ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಪ್ರತಿದಿನ ತೆಂಗಿನ ನೀರು ಸೇವಿಸಿದರೆ ಕೊಬ್ಬು ಕರಗಿ ತೂಕ ಇಳಿಯುತ್ತಾ?

ತೂಕ ಇಳಿಕೆಗೆ ಸುಲಭ ವಿಧಾನ ಎಂದರೆ ತೆಂಗಿನ ನೀರು. ಹೌದು, ಯಾವುದೇ ರಾಸಾಯನಿಕ ಮಿಶ್ರಣವಲ್ಲದ ಶುದ್ಧ ತೆಂಗಿನ ನೀರು ತೂಕ ಇಳಿಕೆಗೆ ಹೆಚ್ಚು ಪರಿಣಾಮಕಾರಿ. ದೇಹಕ್ಕೆ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ತೆಂಗಿನ ನೀರು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Coconut Water

ಬೆಂಗಳೂರು: ಆಧುನಿಕ ಜೀವನಶೈಲಿಯಿಂದ ಅನೇಕರು ಅಧಿಕ ತೂಕ ಹಾಗೂ ಬೊಜ್ಜು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವು ಜನರು ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಡಯೆಟ್‌, ವ್ಯಾಯಾಮಗಳ ಮೊರೆ ಹೋಗುವವರು ಅನೇಕರು ಇದ್ದಾರೆ. ಕೆಲವರಂತೂ ಎಷ್ಟೇ ಪ್ರಯತ್ನ ಪಟ್ಟರೂ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಂತಹವರಿಗೆ ತೂಕ ಇಳಿಕೆಗೆ ಸುಲಭ ವಿಧಾನ ಎಂದರೆ ತೆಂಗಿನ ನೀರು. ಹೌದು ಯಾವುದೇ ರಾಸಾಯನಿಕ ಮಿಶ್ರಣವಲ್ಲದ ಶುದ್ಧ ತೆಂಗಿನ ನೀರು (Coconut Water) ತೂಕ ಇಳಿಕೆಗೆ ಹೆಚ್ಚು ಪರಿಣಾಮಕಾರಿ. ದೇಹಕ್ಕೆ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಎಲೆ ಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ತೆಂಗಿನ ನೀರು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು

ತೆಂಗಿನ ನೀರು ಅದರ ರುಚಿ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿಗಾಗಿ ಜನಪ್ರಿಯ. ಅದರಲ್ಲೂ ತೆಂಗಿನ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಪೊಟ್ಯಾಸಿಯಮ್ ಮತ್ತು ಜೈವಿಕ ಕಿಣ್ವಗಳು ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಸಕ್ಕರೆ ಪ್ರಮಾಣ ಕಡಿಮೆ

ಇತರ ಯಾವುದೇ ಹಣ್ಣಿನ ರಸಕ್ಕೆ ಹೋಲಿಸಿದರೆ ತೆಂಗಿನ ನೀರು ಅತ್ಯಧಿಕ ಪ್ರಮಾಣದ ಖನಿಜ ಗಳನ್ನು ಹೊಂದಿರುತ್ತದೆ. ಹಣ್ಣಿನ ರಸಗಳು ಹೆಚ್ಚು ಸಕ್ಕರೆ ಪ್ರಮಾಣ ಹೊಂದಿರುತ್ತದೆ. ಆದರೆ ತೆಂಗಿನ ನೀರಿನಲ್ಲಿ ಸಕ್ಕರೆ ಕಡಿಮೆ ಇರುತ್ತದೆ. ಇದು ಹೆಚ್ಚು ಪೌಷ್ಟಿಕಾಂಶ ನಿಮ್ಮ ಎಲೆಕ್ಟ್ರೋಲೈಟ್ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ಇದರಿಂದಾಗಿ ತೂಕ ನಷ್ಟವಾಗುತ್ತದೆ.

ಹಸಿವನ್ನು ತಡೆಯುತ್ತದೆ

ತೆಂಗಿನಕಾಯಿ ನೀರಿನಲ್ಲಿ ಲಾರಿಕ್ ಆಮ್ಲವಿದೆ. ಈ ನೀರಿನಲ್ಲಿ ಯಾವುದೇ ಕೊಬ್ಬು ಇಲ್ಲ. ಅಲ್ಲದೇ ಯಾವುದೇ ಕಾರ್ಬೋ ಹೈಡ್ರೇಟ್‌ಗಳಿಲ್ಲದಿದ್ದರೂ ಇದು ನಿಮ್ಮ‌ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ ಇದು ನಿಮ್ಮ ದೇಹದಿಂದ ಹೆಚ್ಚಿನ ಸೋಡಿಯಂ ಅನ್ನು ಹೊರಹಾಕಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಇದನ್ನು ಓದಿ:Health Tips: ಬಿಯರ್‌ ಕುಡಿದರೆ ಹೊಟ್ಟೆ ಬರೋದು ನಿಜನಾ? ಆರೋಗ್ಯಕ್ಕೆ ಇದೆಷ್ಟು ಹಾನಿಕಾರಕ?

ಆರೋಗ್ಯಕರ ಹೃದಯ

ಉತ್ತಮ ಕೊಲೆಸ್ಟ್ರಾಲ್, ಎಚ್‌ಡಿಎಲ್ ಮತ್ತು ಉತ್ತಮ ರಕ್ತ ಪರಿಚಲನೆಯನ್ನು ಕಾಯ್ದುಕೊಳ್ಳಲು ತೆಂಗಿನ ಕಾಯಿ ನೀರು ಹೆಚ್ಚು ಉಪಯೋಗಕಾರಿ. ಇದು ಹೃದಯ ಸಂಬಂಧಿ ರೋಗಗಳನ್ನು ತಡೆದು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಕಡಿಮೆ ಕಾರ್ಬೋಹೈಡ್ರೇಟ್‌

ಕೊಬ್ಬಿನ ಅಂಶ ಇಲ್ಲದೆ ನೈಸರ್ಗಿಕವಾಗಿರುವ ತೆಂಗಿನ ಕಾಯಿ ನೀರು ತೂಕ ಇಳಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ತುಂಬಾ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹಾಗೆಯೇ ದೀರ್ಘ ಕಾಲದವರೆಗೆ ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಯಾವಾಗ ತೆಂಗಿನ ನೀರನ್ನು ಕುಡಿಯಬೇಕು?

ಆಹಾರ ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದು ಉತ್ತಮ. ಇದಲ್ಲದೆ ಹೆಚ್ಚುವರಿ ಕೊಬ್ಬನ್ನು ಹೊರ ಹಾಕಲು ನೀವು ದಿನಕ್ಕೆ 3 ಬಾರಿ ತೆಂಗಿನ ನೀರನ್ನು ಕುಡಿಯಬಹುದು. ತೆಂಗಿನ ನೀರನ್ನು ಅನೇಕ ವಿಧಗಳಲ್ಲಿ ನೀವು ಸೇವಿಸಬಹುದು. ಸ್ಮೂದಿಗಳ ಮೂಲಕ, ಹಣ್ಣು, ತರಕಾರಿಯೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು.