ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಎಬಿಸಿ ಜ್ಯೂಸ್ ಬಗ್ಗೆ ಗೊತ್ತೆ? ತೂಕ ಇಳಿಕೆಗೆ ಇದೇ ರಾಮ ಬಾಣ; ತಯಾರಿಸುವ ವಿಧಾನ ಇಲ್ಲಿದೆ

ABC Juice: ಎಬಿಸಿ ಜ್ಯೂಸ್‌ನಲ್ಲಿರುವ ಪ್ರಮುಖ ಪದಾರ್ಥಗಳು ಆಮ್ಲಾ (ನೆಲ್ಲಿ ಕಾಯಿ), ಬೀಟ್ರೂಟ್ ಮತ್ತು ಕ್ಯಾರೆಟ್. ಇವುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಜ್ಯೂಸ್ ಮಾಡಲಾಗುತ್ತದೆ. ಈ ಸಮೃದ್ಧವಾದ ಉತ್ಕರ್ಷಣ ನಿರೋಧಕ ಪಾನೀಯವು ತ್ವರಿತ ತೂಕ ನಷ್ಟ ಪರಿಣಾಮಕಾರಿ ಔಷಧ. ಆದರೆ ಕ್ಯಾಲೋರಿ, ಫೈಬರ್ ಅಂಶ, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳು ನಾವು ಸರಿಯಾದ ವಿಧಾನದಲ್ಲಿ ಬೆರೆಸಿದರೆ ಮಾತ್ರ ಪ್ರಯೋಜನ ದೊರೆಯುತ್ತದೆ.

ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ನೀವು ಎಬಿಸಿ ಜ್ಯೂಸ್ (ABC Juice) ಬಗ್ಗೆ ಕೇಳಿರಬಹುದು. ​ನೆಲ್ಲಿ ಕಾಯಿ (Amla), ಬೀಟ್ರೂಟ್ (Beetroot) ಮತ್ತು ಕ್ಯಾರೆಟ್ (Carrot) ಸಂಯೋಜನೆಯ ಈ ಜ್ಯೂಸ್ ಭಾರಿ ಟ್ರೆಂಡ್‌ನಲ್ಲಿದೆ. ಇದು ತೂಕ ಇಳಿಕೆಯಿಂದ ಹಿಡಿದು ಚರ್ಮದ ಆರೈಕೆವರೆಗೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಆದರೆ ಇದನ್ನು ಬಳಕೆ ಮಾಡುವ ಸರಿಯಾದ ವಿಧಾನ ತಿಳಿದಿದ್ದರೆ ಮಾತ್ರ ಅಗತ್ಯ ಪೋಷಕಾಂಶಗಳು, ಪ್ರಯೋಜನಗಳು ದೊರೆಯುತ್ತವೆ. ಹಾಗಿದ್ದರೆ ಬಳಕೆ ಮಾಡುವ ವಿಧಾನ ಹೇಗೆ? ಇಲ್ಲಿದೆ ವಿವರ.

ಎಬಿಸಿ ಜ್ಯೂಸ್‌ನಲ್ಲಿರುವ ಪ್ರಮುಖ ಪದಾರ್ಥಗಳು ನೆಲ್ಲಿ ಕಾಯಿ, ಬೀಟ್ರೂಟ್ ಮತ್ತು ಕ್ಯಾರೆಟ್. ಇವುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಜ್ಯೂಸ್ ಮಾಡಲಾಗುತ್ತದೆ. ಈ ಸಮೃದ್ಧವಾದ ಉತ್ಕರ್ಷಣ ನಿರೋಧಕ ಪಾನೀಯವು ತ್ವರಿತ ತೂಕ ನಷ್ಟ ಹೆಸರುವಾಸಿ. ಆದರೆ ಕ್ಯಾಲೋರಿ, ಫೈಬರ್ ಅಂಶ, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳು ನಾವು ಸರಿಯಾದ ವಿಧಾನದಲ್ಲಿ ಬಳಕೆ ಮಾಡಿದರೆ ಮಾತ್ರ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ನೆನಪಿಡಿ.

ಜ್ಯೂಸ್ ಮಾಡುವಾಗ ಈ ತಪ್ಪು ಮಾಡಬೇಡಿ

​ಜ್ಯೂಸ್ ಸೋಸಿ ಹಣ್ಣಿನಲ್ಲಿರುವ ನಾರುಗಳನ್ನು ಬಿಸಾಡಿದರೆ, ಅದು ನಷ್ಟವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಬಹುದು. ಆದ್ದರಿಂದ ಇದನ್ನು ಸ್ಮೂಥಿ ರೀತಿ ಗ್ರೈನ್ ಮಾಡಿ ಕುಡಿಯುವುದು ಉತ್ತಮ.

ಕಣ್ಣಿನ ಶಕ್ತಿ ಹೆಚ್ಚಿಸಲು, ತೂಕ ಇಳಿಸಲು, ಫಳಫಳ ಹೊಳೆಯುವ ಚರ್ಮ ಪಡೆಯಲು ಪಾಲಕ್ ಸೇವಿಸಿ

​ಸಕ್ಕರೆ ಸೇರಿಸಬೇಡಿ: ಕೃತಕ ಸಿಹಿ ಅಥವಾ ಸಕ್ಕರೆ ಸೇರಿಸುವುದರಿಂದ ಇದರ ಕ್ಯಾಲೋರಿ ಹೆಚ್ಚಾಗಿ ತೂಕ ಇಳಿಕೆಗೆ ಅಡ್ಡಿಯಾಗಬಹುದು.

ತುಂಬಾ ಸಮಯ ಇಡಬೇಡಿ: ಜ್ಯೂಸ್ ಅನ್ನು ಶೇಖರಿಸಿಟ್ಟರೆ ವಿಟಮಿನ್ ಸಿ ನಷ್ಟವಾಗಬಹುದು. ಹೀಗಾಗಿ ಮಾಡಿದ ತಕ್ಷಣ ಸೇವಿಸಿ.

​ತೂಕ ಇಳಿಕೆಗೆ ಇದು ಹೇಗೆ ನೆರವಾಗುತ್ತದೆ?

​ಚಹಾ, ಕಾಫಿ ಅಥವಾ ಇತರೆ ಸಕ್ಕರೆಯುಕ್ತ ಪಾನೀಯಗಳ ಬದಲಿಗೆ ಈ ಜ್ಯೂಸ್ ಕುಡಿಯುವುದರಿಂದ ದಿನನಿತ್ಯದ ಕ್ಯಾಲೋರಿ ಪ್ರಮಾಣ ಕಡಿಮೆಯಾಗುತ್ತದೆ. ಇದರಲ್ಲಿರುವ ಆ್ಯಂಟಿಆ್ಯಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿ.

ರೋಗನಿರೋಧಕ ಹೆಚ್ಚಿಸಿ ಕೊಬ್ಬನ್ನು ಉತ್ತಮವಾಗಿ ಚಯಾಪಚಯಗೊಳಿಸಬಹುದು. ಹಾಗೆಯೇ ಉತ್ತಮ ನೈಟ್ರೇಟ್‌ಗಳನ್ನು ಹೊಂದಿದ್ದು, ವ್ಯಾಯಾಮ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಕಿಡ್ನಿ ಕಲ್ಲು ಸಮಸ್ಯೆ ಇರುವವರು, ಕಡಿಮೆ ರಕ್ತದೊತ್ತಡ ಹೊಂದಿರುವವರು ಈ ಜ್ಯೂಸ್ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.