ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಜಾನೆ ಎದ್ದ ತಕ್ಷಣ ನಿರಂತರ ಸೀನು, ನೆಗಡಿ ಇರುತ್ತಾ? ಇಲ್ಲಿದೆ ಸರಳ ಪರಿಹಾರ

ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಸತತವಾಗಿ ಸೀನು ಬರುವುದು ಮತ್ತು ಮೂಗಿನಿಂದ ನೀರು ಸೋರುವುದು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ವೈದ್ಯಕೀಯ ಲೋಕದಲ್ಲಿ ಇದನ್ನು ಅಲರ್ಜಿಕ್ ರೈನೈಟಿಸ್ ಎಂದು ಕರೆಯಲಾಗುತ್ತದೆ.

ಸಂಗ್ರಹ ಚಿತ್ರ

ಬೆಂಗಳೂರು: ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಸತತವಾಗಿ ಸೀನು ಬರುವುದು ಮತ್ತು ಮೂಗಿನಿಂದ ನೀರು ಸೋರುವುದು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ವೈದ್ಯಕೀಯ ಲೋಕದಲ್ಲಿ ಇದನ್ನು ಅಲರ್ಜಿಕ್ ರೈನೈಟಿಸ್ (Allergic Rhinitis) ಎಂದು ಕರೆಯಲಾಗುತ್ತದೆ. ರಾತ್ರಿಯ ತಂಪಾದ ವಾತಾವರಣದಿಂದ ಮುಂಜಾನೆಯ ತಾಪಮಾನ ಬದಲಾವಣೆಗೆ ದೇಹವು ಒಡ್ಡಿಕೊಂಡಾಗ ಅಥವಾ ಧೂಳಿನ ಕಣಗಳ ಸಂಪರ್ಕಕ್ಕೆ ಬಂದಾಗ ಈ ಕಿರಿಕಿರಿ ಆರಂಭವಾಗುತ್ತದೆ.

ಮುಂಜಾನೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ತಜ್ಞರು ಸೂಚಿಸುವ ಪ್ರಮುಖ ಮನೆಮದ್ದು ಇಲ್ಲಿವೆ.

  • ಉಗುರುಬೆಚ್ಚಗಿನ ನೀರಿನ ಸೇವನೆ: ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ಮೂಗು ಮತ್ತು ಗಂಟಲಿನ ಮಾರ್ಗವು ನಿರಾಳಗೊಂಡು, ಸೀನು ತಕ್ಷಣವೇ ಹತೋಟಿಗೆ ಬರುತ್ತದೆ.
  • ಶುಂಠಿ-ಜೇನುತುಪ್ಪದ ಮಿಶ್ರಣ: ಶುಂಠಿಯಲ್ಲಿರುವ ಉರಿಯೂತ ನಿವಾರಕ (Anti-inflammatory) ಗುಣಗಳು ಅಲರ್ಜಿಯನ್ನು ಶಮನಗೊಳಿಸುತ್ತವೆ. ಮುಂಜಾನೆ ಸ್ವಲ್ಪ ಶುಂಠಿ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದು ರಾಮಬಾಣ.
  • ಆವಿ ತಗೊಳ್ಳುವುದು: ಬಿಸಿ ನೀರಿಗೆ ಒಂದೆರಡು ಹನಿ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಮೂಗಿನ ಬ್ಲಾಕ್ ಮುಕ್ತವಾಗಿ, ಉಸಿರಾಟ ಸುಲಭವಾಗುತ್ತದೆ.
  • ಹಾಸಿಗೆಯ ಸ್ವಚ್ಛತೆ ಮುಖ್ಯ: ನಮ್ಮ ಕಣ್ಣಿಗೆ ಕಾಣಿಸದ ಧೂಳಿನ ಕಣಗಳು ಹಾಸಿಗೆ ಮತ್ತು ದಿಂಬುಗಳಲ್ಲಿ ಅಡಗಿರುತ್ತವೆ. ಆದ್ದರಿಂದ ವಾರಕ್ಕೊಮ್ಮೆ ಬೆಡ್‌ಶೀಟ್‌ ಹಾಗೂ ದಿಂಬಿನ ಕವರ್‌ಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
  • ನೇರ ತಂಗಾಳಿಯಿಂದ ದೂರವಿರಿ: ರಾತ್ರಿ ಮಲಗುವಾಗ ಫ್ಯಾನ್ ಅಥವಾ ಎಸಿ ಗಾಳಿ ನೇರವಾಗಿ ಮುಖಕ್ಕೆ ತಗುಲದಂತೆ ಜಾಗ್ರತೆ ವಹಿಸಿ. ಬೆಳಿಗ್ಗೆ ಎದ್ದ ತಕ್ಷಣ ದಿಢೀರನೆ ತಣ್ಣನೆಯ ಗಾಳಿಗೆ ಮುಖ ಒಡ್ಡಬೇಡಿ.

Vishakha Bhat Heggar

View all posts by this author