ಬೆಂಗಳೂರು, ಫೆ. 26: ಹಿಂದೂ ಧರ್ಮದಲ್ಲಿ, ಶಂಖ ಊದುವುದಕ್ಕೆ ಮಹತ್ವದ ಸ್ಥಾನವಿದೆ (Blowing a Conch Shell). ಸಾಮಾನ್ಯವಾಗಿ ಯಾವುದೇ ಪೂಜೆ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಶಂಖವನ್ನು ಊದಲಾಗುತ್ತದೆ. ಶಂಖದಿಂದ ಬರುವ ಶಬ್ದವು ನಕಾರಾತ್ಮಕ ಶಕ್ತಿಯನ್ನು ತೊಡೆದುದು ಹಾಕುತ್ತದೆ ಎನ್ನವ ನಂಬಿಕೆ ಇದೆ. ಇದು ಧಾರ್ಮಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕ ಮಹತ್ವವನ್ನೂ ಹೊಂದಿದ್ದು ಇದರಿಂದ ಹಲವು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗಲಿದೆ. ಈ ಬಗ್ಗೆ ʼವಿಶ್ವವಾಣಿ ಹೆಲ್ತ್ ಚಾನೆಲ್ʼನಲ್ಲಿ ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.
ಶಂಖ ಊದುವುದು ಅತ್ಯಂತ ಶುಭದಾಯಕ ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ದೇಹವು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಇದರ ಮುಖ್ಯ ಆರೋಗ್ಯ ಲಾಭ ಎಂದರೆ ಈ ಚಟುವಟಿಕೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಎದೆ, ಮತ್ತು ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಅದೇ ರೀತಿ ಆಮ್ಲಜನಕ ಹರಿವನ್ನು ಉತ್ತೇಜಿಸುತ್ತದೆ.
ವಿಡಿಯೊ ನೋಡಿ:
ಶಂಖದ ನಾದವು ಮಾನಸಿಕ ಒತ್ತಡ ಕಡಿಮೆ ಮಾಡಿ ನಕಾರಾತ್ಮಕ ಆಲೋಚನೆಗಳನ್ನು ತೊಲಗುವಂತೆ ಮಾಡುತ್ತದೆ. ಪ್ರಮುಖವಾಗಿ ಶಂಖ ಊದುವುದರಿಂದ ನಮ್ಮ ಮುಂಭಾಗದ ಮೆದುಳನ್ನು ಕ್ರಿಯಾಶೀಲತೆಯಿಂದ ಇರಲು ಪ್ರೇರೇಪಿಸುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಖುಷಿ ಸಿಗುತ್ತದೆ. ಅದೇ ರೀತಿ ನಮ್ಮ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚು ಬಿಡುಗಡೆ ಮಾಡುವ ಶಕ್ತಿಯನ್ನು ಕೂಡ ನಾವು ಇದರಿಂದ ಪಡೆಯಬಹುದು.
ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?
ದೇವಸ್ಥಾನದಲ್ಲಿ ಶಂಖ, ಘಂಟೆಯ ಶಬ್ಧ ಕೇಳಿಯೇ ನಮ್ಮ ಮನಸ್ಸು ಶಾಂತವಾಗಿರುವಂತದ್ದು. ಇದು ದೇವರ ಆಶೀರ್ವಾದ, ಧನಾತ್ಮಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಶಂಖವನ್ನು ಊದುವಾಗ ಬೃಹತ್ ಕಂಪನಗಳನ್ನು ಸೃಷ್ಟಿಸುತ್ತದೆ. ಅದು ನಮ್ಮ ದೇಹ, ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹರಡುತ್ತದೆ. ಅದೇ ರೀತಿ ಶಂಖ ಊದುವುದನ್ನು ಒತ್ತಡ ನಿವಾರಣೆಯಾಗಿ ನಿಮ್ಮ ಯಂಗ್ ಲುಕ್ ಆಯುಷ್ಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇನ್ನು ರಕ್ತದೊತ್ತಡ, ಜೀರ್ಣಕ್ರಿಯೆ ಸಮಸ್ಯೆಗಳಿಗೂ ಸಹಕಾರಿ.