ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಸಿಓಪಿಡಿ ಹೃದಯ-ಶ್ವಾಸಕೋಶ ಸಂಬಂಧಿ ತುರ್ತು ಸ್ಥಿತಿ ಬದಲು

ಸಿಓಪಿಡಿ ಈಗ ಉಸಿರಾಟದ ತೊಂದರೆ ಮಾತ್ರವೇ ಆಗಿಲ್ಲ, ಬದಲಿಗೆ ಇದೊಂದು ಕಾರ್ಡಿಯೋ ಪಲ್ಮನರಿ (ಹೃದಯ- ಶ್ವಾಸಕೋಶ ಸಂಬಂಧಿ) ತುರ್ತುಸ್ಥಿತಿಯಾಗಿದೆ. ಈ ಸಮಸ್ಯೆ ತೀವ್ರಗೊಂಡಾ ಗಲೆಲ್ಲಾ ಹೃದಯಾಘಾತ, ಸ್ಟ್ರೋಕ್, ಅರಿಥ್ಮಿಯಾ ಮತ್ತು ಹೃದಯ ವೈಫಲ್ಯದಂತಹ ಅಪಾಯ ಉಂಟಾಗಬಹು ದಾಗಿದೆ. ಸಿಓಪಿಡಿ ಸಮಸ್ಯೆ ತೀವ್ರವಾದ ಹಲವು ದಿನಗಳ ಕಾಲ ಅಥವಾ ವಾರಗಳ ಕಾಲ ಅಪಾಯದ ಅಂಶ ಜಾಸ್ತಿಯೇ ಇರುತ್ತದೆ

ಬೆಂಗಳೂರು: ಭಾರತದಲ್ಲಿ ಸಿಓಪಿಡಿ (ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್) ಸಮಸ್ಯೆಯು ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೇ ಬರೋಬ್ಬರಿ 55.23 ಮಿಲಿಯನ್ (5.52 ಕೋಟಿ) ಸಿಓಪಿಡಿ ರೋಗಿಗಳಿದ್ದಾರೆ. ಈ ಮೂಲಕ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಸಿಓಪಿಡಿ ರೋಗಿ ಗಳನ್ನು ಹೊಂದಿರುವ ದೇಶ ಎಂಬ ಹೆಸರು ಗಳಿಸಿದೆ. ಇನ್ನೂ ಆತಂಕಕಾರಿ ವಿಚಾರವೆಂದರೆ ವಿಶ್ವದಲ್ಲಿ ಅತಿ ಹೆಚ್ಚು ಸಿಓಪಿಡಿ ಸಾವುಗಳಾಗುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಸಿಓಪಿಡಿಯಿಂದ ವರ್ಷಕ್ಕೆ ಸುಮಾರು 0.85 ಮಿಲಿಯನ್ (8.5 ಲಕ್ಷ) ಸಾವುಗಳು ಭಾರತದಲ್ಲೇ ನಡೆಯುತ್ತಿವೆ.

ಸಿಓಪಿಡಿ ಈಗ ಉಸಿರಾಟದ ತೊಂದರೆ ಮಾತ್ರವೇ ಆಗಿಲ್ಲ, ಬದಲಿಗೆ ಇದೊಂದು ಕಾರ್ಡಿಯೋ ಪಲ್ಮನರಿ (ಹೃದಯ- ಶ್ವಾಸಕೋಶ ಸಂಬಂಧಿ) ತುರ್ತುಸ್ಥಿತಿಯಾಗಿದೆ. ಈ ಸಮಸ್ಯೆ ತೀವ್ರಗೊಂಡಾ ಗಲೆಲ್ಲಾ ಹೃದಯಾಘಾತ, ಸ್ಟ್ರೋಕ್, ಅರಿಥ್ಮಿಯಾ ಮತ್ತು ಹೃದಯ ವೈಫಲ್ಯದಂತಹ ಅಪಾಯ ಉಂಟಾಗಬಹುದಾಗಿದೆ. ಸಿಓಪಿಡಿ ಸಮಸ್ಯೆ ತೀವ್ರವಾದ ಹಲವು ದಿನಗಳ ಕಾಲ ಅಥವಾ ವಾರಗಳ ಕಾಲ ಅಪಾಯದ ಅಂಶ ಜಾಸ್ತಿಯೇ ಇರುತ್ತದೆ. ದೀರ್ಘಕಾಲದ ಆಮ್ಲಜನಕ ಕೊರತೆ ಮತ್ತು ದೇಹ ದಾದ್ಯಂತ ಇರುವ ಉರಿಯೂತ ಸಮಸ್ಯೆಯು ಪಲ್ಮನರಿ ಹೈಪರ್‌ ಟೆನ್ಷನ್ ಮತ್ತು ಬಲಭಾಗದ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದಾಗಿದೆ.

