ಬೆಂಗಳೂರು,ಜ. 18: ಪ್ರಸವದ ನಂತರ ಬಹಳಷ್ಟು ತಾಯಂದಿರು ಬೆನ್ನುನೋವು (Back pain) ಅನುಭವಿಸುತ್ತಾರೆ. ವಿಶೇಷವಾಗಿ ಕೆಳ ಬೆನ್ನಿನಲ್ಲಿ ನೋವು ಹೆರಿಗೆಯ ನಂತರ ಸಾಮಾನ್ಯವಾಗಿದೆ. ಹಾಗಿದ್ರೂ ಇದೊಂದು ಸಾಮಾನ್ಯ ಆರೋಗ್ಯ ಸಮಸ್ಯೆ ಎನ್ನುವ ಧೋರಣೆಯೊಂದಿಗೆ ಬದುಕ ಬೇಕೆಂದೇನೂ ಇಲ್ಲ. ಅದಕ್ಕಾಗಿ ಯಾವ ಬಗೆಯ ಆರೈಕೆ ಮಾಡಬಹುದು? ಯಾವ ಕಾರಣದಿಂದ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ? ಇದಕ್ಕೆ ಮಹಿಳೆ ತನ್ನ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಯಾವ ಬದಲಾವಣೆಯನ್ನು ಅನುಸರಿಸ ಬೇಕು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಯನ್ನು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ವಿದ್ಯಾ ವಿ. ಭಟ್ ಮಾಹಿತಿ ನೀಡಿದ್ದಾರೆ.
ನಾರ್ಮಲ್ ಡೆಲಿವರಿ ಅಥವಾ ಸಿಸೇರಿಯನ್ ಆದ ಮಹಿಳೆಯರಲ್ಲಿ ಬೆನ್ನು ನೋವು ಕಾಣಿಸುತ್ತದೆ. ಅಧ್ಯಯನದ ಪ್ರಕಾರ, ಶೇಕಡಾ 60 ರಷ್ಟು ಮಹಿಳೆಯರು ಹೆರಿಗೆಯ ನಂತರ ಮೂರರಿಂದ ಆರು ತಿಂಗಳವರೆಗೆ ತೀವ್ರ ಸಮಸ್ಯೆಯನ್ನು ಅನುಭವಿಸಬಹುದು. ಹಾಗಾಗಿ ಹೆರಿಗೆಯ ನಂತರ ಎದೆಹಾಲು ಕುಡಿಸುವಾಗ ತಾಯಿಯೂ ಕೂಡ ಉತ್ತಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅದರಲ್ಲೂ ನೀವು ಗರ್ಭಿಣಿಯಾಗಿದ್ದಾಗ ಅಥವಾ ಮಗು ಜನಿಸಿದ ನಂತರ ತಾಯಿಯ ಕ್ಯಾಲ್ಸಿಯಂ ಅಂಶವು ಮಗುವಿಗೂ ಕೂಡ ಅಗತ್ಯ ಇರುವುದರಿಂದ ತಾಯಿಯ ದೇಹದಲ್ಲಿ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕೂಡ ಬೆನ್ನು ನೋವು ಉಂಟಾಗುವ ಸಾಧ್ಯತೆ ಇರುತ್ತದೆ.
ವಿಡಿಯೋ ನೋಡಿ:
ಹಾಗಾಗಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರ ಇರುವುದು ಮುಖ್ಯವಾಗುತ್ತದೆ ಎಂದು ಸ್ತ್ರೀ ರೋಗ ತಜ್ಞೆ ಡಾ. ವಿದ್ಯಾ ವಿ. ಭಟ್ ಸಲಹೆ ನೀಡಿದ್ದಾರೆ.
ಯಾಕಂದ್ರೆ ಈ ಮೂರು ವರ್ಷದಲ್ಲಿ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಮತ್ತೆ ಉತ್ಪತ್ತಿಯಾಗಿ, ತಾಯಿಯ ಆರೋಗ್ಯ ಸುಧಾರಿಸಬೇಕು ಇಲ್ಲದಿದ್ದಲ್ಲಿ ಬೆನ್ನು ನೋವು ಹೆಚ್ಚಾಗಿ ಕಾಡುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ನೀವು ಮಲಗುತ್ತಿರುವ ಭಂಗಿ ಸರಿಯಾಗಿಲ್ಲ ದಿದ್ದಾಗ ಹೆರಿಗೆಯ ನಂತರ ಯದ್ವ-ತದ್ವ ಮಲಗುವುದರಿಂದ ಬೆನ್ನು ನೋವು ಬಿಡದೆ ಕಾಡುತ್ತದೆ. ಮಗುವನ್ನು ಎತ್ತಿಕೊಳ್ಳುವುದು, ಅಥವಾ ಹಾಲುಣಿಸುವಾಗ ಮಾಡುವ ತಪ್ಪುಗಳು ಕೆಲವೊಮ್ಮೆ ಬೆನ್ನು ನೋವಿಗೆ ಕಾರಣವಾಗಬಹುದು.
ಈ ಸಮಯದಲ್ಲಿ ಸರಿಯಾದ ಪ್ರಮಾಣದ ಪೋಷಕಾಂಶ, ಜೊತೆಗೆ ನೀರು ಕುಡಿಯುವುದು ಕೂಡ ಮುಖ್ಯವಾಗುತ್ತದೆ. ಇದನ್ನು ಪಾಲಿಸದೇ ಇದ್ದಾಗ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ.
Health Tips: ಹಬ್ಬದ ಸಿಹಿ ಇಷ್ಟವೇ? ಹಲ್ಲುಗಳಿಗೆ ಕಷ್ಟವಾಗಬಹುದು!
ಪರಿಹಾರವೇನು?
- ಯೋಗ್ಯವಾದ ವ್ಯಾಯಾಯ ಮಾಡುವುದರಿಂದ ಬೆನ್ನುನೋವಿನ ಪರಿಹಾರಕ್ಕೆ ಸಹಾಯ ಮಾಡುತ್ತದೆ.
- ಮಗು ಜನಿಸಿದ ನಂತರ ಆರು ತಿಂಗಳ ವರೆಗೆ ಕ್ಯಾಲ್ಸಿಯಂ ಮಾತ್ರೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
- ನಿಮ್ಮ ಚಲನೆಗಳು ಮತ್ತು ಭಂಗಿಗಳ ಬಗ್ಗೆ ಜಾಗರೂಕರಾಗಿರಿ
- ಹೆಚ್ಚಿನ ತೂಕ ಕೂಡ ಬೆನ್ನು ನೋವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಹೆರಿಗೆಯ ಮುಂಚೆ ಮತ್ತು ನಂತರದಲ್ಲಿ ಕೂಡ ಸರಿಯಾದ ತೂಕ ಕಾಪಾಡಿಕೊಳ್ಳಿ
- ಹೆರಿಗೆಯ ನಂತರ ಭಾರವನ್ನು ಎತ್ತುವುದನ್ನು ನಿಲ್ಲಿಸಿ. ಏಕೆಂದರೆ ಇದು ನಿಮ್ಮ ಬೆನ್ನಿನ ಸ್ನಾಯುಗಳ ಮೇಲೆ ತೀವ್ರವಾದ ಒತ್ತಡವನ್ನು ಉಂಟು ಮಾಡಬಹುದು.
- ಪೋಷಕಾಂಶ ಭರಿತ ಆಹಾರ ಹಾಗೂ ದೇಹಕ್ಕೆ ಶಕ್ತಿ ನೀಡುವ ಆಹಾರಗಳನ್ನು ಸೇವಿಸಬೇಕು.