದಲ್ಲದೆ, ಈಸ್ಟ್ರೋಜೆನ್, ಪ್ರೊಜೆಸ್ಟಿರಾನ್ ಮತ್ತು ಆಂಡ್ರೋಜೆನ್ ಹಾರ್ಮೋನುಗಳ ಏರಿಳಿತವಂತೂ ಕುತ್ತಿಗೆ, ದವಡೆ, ಗಲ್ಲದ ಭಾಗದ ಚರ್ಮದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಇವು ಕೆಂಪಾಗಿ ಊದಿಕೊಂಡ ಮೊಡವೆ ಮಾತ್ರವಲ್ಲ, ಆ ಮೊಡವೆಯ ಬೆನ್ನಿಗೆ ಕಪ್ಪು ಕಲೆಗಳನ್ನೂ ಉಳಿಸಿ ಹೋಗುತ್ತವೆ.
ಆದರೆ ಈ ಪ್ರಮಾಣದಲ್ಲಿ ಹಾರ್ಮೋನುಗಳು ಹೆಚ್ಚು-ಕಡಿಮೆ ಆಗುವುದಕ್ಕೆ ಕಾರಣಗಳು ಸಾಕ ಷ್ಟಿರುತ್ತವೆ. ಅತಿಯಾದ ಒತ್ತಡ, ಕೆಟ್ಟ ಆಹಾರಕ್ರಮ, ಸಾಕಷ್ಟು ನಿದ್ದೆ ಇಲ್ಲದಿರುವುದು, ವ್ಯಾಯಾಮ ಇಲ್ಲದಂಥ ಜಡ ಬದುಕು- ಇವೆಲ್ಲವೂ ತಮ್ಮ ಕೊಡುಗೆಯನ್ನು ಕೈಲಾದಷ್ಟು ನೀಡಿರುತ್ತವೆ. ಹಾಗಾಗಿ ಮೊಡವೆಯೊಂದೇ ಅಲ್ಲ, ಚರ್ಮದ ಮೇಲೆ ಸೂಕ್ಷ್ಮ ಸುಕ್ಕುಗಳು ಬೇಗನೇ ಕಾಣಿಸಿಕೊಂಡು, ಮುಖವೇ ಕಳಾಹೀನವಾಗಿ ವಯಸ್ಸಾದಂತೆ ಕಾಣಲಾರಂಭಿಸುತ್ತದೆ.
ಪುರುಷರಲ್ಲಿ ಏನು ಕಾರಣ?: ಪುರುಷರೂ ಹಾರ್ಮೋನುಗಳ ಏರಿಳಿತಕ್ಕೆ ಒಳಗಾಗಬಹುದು ಎಂಬು ದನ್ನು ನಿರ್ಲಕ್ಷಿಸುವಂತಿಲ್ಲ. ಥೈರಾಯ್ಡ್ ತೊಂದರೆ ಗಂಡಸರನ್ನೂ ಕಾಡುತ್ತದೆ. ಇನ್ ಸುಲಿನ್ ಪ್ರತಿರೋಧ, ಟೈಪ್- 2ಮಧುಮೇಹ- ಇಂಥವೆಲ್ಲ ಚರ್ಮದ ಆರೋಗ್ಯವನ್ನು ಹಾಳು ಗೆಡವುತ್ತವೆ. ಇದರ ಹಿಂದೆ ದೇಹದ ಚಯಾಪಚಯ ಏರುಪೇರಾಗಿರುವುದನ್ನು ಮುಖ್ಯವಾಗಿ ಗುರುತಿಸಬಹುದು. ಅಲರ್ಜಿಗಳೂ ಈ ತೊಂದರೆಯನ್ನು ಗಂಟಿಕ್ಕಬಹುದು. ಧೂಮಪಾನ ಮತ್ತು ಅಲ್ಕೋಹಾಲ್ ಸೇವನೆ ಸಹ ಚರ್ಮದಲ್ಲಿ ಸೇಬಂ ಉತ್ಪಾದನೆಯನ್ನು ಹಾಳುಗೆಡವಿ, ಮೊಡವೆ ಯನ್ನು ಉಂಟುಮಾಡಬಲ್ಲದು.
