ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಂಪ್ಯೂಟರ್ ಪರದೆಯ ಸ್ಕ್ರೀನ್‌ ಬ್ರೈಟ್‌ನೆಸ್‌ ಎಷ್ಟಿರಬೇಕು?

Health Tips: ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒಂದಿಲ್ಲೊಂದು ಕಾರಣಕ್ಕೆ ಕಂಪ್ಯೂಟರ್‌ ಬಳಕೆ ಅಗತ್ಯ ಎಂಬಂತಾಗಿದೆ. ಹೀಗೆ ಬಳಸುವಾಗ ನಮ್ಮ ಕಂಪ್ಯೂಟರ್‌ ಪರದೆಯ ಪ್ರಖರತೆಯನ್ನು ನಾವು ಎಷ್ಟು ಇರಿಸಿಕೊಳ್ಳುತ್ತೇವೆ? ಅಂದರೆ, ಸ್ಕ್ರೀನ್‌ ಬ್ರೈಟ್‌ನೆಸ್‌ ಎಂದು ಕರೆಯಲಾಗುವ ಈ ಅಂಕಿಯು ಸೊನ್ನೆಯಿಂದ 100 ನಡುವಿನ ಯಾವ % ತೋರಿಸುತ್ತಿರುತ್ತದೆ? ಪರದೆಯ ಪ್ರಖರತೆಯನ್ನು ಎಷ್ಟಕ್ಕೆ ಇಟ್ಟುಕೊಂಡರೆ ಹೆಚ್ಚು? ಎಷ್ಟು ಇರಿಸಿಕೊಂಡರೆ ಉತ್ತಮ? ಇದನ್ನೆಲ್ಲ ಹೇಗೆ ತಿಳಿಯಬೇಕು?

ಇಂಟರ್ ನೆಟ್ ಚಿತ್ರ

ನವದೆಹಲಿ: ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಆಧುನಿಕ ಬದುಕಿನ ತೀರಾ ಮಾಮೂಲಿ ವಿಷಯಗಳಲ್ಲಿ ಒಂದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒಂದಿಲ್ಲೊಂದು ಕಾರಣಕ್ಕೆ ಕಂಪ್ಯೂಟರ್‌ ಬಳಕೆ ಅಗತ್ಯ ಎಂಬಂತಾಗಿದೆ. ಹೀಗೆ ಬಳಸುವಾಗ ನಮ್ಮ ಕಂಪ್ಯೂಟರ್‌ ಪರದೆಯ ಪ್ರಖರತೆಯನ್ನು (Computer Screen Brightness) ನಾವು ಎಷ್ಟು ಇರಿಸಿಕೊಳ್ಳುತ್ತೇವೆ? ಅಂದರೆ, ಸ್ಕ್ರೀನ್‌ ಬ್ರೈಟ್‌ನೆಸ್‌ ಎಂದು ಕರೆಯಲಾಗುವ ಈ ಅಂಕಿಯು ಸೊನ್ನೆಯಿಂದ 100 ನಡುವಿನ ಯಾವ % ತೋರಿಸುತ್ತಿರುತ್ತದೆ? ಪರದೆಯ ಪ್ರಖರತೆಯನ್ನು ಎಷ್ಟಕ್ಕೆ ಇಟ್ಟುಕೊಂಡರೆ ಹೆಚ್ಚು? ಎಷ್ಟು ಇರಿಸಿಕೊಂಡರೆ ಉತ್ತಮ? ಇದನ್ನೆಲ್ಲ ಹೇಗೆ ತಿಳಿಯಬೇಕು?

ದಿನವಿಡೀ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಶೇ. 70-80 ಕ್ಕೆ ಇರಿಸಿಕೊಳ್ಳುವ ಸಂದರ್ಭಗಳೇ ಹೆಚ್ಚು. ಎಷ್ಟೋ ಬಾರಿ ದಿನದ ಕೊನೆಗೆ ಸಣ್ಣ ತಲೆನೋವು, ಕಣ್ಣು ಭಾರವಾದಂಥ ಭಾವನೆ, ಕಣ್ಣುರಿ. ಕಣ್ಣಲ್ಲಿ ನೀರು ತುಂಬುವುದು, ಸುಸ್ತಾದ ಅನುಭವ ಉಂಟಾದರೆ ಪರದೆಯ ಪ್ರಖರತೆ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸುವುದು ಒಳ್ಳೆಯದು. ಹಾಗಾದರೆ ಹೆಚ್ಚಿನ ಪ್ರಖರತೆಯಲ್ಲಿ ಕೆಲಸ ಮಾಡು ವುದು ಒಳ್ಳೆಯದಲ್ಲವೇ? ಪರದೆಯಲ್ಲಿ ಬೆಳಕು ಹೆಚ್ಚಿಲ್ಲದಿದ್ದರೆ ಮಾಡುವ ಕೆಲಸ ಸ್ಪಷ್ಟವಾಗಿ ಕಾಣುವುದಿಲ್ಲವಲ್ಲ ಆಗೇನು ಮಾಡುವುದು?