ಆದ್ದರಿಂದ ಆರಂಭದಲ್ಲೇ ಪರಿಣತರಿಂದ ಚಿಕಿತ್ಸೆ ಪಡೆಯುವ ಮೂಲಕ ಜೀವ ಉಳಿಸಿಕೊಳ್ಳಬಹು ದಾಗಿದೆ. ಆದರೂ ಸಿಓಪಿಡಿ ಚಿಕಿತ್ಸಾ ವಿಭಾಗದಲ್ಲಿ ಬಹಳಷ್ಟು ಅಂತರಗಳಿವೆ. ಅನೇಕ ರೋಗಿಗಳಿಗೆ ಸ್ಪೈರೋಮೆಟ್ರಿ ಪರೀಕ್ಷೆ ಸಿಗುತ್ತಿಲ್ಲ, ಹಲವರಿಗೆ ಸರಿಯಾದ ಇನ್‌ಹೇಲ್ಡ್ ಥೆರಪಿ ಸಿಗುತ್ತಿಲ್ಲ. ಇದರಿಂದ ತಡೆಗಟ್ಟಬಹುದಾದ ಆಸ್ಪತ್ರೆ ದಾಖಲಾತಿ, ಖರ್ಚು ಮತ್ತು ಮರಣ ಪ್ರಮಾಣ ಜಾಸ್ತಿಯಾಗುತ್ತಲೇ ಇದೆ.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಪುರಾವೆ- ಆಧರಿತ ಅತ್ಯಾಧುನಿಕ ಚಿಕಿತ್ಸೆಗಳು ಮತ್ತು ಆರೈಕೆಗಳು ಸಿಓಪಿಡಿ ತೀವ್ರಗೊಳ್ಳುವಿಕೆ ಕಡಿಮೆ ಮಾಡುವುದು, ಹೃದಯ-ಶ್ವಾಸಕೋಶ ಅಪಾಯ ತಗ್ಗಿಸುವುದು ಮತ್ತು ಜೀವನದ ಗುಣಮಟ್ಟ ಹೆಚ್ಚಿಸುವ ಮೂಲಕ ಈಗಿನ ಈ ಪರಿಸ್ಥಿತಿಯನ್ನು ಬದಲಾಯಿಸುವ ಶಕ್ತಿ ಹೊಂದಿವೆ. ಆರಂಭದಲ್ಲೇ ಸರಿಯಾದ ಬ್ರಾಂಕೋಡೈಲೇಷನ್ ಮತ್ತು ಉರಿಯೂತ ನಿಯಂತ್ರಕ ಚಿಕಿತ್ಸೆ ನೀಡಿದರೆ ಹೃದಯ-ಶ್ವಾಸಕೋಶದ ಒತ್ತಡ ಕಡಿಮೆ ಮಾಡುತ್ತದೆ.

ಸಿಂಗಲ್ ಇನ್‌ಹೇಲರ್‌ ಟ್ರಿಪಲ್ ಥೆರಪಿಯು ಸಿಓಪಿಡಿ ಚಿಕಿತ್ಸೆಯನ್ನು ಸರಳಗೊಳಿಸುತ್ತದೆ, ಚಿಕಿತ್ಸಾ ಪ್ರಕ್ರಿಯೆ ಸುಗಮಗೊಳಿಸುತ್ತದೆ ಮತ್ತು ಕಾಯಿಲೆ ತೀವ್ರಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಸಿಓಪಿಡಿ ತೀವ್ರಗೊಳ್ಳುವಿಕೆಯ ನಂತರ ಹೃದ್ರೋಗ ಅಪಾಯ ಉಂಟಾಗುವುದನ್ನು ತಡೆಯುವ ನಿರ್ಣಾಯಕ ಹೆಜ್ಜೆಯಾಗಿದೆ. ತೀವ್ರ ಸಿಓಪಿಡಿಗೆ ಪಲ್ಮನರಿ ರಿಹ್ಯಾಬಿಲಿಟೇಷನ್, ಲಸಿಕೆ ಮತ್ತು ಬೇಕಾದಾಗ ಆಮ್ಲಜನಕ ಒದಗಿಸುವುದರ ಜೊತೆಗೆ ನಿಖರ ಚಿಕಿತ್ಸೆಯನ್ನು ಸಂಯೋಜಿಸಿದಾಗ ಆಸ್ಪತ್ರೆ ದಾಖಲಾಗುವುದು, ಸ್ಟೀರಾಯ್ಡ್ ಬಳಕೆ ಮತ್ತು ಹೃದ್ರೋಗದ ಅಪಾಯ ಕಡಿಮೆ ಆಗಬಹು ದಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುಂಚೆಯೇ ಎಸ್ಐಟಿಟಿ ಶುರು ಮಾಡುವುದು/ ಆರಂಭ ಮಾಡುವುದು, ಇನ್‌ಹೇಲರ್ ತಂತ್ರ ತಿಳಿದುಕೊಳ್ಳುವುದು, 7-14 ದಿನದೊಳಗೆ ಫಾಲೋ-ಅಪ್ ನಿಗದಿಪಡಿಸುವುದು ಇತ್ಯಾದಿಗಳ ಜೊತೆ ಹೃದಯ ಸಂರಕ್ಷಣಾ ಕ್ರಮಗಳನ್ನು (ಬಿಪಿ, ಇಸಿಜಿ, ಎಕೋಕಾರ್ಡಿಯೋಗ್ರಾಫಿ, ಲಿಪಿಡ್-ಡಯಾಬಿಟಿಸ್-ಹಾರ್ಟ್ ಫೇಲ್ಯೂರ್ ಮ್ಯಾನೇಜ್ಮೆಂಟ್) ಮತ್ತು ಸ್ಟೀರಾಯ್ಡ್ ಸ್ಟೀವರ್ಡ್‌ಶಿಪ್ ಕೈಗೊಂಡರೆ ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ಹೊಂದಬಹು ದಾಗಿದೆ.

ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಡಾ. ಪ್ರಸನ್ನ ಕುಮಾರ್ ಟಿ. ಅವರು ಈ ಕುರಿತು ಮಾತನಾಡಿ, “ಭಾರತದಲ್ಲಿ ಸಿಓಪಿಡಿ ಚಿಕಿತ್ಸಾ ವಿಭಾಗವು ಪ್ರತಿಕ್ರಿಯಾತ್ಮಕ ಚಿಕಿತ್ಸೆಯಿಂದ ಪೂರ್ವಭಾವಿಯಾಗಿಯೇ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರ ಕಡೆಗೆ ಬದಲಾವಣೆ ಹೊಂದುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೊಸ ಟ್ರಿಪಲ್ ಥೆರಪಿ ಮತ್ತು ಸ್ಮಾರ್ಟ್ ಇನ್‌ಹೇಲೇಷನ್ ತಂತ್ರಜ್ಞಾನಗಳೊಂದಿಗೆ ಈಗ ಪ್ರತಿ ರೋಗಿಗೂ ವೈಯಕ್ತೀಕರಿಸಿದ ಚಿಕಿತ್ಸೆ ರೂಪಿಸಬಹುದಾಗಿದೆ.

ಅದರಿಂದ ತೀವ್ರಗೊಳ್ಳುವಿಕೆ ಕಡಿಮೆಯಾಗುವುದು, ಉತ್ತಮ ಶ್ವಾಸಕೋಶ ಕಾರ್ಯ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯವಾಗುತ್ತಿದೆ. ಆದರೆ ನಾವೀನ್ಯತೆ ಜೊತೆಗೆ ಜಾಗೃತಿಯೂ ಬೇಕು. ಯಾಕೆಂದರೆ ರೋಗಿಗೆ ತನ್ನ ರೋಗದ ಕುರಿತು ತಿಳಿದಾಗ ಮತ್ತು ಇನ್‌ಹೇಲರ್ ಮೇಲೆ ನಂಬಿಕೆ ಇದ್ದಾಗ ಅದರ ಬಳಕೆ ಸುಲಲಿತವಾಗುತ್ತದೆ ಮತ್ತು ಬಹಳ ಉತ್ತಮ ಫಲಿತಾಂಶಗಳು ದೊರಕುತ್ತವೆ” ಎಂದು ಹೇಳಿದರು.

ಭಾರತದ ಸಿಓಪಿಡಿ ಚಿಕಿತ್ಸಾ ವಿಭಾಗವನ್ನು ಬಲಪಡಿಸಲು ಅತ್ಯುತ್ತಮ ಆರೈಕೆ ಕಡೆಗೆ ಗಮನ, ಉತ್ತಮ ಜಾಗೃತಿ ಮತ್ತು ಅತ್ಯಾಧುನಿಕ ಚಿಕಿತ್ಸೆಗಳ ಬಳಕೆ ಹೆಚ್ಚಾಗಬೇಕಿದೆ. ಹೊಸ ಚಿಕಿತ್ಸೆಗಳು ಮತ್ತು ಅತ್ಯಾಧುನಿಕ ಚಿಕಿತ್ಸೆಗಳು ಈಗ ಹೆಚ್ಚು ಲಭ್ಯವಾಗುತ್ತಿರುವುದರಿಂದ, ದೇಶವು ಈಗ ಸಿಓಪಿಡಿ ಯೊಂದಿಗೆ ಜೀವಿಸುತ್ತಿರುವ ಲಕ್ಷಾಂತರ ಜನರ ಜೀವನವನ್ನು ನಿಜವಾಗಿಯೂ ಸುಧಾರಿಸುವ ಹಂತದಲ್ಲಿದೆ.