ನವದೆಹಲಿ,ಆ.3: ಬೆಳಗ್ಗಿನ ಉಪಹಾರ ಅನ್ನೋದು ಪ್ರತಿಯೊಬ್ಬರಿಗೂ ಅಗತ್ಯವಾಗಿ ಇರುತ್ತದೆ. ಆದರೆ ಕೆಲವರಿಗೆ ಹೊಟ್ಟೆ ತುಂಬಾ ತಿಂದರೂ ಹಸಿವಾದ ಅನುಭವ (Hungry Again for Breakfast) ಆಗುತ್ತದೆ. ಇದಕ್ಕೆ ಕಾರಣವೇನು? ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು. ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಳಿತಗಳು, ಅಗತ್ಯವಾದ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳ ಕೊರತೆ ಅಥವಾ ಕಳಪೆ ನಿದ್ರೆ, ಒತ್ತಡ ಮತ್ತು ನಿರ್ಜಲೀಕರಣದಂತಹ ಜೀವನಶೈಲಿಯೂ ಇದಕ್ಕೆ ಕಾರಣವಾಗಿರಬಹುದು. ನಾವು ಸೇವನೆ ಮಾಡುವ ಆಹಾರದಲ್ಲಿ ಪೋಷಕಾಂಶಗಳು ಇಲ್ಲದೆ ಇದ್ದಾಗ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ನಮ್ಮ ದೇಹದಲ್ಲಿ ಹಸಿವನ್ನು ಘ್ರೆಲೊನ್ ಎಂಬ ಹಾರ್ಮೊನು ನಿಯಂತ್ರಣ ಮಾಡಲು ಸಹಕಾರಿ ಯಾಗುತ್ತದೆ. ಹುಟ್ಟಿ ತುಂಬಿದೆ ಎಂಬ ಸಂದೇಶವನ್ನು ಲೆಪ್ಟಿನ್ ಎಂಬ ಹಾರ್ಮೊನ್ ಮೆದುಳಿಗೆ ರವಾನಿಸಲು ಸಹಾಯ ಮಾಡುತ್ತದೆ. ತಿಂದ ಆಹಾರವು ಪ್ರಾಥಮಿಕ ವಾಗಿ ಸಾಕಷ್ಟು ಪ್ರೋಟೀನ್ ಅಥವಾ ಕೊಬ್ಬುಗಳಿಲ್ಲದೆ ಇದ್ದಾಗ ಅಸಮತೋಲನಕ್ಕೆ ಕಾರಣವಾಗಬಹುದು.
ಉಪಾಹಾರ ಸೇವಿಸಿದ ತಕ್ಷಣ ಹಸಿವಿಗೆ ಕಾರಣವಾಗುವ ಅಂಶಗಳು!
ನಿಮ್ಮ ಉಪಾಹಾರದಲ್ಲಿ ಸಾಕಷ್ಟು ಪ್ರೋಟೀನ್ ಕೊರತೆ:
ಪ್ರೋಟೀನ್ ದೇಹಕ್ಕೆ ಅತ್ಯಂತ ಸಂತೃಪ್ತಿಕರ ಅಂಶ ಆಗಿದೆ. 20 ರಿಂದ 30 ಗ್ರಾಂ ಪ್ರೋಟೀನ್ ಹೊಂದಿರುವ ಉಪಾಹಾರವು ಹೊಟ್ಟೆ ತುಂಬಿದ ಅನುಭವವನ್ನು ಮಾಡಲಿದ್ದು ಮಧ್ಯಾಹ್ನ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋದನೆ ಹೇಳಿದೆ. ಬೆಣ್ಣೆಯೊಂದಿಗೆ ರೋಸ್ಟ್ ಮಾಡಿದ ಆಹಾರ, ಸರಳ ಹಣ್ಣುಗಳಂತಹ ಕಡಿಮೆ ಪ್ರೋಟೀನ್ ಉಪಾಹಾರವು ವೇಗವಾಗಿ ಜೀರ್ಣವಾಗುತ್ತದೆ. ಇದು ಸ್ವಲ್ಪ ಸಮಯದ ನಂತರ ನಿಮಗೆ ಹಸಿವಾಗುತ್ತದೆ.
