ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Tips: ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?

ಗರ್ಭಾವಸ್ಥೆಯಲ್ಲಿ ತಾಯಿ ಸೇವಿಸುವ ಆಲ್ಕೋಹಾಲ್ ಜರಾಯುವಿನ ಮೂಲಕ ಭ್ರೂಣಕ್ಕೆ ತಲುಪಿ ಮಗುವಿನ ಮೆದುಳು ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಶಾಶ್ವತ ಹಾನಿ ಉಂಟುಮಾಡುತ್ತದೆ. ಇದರಿಂದ ಕಲಿಕೆ ಅಸಮರ್ಥತೆ, ನಡವಳಿಕೆಯ ಸಮಸ್ಯೆಗಳು, ದೈಹಿಕ ವೈಕಲ್ಯಗಳು ಹಾಗೂ ಕಡಿಮೆ ತೂಕದ ಮಗು ಜನಿಸುವ ಅಪಾಯ ಹೆಚ್ಚಾಗುತ್ತದೆ.

ಪ್ರೊ. ಸುತ್ತೂರು ಮಾಲಿನಿ

ಬೆಂಗಳೂರು: ಮಗುವಿನ ಆರೋಗ್ಯ(Childrens Health) ಹಾಗೂ ಬೆಳವಣಿಗೆಯು(Growth) ಆನುವಂಶಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಇದರೊಟ್ಟಿಗೆ ಗರ್ಭಾವಸ್ಥೆಯಲ್ಲಿ ತಾಯಿ ಯಾವ ಬಗೆಯ ಆಹಾರ(Food) ಸೇವಿಸುತ್ತಾಳೆ? ಹಾಗೂ ಯಾವ ಬಗೆಯ ಹವ್ಯಾಸ ಹೊಂದಿರುತ್ತಾಳೆ? ಎನ್ನುವುದರ ಆಧಾರದ ಮೇಲೆ ಮಗುವಿನ ಮೆದುಳು ಬೆಳವಣಿಗೆ ಆಗುವುದು. ಹಾಗಾಗಿ ಗರ್ಭಾವಸ್ಥೆಯಲ್ಲಿರುವಾಗ ತಾಯಿ ಕೆಲವು ಆಹಾರ, ಪಾನೀಯ ಹಾಗೂ ಹವ್ಯಾಸಗಳಿಂದ ದೂರ ಉಳಿಯಬೇಕು. ವಿಶೇಷವಾಗಿ ಆಲ್ಕೋಹಾಲ್‌ ಸೇವನೆ ತ್ಯಜಿಸಬೇಕು.

ತಾಯಿ ಕುಡಿಯುವ ಆಲ್ಕೋಹಾಲ್‌ ಮಗುವಿನ ಮಿದುಳಿನ ಆರೋಗ್ಯದ ಮೇಲೆ ಯಾವೆಲ್ಲ ಪರಿಣಾಮ ಬೀರುವುದು? ಮಗುವಿನ ಸಂಪೂರ್ಣ ಆರೋಗ್ಯ ಹೇಗೆ ಹದಗೆಡುವುದು? ಎಂಬ ಬಗ್ಗೆ ವಿಶ್ವವಾಣಿಗೆ ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ ಮತ್ತು ಜನೋಮಿಕ್ಸ್ ವಿಭಾಗದ ಪ್ರೊ. ಸುತ್ತೂರು ಮಾಲಿನಿ ಅವರು ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಮದ್ಯಪಾನದಿಂದ ದೂರವಿರಿ

ಗರ್ಭಿಣಿಯರು ಮಾತ್ರವಲ್ಲ ಎಲ್ಲ ಮಹಿಳೆಯರೂ ಮದ್ಯಪಾನದಿಂದ ದೂರವಿರುವುದು ಒಳ್ಳೆಯದರು. ಪುರುಷರಿಗೆ ಹೋಲಿಸಿದರೆ ಮಹಿಳೆಯರ ದೇಹದ ರಚನೆಯಲ್ಲಿ ಆಲ್ಕೋಹಾಲ್ ಅನ್ನು ನಿರ್ವಿಷಯುಕ್ತ ಮಾಡುವಷ್ಟು ಶಕ್ತಿ ಇರುವುದಿಲ್ಲ.

ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಮುಟ್ಟಲೇ ಬೇಡಿ

ಗರ್ಭಿಣಿಯರು ಅದರಲ್ಲೂ ಗರ್ಭಧಾರಣೆಯ ಮೊದಲ ಮೂರು ತಿಂಗಳುವರೆಗೂ ಆಲ್ಕೋಹಾಲ್ ಅನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಲೇಬಾರದು. ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಸೇವನೆಯು ಜರಾಯುವಿನ (Placenta) ಮೂಲಕ ಮಗುವಿಗೆ ಹರಡಿ, ಮೆದುಳು ಮತ್ತು ದೈಹಿಕ ಬೆಳವಣಿಗೆಯ ಮೇಲೆ ತೀವ್ರ, ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಇದು ಭ್ರೂಣದ ಆಲ್ಕೋಹಾಲ್ ಸ್ಪೆಕ್ಟ್ರಮ್ ಅಸ್ವಸ್ಥತೆ (FASD), ಕಲಿಕೆಯ ಅಸಮರ್ಥತೆ, ದೈಹಿಕ ವೈಕಲ್ಯಗಳು ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

ಗರ್ಭಿಣಿಯಾಗಲು ಬಯಸುವ ಮಹಿಳೆಯರು ಕನಿಷ್ಠ ಒಂದು ವರ್ಷದ ಮೊದಲಿನಿಂದಲೇ ಸಿದ್ಧತೆ ಆರಂಭಿಸಬೇಕು. ಅದರಲ್ಲೂ ಈ ಆಲ್ಕೋಹಾಲ್ ಸೇವೆನೆಯ ಅಭ್ಯಾಸವಿದ್ದರೆ, ಅದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗರ್ಭಧಾರಣೆಯ ಪೂರ್ವ ಹಾಗೂ ಗರ್ಭಾವಸ್ಥೆಯಲ್ಲಿ ಮದ್ಯಸೇವನೆಯಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಸೇವೆನೆಯಿಂದಾಗುವ ದುಷ್ಪರಿಣಾಮಗಳು

ಮೆದುಳಿಗೆ ಹಾನಿ
ಆಲ್ಕೋಹಾಲ್ ಮಗುವಿನ ಕೇಂದ್ರ ನರಮಂಡಲದ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ, ಇದು ಕಲಿಕೆ, ನಡವಳಿಕೆ ಮತ್ತು ಜ್ಞಾಪಕಶಕ್ತಿಯಲ್ಲಿ ಶಾಶ್ವತ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ದೈಹಿಕ ದೋಷಗಳು

ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಸೇನೆ ಮಡುವುದರಿಂದ ಹುಟ್ಟುವ ಮಗುವಿನ ಮುಖದಲ್ಲಿ ವಿರೂಪತೆಗಳು, ಸಣ್ಣ ಗಾತ್ರದ ತಲೆ, ಹೃದಯದ ಸಮಸ್ಯೆಗಳು, ಮತ್ತು ತೋಳು/ಕಾಲುಗಳ ಬೆಳವಣಿಗೆಯಲ್ಲಿ ದೋಷಗಳು ಉಂಟಾಗಬಹುದು.

ಮಗುವಿನ ಬೆಳವಣಿಗೆ ಕುಂಠಿತ

ಗರ್ಭಾವಸ್ಥೆಯಲ್ಲಿ ಮದ್ಯಸೇವನೆ ಮಾಡುವುದರಿಂದ ಮಗು ಗರ್ಭಾಶಯದಲ್ಲಿ ಸರಿಯಾಗಿ ಬೆಳೆಯದಿರಬಹುದು, ಇದರಿಂದ ಕಡಿಮೆ ತೂಕದ ಮಗು ಜನಿಸಬಹುದು.

ಭ್ರೂಣದ ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್

ಇದು ದೈಹಿಕ, ಮಾನಸಿಕ ಮತ್ತು ನಡವಳಿಕೆಯ ಅಸಮರ್ಥತೆಗಳ ಒಂದು ಶ್ರೇಣಿಯಾಗಿದ್ದು, ಮಗು ಬೆಳೆದಂತೆ ನಡವಳಿಕೆಯಲ್ಲಿ ಬದಲಾವಣೆ, ಗಮನದ ಕೊರತೆ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಮಾಲಿನಿ ಅವರು ತಿಳಿಸಿದ್ದಾರೆ.