ಹೀಗೂ ಒಂದು ಕಾರಣವಿದೆ!: ಮುಖದ ಮೇಲೆ ಮೊಡವೆ ಏಳುವುದಕ್ಕೆ ತಲೆಯ ಚರ್ಮ ಕಾರಣ ವಾಗಬಹುದು ಎಂಬುದು ಗೊತ್ತೇ? ಹೌದು, ತಲೆ ಹೊಟ್ಟು, ಸೆಬಾರಿಯ, ಫಾಲಿಕ್ಯುಲೈಟಿಸ್ ಇತ್ಯಾದಿ ತೊಂದರೆಗಳು ತಲೆಯ ಚರ್ಮವನ್ನು ಕಾಡುತ್ತಿದ್ದರೆ, ಅದರ ಪರಿಣಾಮ ಮುಖದ ಮೇಲೆ ಗೋಚರಿಸಬಹುದು. ತಲೆಯಲ್ಲಿ ತುರಿಕೆ, ಹೊಟ್ಟು, ಅತಿಯಾಗಿ ಎಣ್ಣೆ ಜಿಡ್ಡು ಮುಂತಾದವು ಹಣೆ, ಕಪಾಲ, ಕಿವಿಯ ಆಚೀಚಿನ ಭಾಗಗಳಲ್ಲಿ ಮೊಡವೆಗಳಿಗೆ ಕಾರಣವಾಗುತ್ತವೆ. ತಲೆಯ ಚರ್ಮದಲ್ಲಿ ತೊಂದರೆ ಅತಿಯಾದರೆ, ಭುಜ ಮತ್ತು ಬೆನ್ನಿನ ಮೇಲೂ ಮೊಡವೆಗಳು ಏಳಬಲ್ಲವು ಎಂಬುದು ತಿಳಿದಿರಲಿ.
ಇದನ್ನು ಓದಿ:Health Tips: ವಿಟಮಿನ್ ಡಿ: ನಮಗೇಕೆ ಬೇಕು?
ಚಿಕಿತ್ಸೆ ಹೇಗೆ?: ಮೊದಲಿಗೆ ದೇಹದ ಚೋದಕಗಳೆಲ್ಲ ಸರಿಯಾಗಿವೆಯೇ ಎಂಬುದನ್ನು ತಿಳಿದು ಕೊಳ್ಳುವುದು ಮಹತ್ವದ್ದು. ಹಾರ್ಮೋನುಗಳಲ್ಲಿ ಏರಿಳಿತವಿದ್ದರೆ ಮೊಡವೆಗಳು ಬರುವ ಸಾಧ್ಯತೆ ಹೆಚ್ಚು. ಜೀವನಶೈಲಿ ಹೇಗಿದೆ ಎಂಬುದನ್ನು ಅಗತ್ಯವಾಗಿ ಪರಿಶೀಲಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯುತ್ತಿದ್ದೀರಾ, ಪೌಷ್ಟಿಕಾಂಶಯುಕ್ತ ಆಹಾರವನ್ನೇ ಸೇವಿಸುತ್ತಿದೀರಾ, ಮಲಬದ್ಧತೆ ಇದೆಯೇ, ನಿದ್ದೆಯ ಕೊರತೆಯಾಯಿತೇ, ಜಂಕ್ ಮಿತಿಮೀರಿತೇ- ಇವೆಲ್ಲವನ್ನೂ ಪರಿಶೀಲಿಸಿ. ತಲೆಯ ಚರ್ಮದ ಆರೋಗ್ಯ ಹೇಗಿದೆ ಗಮನಿಸಿದ್ದೀರಾ? ಹೊಟ್ಟೆಯ ಆರೋಗ್ಯ ಸರಿಯಿದೆಯೇ? ಚಯಾ ಪಚಯ ಮಗುಚಿ ಬಿದ್ದಿಲ್ಲವಷ್ಟೇ- ಈ ವಿಷಯಗಳ ಮಾಹಿತಿಯನ್ನು ವೈದ್ಯರಲ್ಲಿ ಹಂಚಿಕೊಂಡರೆ ಪರಿಣಾ ಮಕಾರಿ ಚಿಕಿತ್ಸೆ ನೀಡುವುದು ಅವರಿಗೆ ಸಾಧ್ಯವಾಗುತ್ತದೆ.