ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: 35 ವರ್ಷಗಳ ಬಳಿಕ ದಿಢೀರ್ ತೂಕ ಹೆಚ್ಚಾಗುತ್ತಿದೆಯೇ? ಥೈರಾಯ್ಡ್ ಸಮಸ್ಯೆಯೇ ಕಾರಣವಾಗಿರಬಹುದು

ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿಯಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಅನೇಕರಿದ್ದಾರೆ. ಆದರೆ ವಯಸ್ಸನ್ನು ಮೀರಿ ತೂಕ ಹೆಚ್ಚಾದರೆ ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ದೇಹದ ಪ್ರಮುಖ ಗ್ರಂಥಿ ಥೈರಾಯ್ಡ್ ಸಮಸ್ಯೆ ಕೂಡ ಕಾರಣ ಇರಬಹುದು. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹವು ಕಡಿಮೆ ಕ್ಯಾಲೊರಿಗಳನ್ನು ಹೊಂದಿ ತೂಕ ಹೆಚ್ಚಾಗುವುದು, ಆಯಾಸ ಹೆಚ್ಚುವುದು ಮುಂತಾದ ಸಮಸ್ಯೆಗೆ ಕಾರಣವಾಗಬಹುದು.

ಸಂಗ್ರಹ ಚಿತ್ರ

ಬೆಂಗಳೂರು, ಮೇ 26: ಇಂದು ತೂಕ ಏರಿಕೆ ಅನ್ನೋದು ಸಾಮಾನ್ಯ ಸಮಸ್ಯೆ ಎನಿಸಿಕೊಂಡಿದೆ. ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿಯಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಅನೇಕರಿದ್ದಾರೆ. ಆದರೆ ವಯಸ್ಸನ್ನು ಮೀರಿ ತೂಕ ಹೆಚ್ಚಾದರೆ ನಿರ್ಲಕ್ಷ್ಯ ಮಾಡಬೇಡಿ. ಇದು ದೇಹದ ಪ್ರಮುಖ ಗ್ರಂಥಿಯಾದ ಥೈರಾಯ್ಡ್ (Thyroid problem) ಸಮಸ್ಯೆ ಕೂಡ ಇರಬಹುದು. ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹವು ಕಡಿಮೆ ಕ್ಯಾಲೊರಿಗಳನ್ನು ಹೊಂದಿ ತೂಕ ಹೆಚ್ಚಾಗುವುದು, ಆಯಾಸ ಹೆಚ್ಚುವುದು ಮುಂತಾದ ಸಮಸ್ಯೆಗೆ ಕಾರಣವಾಗಬಹುದು.

ಥೈರಾಯ್ಡ್ ಕುತ್ತಿಗೆಯಲ್ಲಿರುವ ಒಂದು ಸಣ್ಣ ಚಿಟ್ಟೆ ಆಕಾರದ ಗ್ರಂಥಿಯಾಗಿದ್ದು ಅದು ಚಯಾ ಪಚಯ ಕ್ರಿಯೆ, ಶಕ್ತಿಯ ಮಟ್ಟ ಮತ್ತು ದೇಹದಲ್ಲಿನ ಕೆಲವು ಪ್ರಮುಖ ಕಾರ್ಯಗಳನ್ನು ನಿಯಂತ್ರಿ ಸುತ್ತದೆ. ಹಾಗಾಗಿ ಧೀರ್ಘಕಾಲ ಕಾಡುವ ಥೈರಾಯ್ಡ್ ಸಮಸ್ಯೆಯನ್ನು ಆರಂಭದಲ್ಲಿ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದು ಒಳ್ಳೆಯದು.

ಬೇಸಿಗೆಗೂ ಕಣ್ಣಿನ ಆರೋಗ್ಯಕ್ಕೂ ಏನು ನಂಟು?

ತೂಕ ಹೆಚ್ಚಾಗುವುದು, ಸರಿಯಾಗಿ ನಿದ್ದೆ ಮಾಡದಿರುವುದು, ಒತ್ತಡ, ದೈಹಿಕ ಚಟುವಟಿಕೆಯಲ್ಲಿನ ಬದಲಾವಣೆ ಹಾಗೂ ಹಾರ್ಮೋನುಗಳ ಬದಲಾವಣೆಗಳಿಂದ ತೂಕ ಹೆಚ್ಚಾಗುತ್ತದೆ. ಆದರೆ ಒಬ್ಬ ವ್ಯಕ್ತಿಯು ಆಹಾರ ಅಥವಾ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ತೂಕ ಹೆಚ್ಚಾಗುತ್ತಿದ್ದರೆ ಅದು ಥೈರಾಯ್ಡ್ ಸಮಸ್ಯೆ ಆಗಿರಬಹುದು. ಈ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಹಾರ್ಮೋನ್‌ಗಳನ್ನು ಉತ್ಪಾದಿಸಿದಾಗ ದೇಹವು ಕಡಿಮೆ ಕ್ಯಾಲೊರಿಗಳನ್ನು ಬಳಸಲಾರಂಭಿಸುತ್ತದೆ.

ಥೈರಾಯ್ಡ್‌ನ ಲಕ್ಷಣಗಳು

  • ​ನಿರಂತರ ಆಯಾಸ ಮತ್ತು ಶಕ್ತಿಯ ಕೊರತೆ.
  • ​ಅತಿಯಾದ ಚಳಿ ಅಥವಾ ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳಲು ಸಾಧ್ಯವಾಗದಿರುವುದು.
  • ಕೂದಲು ಊದರುವುದು ಮತ್ತು ಚರ್ಮ ಸುಕ್ಕಾಗುವುದು.
  • ಮೂಡ್ ಸ್ವಿಂಗ್ಸ್, ಆತಂಕ ಹಾಗೂ ಮಹಿಳೆಯರಲ್ಲಿ ಋತುಚಕ್ರದ ಏರುಪೇರು.

ಈ ಲಕ್ಷಣಗಳು ಹಠಾತ್ತನೆ ಉಂಟಾಗದೇ ನಿಧಾನವಾಗಿ ಸಂಭವಿಸುತ್ತವೆ. ಆದ್ದರಿಂದ ಅನೇಕರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ದುರದೃಷ್ಟವಶಾತ್ ನೀವು ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಮತ್ತು ಜೀವನಗುಣಮಟ್ಟದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.