ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು? ತಜ್ಞರು ನೀಡಿದ ಸಲಹೆ ಏನು?

Health Tips: ಕಡಲೆ, ರಾಜ್ಮಾ, ಹೆಸರುಕಾಳಿನಂತಹ ಆಹಾರಗಳನ್ನು ಪೌಷ್ಟಿಕಾಂಶ ಹೆಚ್ಚಿಸಲು ಸೇವಿಸಲಾಗುತ್ತದೆ, ಆದರೆ ಪ್ರತಿಯೊಂದೂ ನೆನೆಸುವುದು, ಮೊಳಕೆ ಭರಿಸುವುದು, ಕುದಿಸುವುದು ಅಥವಾ ಹುರಿ ಯುವುದರಿಂದ ಆರೋಗ್ಯ ಲಾಭವನ್ನು ಪಡೆಯಲಾಗುವುದಿಲ್ಲ. ಹಾಗಿದ್ದರೆ ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು?

ಇಂಟರ್ ನೆಟ್ ಚಿತ್ರ

ನವದೆಹಲಿ,ಆ.6: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದ ಪೋಷಕಾಂಶಗಳು ಅಗತ್ಯ. ಮುಖ್ಯವಾಗಿ ಪ್ರೋಟಿನ್ ಭರಿತ (Protein Food) ಆಹಾರ, ಆದರೆ ಇದನ್ನು ಸೇವಿಸುವ ವಿಧಾನವೇ ತಪ್ಪಾಗಿದ್ದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೇ ಇರಬಹುದು. ಕಡಲೆ, ರಾಜ್ಮಾ, ಹೆಸರುಕಾಳಿನಂತಹ ಆಹಾರಗಳನ್ನು ಪೌಷ್ಟಿಕಾಂಶ ಹೆಚ್ಚಿಸಲು ಸೇವಿಸಲಾಗುತ್ತದೆ, ಆದರೆ ಪ್ರತಿಯೊಂದೂ ನೆನೆಸುವುದು, ಮೊಳಕೆ ಭರಿಸುವುದು, ಕುದಿಸುವುದು ಅಥವಾ ಹುರಿ ಯುವುದರಿಂದ ಆರೋಗ್ಯ ಲಾಭವನ್ನು ಪಡೆಯಲಾಗುವುದಿಲ್ಲ. ಹಾಗಿದ್ದರೆ ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು?

ಕಡಲೆಕಾಳು:

ಕಡಲೆ ಉತ್ತಮ ಪ್ರೋಟಿನ್ ನ ಮೂಲವಾಗಿದೆ‌ ಆದರೆ ಅವುಗಳನ್ನು ತಯಾರು ಮಾಡುವ ವಿಧಾನವು ದೇಹವು ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮೊಳಕೆ ಭರಿಸಿ ಸೇವಿಸಿದರೆ ಗ್ಯಾಸ್ಟ್ರಿಕ್‌, ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣ ವಾಗ ಬಹುದು. ಹಾಗಾಗಿ ಕಡಲೆಕಾಳು ಬೇಯಿಸಿ ತಿಂದರೆ ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

ರಾಜ್ಮಾ:

ಇದು ತೂಕ ನಿಯಂತ್ರಣಕ್ಕೆ, ಮಧುಮೇಹಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ​ರಾಜ್ಮಾವನ್ನು ಮೊಳಕೆ ಭರಿಸಿ ತಿಂದರೆ ದೇಹಕ್ಕೆ ಹಿಡಿಸುವುದಿಲ್ಲ. ಇದರಲ್ಲಿರುವ ಕೆಲವು ಅಂಶಗಳು ಹೊಟ್ಟೆಯ ಕಿಣ್ವದ ಅಸ್ವಸ್ಥತೆಗೆ ಕಾರಣ ವಾಗಬಹುದು. ಹಾಗಾಗಿ ಬೇಯಿಸಿ ತಿಂದರೆ ಜೀರ್ಣಕ್ರಿಯೆಗೆ ಉತ್ತಮ.

Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು

ಹೆಸರುಕಾಳು:

ಮೊಳಕೆಯೊಡೆದ ಹೆಸರುಕಾಳು ಪ್ರತಿಯೊಬ್ಬರು ಸೇವಿಸಲು ಆಸಕ್ತಿ ವಹಿಸುತ್ತಾರೆ. ಜೀರ್ಣಿಸಿ ಕೊಳ್ಳಲು ಸುಲಭ ಮತ್ತು ಉತ್ತಮ ಪೋಷಕಾಂಶಕ್ಕೆ ಬೆಂಬಲಿಸುತ್ತದೆ. ಇದನ್ನು ಮೊಳಕೆ ಒಡೆದು ಅಥವಾ ಬೇಯಿಸಿ ತಿಂದರೂ ಕೂಡ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ನಿಮ್ಮ ಆಹಾರದಲ್ಲಿ ಇದಕ್ಕೆ ಆಧ್ಯತೆಯೂ ಇರಲಿ

​ಕಡಲೆಕಾಯಿ / ಶೇಂಗಾ:

​ಕಡಲೆಕಾಯಿಯನ್ನು ಹುರಿದು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು,ಅದರ ಜೊತೆ ರುಚಿಯನ್ನೂ ಹೆಚ್ಚಿಸುತ್ತದೆ. ಎಣ್ಣೆಯಲ್ಲಿ ಕರಿದ ಕಡಲೆಕಾಯಿ ದೇಹಕ್ಕೆ ಪರಿಣಾಮ ಬೀರಬಹುದು.

ಸೋಯಾಬೀನ್ ಮತ್ತು ಹುರುಳಿಕಾಳುಗಳು:

ಸೋಯಾ ಬೀನ್ ಗಳು ಮತ್ತು ಹುರುಳಿಕಾಳುಗಳನ್ನು ಕುದಿ ಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಇದರಿಂದ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

​ಕಪ್ಪು ಕಡಲೆ:

​ಇದನ್ನು ಬೇಯಿಸಿ ಅಥವಾ ಮೊಳಕೆ ಬರಿಸಿ ಎರಡೂ ರೀತಿಯಲ್ಲೂ ಸೇವಿಸಬಹುದು. ಇವೆರಡೂ ವಿಧಾನಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.