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆ:
ದೇಹಕ್ಕೆ ಸಂಸ್ಕರಿಸಿದ ಆಹಾರಗಳು ಪರಿಣಾಮ ಬೀರುವುದೇ ಹೆಚ್ಚು. ಬ್ರೆಡ್, ಸಕ್ಕರೆ, ಧಾನ್ಯಗಳು, ಬೇಕರಿ ಪೇಸ್ಟ್ರಿಗಳು ಇತ್ಯಾದಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡಬಹುದು.ಇದರಿಂದ ದೇಹ ಬೇಗನೆ ಹಸಿವಿಗೆ ಕಾರಣವಾಗಬಹುದು.
Health Tips: ಚಹಾ ಅತಿಯಾಗಿ ಕುದಿಸಬೇಡಿ, ಒಳ್ಳೆಯದಲ್ಲ! ಟೀ ಮಾಡುವ ಪರ್ಫೆಕ್ಟ್ ವಿಧಾನ ಇಲ್ಲಿದೆ
ಕಡಿಮೆ ಫೈಬರ್:
ನಾರು ನೈಸರ್ಗಿಕ ಜೀರ್ಣಕ್ರಿಯೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ನಾರಿನ ಅಂಶವು ನೀರನ್ನು ಹೀರಿಕೊಳ್ಳುತ್ತದೆ ಮತ್ತು ಕರುಳಿನಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುತ್ತದೆ, ಇದು ಹೊಟ್ಟೆ ಖಾಲಿಯಾಗುವುದನ್ನು ತಪ್ಪಿಸುತ್ತದೆ. ಧಾನ್ಯಗಳು, ಹಣ್ಣುಗಳು ಅಥವಾ ಬೀಜಗಳಿಂದ ಸಾಕಷ್ಟು ಫೈಬರ್ ಇದ್ದು ಜೀರ್ಣಕಾರಿ ಸಾಗಣೆ ವೇಗಗೊಳ್ಳುತ್ತದೆ.
ಅಪೂರ್ಣ ನಿದ್ರೆ:
ನಿದ್ರೆಯ ಕೊರತೆಯಿಂದ ಹಸಿವು ಹೆಚ್ಚಬಹುದು. ಹಾರ್ಮೋನ್ ಹೆಚ್ಚಾಗಿ, ಹೊಟ್ಟೆ ತುಂಬಿದ ಭಾವನೆ ನೀಡುವ 'ಲೆಪ್ಟಿನ್' ಕಡಿಮೆ ಯಾಗುತ್ತದೆ. ಹಾರ್ಮೋನುಗಳ ಬದಲಾವಣೆಗೂ ಕಾರಣ ವಾಗಲಿದ್ದು ದೇಹಕ್ಕೆ ತೀವ್ರವಾದ ಪರಿಣಾಮ ಬೀರುತ್ತದೆ.
ಅತಿಯಾದ ಒತ್ತಡ:
ಮಾನಸಿಕ ಒತ್ತಡ ಹೆಚ್ಚಾದಾಗ 'ಕಾರ್ಟಿಸೋಲ್' ಹಾರ್ಮೋನ್ ಬಿಡುಗಡೆಯಾಗಿ ಸಿಹಿ ಪದಾರ್ಥಗಳನ್ನು ತಿನ್ನುವ ಬಯಕೆ ಹೆಚ್ಚುತ್ತದೆ.
ತುಂಬಾ ವೇಗವಾಗಿ ತಿನ್ನುವ ಅಭ್ಯಾಸ:
ಕರುಳಿನಿಂದ ಸಂಕೇತಗಳು ಮೆದುಳನ್ನು ತಲುಪಲು ಸುಮಾರು 20 ನಿಮಿಷಗಳು ಬೇಕಾಗುತ್ತದೆ. ಬೆಳಿಗ್ಗೆ ನಿಮ್ಮ ಉಪಾಹಾರವನ್ನು ವೇಗವಾಗಿ ಮಾಡುವುದರಿಂದ ಈ ಮೆದುಳು-ಕರುಳಿನ ಸಂವಹನವು ಅಡ್ಡಿಪಡಿಸುತ್ತದೆ.