ಪ್ರಖರತೆ: ನಾವು ಇರುವಂಥ ಕೋಣೆ ಅಥವಾ ವಾತಾವರಣಕ್ಕಿಂತ ಹೆಚ್ಚಿನ ಬೆಳಕನ್ನು ನಮ್ಮ ಕಂಪ್ಯೂಟರ್‌ ಪರದೆ ಸೂಸುತ್ತಿದ್ದರೆ, ಕಣ್ಣಿನ ಮೇಲೆ ಒತ್ತಡ ಹೆಚ್ಚುತ್ತದೆ. ಅಂದರೆ ಹಗಲಿನ ವೇಳೆ ಇರಿಸಿಕೊಳ್ಳುವ ಪ್ರಖರತೆಯನ್ನೇ ರಾತ್ರಿ ಇರಿಸಿಕೊಂಡರೆ, ಅದು ಹೆಚ್ಚಾಗುತ್ತದೆ. ಹಾಗಾಗಿ ಎಷ್ಟೋ ಪರದೆಗಳು ʻನೈಟ್‌ ಮೋಡ್‌ʼ ವ್ಯವಸ್ಥೆಯನ್ನು ನೀಡುತ್ತವೆ. ರಾತ್ರಿಯ ಹೊತ್ತಿಗೆ ಅದನ್ನೇ ಬಳಸುವುದು ಸೂಕ್ತ.

ಎಷ್ಟಿರಬೇಕು?: ಇದಕ್ಕೊಂದು ವೈದ್ಯಕೀಯವಾಗಿ ನಿಗದಿಪಡಿಸಿದ ಮಾನದಂಡವಿಲ್ಲ. ಆದರೆ ನಮ್ಮ ಇಡೀ ಕೋಣೆಯಲ್ಲಿ ನಾವು ಬಳಸುತ್ತಿರುವ ಲ್ಯಾಪ್‌ಟಾಪ್‌ ಬೆಡ್‌ಲ್ಯಾಂಪಿನಂತೆ ಪ್ರಖರವಾಗಿ ಕಾಣುತ್ತಿದ್ದರೆ, ಬ್ರೈಟ್‌ನೆಸ್‌ ಕಡಿಮೆ ಮಾಡಿಕೊಳ್ಳಬೇಕು ಎಂದು ಅರ್ಥ. ನಮ್ಮ ಸುತ್ತಲಿನ ಬೆಳಕಿನಷ್ಟೇ ಕಂಪ್ಯೂಟರ್‌ ಪರದೆಯೂ ಬೆಳಗುತ್ತಿದ್ದರೆ ಕಣ್ಣು ಹೆಚ್ಚು ಸುರಕ್ಷಿತ ಎಂದು ಭಾವಿಸಬಹುದು.

ಸಂಕಷ್ಟದಲ್ಲಿದ್ದರೆ?: ಈಗಾಗಲೇ ಕಣ್ಣು ಉರಿಯುತ್ತಿದೆ, ತೊಂದರೆಯಾಗುತ್ತಿದೆ ಎಂದಾದರೆ? ಇಂಥ ಸಂದರ್ಭದಲ್ಲಿ ಪ್ರಖರವಾದ ಬೆಳಕನ್ನು ನೋಡುವುದು ಕಣ್ಣಿನ ಸಂಕಷ್ಟವನ್ನು ಖಂಡಿತವಾಗಿ ಹೆಚ್ಚಿಸುತ್ತದೆ. ಹಾಗಾಗಿ ಬೆಳಕು ಬರುವಂಥ ಕಿಟಕಿಯ ಬಳಿ ಕುಳಿತು, ಪರದೆಯ ಮೇಲೆ ಬೆಳಕು ಬೀಳುವಂತೆ ಇರಿಸಿಕೊಂಡು ಕೆಲಸ ಮಾಡಿ. ಪರದೆಯಿಂದ ಹಿಂದೆ ಬೆಳಕನ್ನೆಂದೂ ಇರಿಸಿಕೊಳ್ಳಬೇಡಿ. ಮಾತ್ರವಲ್ಲ, ಪರದೆಯ ಮೇಲೆ ಬೆಳಕು ಪ್ರತಿಫಲಿಸುವಂತೆ ಇರಿಸಿಕೊಂಡರೂ ಕಣ್ಣುಗಳಿಗೆ ಕಷ್ಟವಾಗುತ್ತದೆ. ನೈಸರ್ಗಿಕವಾಗಿ ಒಳಬರುವ ಬೆಳಕು ಪರದೆಯ ಮೇಲೆ ಪ್ರತಿಫಲಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದಾದರೆ ಅದಕ್ಕಾಗಿ ಸಿದ್ಧಪಡಿಸಿದ ಫಿಲ್ಟರ್‌ ಬಳಸಿ.

Health Tips: ಸೌತೆಕಾಯಿ ತಿನ್ನುವ ಮೊದಲು ತಜ್ಞರ ಈ ಸಲಹೆ ಗೊತ್ತಿರಲಿ!

ಹಿಗ್ಗಿಸಿಕೊಳ್ಳಿ: ಕೆಲವೊಮ್ಮೆ ಪರದೆಯ ಮೇಲಿನ ಅಕ್ಷರಗಳು ತೀರಾ ಸಣ್ಣದಿದ್ದರೂ ಕಣ್ಣುಗಳ ಮೇಲಿನ ಒತ್ತಡ ಹೆಚ್ಚಾಗಬಹುದು. ಆಗ ಅಕ್ಷರಗಳನ್ನು ಹಿಗ್ಗಿಸಿಕೊಳ್ಳುವುದರಿಂದ ಪ್ರಖರತೆ ಹೆಚ್ಚಿಸುವುದನ್ನು ಅಥವಾ ಕಣ್ಣುಗಳನ್ನು ಸಣ್ಣ ಮಾಡಿ ಓದುವುದನ್ನು, ಮುಖವನ್ನು ಹತ್ತಿರ ತೆಗೆದುಕೊಂಡು ಹೋಗುವುದನ್ನು ತಡೆಯಬಹುದು. ನೆನಪಿಡಿ, ಪರದೆಯನ್ನು ನಿಮ್ಮ ಕಣ್ಣಿನ ನೇರಕ್ಕೆ ಸುಮಾರು 25 ಇಂಚುಗಳ ದೂರದಲ್ಲಿ ಇರಿಸಿಕೊಳ್ಳಬೇಕು ಎನ್ನುತ್ತಾರೆ ನೇತ್ರ ತಜ್ಞರು.

ವಿರಾಮ: ಎಷ್ಟು ಉತ್ತಮವಾದ ವ್ಯವಸ್ಥೆಯಲ್ಲಿ ನಿಮ್ಮ ಕೆಲಸ ನಡೆಯುತ್ತಿದ್ದರೂ, ದೀರ್ಘಕಾಲ ಪರದೆ ನೋಡುವುದರಿಂದ ಆಗೀಗ ವಿರಾಮ ತೆಗೆದುಕೊಳ್ಳುವುದು ಕಣ್ಣುಗಳ ಆರೋಗ್ಯಕ್ಕೆ ಅಗತ್ಯ. ಇದಕ್ಕಾಗಿ ನೇತ್ರ ತಜ್ಞರು ಶಿಫಾರಸು ಮಾಡುವುದು 20-20-20 ನಿಯಮವನ್ನು. ಅಂದರೆ ಪ್ರತಿ 20 ನಿಮಿಷಗಳಿಗೆ ಒಮ್ಮೆ, ಕನಿಷ್ಟ 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡ್‌ಗಳ ಕಾಲ ನೋಡುವುದು. ಇದರಿಂದ ಕಣ್ಣುಗಳಿಗೆ ಬೇಕಾದ ಚುಟುಕು ವಿಶ್ರಾಂತಿಯನ್ನು ನೀಡಲು ಸಾಧ್ಯವಾಗುತ್ತದೆ.