ಬೆಂಗಳೂರು: ಚಳಿಗಾಲದ(Winter) ಜೊತೆ ಹಲವು ಆರೋಗ್ಯ ಸಮಸ್ಯೆಗಳು(Health Issues) ಸಹ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಕೆಮ್ಮು, ಶೀತ, ಗಂಟಲು ನೋವು, ಜ್ವರ ತಪ್ಪುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸುವುದು(Food habit) ಮುಖ್ಯ. ಆದರೆ, ಹೆಚ್ಚಿನವರು ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೀಗೆ ಹುಷಾರು ತಪ್ಪಿದಾಗ ಇಂಗ್ಲಿಷ್ ಮದ್ದಿನ ಮೊರೆ ಹೋಗುತ್ತಾರೆ. ಕಹಿ ಕಹಿ ಮಾತ್ರೆಗಳನ್ನು ಕಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ನೀವು ಇಷ್ಟೆಲ್ಲಾ ಕಷ್ಟ ಪಡ್ಬೇಕಾಗಿಲ್ಲ. ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು(Bottle Gourd Juice) ಸೇವಿಸಿ. ಹಲವು ಆರೋಗ್ಯ ಸಮಸ್ಯೆಗಳಿಗೆ ಇದುವೇ ರಾಮಬಾಣ.
ಸೋರೆಕಾಯಿಯಲ್ಲಿ ರಿಬೊಫ್ಲಾವಿನ್, ಸತು, ಥೈಮೆನ್, ವಿಟಮಿನ್ ಎ, ಸಿ, ಫಾಲಟೆ, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿನಾಂಶ, ವಿಟಮಿನ್ ಬಿ6, ಪೊಟಾಶಿಯಂ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳಿಂದ ಇದು ಸಮೃದ್ಧವಾಗಿದೆ. ಹಾಗಾದ್ರೆ ಬನ್ನಿ ಸೋರೆಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳೇನು? ಎಂಬುದರ ಕುರಿತ ಮಾಹಿತಿ ಇಲ್ಲಿದೆ
ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕುತ್ತದೆ: ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲಿದ್ದು, ಇದು ದೇಹವನ್ನು ನಿರ್ವಿಷಗೊಳಿಸುತ್ತೆ, ಹಾನಿಕಾರಕ ವಿಷ ಹೊರಹಾಕುತ್ತೆ ಮತ್ತು ಮೂತ್ರಕೋಶದ ಕಾರ್ಯ ಸುಧಾರಿಸುತ್ತೆ .
ಜೀರ್ಣಾಂಗ ವ್ಯವಸ್ಥೆಯನ್ನು ವರ್ಧಿಸುತ್ತದೆ
ಸೋರೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶಗಳು ಇದ್ದು, ಇದು ಮಲಬದ್ಧತೆ, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣಕಾರಿ ಅಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಈ ಪಾನೀಯ ನೆರವು ಆಗಲಿದ್ದು, ನಿತ್ಯವೂ ಸೋರೆ ಕಾಯಿ ರಸ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು. ಹಾಗಾಗಿ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಈ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಸೇರಿದಂತೆ ಉದರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯೂ ನಿಮ್ಮನ್ನು ಬಾಧಿಸುವುದಿಲ್ಲ.
ಈ ಸುದ್ದಿಯನ್ನು ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅರಿಶಿನದ ನೀರು ಕುಡಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
ತೂಕ ಇಳಿಕೆಗೆ ಸಹಕಾರಿ
ಬೂದುಗುಂಬಳವು ತೂಕ ಇಳಿಕೆಗೆ ಸಹಕಾರಿಯಾಗಿದೆ. ಬೂದುಗುಂಬಳದಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ಫೈಬರ್ ಅಂಶ ಹೆಚ್ಚಿರುತ್ತದೆ, ಯೋಗ, ವ್ಯಾಯಾಮದ ಜತೆಗೆ ಬೂದುಗುಂಬಳ ಜ್ಯೂಸ್ ಸೇವನೆಯಿಂದ ತೂಕವನ್ನು ಬಹುಬೇಗ ಕಳೆದುಕೊಳ್ಳಬಹುದು.
ಚರ್ಮ ಮತ್ತು ಕೂದಲಿಗೆ ಒಳ್ಳೆಯದು
ಚಳಿಗಾಲದಲ್ಲಿ ಕೂದಲು ಬಿರುಕು ಹಾಗೂ ಚರ್ಮ ಡ್ರೈ ಆಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಇಂತಹ ವೇಳೆ ಸೋರೆಕಾಯಿ ಜ್ಯೂಸ್ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಪ್ಪಿಸುವುದು. ಇದು ಚರ್ಮವನ್ನು ವಿಷಕಾರಿ ಅಂಶದಿಂದ ರಕ್ಷಿಸುವುದು ಮತ್ತು ಚರ್ಮಕ್ಕೆ ಬೇಕಾಗಿರುವ ನೈಸರ್ಗಿಕ ಕಾಂತಿ ನೀಡುವುದು. ಇದರಲ್ಲಿ ಇರುವಂತಹ ವಿಟಮಿನ್ ಎ ಮತ್ತು ಸತು ನೆರಿಗೆ ನಿವಾರಿಸುವುದು. ಇದೆರಡು ಅಕಾಲಿಕವಾಗಿ ವಯಸ್ಸಾಗುವ ಲಕ್ಷಣ ತಡೆಯುವುದು.
ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದರಿಂದ ಈ ರಸವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ.