ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬೆಂಡೆಕಾಯಿ ನೀರು ಕುಡಿದರೆ ದೇಹದಲ್ಲಿ ಏನೆಲ್ಲ ಬದಲಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ

Health Tips: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಡೆಕಾಯಿ ನೀರು ಕುಡಿಯುವ ಟ್ರೆಂಡ್ ಭಾರಿ ವೈರಲ್ ಆಗುತ್ತಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಬೆಂಡೆಕಾಯಿಯ ನೀರನ್ನು ಪ್ರತಿದಿನ ಬೆಳಗ್ಗೆ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಣೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಸೇರಿ ದೇಹದಲ್ಲಾಗುವ ಪ್ರಮುಖ ಬದಲಾವಣೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಬೆಂಗಳೂ: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ವಲಯದಲ್ಲಿ ಬೆಂಡೆಕಾಯಿ ನೀರು (Okra Water) ಕುಡಿಯುವ ಅಭ್ಯಾಸ ಹೆಚ್ಚು ಜನಪ್ರಿಯವಾಗುತ್ತಿದೆ. ಕತ್ತರಿಸಿದ ಬೆಂಡೆಕಾಯಿ ತುಂಡುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹಕ್ಕೆ ಹಲವು ಲಾಭಗಳಿವೆ ಎಂದು ತಜ್ಞರು ಹೇಳುತ್ತಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿರುವ ಈ ಬೆಂಡೆಕಾಯಿ ನೀರು, ಆರೋಗ್ಯ ದೃಷ್ಟಿಯಿಂದ ತುಂಬಾ ಉತ್ತಮ ಎಂದು ಹೇಳಲಾಗುತ್ತಿದೆ. ಉತ್ತಮ ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಕೆಗೆ ಈ ನೀರು ಸಹಕಾರಿಯಾಗಿದೆ. ಆದರೆ ಎಲ್ಲರೂ ಈ ನೀರನ್ನು ಕುಡಿಯಬಹುದಾ? ಯಾರು ಕುಡಿಯಬಹುದು, ಇದರಿಂದ ಎನೆಲ್ಲ ಲಾಭ, ಇಲ್ಲಿದೆ ನೋಡಿ.

ಈ ಆಹಾರಗಳನ್ನು ಒಟ್ಟಿಗೆ ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ; ಆರೋಗ್ಯಕ್ಕೆ ತರಬಹುದು ಕಂಟಕ

ಜೀರ್ಣಕ್ರಿಯೆ ಸುಧಾರಣೆ ಮತ್ತು ರಕ್ತದ ಸಕ್ಕರೆ ನಿಯಂತ್ರಣ

ಬೆಂಡೆಕಾಯಿಯನ್ನು ನೀರಿನಲ್ಲಿ ನೆನೆಸಿದಾಗ ಬಿಡುಗಡೆಯಾಗುವ ಅಂಟಾದ ಲೋಳೆಯಂತಹ ಅಂಶವನ್ನು ನೈಸರ್ಗಿಕ ಕರಗುವ ನಾರು ಎಂದು ಕರೆಯಲಾಗುತ್ತದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ ಮಲಬದ್ಧತೆ ನಿವಾರಿಸಲು ಮತ್ತು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದರ ಜತೆಗೆ, ಬೆಂಡೆಕಾಯಿ ನೀರಿನಲ್ಲಿರುವ ನಾರಿನಂಶ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಜೀರ್ಣಾಂಗದಲ್ಲಿ ಸಕ್ಕರೆ ಹೀರಿಕೊಳ್ಳುವ ವೇಗವನ್ನು ನಿಧಾನಗೊಳಿಸುತ್ತವೆ. ವಿಶೇಷವಾಗಿ ಊಟಕ್ಕೆ ಮುನ್ನ ಈ ನೀರನ್ನು ಕುಡಿಯುವುದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ದಿಢೀರ್ ಏರಿಕೆಯಾಗುವುದನ್ನು ತಡೆಯಲು ಸಹಕಾರಿ.

ದೇಹಕ್ಕೆ ಪೋಷಕಾಂಶ ಮತ್ತು ತೂಕ ನಿರ್ವಹಣೆಗೆ ನೆರವು

ಬೆಂಡೆಕಾಯಿಯನ್ನು ನೆನೆಸುವುದರಿಂದ ಅದರಲ್ಲಿರುವ ವಿಟಮಿನ್‌ಗಳು ನೀರಿನಲ್ಲಿ ಕರಗುತ್ತವೆ ಇದರಿಂದ ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಾಂಶಗಳು ಹಾಗೂ ಉರಿಯೂತ ಕಡಿಮೆ ಮಾಡುವ ಆ್ಯಂಟಿಆಕ್ಸಿಡೆಂಟ್‌ಗಳು ಸಿಗುತ್ತವೆ.

ಬೆಂಡೆಕಾಯಿ ನೀರಿನಲ್ಲಿ ಕ್ಯಾಲೋರಿ ಅಂಶ ಬಹುತೇಕ ಶೂನ್ಯವಾಗಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗುವುದಲ್ಲದೆ, ಅದರಲ್ಲಿರುವ ಲೋಳೆಯ ಅಂಶವು ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯ ತಿಂಡಿ ತಿನ್ನುವ ಬಯಕೆಯನ್ನು ನಿಯಂತ್ರಿಸಿ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ.

ಕಣ್ಣಿನ ತಪಾಸಣೆ ಮಾಡಿಸದೆ ಹಳೆಯ ಕನ್ನಡಕವನ್ನೇ ಬಳಸುತ್ತಿದ್ದೀರಾ? ಎಚ್ಚರ!

ಯಾರು ಈ ನೀರನ್ನು ಕುಡಿಯಬಹುದು?

ಗ್ಯಾಸ್ಟ್ರಿಕ್ ಸಮಸ್ಯೆ: ಬೆಂಡೆಕಾಯಿಯಲ್ಲಿ ಫ್ರಕ್ಟಾನ್ಸ್ ಎಂಬ ಕಾರ್ಬೋಹೈಡ್ರೇಟ್ ಹೆಚ್ಚಾಗಿರುತ್ತದೆ. ಕರುಳಿನ ಸೂಕ್ಷ್ಮತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಪ್ರತಿದಿನ ಇದನ್ನು ಕುಡಿದರೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

ಮಧುಮೇಹ ಔಷಧಿ ಸೇವಿಸುವವರು: ಸಕ್ಕರೆ ಕಾಯಿಲೆಗೆ ಮೆಟ್‌ಫಾರ್ಮಿನ್ ಮಾತ್ರೆ ತೆಗೆದುಕೊಳ್ಳುವವರಲ್ಲಿ, ಬೆಂಡೆಕಾಯಿ ನೀರು ಔಷಧಿಯ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರಿ ಅದರ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆಯಿರುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆ: ಬೆಂಡೆಕಾಯಿಯಲ್ಲಿ ಆಕ್ಸಲೇಟ್ ಅಂಶವಿರುವುದರಿಂದ, ಮೂತ್ರಪಿಂಡದಲ್ಲಿ ಕಲ್ಲು ಆಗುವ ಪ್ರವೃತ್ತಿ ಇರುವವರು ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

ಬೆಂಡೆಕಾಯಿ ನೀರನ್ನು ತಯಾರಿಸುವುದು ಹೇಗೆ?

  • ಮೊದಲು 3ರಿಂದ 4 ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಯಬೇಕು.
  • ತುದಿ ಕತ್ತರಿಸಿ ಉದ್ದವಾಗಿ ಸೀಳುವುದು ಅಥವಾ ಸಣ್ಣ ತುಂಡುಗಳಾಗಿ ಮಾಡಬೇಕು.
  • ಒಂದು ಲೋಟ ನೀರಿಗೆ ಈ ತುಂಡುಗಳನ್ನು ಹಾಕಿ ರಾತ್ರಿಯಿಡೀ ಮುಚ್ಚಿಡಿ.
  • ಬೆಳಗ್ಗೆ ತುಂಡುಗಳನ್ನು ತೆಗೆದು ಅಥವಾ ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು. ಬೇಕಿದ್ದರೆ ಸ್ವಲ್ಪ ನಿಂಬೆ ರಸ ಸೇರಿಸಬಹುದು.